Bajaj Pulsar P150: ಹೊಸ ಫೀಚರ್ಸ್ ಹೊಂದಿರುವ ಬಜಾಜ್ ಪಲ್ಸರ್ ಪಿ150 ಬೈಕ್ ಬಿಡುಗಡೆ
ದ್ವಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಬಜಾಜ್ ಆಟೋ ಕಂಪನಿಯು ಹೊಸ ಪಲ್ಸರ್ ಪಿ150 ಬೈಕ್ ಬಿಡುಗಡೆ ಮಾಡಿದ್ದು, ಹೊಸ ಬೈಕ್ ಹಲವಾರು ಹೊಸ ಫೀಚರ್ಸ್ ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದೆ.
ಬಜಾಜ್ ಆಟೋ(Bajaj Auto) ಕಂಪನಿಯು ತನ್ನ ಜನಪ್ರಿಯ ಬೈಕ್ ಸರಣಿಯಾದ ಪಲ್ಸರ್ ಪಿ150(Pulsar P150) ಬೈಕ್ ಮಾದರಿಯನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಯು ರೂ. 1,16,755 ಆರಂಭಿಕ ಬೆಲೆ ಹೊಂದಿದೆ. ಹೊಸ ಬೈಕ್ ಮಾದರಿಯು ಸಿಂಗಲ್ ಡಿಸ್ಕ್ ಮತ್ತು ಟ್ವಿನ್ ಡಿಸ್ಕ್ ಬ್ರೇಕ್ ವೆರಿಯೆಂಟ್ ಗಳನ್ನು ಹೊಂದಿದ್ದು, ಆರಂಭಿಕ ಮಾದರಿಯು 1,16,755 ಬೆಲೆ ಹೊಂದಿದ್ದರೆ ಟಾಪ್ ಎಂಡ್ ಮಾದರಿಯು ರೂ. 1,19,757 ಬೆಲೆ ಹೊಂದಿದೆ.
ಎಂಜಿನ್ ಮತ್ತು ಪರ್ಫಾಮೆನ್ಸ್
ಹೊಸ ಪಲ್ಸರ್ ಪಿ150 ಬೈಕ್ ಮಾದರಿಯಲ್ಲಿ ಬಜಾಜ್ ಕಂಪನಿಯು 149.68 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನೀಡಲಾಗಿದ್ದು, ಇದು 5 ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಗರಿಷ್ಠ 14.5 ಹಾರ್ಸ್ ಪವರ್ ಮತ್ತು 13.5 ಎನ್ಎಂ ಟಾರ್ಕ್ ಉತ್ಪಾದನೆ ಮಾಡಲಿದೆ. ಮತ್ತೊಂದು ಪ್ರಮುಖ ಬದಲಾವಣೆಯೆಂದರೆ ಹೊಸ ಬೈಕ್ ಮಾದರಿಯು ಹಳೆಯ ಪಲ್ಸರ್ 150 ಮಾದರಿಗಿಂತಲೂ ತುಸು ಕಡಿಮೆ ತೂಕ ಹೊಂದಿದ್ದು, 10 ಕೆ.ಜಿ ಕಡಿಮೆ ತೂಕದೊಂದಿಗೆ ಉತ್ತಮ ಪರ್ಫಾಮೆನ್ಸ್ ಹಿಂದಿರುಗಿತ್ತದೆ.
ಇದನ್ನೂ ಓದಿ: ಪ್ರತಿ ಚಾರ್ಜ್ ಗೆ 150 ಕಿ.ಮೀ ಮೈಲೇಜ್ ನೀಡುತ್ತೆ ಮ್ಯಾಟರ್ ಎಲೆಕ್ಟ್ರಿಕ್ ಬೈಕ್
ಡಿಸೈನ್ ಮತ್ತು ಫೀಚರ್ಸ್
ಬಜಾಜ್ ಪಲ್ಸರ್ ಪಿ150 ಮಾದರಿಯು ಪಲ್ಸರ್ ಹೊಸ ತಲೆಮಾರಿನ ಉತ್ಪಾದನಾ ಪ್ಲ್ಯಾಟ್ ಫಾರ್ಮ್ ಆಧರಿಸಿ ನಿರ್ಮಾಣಗೊಂಡಿದ್ದು, ಎನ್160 ಮತ್ತು ಎನ್250 ಮಾದರಿಗಳಿಂದ ಹಲವಾರು ಡಿಸೈನ್ ವಿನ್ಯಾಸ ಪ್ರೇರಣೆ ಹೊಂದಿದೆ. ಇದರಲ್ಲಿ ಬಾಡಿ ಕಲರ್ಡ್ ಎಲ್ಇಡಿ ಬಿ-ಫಂಕ್ಷನಲ್ ಹೆಡ್ ಲ್ಯಾಂಪ್, ಎಂಜಿನ್ ಕೌಲ್‌ಗಳು ಮತ್ತು ಎಲ್ಇಡಿ ಟೈಲ್‌ಲೈಟ್ಸ್ ಮತ್ತು ಎಲ್ಇಡಿ ಪೈಲೆಟ್ ಲ್ಯಾಂಪ್ ಒಳಗೊಂಡಿವೆ. ಹಾಗೆಯೇ ಸಿಂಗಲ್ ಡಿಸ್ಕ್ ರೂಪಾಂತರವು ಸಿಂಗಲ್-ಪೀಸ್ ಗ್ರಾಬ್ ಹ್ಯಾಂಡಲ್ ಜೊತೆಗೆ ಸಿಂಗಲ್ ಸೀಟನ್ನು ಹೊಂದಿದೆ. ಇದರಲ್ಲಿ ಟ್ವಿನ್ ಡಿಸ್ಕ್ ಮಾದರಿಯು ಸ್ಪ್ಲಿಟ್ ಗ್ರಾಬ್ ಹ್ಯಾಂಡಲ್‌ಗಳ ಜೊತೆಗೆ ಸ್ಪ್ಲಿಟ್ ಸೀಟ್ ಅನ್ನು ಪಡೆದುಕೊಂಡಿದೆ.
ಇದರೊಂದಿಗೆ ಹೊಸ ಬೈಕಿನಲ್ಲಿ ಒಟ್ಟು ಐದು ಬಣ್ಣಗಳ ಆಯ್ಕೆ ನೀಡಲಾಗಿದ್ದು, ಹೊಸ ಬೈಕ್ ಮಾದರಿಯು ರೇಸಿಂಗ್ ರೆಡ್, ಕೆರೆಬಿಯನ್ ಬ್ಲ್ಯೂ, ಎಬೊನಿ ಬ್ಲ್ಯೂ, ಎಬೊನಿ ಬ್ಲ್ಯಾಕ್ ಬ್ಲ್ಯೂ ಮತ್ತು ಎಬೊನಿ ಬ್ಲ್ಯಾಕ್ ಬ್ಲ್ಯೂ ಬಣ್ಣಗಳ ಆಯ್ಕೆಯಿದೆ.
ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್ ಸೂಪರ್ ಮಿಟಿಯೋರ್ 650 ಖರೀದಿಗಾಗಿ ಬುಕಿಂಗ್ ಆರಂಭ
ಸುರಕ್ಷಾ ಸೌಲಭ್ಯಗಳು
ಹೊಸ ಪ್ಲ್ಯಾಟ್ ಫಾರ್ಮ್ ಅಡಿ ನಿರ್ಮಾಣವಾಗಿರುವ ಹೊಸ ಪಿ150 ಬೈಕ್ ಮಾದರಿಯು 31ಎಂಎಂ ಟೆಲಿಸ್ಕೊಫಿಕ್ ಫ್ರಂಟ್ ಫೋಕ್ಸ್ ಮತ್ತು ಹಿಂಬದಿಯಲ್ಲಿ ಮೊನೊಶಾಕ್ ಸಸ್ಷೆಂಷನ್ ಹೊಂದಿರಲಿದೆ. ಹಾಗೆಯೇ ಹೊಸ ಬೈಕಿನಲ್ಲಿ 17 ಇಂಚಿನ ಅಲಾಯ್ ವ್ಹೀಲ್ ಜೊತೆಗೆ 90/90-17 ಫ್ರಂಟ್ ಟೈರ್ ಮತ್ತು 110/80-17 ರಿಯಲ್ ಟೈರ್ ನೀಡಲಾಗಿದೆ. ಹೊಸ ಬೈಕಿನಲ್ಲಿ ಸುರಕ್ಷತೆಗಾಗಿ ಮುಂಭಾಗದ ಚಕ್ರದಲ್ಲಿ 260 ಎಂಎಂ ಫ್ರಂಟ್ ಡಿಸ್ಕ್, 230 ಎಂಎಂ ರಿಯರ್ ಡಿಸ್ಕ್ ನೀಡಲಾಗಿದ್ದು, ಸಿಂಗಲ್ ಡಿಸ್ಕ್ ಮಾದರಿಯಲ್ಲಿ 130 ಎಂಎಂ ರಿಯರ್ ಡ್ರಮ್ ಬ್ರೇಕ್ ಜೋಡಣೆ ಮಾಡಲಾಗಿದೆ.
Published On - 1:25 pm, Wed, 23 November 22