Year Ender 2023: ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಟಾಪ್ 5 ಬಜೆಟ್ ಕಾರುಗಳಿವು!

2023ರ ಅವಧಿಯಲ್ಲಿ ಹಲವಾರು ಹೊಸ ಕಾರು ಮಾದರಿಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಐಷಾರಾಮಿ ಕಾರುಗಳ ಜೊತೆಗೆ ಬಜೆಟ್ ಬೆಲೆಯ ಹಲವು ಹೊಸ ಕಾರುಗಳು ಸಹ ಬಿಡುಗಡೆಗೊಂಡಿವೆ. ಹಾಗಾದ್ರೆ ಈ ವರ್ಷ ಬಿಡುಗಡೆಯಾದ ಬಜೆಟ್ ಕಾರುಗಳು ಯಾವುವು? ಅವುಗಳ ವಿಶೇಷತೆಗಳೇನು? ಈ ಎಲ್ಲಾ ಮಾಹಿತಿ ಇಲ್ಲಿದೆ.

Year Ender 2023: ಭಾರತದಲ್ಲಿ ಈ ವರ್ಷ ಬಿಡುಗಡೆಯಾದ ಟಾಪ್ 5 ಬಜೆಟ್ ಕಾರುಗಳಿವು!
ಟಾಪ್ 5 ಬಜೆಟ್ ಕಾರುಗಳಿವು
Follow us
|

Updated on: Dec 22, 2023 | 4:21 PM

ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಇತ್ತೀಚೆಗೆ ಹಲವಾರು ಹೊಸ ಕಾರುಗಳು (New Cars) ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಹೊಸ ಕಾರುಗಳಲ್ಲಿ ಬಜೆಟ್ ಬೆಲೆಯ ಮಾದರಿಗಳು ಸಹ ಗ್ರಾಹಕರ ಸೆಳೆಯುತ್ತಿವೆ. ಹೊಸ ಬಜೆಟ್ ಕಾರುಗಳಲ್ಲಿ ಹ್ಯುಂಡೈ ಮತ್ತು ಮಾರುತಿ ಸುಜುಕಿ ಕಾರುಗಳು ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಹೊಸ ಕಾರುಗಳ ಬೆಲೆ, ಎಂಜಿನ್ ಮತ್ತು ವೈಶಿಷ್ಟ್ಯತೆಗಳ ಮಾಹಿತಿ ಇಲ್ಲಿದೆ.

ಹ್ಯುಂಡೈ ಎಕ್ಸ್‌ಟರ್

ಹೊಸ ಹ್ಯುಂಡೈ ಎಕ್ಸ್‌ಟರ್ ಕಾರು ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಇಎಕ್ಸ್, ಎಸ್, ಎಸ್ಎಕ್ಸ್, ಎಸ್ಎಕ್ಸ್(ಆಪ್ಷನ್) ಮತ್ತು ಎಸ್ಎಕ್ಸ್ ಆಪ್ಷನ್(ಕನೆಕ್ಟ್) ಎನ್ನುವ ಪ್ರಮುಖ ಐದು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಎಕ್ಸ್ ಶೋರೂಂ ಪ್ರಕಾರ ಇದು ರೂ. 6 ಲಕ್ಷದಿಂದ ರೂ. 10.15 ಲಕ್ಷ ತನಕ ಬೆಲೆ ಹೊಂದಿದೆ. ಮೈಕ್ರೊ ಎಸ್ ಯುವಿ ವೈಶಿಷ್ಟ್ಯತೆ ಹೊಂದಿರುವ ಹೊಸ ಎಕ್ಸ್‌ಟರ್ ಕಾರು ಪೆಟ್ರೋಲ್ ಮತ್ತು ಸಿಎನ್ ಜಿ ಆವೃತ್ತಿಗಳೊಂದಿಗೆ ಖರೀದಿಗೆ ಲಭ್ಯವಿದೆ. ಹೊಸ ಕಾರಿನಲ್ಲಿ 1.2 ಲೀಟರ್ ನ್ಯಾಚುರಲಿ ಆಸ್ಪೆರೆಟೆಡ್ ಪೆಟ್ರೋಲ್ ಮತ್ತು ಪೆಟ್ರೋಲ್ ಜೊತೆಗಿನ ಸಿಎನ್ ಜಿ ಕಿಟ್ ಪಡೆದುಕೊಂಡಿರುವ ಆವೃತ್ತಿಯು ಖರೀದಿಗೆ ಲಭ್ಯವಿದೆ. ಎಕ್ಸ್‌ಟರ್ ಕಾರಿನಲ್ಲಿ ಹ್ಯುಂಡೈ ಟಾಟಾ ಪಂಚ್ ಗೆ ಪೈಪೋಟಿಯಾಗಿ ಹಲವಾರು ಪ್ರೀಮಿಯಂ ಫೀಚರ್ಸ್ ನೀಡಿದ್ದು, ಇದರಲ್ಲಿ ಪೆಟ್ರೋಲ್ ಮಾದರಿಯು ಪ್ರತಿ ಲೀಟರ್ ಗೆ ಗರಿಷ್ಠ 19.4 ಕಿ.ಮೀ ಮೈಲೇಜ್ ನೀಡಿದರೆ ಸಿಎನ್ ಜಿ ಮಾದರಿಯು ಪ್ರತಿ ಕೆಜಿಗೆ ಗರಿಷ್ಠ 27.10 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

Car Launches In 2023 (2)

ಮಾರುತಿ ಸುಜುಕಿ ಫ್ರಾಂಕ್ಸ್

ಮಾರುತಿ ಸುಜುಕಿ ಕಂಪನಿಯು ಈ ವರ್ಷದ ಆರಂಭದಲ್ಲಿ ಫ್ರಾಂಕ್ಸ್ ಕಂಪ್ಯಾಕ್ಟ್ ಎಸ್ ಯುವಿ ಬಿಡುಗಡೆ ಮಾಡಿದ್ದು, ಇದು ಈ ಹಿಂದಿನ ಎಸ್-ಕ್ರಾಸ್ ಮತ್ತು ಬಲೆನೊ ಕಾರುಗಳ ಸಮ್ಮಿಶ್ರವಾಗಿದೆ. ಫ್ರಾಂಕ್ಸ್ ಕಾರು ಕ್ರಾಸ್ ಓವರ್ ವೈಶಿಷ್ಟ್ಯತೆಗಳೊಂದಿಗೆ ಆಕರ್ಷಕ ಹೊರಭಾಗದ ವಿನ್ಯಾಸ ಹೊಂದಿದ್ದು, ಬಜೆಟ್ ಬೆಲೆಯಲ್ಲೂಇದು ಆರಾಮದಾಯಕ ಪ್ರಯಾಣಕ್ಕೆ ಅನುಕೂಲಕವಾಗುವ ಹಲವಾರು ಫೀಚರ್ಸ್ ಹೊಂದಿದೆ. ಪ್ರಮುಖ ಐದು ವೆರಿಯೆಂಟ್ ಗಳನ್ನು ಹೊಂದಿರುವ ಫ್ರಾಂಕ್ಸ್ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 7.46 ಲಕ್ಷದಿಂದ ರೂ. 13.14 ಲಕ್ಷ ಬೆಲೆ ಹೊಂದಿದೆ. ಫ್ರಾಂಕ್ಸ್ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಎಸ್-ಸಿಎನ್ ಜಿ ಕಿಟ್ ಹೊಂದಿದ್ದು, ಇದರಲ್ಲಿರುವ ಪೆಟ್ರೋಲ್ ಮಾದರಿಯು 20 ಕಿ.ಮೀ ಮೈಲೇಜ್ ನೀಡಿದರೆ ಸಿಎನ್ ಜಿ ಮಾದರಿಯು ಪ್ರತಿ ಕೆಜಿಗೆ 28.51 ಕಿ.ಮೀ ಮೈಲೇಜ್ ನೀಡುತ್ತದೆ.

ಇದನ್ನೂ ಓದಿ: ಭಾರತದಲ್ಲಿ ಅತ್ಯುತ್ತಮ ರೀಸೇಲ್ ವ್ಯಾಲ್ಯೂ ಹೊಂದಿರುವ ಕಾರುಗಳಿವು!

Car Launches In 2023 (1)

ಎಂಜಿ ಕಾಮೆಟ್ ಇವಿ

ಎಂಜಿ ಮೋಟಾರ್ ಕಂಪನಿ ಭಾರತದಲ್ಲಿ ಬಿಡುಗಡೆ ಮಾಡಿರುವ ಕಾಮೆಟ್ ಇವಿ ಕಾರು ಹಲವಾರು ವಿಶೇಷತೆಗಳೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಇದು ಸದ್ಯ ಭಾರತದಲ್ಲಿ ಮಾರಾಟವಾಗುತ್ತಿರುವ ಅಗ್ಗದ ಎಲೆಕ್ಟ್ರಿಕ್ ಕಾರು ಮಾದರಿಯಾಗಿ ಹೊರಹೊಮ್ಮಿದೆ. ವಿವಿಧ ವೆರಿಯೆಂಟ್ ಗಳೊಂದಿಗೆ ಇದು ಎಕ್ಸ್ ಶೋರೂಂ ಪ್ರಕಾರ ರೂ. 7.98 ಲಕ್ಷದಿಂದ ರೂ. 10.63 ಲಕ್ಷ ಬೆಲೆ ಹೊಂದಿದ್ದು, 17.3ಕೆವಿಹೆಚ್ ಬ್ಯಾಟರಿ ಪ್ಯಾಕ್ ನೊಂದಿಗೆ ಪ್ರತಿ ಚಾರ್ಜ್ ಗೆ ಗರಿಷ್ಠ 230 ಕಿ.ಮೀ ಮೈಲೇಜ್ ನೀಡುತ್ತದೆ.

Car Launches In 2023 (4)

ಸಿಟ್ರನ್ ಇಸಿ3

ಹೊಸ ಕಾರು ಮಾದರಿಗಳೊಂದಿಗೆ ಗ್ರಾಹಕರಿಂದ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಫ್ರೆಂಚ್ ಕಾರು ಉತ್ಪಾದನಾ ಕಂಪನಿ ಸಿಟ್ರನ್ ಇಸಿ3 ಇವಿ ಕಾರನ್ನು ಕಳೆದ ಫೆಬ್ರವರಿಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿತು. ಟಾಟಾ ಟಿಯಾಗೋ ಇವಿ ಕಾರಿಗೆ ಉತ್ತಮ ಪೈಪೋಟಿಯಾಗಿರುವ ಹೊಸ ಇಸಿ3 ಇವಿ ಕಾರು ಎಕ್ಸ್ ಶೋರೂಂ ಪ್ರಕಾರ ರೂ. 11.61 ಲಕ್ಷದಿಂದ ರೂ. 12.79 ಲಕ್ಷ ಬೆಲೆ ಹೊಂದಿದ್ದು, ಇಸಿ3 ಇವಿ ಕಾರಿನಲ್ಲಿ 29.2 ಕೆವಿಹೆಚ್ ಬ್ಯಾಟರಿ ಪ್ಯಾಕ್ ಜೋಡಣೆ ಮಾಡಲಾಗಿದೆ. ಇದು ಪ್ರತಿ ಚಾರ್ಜ್ ಗೆ ಗರಿಷ್ಠ 320 ಕಿ.ಮೀ ಮೈಲೇಜ್ ಹಿಂದಿರುಗಿಸಲಿದ್ದು, ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ.

Car Launches In 2023 (4)

ಮಾರುತಿ ಸುಜುಕಿ ಜಿಮ್ನಿ

ಆಫ್ ರೋಡ್ ಎಸ್ ಯುವಿ ವೈಶಿಷ್ಟ್ಯತೆ ಹೊಂದಿರುವ ಮಾರುತಿ ಸುಜುಕಿ ಹೊಸ ಜಿಮ್ನಿ ಕಾರು ವಿವಿಧ ವೆರಿಯೆಂಟ್ ಗಳೊಂದಿಗೆ ಎಕ್ಸ್ ಶೋರೂಂ ಪ್ರಕಾರ ಆರಂಭಿಕವಾಗಿ ರೂ. 10.74 ಲಕ್ಷದಿಂದ ರೂ. 15.05 ಲಕ್ಷ ಬೆಲೆ ಹೊಂದಿದೆ. 4×2 ಮತ್ತು 4×4 ಡ್ರೈವ್ ಸಿಸ್ಟಂ ಆಯ್ಕೆಗಳನ್ನು ಹೊಂದಿರುವ ಹೊಸ ಕಾರು ಮಾದರಿಯು 1.5 ಲೀಟರ್ ಪೆಟ್ರೋಲ್ ಎಂಜಿನ್ ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು 4-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿದೆ. ಹೊಸ ಕಾರಿನಲ್ಲಿ ಸುರಕ್ಷತೆಗಾಗಿ ಆರು ಏರ್ ಬ್ಯಾಗ್ ಗಳು, ಎಬಿಎಸ್ ಜೊತೆಗೆ ಇಬಿಡಿ, ಬ್ರೇಕ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಪ್ರೊಗ್ರಾಂ, ಬ್ರೇಕ್ ಲಿಮಿಟೆಡ್ ಸ್ಲಿಪ್ ಡಿಫ್ರೆಷನ್ಷಲ್, ಹಿಲ್ ಹೋಲ್ಡ್ ಕಂಟ್ರೊಲ್, ಹಿಲ್ ಡಿಸೆಂಟ್ ಕಂಟ್ರೋಲ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್ ಮತ್ತು ರಿಯಲ್ ವ್ಯೂ ಕ್ಯಾಮೆರಾ ಸೌಲಭ್ಯಗಳನ್ನು ಹೊಂದಿದೆ.

ಇದನ್ನೂ ಓದಿ: ಜನಪ್ರಿಯ ಎಸ್​ಯುವಿ ಕಾರುಗಳ ಖರೀದಿ ಮೇಲೆ ಭರ್ಜರಿ ಇಯರ್ ಎಂಡ್ ಆಫರ್ ಘೋಷಣೆ

Car Launches In 2023 (4)

ಹೋಂಡಾ ಎಲಿವೇಟ್

ಕಂಪ್ಯಾಕ್ಟ್ ಎಸ್ ಯುವಿ ವೈಶಿಷ್ಟ್ಯತೆ ಹೋಂಡಾ ಎಲಿವೇಟ್ ಕಾರು ಎಸ್ ವಿ, ವಿ, ವಿಎಕ್ಸ್ ಮತ್ತು ಜೆಡ್ಎಕ್ಸ್ ಎನ್ನುವ ನಾಲ್ಕು ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿದ್ದು, ಇದು ಎಕ್ಸ್ ಶೋರೂಂ ಪ್ರಕಾರ ರೂ. 11 ಲಕ್ಷದಿಂದ ರೂ. 16.28 ಲಕ್ಷ ಬೆಲೆ ಹೊಂದಿದೆ. ಪ್ರತಿಸ್ಪರ್ಧಿ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೊಸ್ ಗಿಂತಲೂ ಹೆಚ್ಚಿನ ಪ್ರೀಮಿಯಂ ಫೀಚರ್ಸ್ ಹೊಂದಿರುವ ಎಲಿವೇಟ್ ಕಾರಿನಲ್ಲಿ 1.5 ಲೀಟರ್ ಎನ್ಎ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಾಗಿದೆ. ಇದರಲ್ಲಿ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ನೀಡಲಾಗಿದ್ದು, ಇವು ಗರಿಷ್ಠ 121 ಹಾರ್ಸ್ ಪವರ್ ಮತ್ತು 145 ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಇಂಧನ ದಕ್ಷತೆಯಲ್ಲೂ ಗಮನಸೆಳೆಯುತ್ತಿದೆ.

Car Launches In 2023 (2)

ಜೊತೆಗೆ ಹೊಸ ಕಾರಿನಲ್ಲಿರುವ ಜೆಡ್ಎಕ್ಸ್ ಟಾಪ್ ಎಂಡ್ ವೆರಿಯೆಂಟ್ ನಲ್ಲಿ ಎಡಿಎಎಸ್(ಅಡ್ವಾನ್ಸ್ ಡ್ರೈವಿಂಗ್ ಅಸಿಸ್ಟ್ ಸಿಸ್ಟಂ) ಸೂಟ್ ಸಹ ಜೋಡಣೆ ಮಾಡಲಾಗಿದ್ದು, ಇದು ಉತ್ತಮ ಸುರಕ್ಷತೆ ಖಾತ್ರಿಪಡಿಸುತ್ತದೆ.