ಭರ್ಜರಿ ಮೈಲೇಜ್ ಪ್ರೇರಿತ ಇಮ್ಯಾಕ್ಸ್ 7 ಇವಿ ಕಾರಿನ ಬುಕಿಂಗ್ ಆರಂಭಿಸಿದ ಬಿವೈಡಿ

BYD eMax 7: ಬಿವೈಡಿ ಇಂಡಿಯಾ ಕಂಪನಿಯು ತನ್ನ ಹೊಸ ಇಮ್ಯಾಕ್ಸ್ 7 ಎಂಪಿವಿ ಬಿಡುಗಡೆಗೆ ಸಿದ್ದವಾಗಿದ್ದು, ಇದೀಗ ಹೊಸ ಕಾರಿನ ಬುಕಿಂಗ್ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿದೆ.

ಭರ್ಜರಿ ಮೈಲೇಜ್ ಪ್ರೇರಿತ ಇಮ್ಯಾಕ್ಸ್ 7 ಇವಿ ಕಾರಿನ ಬುಕಿಂಗ್ ಆರಂಭಿಸಿದ ಬಿವೈಡಿ
ಹೊಸ ಬಿವೈಡಿ ಇಮ್ಯಾಕ್ಸ್ 7 ಎಂಪಿವಿ
Follow us
Praveen Sannamani
|

Updated on: Sep 22, 2024 | 10:25 PM

ಮಧ್ಯಮ ಗಾತ್ರದ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಗಮನಸೆಳೆಯುತ್ತಿರುವ ಬಿವೈಡಿ (BYD) ಕಂಪನಿ ಭಾರತದಲ್ಲಿ ತನ್ನ ಹೊಸ ಇಮ್ಯಾಕ್ಸ್ 7 ಎಲೆಕ್ಟ್ರಿಕ್ ಎಂಪಿವಿ ಬಿಡುಗಡೆಗೆ ದಿನಾಂಕ ನಿಗದಿಪಡಿಸಿದೆ. ಅಕ್ಟೋಬರ್ 8ರಂದು ಹೊಸ ಇವಿ ಕಾರು ಅಧಿಕೃತವಾಗಿ ಬಿಡುಗಡೆಯಾಗಲಿದ್ದು, ಹೊಸ ಕಾರು ಖರೀದಿಗಾಗಿ ರೂ. 51 ಸಾವಿರ ಮುಂಗಡ ಹಣದೊಂದಿಗೆ ಬುಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

ಭಾರತದಲ್ಲಿ ಸದ್ಯ ಇ6, ಅಟ್ಟೊ 3 ಮತ್ತು ಇ6 ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟಮಾಡುತ್ತಿರುವ ಬಿವೈಡಿ ಕಂಪನಿಯು ಇ6 ಮಾದರಿಯನ್ನೇ ಹೊಸ ನವೀಕರಣಗಳೊಂದಿಗೆ ಇಮ್ಯಾಕ್ಸ್ 7 ಹೆಸರಿನಲ್ಲಿ ಬಿಡುಗಡೆಗೆ ನಿರ್ಧರಿಸಿದೆ. ಹೊಸ ಕಾರು ಈ ಬಾರಿ ಹಲವಾರು ಹೊಸ ಫೀಚರ್ಸ್ ಗಳೊಂದಿಗೆ ಸುಧಾರಿತ ಬ್ಯಾಟರಿ ಪ್ಯಾಕ್ ಹೊಂದಿದ್ದು, ಎಂಪಿವಿ ವಿಭಾಗದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

7 ಸೀಟರ್ ಸೌಲಭ್ಯ ಹೊಂದಿರುವ ಇಮ್ಯಾಕ್ಸ್ 7 ಇವಿ ಕಾರು ಮಾದರಿಯು ಇ6 ಕಾರಿಗಿಂತಲೂ ಹೆಚ್ಚು ಪ್ರೀಮಿಯಂ ಆಗಿದ್ದು, ಹೊಸ ಕಾರು ಖರೀದಿಸುವ ಮೊದಲ 1 ಸಾವಿರ ಗ್ರಾಹಕರಿಗೆ ಹೊಸ ಆಫರ್ ಘೋಷಣೆ ಮಾಡಲಾಗಿದೆ. ಹೊಸ ಕಾರು ಖರೀದಿಸುವ ಮೊದಲ ಒಂದು ಸಾವಿರ ಗ್ರಾಹಕರಿಗೆ 7ಕೆವಿ ಮತ್ತು 3ಕೆವಿ ಚಾರ್ಜಿಂಗ್ ಸೌಲಭ್ಯಗಳನ್ನು ನೀಡುವುದಾಗಿ ಘೋಷಿಸಲಾಗಿದ್ದು, ಎರಡು ಮಾದರಿಯ ಬ್ಯಾಟರಿ ಆಯ್ಕೆ ಹೊಂದಿರಲಿದೆ.

ಹೊಸ ಇಮ್ಯಾಕ್ಸ್ 7 ಇವಿ ಕಾರಿನಲ್ಲಿ ಬಿವೈಡಿ ಕಂಪನಿಯು ಈ ಬಾರಿ 55.4kWh ಮತ್ತು 71.8kWh ಬ್ಯಾಟರಿ ಆಯ್ಕೆಗಳನ್ನು ನೀಡಲಿದ್ದು, ಇದರಲ್ಲಿ ಆರಂಭಿಕ ಮಾದರಿಯು ಪ್ರತಿ ಚಾರ್ಜ್ ಗೆ 430 ಕಿ.ಮೀ ಮೈಲೇಜ್ ನೀಡಲಿದ್ದರೆ ಟಾಪ್ ಎಂಡ್ ಮಾದರಿಯು ಪ್ರತಿ ಚಾರ್ಜ್ ಗೆ 530 ಕಿ.ಮೀ ಮೈಲೇಜ್ ನೀಡಲಿದೆ.

ಇನ್ನು ಹೊಸ ಕಾರಿನಲ್ಲಿ ಈ ಹಿಂದಿನಂತೆಯೇ ಹಲವು ತಾಂತ್ರಿಕ ಸೌಲಭ್ಯಗಳೊಂದಿಗೆ ವಿನ್ಯಾಸದಲ್ಲಿ ತುಸು ಬದಲಾವಣೆಗಳನ್ನು ಪಡೆದುಕೊಂಡಿದ್ದು, ಮರು ವಿನ್ಯಾಸಗೊಳಿಸಲಾದ ಬಂಪರ್, ಟೈಲ್ ಲ್ಯಾಂಪ್ಸ್ ನೀಡಲಾಗಿದೆ. ಹಾಗೆಯೇ ಹೊಸ ಕಾರಿನ ಒಳಭಾಗದಲ್ಲಿ ಹೆಚ್ಚಿನ ಬದಲಾವಣೆಗಳನ್ನು ನೀಡಲಾಗಿದ್ದು, ಈ ಬಾರಿ 12.8 ಇಂಚಿನ ಪ್ಲೋಟರಿಂಗ್ ಟಚ್ ಸ್ಕ್ರೀನ್, ಎರಡು ಬದಿ ಆಸನಗಳಲ್ಲೂ ವೈರ್ ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್, ಹೊಸ ವಿನ್ಯಾಸದ ಸ್ಟೀರಿಂಗ್ ವ್ಹೀಲ್ಸ್ ಮತ್ತು ಪನೊರಮಿಕ್ ಸನ್ ರೂಫ್ ನೀಡಲಾಗಿದೆ. ಜೊತೆಗೆ ಹೊಸ ಕಾರಿನಲ್ಲಿ ಸುರಕ್ಷತೆಗಾಗಿ 6 ಏರ್ ಬ್ಯಾಗ್ಸ್, ಆಲ್ ವ್ಹೀಲ್ ಡಿಸ್ಕ್ ಬ್ರೇಕ್ ಸೇರಿದಂತೆ ಲೆವಲ್ 2 ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ನೀಡಲಾಗಿದ್ದು, ಎಕ್ಸ್ ಶೋರೂಂ ಪ್ರಕಾರ ರೂ. 30 ಲಕ್ಷದಿಂದ ರೂ. 35 ಲಕ್ಷ ಬೆಲೆ ಅಂತರದಲ್ಲಿ ಮಾರಾಟವಾಗಲಿದೆ.

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ