5 ರೂಪಾಯಿಗೆ 50 ಕಿ.ಮಿ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಬೈಕ್, 8ನೇ ತರಗತಿ ವಿದ್ಯಾರ್ಥಿಯ ಹೊಸ ಆವಿಷ್ಕಾರ
ವಾಹನಗಳಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಾ ನೋಡುಗರ ಹುಬ್ಬೇರಿಸುವಂತೆ ಮಾಡುವುದು ಹೊಸದೇನಲ್ಲ. ಈಗಾಗಲೇ ಇಂತಹ ಪ್ರಯತ್ನಗಳನ್ನು ಸಾಕಷ್ಟು ಜನರು ಮಾಡಿದ್ದು ಭೇಷ್ ಎನಿಸಿಕೊಂಡಿದ್ದಾರೆ. ಇಂತಹ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ಬಿಹಾರದ 8ನೇ ತರಗತಿಯ ವಿದ್ಯಾರ್ಥಿಯೊಬ್ಬ ಸ್ಕ್ರ್ಯಾಪ್‌ಗಳನ್ನು ಬಳಸಿ ಎಲೆಕ್ಟ್ರಿಕ್ ಬೈಕನ್ನು ತಯಾರಿಸಿದ್ದು ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.
ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಯಾವ ಕೊರತೆಯಿಲ್ಲ. ಹೀಗಾಗಿ ತಮ್ಮ ಕಲ್ಪನೆಗೆ ಹೊಸ ರೆಕ್ಕೆಯನ್ನು ಕಟ್ಟಿ ತಮ್ಮ ನೆಚ್ಚಿನ ವಾಹನಗಳ ಹೊಸ ಲುಕ್ ನೀಡುವುದನ್ನು ನೋಡಿರಬಹುದು. ಅಷ್ಟೇ ಅಲ್ಲದೇ, ಮನೆಯಲ್ಲಿ ಕೆಟ್ಟು ಹೋದ ವಸ್ತುಗಳಿಂದ ಕಡಿಮೆ ಖರ್ಚಿನಲ್ಲಿ ಹೊಸ ಬಗೆಯ ವಸ್ತುಗಳನ್ನು ತಯಾರಿಸುವಂತಹ ಸಣ್ಣ ಪುಟ್ಟ ಆವಿಷ್ಕಾರಗಳ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತದೆ. ಇದೀಗ ವಿದ್ಯಾರ್ಥಿಯೊಬ್ಬನು ಸ್ಕ್ರ್ಯಾಪ್‌ಗಳನ್ನು ಬಳಸಿ ಎಲೆಕ್ಟ್ರಿಕ್ ಬೈಕನ್ನು ತಯಾರಿಸಿದ್ದು, ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಗೇಮ್ಸ್ ಹೆಸರಿನ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದ್ದು, ‘ಬಿಹಾರದ 8ನೇ ತರಗತಿಯ ವಿದ್ಯಾರ್ಥಿಯೊಬ್ಬ ಸ್ಕ್ರ್ಯಾಪ್‌ಗಳನ್ನು ಬಳಸಿ ಎಲೆಕ್ಟ್ರಿಕ್ ಬೈಕ್ ಅನ್ನು ನಿರ್ಮಿಸಿದ್ದು, ಈ ಬೈಕ್ ಕೇವಲ ₹5 ವೆಚ್ಚದಲ್ಲಿ 50 ಕಿ.ಮೀ ಪ್ರಯಾಣಿಸುವ ಸಾಮರ್ಥ್ಯ ಹೊಂದಿದೆ’ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋ 5 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಕಂಡಿದೆ. ಈ ಬೈಕ್ ಬಹಳಷ್ಟು ಫೀಚರ್ಸ್ ಸೆಕ್ಯೂರಿಟಿ ಸೈರನ್ ಹೊಂದಿದೆ. ಮಾಲಿನ್ಯ ರಹಿತವಾಗಿರುವುದು ವಿಶೇಷ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
An 8th-grade student from Bihar has made a bike that travels 50 km for just ₹5. pic.twitter.com/vVKp31BDMO
— Gems (@gemsofbabus_) December 24, 2024
ಭಾರತೀಯ ಸೇನೆಯ ವಿಮಾನದಿಂದ ಸ್ಫೂರ್ತಿ ಪಡೆದು ಈ ಬೈಕ್ ತಯಾರಿಸಲಾಗಿದೆ. ಎಲೆಕ್ಟ್ರಿಕ್ಸ್ ಎಂದು ವಿದ್ಯಾರ್ಥಿ ತೇಜಸ್ ಹೆಸರಿಟ್ಟಿದ್ದು, ಈ ವಿಡಿಯೋಗೆ ನೆಟ್ಟಿಗರು ನಾನಾ ರೀತಿಯ ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ. ಈ ವಿಡಿಯೋ ಬಳಕೆದಾರರೊಬ್ಬರು, ಈ ವಿದ್ಯಾರ್ಥಿಯ ಈ ಆವಿಷ್ಕಾರವು ನಿಜಕ್ಕೂ ಅದ್ಭುತವಾಗಿದೆ ಎಂದಿದ್ದಾರೆ. ಮತ್ತೊಬ್ಬರು, ಸೂಪರ್ ಎಂದು ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ