Toll: ಹೈಸ್ಪೀಡ್ ಹೆದ್ದಾರಿಗಳಲ್ಲಿ ಟೋಲ್ ತಡೆಗಳಿಗೆ ಗುಡ್ ಬೈ: ಬರಲಿದೆ ಹೊಸ ವೈಶಿಷ್ಟ್ಯ
ANPR ಆಧಾರಿತ ಟೋಲಿಂಗ್ ಅನ್ನು ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇ ಮತ್ತು ಪಾಣಿಪತ್-ಅಂಬಾಲಾ ಹೆದ್ದಾರಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ದ್ವಾರಕಾ ಎಕ್ಸ್‌ಪ್ರೆಸ್‌ವೇ ಮತ್ತು ದೆಹಲಿಯ UER-II, ಗುಜರಾತ್‌ನ ಚೋರಾಯಸಿ, ಹರಿಯಾಣದ ಘರೌಂಡಾ ಮತ್ತು ತಮಿಳುನಾಡಿನ ನೀಮಿಲಿಯಲ್ಲಿರುವ ಐದು ಟೋಲ್ ಪ್ಲಾಜಾಗಳಲ್ಲಿ ತಡೆರಹಿತ ಟೋಲಿಂಗ್‌ನ MLFF ವ್ಯವಸ್ಥೆಗಾಗಿ NHAI ಬಿಡ್‌ಗಳನ್ನು ಆಹ್ವಾನಿಸಿದೆ.

ಮುಂದಿನ ಐದು ವರ್ಷಗಳಲ್ಲಿ ನಾಲ್ಕು ಪಥಗಳು ಅಥವಾ ಅದಕ್ಕಿಂತ ಹೆಚ್ಚಿನ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಲ್ಲಾ ಹೈ-ಸ್ಪೀಡ್ ಕಾರಿಡಾರ್‌ಗಳಲ್ಲಿ “ತಡೆ-ಮುಕ್ತ” ಟೋಲಿಂಗ್ ವೈಶಿಷ್ಟವನ್ನು ತರಲು ಸರ್ಕಾರ ಗುರಿ ಹೊಂದಿದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದೆ. ಇದರ ಮೂಲಕ ಪ್ರಯಾಣಿಕರು ಶುಲ್ಕವನ್ನು ಪಾವತಿಸಲು ನಿಲ್ಲಬೇಕಾಗಿಲ್ಲ ಅಥವಾ ನಿಧಾನಗೊಳಿಸಬೇಕಾಗಿಲ್ಲ. ಇದು ತಡೆರಹಿತ ಪ್ರಯಾಣವನ್ನು ಖಚಿತಪಡಿಸುತ್ತದೆ. ಸುಮಾರು 1.5 ಲಕ್ಷ ಕಿಮೀ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 46,000 ಕಿಮೀ ನಾಲ್ಕು ಪಥಗಳು ಅಥವಾ ಅದಕ್ಕಿಂತ ಹೆಚ್ಚಿನವುಗಳಾಗಿವೆ. ಸುಮಾರು 2,500 ಕಿಮೀ ಹೆದ್ದಾರಿಗಳು ಹೈ-ಸ್ಪೀಡ್ ಕಾರಿಡಾರ್‌ಗಳಾಗಿವೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಸ್ತಾವನೆಯ ಪ್ರಕಾರ, 2025-26ರ ಅವಧಿಯಲ್ಲಿ 10,000 ಕಿಮೀಗಳಲ್ಲಿ ತಡೆ-ಮುಕ್ತ ಟೋಲಿಂಗ್ ಅನ್ನು ಪ್ರಾರಂಭಿಸುವ ಗುರಿಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೊಂದಿದೆ. ತಡೆ-ಮುಕ್ತ ಟೋಲಿಂಗ್‌ನಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ರೀಡರ್‌ಗಳು ಮತ್ತು ಎಂಟ್ರಿ-ಎಕ್ಸಿಟ್ ಪಾಯಿಂಟ್ನಲ್ಲಿ ಹೆಚ್ಚಿನ ರೆಸಲ್ಯೂಶನ್ ಹೊಂದಿರುವ ಕ್ಯಾಮೆರಾಗಳ ಬಳಕೆ, ಉಪಗ್ರಹ ಆಧಾರಿತ ಟೋಲಿಂಗ್ ಮತ್ತು ಬಹು-ಲೇನ್ ಮುಕ್ತ ಹರಿವು (MLFF) ವ್ಯವಸ್ಥೆಯಂತಹ ತಂತ್ರಜ್ಞಾನಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ.
ANPR ಆಧಾರಿತ ಟೋಲಿಂಗ್ ಅನ್ನು ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇ ಮತ್ತು ಪಾಣಿಪತ್-ಅಂಬಾಲಾ ಹೆದ್ದಾರಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲಾಗಿದೆ. ದ್ವಾರಕಾ ಎಕ್ಸ್‌ಪ್ರೆಸ್‌ವೇ ಮತ್ತು ದೆಹಲಿಯ UER-II, ಗುಜರಾತ್‌ನ ಚೋರಾಯಸಿ, ಹರಿಯಾಣದ ಘರೌಂಡಾ ಮತ್ತು ತಮಿಳುನಾಡಿನ ನೀಮಿಲಿಯಲ್ಲಿರುವ ಐದು ಟೋಲ್ ಪ್ಲಾಜಾಗಳಲ್ಲಿ ತಡೆರಹಿತ ಟೋಲಿಂಗ್‌ನ MLFF ವ್ಯವಸ್ಥೆಗಾಗಿ NHAI ಬಿಡ್‌ಗಳನ್ನು ಆಹ್ವಾನಿಸಿದೆ.
ಅಹಮದಾಬಾದ್-ಧೋಲೇರಾ ಮತ್ತು ದೆಹಲಿ-ಡೆಹ್ರಾಡೂನ್ ಎಕ್ಸ್‌ಪ್ರೆಸ್‌ವೇಗಳಿಗೆ ಬಿಡ್ ಸಿದ್ಧತೆ ನಡೆಯುತ್ತಿದೆ. ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿ ಮೋದಿ, NH ಕಾರಿಡಾರ್‌ಗಳಲ್ಲಿ ಸುಗಮ ಪ್ರಯಾಣವನ್ನು ಮಾಡಲು ಹೆದ್ದಾರಿ ಸಚಿವಾಲಯಕ್ಕೆ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡೀಸೆಲ್ ಕಾರುಗಳಿಗೆ ಇಂದುಕೂಡ ಇಷ್ಟೊಂದು ಬೇಡಿಕೆ ಏಕೆ?: ಇದರ 5 ದೊಡ್ಡ ಅನುಕೂಲಗಳು ಇಲ್ಲಿ ತಿಳಿಯಿರಿ
ಸದ್ಯದಲ್ಲೇ ಟೋಲ್ ಪಾಸ್ ವ್ಯವಸ್ಥೆ ಜಾರಿಗೆ:
ಸರ್ಕಾರವು ಮಧ್ಯಮ ವರ್ಗಕ್ಕೆ ಸಹಕಾರವಾಗಲು ಹೆದ್ದಾರಿಗಳಲ್ಲಿ ಪ್ರಯಾಣಿಸುವ ಜನರಿಗೆ ವಾರ್ಷಿಕ ಟೋಲ್ ಪಾಸ್ ಮತ್ತು ಜೀವಮಾನದ ಟೋಲ್ ಪಾಸ್ ಸೌಲಭ್ಯವನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ. ಈ ಎರಡೂ ಟೋಲ್ ಪಾಸ್‌ಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಾಗಿ ಪ್ರಯಾಣಿಸುವವರಿಗೆ ಬಹಳ ಪ್ರಯೋಜನಕಾರಿ ಆಗುತ್ತದೆ. ವರದಿಗಳ ಪ್ರಕಾರ, ವಾರ್ಷಿಕ ಟೋಲ್ ಪಾಸ್‌ಗಾಗಿ ನೀವು ಒಮ್ಮೆ 3,000 ರೂ. ಗಳನ್ನು ಪಾವತಿಸಬೇಕಾಗುತ್ತದೆ. 3,000 ರೂ. ಪಾವತಿಸಿದ ನಂತರ, ನೀವು ಈ ಪಾಸ್ ಅನ್ನು ಅನಿಯಮಿತವಾಗಿ ಬಳಸಲು ಸಾಧ್ಯವಾಗುತ್ತದೆ. ಅದೇ ಸಮಯದಲ್ಲಿ, ನೀವು 15 ವರ್ಷಗಳ ಕಾಲ ಜೀವಮಾನದ ಪಾಸ್ ಅನ್ನು ಪಡೆಯುತ್ತೀರಿ ಮತ್ತು ಈ ಟೋಲ್ ಪಾಸ್‌ಗಾಗಿ ನೀವು 30,000 ರೂ. ಗಳನ್ನು ಖರ್ಚು ಮಾಡಬೇಕಾಗುತ್ತದೆ.
ಇದನ್ನು ಯಾವಾಗ ಜಾರಿಗೆ ತರಲಾಗುತ್ತದೆ?:
ಈ ಪ್ರಸ್ತಾವನೆಯು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದೊಂದಿಗೆ ಇನ್ನೂ ಮುಂದುವರಿದ ಹಂತದಲ್ಲಿದೆ ಎಂದು ಮೂಲಗಳು ತಿಳಿಸಿವೆ. ಖಾಸಗಿ ವಾಹನಗಳಿಗೆ ಪ್ರತಿ ಕಿಲೋಮೀಟರ್‌ಗೆ ಮೂಲ ಟೋಲ್ ದರವನ್ನು ಕಡಿಮೆ ಮಾಡಲು ಸಚಿವಾಲಯ ಪರಿಗಣಿಸುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಬಹಿರಂಗಪಡಿಸಿದೆ, ಇದು ಮಾಡಿದರೆ ಹೆದ್ದಾರಿಯಲ್ಲಿ ಪ್ರಯಾಣಿಸುವ ಜನರಿಗೆ ಪರಿಹಾರ ಸಿಗುತ್ತದೆ. ಪಾಸ್ ಅನ್ನು ಫಾಸ್ಟ್‌ಟ್ಯಾಗ್‌ನಲ್ಲಿ ಎಂಬೆಡ್ ಮಾಡಲಾಗಿರುವುದರಿಂದ ಪಾಸ್ ಖರೀದಿಸಲು ಯಾವುದೇ ಪ್ರತ್ಯೇಕ ಕಾರ್ಡ್ ಖರೀದಿಸುವ ಅಗತ್ಯವಿಲ್ಲ.
ವಾರ್ಷಿಕ ಟೋಲ್ ಪಾಸ್ ಮತ್ತು ಜೀವಿತಾವಧಿಯ ಟೋಲ್ ಪಾಸ್ ಸೌಲಭ್ಯವನ್ನು ಯಾವಾಗ ಪ್ರಾರಂಭಿಸಲಾಗುವುದು ಎಂಬುದರ ಕುರಿತು ಸರ್ಕಾರವು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ, ಆದರೆ ಈ ಸೌಲಭ್ಯವನ್ನು ಶೀಘ್ರದಲ್ಲೇ ಜನರಿಗೆ ಪ್ರಾರಂಭಿಸಬಹುದು ಎಂದು ನಿರೀಕ್ಷಿಸಲಾಗಿದೆ.
ಅಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:05 am, Thu, 6 February 25




