ಹೊಸ ವರ್ಷಕ್ಕೆ ಹೋಂಡಾ ಕಾರುಗಳ ಖರೀದಿ ಮೇಲೆ ಭರ್ಜರಿ ಡಿಸ್ಕೌಂಟ್
ಹೋಂಡಾ ಕಾರ್ಸ್ ಇಂಡಿಯಾ ಕಂಪನಿಯು ತನ್ನ ಪ್ರಮುಖ ಕಾರು ಮಾದರಿಗಳ ಮೇಲೆ ಹೊಸ ವರ್ಷದ ಆಫರ್ ಗಳನ್ನು ಘೋಷಣೆ ಮಾಡಿದ್ದು, ಮೊದಲ ಬಾರಿಗೆ ಹೈಬ್ರಿಡ್ ಆವೃತ್ತಿಯ ಮೇಲೂ ಆಫರ್ ನೀಡುತ್ತಿದೆ.
ಹೋಂಡಾ ಕಾರ್ಸ್ ಇಂಡಿಯಾ (Honda Cars India) ಕಂಪನಿಯು ಹೊಸ ವರ್ಷದ ಸಂಭ್ರಮಕ್ಕಾಗಿ ತನ್ನ ಸಂಭಾವ್ಯ ಗ್ರಾಹಕರಿಗಾಗಿ ಭರ್ಜರಿ ಆಫರ್ ಗಳನ್ನು ಘೋಷಣೆ ಮಾಡಿದ್ದು, ಸಿಡಿ ಸೆಡಾನ್ ಮತ್ತು ಅಮೆಜ್ ಕಂಪ್ಯಾಕ್ಟ್ ಸೆಡಾನ್ ಮಾದರಿಯ ಮೇಲೆ ಅತ್ಯುತ್ತಮ ಆಫರ್ ಗಳನ್ನು ಪಡೆದುಕೊಳ್ಳಬಹುದಾಗಿದೆ. ಹೊಸ ಆಫರ್ ಗಳು 2023 ಮತ್ತು 2024 ಮಾದರಿಗಳ ಮೇಲೆ ಅನ್ವಯಿಸಲಿದ್ದು, ಮೊದಲ ಬಾರಿಗೆ ಸಿಟಿ ಸೆಡಾನ್ ಹೈಬ್ರಿಡ್ ಆವೃತ್ತಿಯ ಮೇಲೂ ಆಫರ್ ನೀಡಲಾಗುತ್ತಿದೆ.
ಹೊಸ ಆಫರ್ ಗಳಲ್ಲಿ ಹೋಂಡಾ ಕಂಪನಿಯು ಕ್ಯಾಶ್ ಡಿಸ್ಕೌಂಟ್, ಕಾರ್ಪೊರೇಟ್ ಡಿಸ್ಕೌಂಟ್ ಮತ್ತು ಎಕ್ಸ್ ಚೆಂಜ್ ಆಫರ್ ನೀಡಲಾಗುತ್ತಿದ್ದು, ಹೊಸ ಆಫರ್ ಗಳು ಅಮೇಜ್ ಮತ್ತು ಸಿಟಿ ಕಾರುಗಳನ್ನು ಹೊರತುಪಡಿಸಿ ಹೊಸದಾಗಿ ಬಿಡುಗಡೆಯಾಗಿರುವ ಎಲಿವೇಟ್ ಕಾರಿನ ಮೇಲೆ ಯಾವುದೇ ಆಫರ್ ನೀಡಲಾಗುತ್ತಿಲ್ಲ.
ಸಿಟಿ ಸೆಡಾನ್ ಹೈಬ್ರಿಡ್
ಸಿಟಿ ಸೆಡಾನ್ ಕಾರಿನ ಹೈಬ್ರಿಡ್ ಆವೃತ್ತಿಯ ಮೇಲೆ ಹೋಂಡಾ ಕಂಪನಿಯು ರೂ. 1 ಲಕ್ಷದ ತನಕ ಕ್ಯಾಶ್ ಬ್ಯಾಕ್ ಆಫರ್ ನೀಡುತ್ತಿದ್ದು, ಹೊಸ ಆಫರ್ 2023ರ ಮಾದರಿಯ ಮೇಲೆ ಮಾತ್ರ ಅನ್ವಯಿಸಲಿದೆ. ಪೆಟ್ರೋಲ್ ಎಂಜಿನ್ ಜೊತೆಗೆ ಎಲೆಕ್ಟ್ರಿಕ್ ಮೋಟಾರ್ ಸಂಯೋಜನೆ ಹೊಂದಿರುವ ಸಿಟಿ ಹೈಬ್ರಿಡ್ ಮಾದರಿಯು ಅತ್ಯುತ್ತಮ ಇಂಧನ ದಕ್ಷತೆಯನ್ನು ಹೊಂದಿದ್ದು, ಹೈಬ್ರಿಡ್ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ.
ಇದನ್ನೂ ಓದಿ: ಮೊದಲ ಬಾರಿಗೆ ಹೊಸ ಕಾರು ಖರೀದಿಸಿದ್ದೀರಾ? ಹಾಗಾದ್ರೆ ಈ ಟಿಪ್ಸ್ ತಪ್ಪದೇ ಪಾಲಿಸಿ..
ಸಿಟಿ ಸೆಡಾನ್
ಹೋಂಡಾ ಕಂಪನಿಯು ಸಿಟಿ ಸೆಡಾನ್ ಸಾಮಾನ್ಯ ಪೆಟ್ರೋಲ್ ಮಾದರಿಯ ಕಾರಿನ ಖರೀದಿಯ ಮೇಲೆ ರೂ. 88,600 ಮೌಲ್ಯದ ಆಫರ್ ನೀಡುತ್ತಿದ್ದು, ಇದರಲ್ಲಿ ರೂ. 40 ಸಾವಿರ ತನಕ ಕ್ಯಾಶ್ ಡಿಸ್ಕೌಂಟ್, 25 ಸಾವಿರ ತನಕ ಸ್ಪೆಷಲ್ ಕಾರ್ಪೊರೇಟ್ ಡಿಸ್ಕೌಂಟ್, ರೂ. 15 ಸಾವಿರ ಮೌಲ್ಯದ ಲೊಯಾಲಿಟಿ ಬೋನಸ್, ರೂ. 4 ಸಾವಿರ ಮೌಲ್ಯದ ಲೊಯಾಲಿಟಿ ಬೋನಸ್, ರೂ.6 ಸಾವಿರ ಮೌಲ್ಯದ ಎಕ್ಸ್ ಚೆಂಜ್ ಆಫರ್ ಮತ್ತು ರೂ. 13,600 ಮೌಲ್ಯದ ವಿಸ್ತರಿತ ವಾರಂಟಿ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ವಿವಿಧ ವೆರಿಯೆಂಟ್ ಗಳಲ್ಲಿ ಖರೀದಿಗೆ ಲಭ್ಯವಿರುವ ಸಿಟಿ ಕಾರು ಮಾದರಿಯು ಸದ್ಯ ಮಾರುಕಟ್ಟೆಯಲ್ಲಿ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 11.67 ಲಕ್ಷ ಆರಂಭಿಕ ಬೆಲೆ ಹೊಂದಿದ್ದು, ಇದು ಎಡಿಎಎಸ್ ಸೌಲಭ್ಯ ಸೇರಿದಂತೆ ಹಲವಾರು ಹೊಸ ಫೀಚರ್ಸ್ ಗಳನ್ನು ಹೊಂದಿದೆ.
ಇದನ್ನೂ ಓದಿ: 2023ರಲ್ಲಿ ಬಿಡುಗಡೆಯಾದ ಬೆಸ್ಟ್ ಮೈಲೇಜ್ ಸಿಎನ್ಜಿ ಕಾರುಗಳಿವು!
ಅಮೇಜ್
ವಿಶೇಷ ವಿನ್ಯಾಸ ಮತ್ತು ಕಡಿಮೆ ನಿರ್ವಹಣಾ ವೆಚ್ಚ ಹೊಂದಿರುವ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಖರೀದಿ ಮೇಲೂ ಹೋಂಡಾ ಕಾರ್ಸ್ ಕಂಪನಿಯು ಉತ್ತಮ ಆಫರ್ ನೀಡುತ್ತಿದ್ದು, ಅಮೇಜ್ ಕಾರು ಖರೀದಿಯ ಮೇಲೆ ರೂ. 72 ಸಾವಿರ ತನಕ ಆಫರ್ ಲಭ್ಯವಿದೆ. ಇದರಲ್ಲಿ 45 ಸಾವಿರ ತನಕ ಕ್ಯಾಶ್ ಬ್ಯಾಕ್ ಆಫರ್ ನೊಂದಿಗೆ ಎಕ್ಸ್ ಚೆಂಜ್ ಆಫರ್, ಕಾರ್ಪೊರೇಟ್ ಡಿಸ್ಕೌಂಟ್ ನೀಡುತ್ತಿದ್ದು, ಇದು 1.2 ಲೀಟರ್ ಪೆಟ್ರೋಲ್ ಎಂಜಿನ್ ನೊಂದಿಗೆ ಖರೀದಿಗೆ ಲಭ್ಯವಿರಲಿದೆ.