ಮಾರುತಿ ಸುಜುಕಿಯಿಂದ ಬಜಾಜ್ ಆಟೋವರೆಗೆ: ನವೆಂಬರ್‌ನಲ್ಲಿ ಅತಿ ಹೆಚ್ಚು ಮಾರಾಟವಾದ ವಾಹನ ಯಾವುದು?
ನವೆಂಬರ್ 2025 ರ ಆಟೋ ಕಂಪನಿಗಳ ಮಾರಾಟ ವರದಿಯನ್ನು ಬಿಡುಗಡೆ ಮಾಡಲಾಗಿದ್ದು, ಇದು ಮಹೀಂದ್ರಾ, ಟೊಯೋಟಾ, ಬಜಾಜ್ ಆಟೋ ಮತ್ತು ಮಾರುತಿ ಸುಜುಕಿಯ ತಿಂಗಳ ಮಾರಾಟದ ಅಂಕಿಅಂಶವನ್ನು ಬಹಿರಂಗಪಡಿಸಿದೆ. ನವೆಂಬರ್‌ನಲ್ಲಿ ಯಾವ ಕಂಪನಿಗಳು ಉತ್ತಮ ಪ್ರದರ್ಶನ ನೀಡಿದ್ದವು ಮತ್ತು ಯಾವ ಕಂಪನಿಗಳು ಮಾರಾಟದಲ್ಲಿ ಕುಸಿತ ಕಂಡಿವೆ ಎಂಬುದನ್ನು ನೋಡೋಣ.

ಬೆಂಗಳೂರು (ಡಿ. 03): ಪ್ರತಿ ತಿಂಗಳು, ಆಟೋ ಕಂಪನಿಗಳು ತಮ್ಮ ಅತಿ ಹೆಚ್ಚು ಮಾರಾಟ ಮಾಡಿದ ಕಾರುಗಳು ಯಾವುವು ಎಂಬ ಅಂಕಿಅಂಶಗಳನ್ನು ಬಿಡುಗಡೆ ಮಾಡುತ್ತವೆ. ಯಾವ ಕಂಪನಿಯ ವಾಹನಗಳು ಗ್ರಾಹಕರಲ್ಲಿ ಹೆಚ್ಚು ಜನಪ್ರಿಯವಾಗಿವೆ ಎಂಬುದನ್ನು ಅಂಕಿಅಂಶಗಳು ಬಹಿರಂಗಪಡಿಸುತ್ತವೆ. ಮಹೀಂದ್ರಾ ಮತ್ತು ಮಹೀಂದ್ರಾ, ಟೊಯೋಟಾ, ಬಜಾಜ್ ಆಟೋ ಮತ್ತು ಮಾರುತಿ ಸುಜುಕಿಯ (Maruti Suzuki) ಮಾರಾಟದ ವಿಷಯದಲ್ಲಿ ಕಳೆದ ತಿಂಗಳು, ಅಂದರೆ ನವೆಂಬರ್ ಹೇಗಿತ್ತು ಮತ್ತು ಪ್ರತಿ ಕಂಪನಿಯು ಎಷ್ಟು ಘಟಕಗಳನ್ನು ಮಾರಾಟ ಮಾಡಿದೆ? ಎಂಬುದನ್ನು ನೋಡೋಣ.
ನವೆಂಬರ್‌ನಲ್ಲಿ ಮಹೀಂದ್ರಾ & ಮಹೀಂದ್ರಾ ಒಟ್ಟು ಮಾರಾಟವು ವರ್ಷದಿಂದ ವರ್ಷಕ್ಕೆ ಶೇ.19 ರಷ್ಟು ಹೆಚ್ಚಾಗಿ 92,670 ಯೂನಿಟ್‌ಗಳಿಗೆ ತಲುಪಿದೆ. ಪ್ರಯಾಣಿಕ ವಾಹನ ವಿಭಾಗದಲ್ಲಿ, ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ 56,336 ವಾಹನಗಳನ್ನು ಮಾರಾಟ ಮಾಡಿದೆ.
ನವೆಂಬರ್‌ನಲ್ಲಿ ಬಜಾಜ್ ಆಟೋದ ದೇಶೀಯ ದ್ವಿಚಕ್ರ ವಾಹನಗಳ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ 1 ರಷ್ಟು ಕುಸಿದು 2,02,510 ಯೂನಿಟ್‌ಗಳಿಗೆ ತಲುಪಿದೆ. ಒಟ್ಟು ಸಗಟು ಮಾರಾಟವು ನವೆಂಬರ್‌ನಲ್ಲಿ ವರ್ಷದಿಂದ ವರ್ಷಕ್ಕೆ ಶೇ 8 ರಷ್ಟು ಹೆಚ್ಚಾಗಿ 4,53,273 ಯುನಿಟ್‌ಗಳಿಗೆ ತಲುಪಿದೆ.
ಟೊಯೋಟಾದ ಸಗಟು ಮಾರಾಟವು ಕಳೆದ ತಿಂಗಳು ವರ್ಷದಿಂದ ವರ್ಷಕ್ಕೆ ಶೇ. 19 ರಷ್ಟು ಹೆಚ್ಚಾಗಿ 30,085 ಯೂನಿಟ್‌ಗಳಿಗೆ ತಲುಪಿದೆ. ಇತ್ತೀಚೆಗೆ ಬಿಡುಗಡೆಯಾದ ಅರ್ಬನ್ ಕ್ರೂಸರ್ ಹೈಡರ್ ಏರೋ ಆವೃತ್ತಿ ಮತ್ತು ಫಾರ್ಚೂನರ್ ಲೀಡರ್ ಆವೃತ್ತಿಗಳು ಸಹ ಬೆಳವಣಿಗೆಯನ್ನು ಬಲಪಡಿಸುವಲ್ಲಿ ಸಹಾಯ ಮಾಡಿವೆ.
ಮಾರುತಿಯ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಹೇಗಿದೆ ಗೊತ್ತೇ?: ನಾಳೆ ಇ-ವಿಟಾರಾದ ಬೆಲೆ ಬಹಿರಂಗ
ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ ಕಳೆದ ವರ್ಷ ಇದೇ ತಿಂಗಳಲ್ಲಿ ಮಾರಾಟವಾದ 181,531 ಯುನಿಟ್‌ಗಳಿಗೆ ಹೋಲಿಸಿದರೆ ನವೆಂಬರ್‌ನಲ್ಲಿ ಒಟ್ಟು 229,021 ಯುನಿಟ್‌ಗಳನ್ನು ಮಾರಾಟ ಮಾಡಿದೆ. ನವೆಂಬರ್‌ನಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಒಟ್ಟು 170,971 ಪ್ರಯಾಣಿಕ ವಾಹನಗಳು ಮಾರಾಟವಾಗಿವೆ ಎಂದು ಮಾರುತಿ ಸುಜುಕಿ ಇಂಡಿಯಾ ತಿಳಿಸಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 141,312 ಯುನಿಟ್‌ಗಳು ಮಾರಾಟ ಆಗಿತ್ತು.
ಅಟೋಮೊಬೈಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




