Maruti Suzuki ಆಟೋಮ್ಯಾಟಿಕ್ ಕಾರು ಖರೀದಿದಾರರಿಗೆ ಗುಡ್ ನ್ಯೂಸ್

|

Updated on: Jun 04, 2024 | 10:06 PM

ಮಾರುತಿ ಸುಜುಕಿ ತನ್ನ ಪ್ರಮುಖ ಕಾರುಗಳ ಆಟೋಮ್ಯಾಟಿಕ್ ಆವೃತ್ತಿಗಳ ಖರೀದಿದಾರರಿಗೆ ಹೊಸ ಆಫರ್ ನೀಡಿದ್ದು, ಆಯ್ದ ಎಎಂಟಿ ಮಾದರಿಗಳ ಬೆಲೆ ಇಳಿಕೆ ಘೋಷಣೆ ಮಾಡಲಾಗಿದೆ.

Maruti Suzuki ಆಟೋಮ್ಯಾಟಿಕ್ ಕಾರು ಖರೀದಿದಾರರಿಗೆ ಗುಡ್ ನ್ಯೂಸ್
ಮಾರುತಿ ಸುಜುಕಿ ಕಾರುಗಳು
Follow us on

ಭಾರತದ ಅತಿದೊಡ್ಡ ಕಾರು ಉತ್ಪಾದನಾ ಕಂಪನಿಯಾಗಿರುವ ಮಾರುತಿ ಸುಜುಕಿ (Maruti Suzuki) ಗ್ರಾಹಕರಿಗೆ ಹೊಸ ಆಫರ್ ನೀಡಿದೆ. ಬಜೆಟ್ ಕಾರು ಮಾದರಿಗಳಲ್ಲೂ ಆಟೋಮ್ಯಾಟಿಕ್ ಆವೃತ್ತಿಗಳನ್ನು ಜನಪ್ರಿಯಗೊಳಿಸಿರುವ ಮಾರುತಿ ಸುಜುಕಿ ಇದೀಗ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದ್ದು, ಎಎಂಟಿ ಕಾರು ಖರೀದಿದಾರರನ್ನು ಸೆಳೆಯಲು ಬೆಲೆ ಇಳಿಕೆ ಘೋಷಣೆ ಮಾಡಿದೆ.

ಜನಪ್ರಿಯ ಕಾರು ಮಾದರಿಗಳಾದ ಬಲೆನೊ, ಫ್ರಾಂಕ್ಸ್, ವ್ಯಾಗನ್ಆರ್, ಆಲ್ಟೋ ಕೆ10, ಬ್ರೆಝಾ, ಸಿಯಾಜ್ ಮತ್ತು ಎಕ್ಸ್ಎಲ್6 ಕಾರುಗಳ ಎಜಿಎಸ್(ಆಟೋ ಗೇರ್ ಶಿಫ್ಟ್) ಆವೃತ್ತಿಗಳ ಬೆಲೆಯಲ್ಲಿ ಇಳಿಕೆ ಮಾಡಲಾಗಿದೆ. ಆಯ್ದ ಕಾರುಗಳ ಎಲ್ಲಾ ಆಟೋಮ್ಯಾಟಿಕ್ ಆವೃತ್ತಿಗಳಿಗೂ ಅನ್ವಯಿಸುವಂತೆ ರೂ. 5 ಸಾವಿರ ಬೆಲೆ ಇಳಿಕೆ ಮಾಡಿದ್ದು, ಇದು ಆಟೋಮ್ಯಾಟಿಕ್ ಆವೃತ್ತಿಗಳ ಮಾರಾಟ ಹೆಚ್ಚಿಸಲು ನೆರವಾಗಲಿದೆ ಎನ್ನಬಹುದು.

ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಕಾರುಗಳಿವು!

ಜೊತೆಗೆ ಆಟೋಮ್ಯಾಟಿಕ್ ಆವೃತ್ತಿಗಳ ಮಾರಾಟ ಹೆಚ್ಚಿನ ಮತ್ತೊಂದು ಮಹತ್ವದ ಬದಲಾವಣೆ ಮಾಡಿರುವ ಮಾರುತಿ ಸುಜುಕಿ ಕಂಪನಿಯು ಮ್ಯಾನುವಲ್ ಮಾದರಿಗಳಿಂತಲೂ ಹೆಚ್ಚಿನ ಇಂಧನ ದಕ್ಷತೆಯನ್ನು ಎಎಂಟಿ ಮಾದರಿಗಳಲ್ಲಿ ನೀಡಲಾಗುತ್ತಿದೆ. ಸಾಮಾನ್ಯವಾಗಿ ಆಟೋಮ್ಯಾಟಿಕ್ ಮಾದರಿಗಳ ಇಂಧನ ಕ್ಷಮತೆಯೂ ಮ್ಯಾನುವಲ್ ಮಾದರಿಗಳಿಂತಲೂ ತುಸು ಕಡಿಮೆ ಇದ್ದರೂ ಕೂಡಾ ಹೊಸ ತಂತ್ರಜ್ಞಾನ ಅಳವಡಿಕೆಯೊಂದಿಗೆ ಮಾರುತಿ ಸುಜುಕಿ ಕಂಪನಿಯು ಆಟೋಮ್ಯಾಟಿಕ್ ಮಾದರಿಗಳಲ್ಲಿ ಹೆಚ್ಚಿನ ಮೈಲೇಜ್ ಖಾತ್ರಿಪಡಿಸುತ್ತಿದೆ.

ಹೀಗಾಗಿ ನಗರ ಪ್ರದೇಶದಲ್ಲಿನ ಗ್ರಾಹಕರು ಟ್ರಾಫಿಕ್ ದಟ್ಟಣೆಯಲ್ಲಿ ಆರಾಮದಾಯಕ ಪ್ರಯಾಣಕ್ಕಾಗಿ ಎಎಂಟಿ ಮಾದರಿಯೊಂದಿಗೆ ಹೆಚ್ಚಿನ ಇಂಧನ ದಕ್ಷತೆ ನೀರಿಕ್ಷೆ ಮಾಡಬಹುದಾಗಿದ್ದು, ಈ ನಿಟ್ಟಿನಲ್ಲಿ ಮಾರುತಿ ಸುಜುಕಿ ಕಂಪನಿಯು ತನ್ನ ಹೊಸ ಕಾರುಗಳಲ್ಲಿ ಮಹತ್ವದ ಬದಲಾವಣೆ ತರುತ್ತಿದೆ. ಈ ಮೂಲಕ ಮುಂಬರುವ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಟೋಮ್ಯಾಟಿಕ್ ಮಾದರಿಗಳಿಗಾಗಿ ಬೇಡಿಕೆ ಹರಿದುಬರುವ ನೀರಿಕ್ಷೆಗಳಿದ್ದು, ಕಳೆದ ಒಂದೇ ವರ್ಷದಲ್ಲಿ 1.32 ಲಕ್ಷ ಯುನಿಟ್ ಎಎಂಟಿ ಕಾರುಗಳನ್ನು ಮಾರಾಟ ಮಾಡಿದೆ.

ಇದನ್ನೂ ಓದಿ: ಎಡಿಎಎಸ್ ಸೌಲಭ್ಯ ಹೊಂದಿರುವ ಭಾರತದ ಬಜೆಟ್ ಕಾರುಗಳಿವು!

ಇದರೊಂದಿಗೆ 2024-25ರ ಹಣಕಾಸು ವರ್ಷದಲ್ಲಿ ಇನ್ನು ಹೆಚ್ಚಿನ ಸಂಖ್ಯೆಯ ಆಟೋಮ್ಯಾಟಿಕ್ ಕಾರು ಮಾದರಿಗಳ ಮಾರಾಟ ಮಾಡುವ ಉದ್ದೇಶದಿಂದ ಹೊಸ ಬದಲಾವಣೆಗಳನ್ನು ಪರಿಚಯಿಸಲಾಗುತ್ತಿದ್ದು, ಇದಕ್ಕಾಗಿ ಬೆಲೆ ಇಳಿಕೆ ಜೊತೆಗೆ ಇನ್ನು ಹೆಚ್ಚಿನ ಆಫರ್ ಗಳೊಂದಿಗೆ ಗ್ರಾಹಕರನ್ನು ಸೆಳೆಯಲಾಗುತ್ತಿದೆ.