ಐಷಾರಾಮಿ ಲುಕ್ ಹೊಂದಿರುವ ಸ್ಕೋಡಾ ಕುಶಾಕ್ ಮತ್ತು ಸ್ಲಾವಿಯಾ ಸ್ಪೆಷಲ್ ಎಡಿಷನ್ ಬಿಡುಗಡೆ
ಸ್ಕೋಡಾ ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ ಕುಶಾಕ್ ಮತ್ತು ಸ್ಲಾವಿಯಾ ಕಾರು ಮಾದರಿಗಳಲ್ಲಿ ಹೊಸದಾಗಿ ಎಲಿಗನ್ಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ್ದು, ಸಂಪೂರ್ಣ ಕಪ್ಪು ಬಣ್ಣದ ವಿನ್ಯಾಸದೊಂದಿಗೆ ಐಷಾರಾಮಿ ನೋಟವನ್ನು ಹೊಂದಿವೆ.
ಹೊಚ್ಚ ಹೊಸ ಪ್ರೀಮಿಯಂ ಕಾರುಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿರುವ ಸ್ಕೋಡಾ ಇಂಡಿಯಾ (Skoda India) ಕಂಪನಿಯು ತನ್ನ ಜನಪ್ರಿಯ ಕಾರು ಮಾದರಿಗಳಾದ ಕುಶಾಕ್ ಕಂಪ್ಯಾಕ್ಟ್ ಎಸ್ ಯುವಿ ಮತ್ತು ಸ್ಲಾವಿಯಾ ಸೆಡಾನ್ ಕಾರು ಮಾದರಿಗಳಲ್ಲಿ ಹೊಸದಾಗಿ ಎಲಿಗನ್ಸ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದೆ. ಸಂಪೂರ್ಣ ಕಪ್ಪು ಬಣ್ಣದ ವಿನ್ಯಾಸದೊಂದಿಗೆ ಐಷಾರಾಮಿ ನೋಟವನ್ನು ಹೊಂದಿರುವ ಹೊಸ ಕಾರುಗಳು ಎಕ್ಸ್ ಶೋರೂಂ ಪ್ರಕಾರ ರೂ. 17.52 ಲಕ್ಷ ಮತ್ತು ರೂ. 18.31 ಲಕ್ಷ ಆರಂಭಿಕ ಬೆಲೆ ಹೊಂದಿವೆ.
ಹೊಸ ಕಾರುಗಳಲ್ಲಿ ಸ್ಲಾವಿಯಾ ಎಲಿಗನ್ಸ್ ಆವೃತ್ತಿಯು ಆರಂಭಿಕವಾಗಿ ರೂ. 17.52 ಲಕ್ಷದಿಂದ ರೂ. 18.92 ಲಕ್ಷ ಬೆಲೆ ಹೊಂದಿದ್ದರೆ ಕುಶಾಕ್ ಎಲಿಗನ್ಸ್ ಆವೃತ್ತಿಯು ರೂ. 18.31 ಲಕ್ಷದಿಂದ ರೂ. 19.51 ಲಕ್ಷ ಬೆಲೆ ಹೊಂದಿವೆ. ಹೊಸ ಆವೃತ್ತಿಗಳು ಸ್ಟೈಲ್ ವೆರಿಯೆಂಟ್ ಆಧರಿತ ಫೀಚರ್ಸ್ ಗಳೊಂದಿಗೆ ಹೊರಭಾಗದಲ್ಲಿ ಸಂಪೂರ್ಣ ಕಪ್ಪುದ ಬಣ್ಣವನ್ನು ಪಡೆದುಕೊಂಡಿದ್ದು, ಇವು ಸಾಮಾನ್ಯ ಸ್ಟೈಲ್ ಮಾದರಿಗಿಂತಲೂ ರೂ. 40 ಸಾವಿರದಿಂದ ರೂ. 50 ಸಾವಿರದಷ್ಟು ದುಬಾರಿಯಾಗಿರಲಿವೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೊಂದು ಕಾರು ಉತ್ಪಾದನಾ ಘಟಕ ಘೋಷಣೆ ಮಾಡಿದ ಟೊಯೊಟಾ
ಸ್ಕೋಡಾ ಕಂಪನಿಯು ಹೊಸ ಆವೃತ್ತಿಗಳಲ್ಲಿ ಸಂಪೂರ್ಣ ಕಪ್ಪುದ ಬಣ್ಣದೊಂದಿಗೆ ಕ್ರಾಟ್ರಾಸ್ಟ್ ನೀಡಲು ಗ್ರಿಲ್, ಟೈಲ್ ಗೇಟ್ ಗಳಲ್ಲಿ ಕ್ರೋಮ್ ಜೋಡಣೆ ಮಾಡಿದ್ದು, ಎರಡು ಕಾರುಗಳಲ್ಲೂ ಪೆಡಲ್ ಲ್ಯಾಂಪ್ಸ್, 17 ಇಂಚಿನ ವೆಗಾ ಅಲಾಯ್ ವ್ಹೀಲ್ ಮತ್ತು ಬಿ ಪಿಲ್ಲರ್ ಗಳಲ್ಲಿ ಸ್ಪೆಷಲ್ ಎಡಿಷನ್ ಬ್ಯಾಡ್ಜ್ ನೀಡಲಾಗಿದೆ. ಹಾಗಾಯೇ ಹೊಸ ಕಾರಿನ ಕ್ಯಾಬಿನ್ ಕೂಡಾ ಹಲವಾರು ವಿಶೇಷತೆಗಳನ್ನು ಹೊಂದಿದ್ದು, ಡೋರ್ ಗಳಲ್ಲಿ ಸ್ಕಫ್ ಪ್ಲೇಟ್, ಅಲ್ಯುಮಿನಿಯಂ ಪೆಡಲ್ ಜೊತೆಗೆ ಹೊಸ ವಿನ್ಯಾಸ ಮ್ಯಾಟ್ ಗಳು, ಆಸನಗಳಲ್ಲಿ ಎಲಿಗನ್ಸ್ ಬ್ಯಾಡ್ಜ್, 10.1 ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್ ಮೆಂಟ್ ಸಿಸ್ಟಂ, ಡಿಜಿಟಲ್ ಕ್ಲಸ್ಟರ್ ಮತ್ತು 6-ಸ್ಪೀಕರ್ಸ್ ಜೊತೆ ಸಬ್ ವುಫರ್ ಸೌಂಡ್ ಸಿಸ್ಟಂ ನೀಡಲಾಗಿದೆ.
ಇದರೊಂದಿಗೆ ಕುಶಾಕ್ ಮತ್ತು ಸ್ಲಾವಿಯಾ ಹೊಸ ಕಾರುಗಳು 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಜೊತೆಗೆ 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಇವು ಸುರಕ್ಷತೆಯಲ್ಲೂ ಗ್ರಾಹಕರ ಗಮನಸೆಳೆಯಲಿವೆ.
ಇದನ್ನೂ ಓದಿ: ಪೆಟ್ರೋಲ್ ಕಾರುಗಳು Vs ಪೆಟ್ರೋಲ್ ಸಿಎನ್‌ಜಿ ಕಾರುಗಳು.. ಖರೀದಿಗೆ ಯಾವುದು ಬೆಸ್ಟ್?
ಹೊಸ ಕಾರುಗಳಲ್ಲಿ ಕಾರ್ ಕನೆಕ್ಟ್ ಟೆಕ್ನಾಲಜಿ ಸೇರಿದಂತೆ ಒಟ್ಟು 40ಕ್ಕೂ ಹೆಚ್ಚು ಸುರಕ್ಷಾ ಫೀಚರ್ಸ್ ಪಡೆದುಕೊಂಡಿದ್ದು, ಮಲ್ಟಿ ಏರ್‌ಬ್ಯಾಗ್ ಗಳು, ಎಬಿಎಸ್ ಜೊತೆ ಇಬಿಡಿ, ಮಲ್ಟಿ ಕೂಲಿಷನ್ ಬ್ರೇಕ್ಸ್, ಐಸೋಫಿಕ್ಸ್ ಚೈಲ್ಡ್ ಸೀಟ್ ಮೌಂಟ್, ತ್ರಿ ಪಾಯಿಂಟ್ ಸೀಟ್ ಬೆಲ್ಟ್, ತ್ರಿ ಜೋನ್ ಕ್ಲೈಮೆಟ್ ಕಂಟ್ರೋಲ್, ರಿಯರ್ ವ್ಯೂ ಕ್ಯಾಮೆರಾ, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ, ಕ್ರೂಸ್ ಕಂಟ್ರೊಲ್ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್ ಸೌಲಭ್ಯಗಳೊಂದಿಗೆ ಕ್ರ್ಯಾಶ್ ಟೆಸ್ಟಿಂಗ್ ನಲ್ಲಿ 5 ಸ್ಟಾರ್ ಸೇಫ್ಟಿ ರೇಟಿಂಗ್ಸ್ ಪಡೆದುಕೊಂಡಿವೆ.