Volkswagen Taigun: ಫೋಕ್ಸ್ ವ್ಯಾಗನ್ ಟೈಗನ್ ಜಿಟಿ ಎಡ್ಜ್ ಟ್ರಯಲ್ ಎಡಿಷನ್ ಬಿಡುಗಡೆ
ಫೋಕ್ಸ್ ವ್ಯಾಗನ್ ಇಂಡಿಯಾ ಕಂಪನಿಯು ತನ್ನ ಜನಪ್ರಿಯ ಟೈಗನ್ ಕಂಪ್ಯಾಕ್ಟ್ ಎಸ್ ಯುವಿ ಆವೃತ್ತಿಯಲ್ಲಿ ವಿಶೇಷ ಫೀಚರ್ಸ್ ಹೊಂದಿರುವ ಜಿಟಿ ಎಡ್ಜ್ ಟ್ರಯಲ್ ಎಡಿಷನ್ ಬಿಡುಗಡೆ ಮಾಡಿದೆ.
ಮಧ್ಯಮ ಕ್ರಮಾಂಕರ ಪ್ರೀಮಿಯಂ ಕಾರು ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಫೋಕ್ಸ್ ವ್ಯಾಗನ್ (Volkswagen) ಕಂಪನಿಯು ದೀಪಾವಳಿ ವಿಶೇಷತೆಗಾಗಿ ಹೊಸ ಟೈಗನ್ ಜಿಟಿ ಎಡ್ಜ್ ಟ್ರಯಲ್ ಎಡಿಷನ್ (Taigun GT Edge Trail Edition) ಬಿಡುಗಡೆ ಮಾಡಿದ್ದು, ಹೊಸ ಕಾರು ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 16.30 ಲಕ್ಷ ಆರಂಭಿಕ ಬೆಲೆ ಹೊಂದಿದೆ.
ದೀಪಾವಳಿ ವಿಶೇಷತೆಗಾಗಿ ಬಿಡುಗಡೆಯಾಗಿರುವ ಹೊಸ ಟೈಗನ್ ಜಿಟಿ ಎಡ್ಜ್ ಟ್ರಯಲ್ ಎಡಿಷನ್ ಕಾರು ಸೀಮಿತ ಸಂಖ್ಯೆಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ನಿಗದಿತ ಸಂಖ್ಯೆಯ ಯುನಿಟ್ ಮಾರಾಟದ ನಂತರ ಸ್ಟ್ಯಾಂಡರ್ಡ್ ಆವೃತ್ತಿಯು ಮಾತ್ರವೇ ಖರೀದಿಗೆ ಲಭ್ಯವಿರಲಿವೆ. ಹೀಗಾಗಿ ಹೊಸ ಕಾರಿನಲ್ಲಿ ಫೋಕ್ಸ್ ವ್ಯಾಗನ್ ಕಂಪನಿಯು ಹಲವಾರು ವಿಶೇಷ ಫೀಚರ್ಸ್ ನೀಡಿದ್ದು, ಸಾಮಾನ್ಯ ಜಿಟಿ ಎಡ್ಜ್ ಆವೃತ್ತಿಯನ್ನು ಆಧರಿಸಿ ಅಭಿವೃದ್ದಿಪಡಿಸಿದೆ.
ಹೊಸ ಟೈಗನ್ ಜಿಟಿ ಎಡ್ಜ್ ಟ್ರಯಲ್ ಎಡಿಷನ್ ಮಾದರಿಯು ವಿಶೇಷವಾಗಿ ಡಿಕಾಲ್ಸ್ ಮತ್ತು ಫಂಕ್ಷನಲ್ ರೂಫ್ ರೈಲ್ಸ್ ಸೌಲಭ್ಯದೊಂದಿಗೆ 1.5 ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಟೈಯಲ್ ಗೇಟ್ ಮೇಲೆ ಟ್ರಯಲ್ ಎಡ್ಜ್ ಬ್ಯಾಡ್ಜ್ ಗಳನ್ನು ನೀಡಲಾಗಿದೆ. ಹಾಗೆಯೇ ಹೊಸ ಕಾರಿನಲ್ಲಿ ರಿಯರ್ ಫೆಂಡರ್, ಡೋರ್ ಗಳು ಮತ್ತು ಸಿ ಪಿಲ್ಲರ್ ಮೇಲೆ ಸ್ಪೋರ್ಟಿಯಾಗಿರುವ ಡೀಕಾಲ್ಸ್ ಜೊತೆಗೆ 17 ಇಂಚಿನ ಬ್ಲ್ಯಾಕ್ ಔಟ್ ಅಲಾಯ್ ವ್ಹೀಲ್, ರೆಡ್ ಫೀನಿಷ್ಡ್ ಬ್ರೇಕ್ ಕ್ಯಾಲಿಪರ್ ಮತ್ತು ಸ್ಟೀಲ್ ಗ್ರೇ, ರೀಫ್ಲೆಕ್ಸ್ ಸಿಲ್ವರ್, ಕ್ಯಾಂಡಿ ವೈಟ್ ಬಣ್ಣಗಳ ಆಯ್ಕೆಗಳಿವೆ.
ಇದನ್ನೂ ಓದಿ: ಪ್ರತಿ ಲೀಟರ್ ಗೆ 40 ಕಿ.ಮೀ ಮೈಲೇಜ್ ನೀಡುವ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಟೆಸ್ಟಿಂಗ್ ಶುರು
ಹಾಗೆಯೇ ಹೊಸ ಕಾರಿನ ಒಳಭಾಗದಲ್ಲೂ ಸ್ಪೋರ್ಟಿಯಾಗಿರುವ ಹಲವಾರು ಫೀಚರ್ಸ್ ಗಳಿದ್ದು, ಆಸನಗಳಲ್ಲಿ ಬ್ಲ್ಯಾಕ್ ಕಾಂಟ್ರಾಸ್ಟಿಂಗ್ ಜೊತೆಗೆ ರೆಡ್ ಸ್ಟ್ರೀಚ್ ಹೊಂದಿರುವ ಟ್ರಯಲ್ ಸಿಂಬಲ್ ನೀಡಲಾಗಿದೆ. ಜೊತೆಗೆ 10 ಇಂಚಿನ ಇನ್ಪೋಟೈನ್ ಮೆಂಟ್ ಟಚ್ ಸ್ಕ್ರೀನ್, ವೈರ್ ಲೆಸ್ ಫೋನ್ ಕನೆಕ್ಟಿವಿಟಿ ಮತ್ತು ಚಾರ್ಜಿಂಗ್, ಆಟೋಮ್ಯಾಟಿಕ್ ಹೆಡ್ ಲ್ಯಾಂಪ್ಸ್, ರಿಯರ್ ಕ್ಯಾಮೆರಾ ಮತ್ತು ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಸಾಮಾನ್ಯ ಮಾದರಿಯಲ್ಲಿರುವ ಸನ್ ರೂಫ್, ಕ್ರೂಸ್ ಕಂಟ್ರೋಲ್, ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ಫುಲ್ ಎಲ್ ಇಡಿ ಹೆಡ್ ಲ್ಯಾಂಪ್ಸ್ ಮತ್ತು ಸುರಕ್ಷತೆಗಾಗಿ ಡ್ಯಾಶ್ ಕ್ಯಾಮ್, ಆರು ಏರ್ ಬ್ಯಾಗ್ ಗಳನ್ನು ನೀಡಲಾಗಿದೆ.
ಇದನ್ನೂ ಓದಿ: ಮಹೀಂದ್ರಾ ನಿರ್ಮಾಣದ ಈ ಕಾರಿನ ಮೇಲೆ ರೂ. 3.50 ಲಕ್ಷ ಡಿಸ್ಕೌಂಟ್
ಇನ್ನು ಹೊಸ ಕಾರಿನಲ್ಲಿರುವ 1.5 ಲೀಟರ್ ಟರ್ಬೊ ಪೆಟ್ರೋಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಹೊಂದಿದ್ದು, ಇದು 150 ಹಾರ್ಸ್ ಪವರ್ ಉತ್ಪಾದನೆಯೊಂದಿಗೆ ಅತ್ಯುತ್ತಮ ಚಾಲನಾ ಅನುಭವ ನೀಡಲಿದೆ ಎನ್ನಬಹುದು.