Aati Kalenja: ಊರಿಗೆ ಬಂದ ಮಾರಿ ಕಳೆಯಲು ಬರುವ ಆಟಿ ಕಳಂಜ, ತುಳುನಾಡಿನ ಆಟಿ ತಿಂಗಳ ಹಿನ್ನಲೆ ಇಲ್ಲಿದೆ

ಹಿಂದಿನ ಕಾಲದಲ್ಲಿ ಆಟಿ ತಿಂಗಳು ಎಂದರೆ ಅದು ತುಂಬಾ ಬಡತನದಿಂದ ಕಷ್ಟದಲ್ಲಿ ಕೂಡಿದರಿಂದ ತಮ್ಮ ಸುತ್ತಮುತ್ತಲಿನಿಂದ ಸಿಗುವಂತಹ ವಸ್ತುಗಳನ್ನು ಆಹಾರವಾಗಿ ಉಪಯೋಗಿಸುತ್ತಿದ್ದರು. ಕೆಸುವಿನಿಂದ ಮಾಡಿದ ಖಾದ್ಯ ಇದನ್ನು ತುಳುವಿನಲ್ಲಿ ಪತ್ರೊಡೆ ಎನ್ನುತ್ತಾರೆ, ಅರಶಿನ ಎಲೆ ಗಟ್ಟಿ, ಮೆಂತ್ಯ ಗಂಜಿ, ಕಣಿಲೆ, ತೇಟ್ಲ, ಉಪ್ಪಡ್ ಬಚ್ಚಿಲ್ ( ಹಲಸಿನ ಕಾಯಿಯಿಂದ ಮಾಡಿದ ಖಾದ್ಯ ) ಹೀಗೆ ಅನೇಕ ರೀತಿಯ ಭ್ಯಕ್ಷಗಳನ್ನು ಮಾಡಲಾಗುತ್ತದೆ.

Aati Kalenja: ಊರಿಗೆ ಬಂದ ಮಾರಿ ಕಳೆಯಲು  ಬರುವ ಆಟಿ ಕಳಂಜ, ತುಳುನಾಡಿನ ಆಟಿ ತಿಂಗಳ ಹಿನ್ನಲೆ ಇಲ್ಲಿದೆ
Ati Kalanja
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 05, 2022 | 8:00 AM

ತುಳುನಾಡು ಎಂದಾಕ್ಷಣ ನೆನಪಿಗೆ ಬರುವುದು ಸಾಂಪ್ರದಾಯಕ ಆಚರಣೆ, ಇಲ್ಲಿ ಅನೇಕ ರೀತಿಯ ಜನಪದ ಆಚರಣೆಗಳು ಇದೆ. ದಕ್ಷಿಣಕನ್ನಡದಲ್ಲಿ ಕೆಲವೊಂದು ಆಚರಣೆಗಳನ್ನು ಬಹಳ ವಿಜೃಂಭಣೆಯಿಂದ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ. ಈ ಆಚರಣೆಗೆ ಒಂದು ಅತ್ಯಂತ ಹಳೆಯ ಇತಿಹಾಸ ಕೂಡ ಇದೆ. ಇದು ಆಚರಣೆ ಮಾತ್ರ ಅಲ್ಲ ಇಲ್ಲಿ ಜನರ ನಂಬಿಕೆಯು ಹೌದು. ಇಂತಹ ಆಚರಣೆಗಳಲ್ಲಿ ಒಂದು ಆಟಿ. ಆಟಿ ಎಂದರೆ ಜುಲೈನಿಂದ ಆಗಸ್ಟ್ ತಿಂಗಳ ನಡುವಿನಲ್ಲಿ ಬರುವ ಒಂದು ಸಂಕ್ರಮಣದಿಂದ ಇನ್ನೊಂದು ಸಂಕ್ರಮಣದವರೆಗೆ ಇರುತ್ತದೆ.ಇದನ್ನು ಕನ್ನಡದಲ್ಲಿ ಆಷಾಡ ಮಾಸ ಎಂದು ಕರೆಯುತ್ತಾರೆ. ಹಾಗೆಯೇ ತುಳು ಭಾಷೆಯಲ್ಲಿ ಆಟಿ ತಿಂಗಳು ಎಂದು ಕರೆಯುತ್ತಾರೆ. ಆಟಿ ತಿಂಗಳಿಗೆ ತುಳುನಾಡಿನಲ್ಲಿ ಬಹಳ ವಿಶೇಷತೆ ಇದೆ. ಈ ತಿಂಗಳಲ್ಲಿ ಯಾವುದೇ ರೀತಿಯ ಶುಭ ಸಮಾರಂಭಗಳು ನಡೆಯುವುದಿಲ್ಲ ಕಾರಣ ಹಿಂದಿನ ಕಾಲದಲ್ಲಿ ಆಟಿ ತಿಂಗಳು ಬಹಳ ಕಷ್ಟದ ದಿನಗಳು ಎಂಬ ನಂಬಿಕೆ.

ಹಾಗೆಯೇ ಈ ಆಟಿ ತಿಂಗಳಲ್ಲಿ ಒಂದು ವಿಶೇಷತೆಯೂ ಇದೆ ಅದೇ ಆಟಿ ಕಳಂಜ. ಇದರ ಇತಿಹಾಸವನ್ನು ನೋಡಿದರೆ ಹಿಂದಿನ ಕಾಲದಲ್ಲಿ ತುಳುನಾಡಿಗೆ ರೋಗ ರುಜಿನಗಳು ಬಂದಿರುವ ಸಂದರ್ಭದಲ್ಲಿ ಬ್ರಹ್ಮ ದೇವರು ಆಟಿ ಕಳಂಜನನ್ನು ಸೃಷ್ಟಿ ಮಾಡಿದ್ದನೆಂದು ಇತಿಹಾಸವಿದೆ. ಆಟಿ ತಿಂಗಳಲ್ಲಿ ಆಟಿ ಕಳಂಜ ಮುಖಕ್ಕೆ ಹಳದಿ, ಕಪ್ಪು, ಕೆಂಪು ಬಣ್ಣ ಬಳಿದುಕೊಂಡು ಕೈಯಲ್ಲಿ ಒಂದು ತಾಳೆ ಎಲೆಯ ಛತ್ರಿ , ಕೆಂಪು ಬಣ್ಣದ ಬಟ್ಟೆ, ತಲೆಗೆ ಅಡಿಕೆ ಹಾಲೆಯ ಕಿರೀಟ ಹಾಗೂ ಕುತ್ತಿಗೆ ಮತ್ತು ಸೊಂಟಕ್ಕೆ ತೆಂಗಿನ ಗರಿಯನ್ನು ಕಟ್ಟಿ ತನ್ನ ಜೊತೆಯಾಗಿ ಇನ್ನೊಬ್ಬನನ್ನು ಕರೆದುಕೊಂಡು ಮನೆ ಮನೆಗೆ ಬಂದು ಆಟಿ ಕಳಂಜದ ಇತಿಹಾಸವನ್ನು ಡೋಲು ಬಾರಿಸುವುದರ ಮುಖಾಂತರ ಹಾಡಿ ಕುಣಿತ್ತಾನೆ. ಆಗ ಮನೆಯಲ್ಲಿ ಇದ್ದವರು ಆ ಆಟಿ ಕಳಂಜನಿಗೆ ಅಕ್ಕಿ, ಹಣ,ತೆಂಗಿನಕಾಯಿ, ಹಲಸಿನ ಬೀಜ, ಮಸಿ, ಅರಿಶಿಣಗಳನ್ನು ನೀಡುವುದು ಪದ್ಧತಿ. ಈ ಆಟಿ ಕಳಂಜ ಊರಿಗೆ ಬಂದ ಮಾರಿಯನ್ನು ಕಳೆಯುತ್ತಾನೆ ಎಂದು ಜನರ ನಂಬಿಕೆ.

ಹಿಂದಿನ ಕಾಲದಲ್ಲಿ ಆಟಿ ತಿಂಗಳು ಎಂದರೆ ಅದು ತುಂಬಾ ಬಡತನದಿಂದ ಕಷ್ಟದಲ್ಲಿ ಕೂಡಿದರಿಂದ ತಮ್ಮ ಸುತ್ತಮುತ್ತಲಿನಿಂದ ಸಿಗುವಂತಹ ವಸ್ತುಗಳನ್ನು ಆಹಾರವಾಗಿ ಉಪಯೋಗಿಸುತ್ತಿದ್ದರು. ಕೆಸುವಿನಿಂದ ಮಾಡಿದ ಖಾದ್ಯ ಇದನ್ನು ತುಳುವಿನಲ್ಲಿ ಪತ್ರೊಡೆ ಎನ್ನುತ್ತಾರೆ, ಅರಶಿನ ಎಲೆ ಗಟ್ಟಿ, ಮೆಂತ್ಯ ಗಂಜಿ, ಕಣಿಲೆ, ತೇಟ್ಲ, ಉಪ್ಪಡ್ ಬಚ್ಚಿಲ್ ( ಹಲಸಿನ ಕಾಯಿಯಿಂದ ಮಾಡಿದ ಖಾದ್ಯ ) ಹೀಗೆ ಅನೇಕ ರೀತಿಯ ಭ್ಯಕ್ಷಗಳನ್ನು ಮಾಡಲಾಗುತ್ತದೆ.

ಇದನ್ನೂ ಓದಿ
Image
Ranveer Singh Viral Photo: ರಣವೀರ್ ಸಿಂಗ್​ ‘ಅರೆ ಬೆತ್ತಲೆ’ ವಿವಾದ; ನಿಜಕ್ಕೂ ಅಶ್ಲೀಲ ತುಂಬಿರುವುದು ಎಲ್ಲಿ?
Image
Travel Story: ಸ್ನೇಹಿತರೊಂದಿಗೆ ಪ್ರವಾಸ ಹೋಗುವುದೆಂದರೆ ಏನೋ ಖುಷಿ
Image
ದೋಷದಿಂದ ದೋಸೆ…ಚಟದಿಂದ ಚಟ್ನಿ..! ಇದು ದೋಸೆ – ಚಟ್ನಿ ಕಥೆ
Image
ದಕ್ಷಿಣದ ಅಯೋಧ್ಯೆ ಕನ್ಯಾಡಿ ಶ್ರೀರಾಮ ಕ್ಷೇತ್ರ! ಇಲ್ಲಿದೆ ಅದ್ಭುತ ಶಿಲ್ಪಕಲೆಗಳು

ಇನ್ನು ಆಟಿ ಅಮಾವಾಸ್ಯೆಯ ದಿನ ಹಾಳೆ ಮರದ ಕಷಾಯ ಮಾಡಿ ಕುಡಿಯುವುದು ವಾಡಿಕೆ, ಸೂರ್ಯ ಉದಯಿಸುವ ಮೊದಲು ಹಾಲೆಮರದ ತೊಗಟೆಯನ್ನು ಕೆತ್ತಿ ತಂದು,ನಂತರ ಅದಕ್ಕೆ ಕರಿಮೆಣಸು, ಬೆಳ್ಳುಳ್ಳಿ, ಮೆಣಸು, ಓಮ, ಬೆಲ್ಲವನ್ನು ಸೇರಿಸಿ ಕಷಾಯ ಮಾಡಲಾಗುತ್ತದೆ. ಈ ಕಷಾಯವು ಮನುಷ್ಯನ ದೇಹದ ರೋಗನಿರೋಧಕ ಶಕ್ತಿಯು ವೃದ್ಧಿಯಾಗುತ್ತದೆ ಎಂಬುದು ನಂಬಿಕೆ ಇದನ್ನು ಅನೇಕ ವರ್ಷಗಳಿಂದ ಹಿರಿಯರು ಪಾಲಿಸಿಕೊಂಡು ಬಂದಿದ್ದಾರೆ. ಆಟಿ ಎಂದರೆ ಕೃಷಿಕರಿಗೆ ಸ್ವಲ್ಪ ನಿರಾಳದ ಕಾಲ ಒಂದು ಹಂತದ ಕೃಷಿ ಕೆಲಸಗಳು ಹಾಗೂ ಬಿತ್ತನೆಗಳು ಮುಗಿದು ಆಯಾಸ ತಣಿಸುವ ಕಾಲವು ಇದಾಗಿದೆ.

ಆಟಿ ತಿಂಗಳಲ್ಲಿ ತುಳುನಾಡಿನಲ್ಲಿ ಅನೇಕ ಕಡೆಗಳಲ್ಲಿ ಸಂಪದ್ರಾಯಕ ಆಟಗಳು ನಡೆಯುತ್ತದೆ. ಆಟಿಡ್ ಕೆಸರ್ ಒಂಜಿ ದಿನ ಎಂದು ಆಚರಿಸಲಾಗುತ್ತದೆ ಆ ಊರಿನ ಜನರು ಸೇರಿ ಕೆಸರು ಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಹಾಗೆಯೇ ಆಟಿಯ ವಿಶೇಷ ತಿನಸುಗಳನ್ನು ಮಾಡಿ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ.

ಹೀಗೆ ಅನೇಕ ರೀತಿಯ ತುಳುನಾಡಿನ ಆಚಾರ ವಿಚಾರಗಳು ಒಂದು ಸಂಪ್ರದಾಯಿಕ ನೆಲೆಕಟ್ಟಿನಿಂದ ಕೂಡಿದ್ದು ಜನರ ನಂಬಿಕೆಗೆ ಹಿಡಿದ ಕನ್ನಡಿಯಂತಿದೆ. ಆಧುನಿಕ ಜೀವನದಲ್ಲಿ ನಾವೆಲ್ಲರೂ ಇದನ್ನು ಮರೆಯುತ್ತಿದ್ದೇವೆ ಏಕೆಂದರೆ ಬದಲಾವಣೆ ಭರದಲ್ಲಿ ನಮ್ಮ ಆಚರಣೆ, ಕಟ್ಟು-ಪಡುಗಳನ್ನು ಮರೆಯುತ್ತಿದ್ದೇವೆ.

ಕವಿತಾ ಆಳ್ವಾಸ್ ಕಾಲೇಜು ಮೂಡಬಿದ್ರಿ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್