Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಸಿರು ನೀಡುವ ಮರಗಳ ಹನನ ಸರಿಯೇ? ಬದಲಾವಣೆ ಅಗತ್ಯ ಆದರೆ, ನಮ್ಮನ್ನೇ ನಾಶಗೊಳಿಸುವಷ್ಟಲ್ಲ

ಮರಗಳು ಇಲ್ಲವಾದರೆ ಮನುಷ್ಯ ಉಳಿಯುವುದು ಕಷ್ಟ. ಉಸಿರಾಡುವುದು ಕಷ್ಟ. ನಮಗೆ ಉಸಿರು ನೀಡುವ ಮರಗಳ ನಾಶ ಮಾಡುವುದು ಸರಿಯೇ? ಒಂದು ಬಾರಿ ನಾವು ಯೋಚಿಸಬೇಕಿದೆ.

ಉಸಿರು ನೀಡುವ ಮರಗಳ ಹನನ ಸರಿಯೇ? ಬದಲಾವಣೆ ಅಗತ್ಯ ಆದರೆ, ನಮ್ಮನ್ನೇ ನಾಶಗೊಳಿಸುವಷ್ಟಲ್ಲ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Mar 04, 2023 | 10:31 AM

ಆಧುನಿಕ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳು ಅನೇಕ, ಆದರೆ ಹಲವಾರು ಅಭಿವೃದ್ಧಿಗಳು ಮನುಷ್ಯನ ಜೀವನವನ್ನು ರೂಪಿಸಲು ಸಹಕಾರಿಯಾಗಿದೆ. ಆದರೆ ಅತಿಯಾದ ಬದಲಾವಣೆಗಳು ಅಭಿವೃದ್ಧಿಗಳು ಉಂಟಾದಾಗ, ಪರಿಸರದ ಮೇಲೆ ಹಾನಿ ಆಗುವ ಸಂಭವ ಹೆಚ್ಚು. ಮುಖ್ಯವಾಗಿ ಅಭಿವೃದ್ಧಿ ಎಂದಾಗ ಕೂಡಲೇ ನೆನಪಾಗುವುದು ರಸ್ತೆಗಳು, ಕಟ್ಟಡಗಳು, ಡ್ಯಾಮ್​​ಗಳು ಮುಂತಾದ ವಿಚಾರಗಳು ಸರಿ. ಕಟ್ಟಡಗಳ ಹಾಗೂ ಡ್ಯಾಮ್​​ಗಳ ನಿರ್ಮಾಣಕ್ಕಾಗಿ ಹಲವಾರು ಮರಗಳ ನಾಶ ಉಂಟಾಗಿದೆ. ಇದರಿಂದ ಪ್ರಾಣಿಗಳಿಗೆ ನೆಲೆ ನಿಲ್ಲಲು ಜಾಗವಿಲ್ಲದೆ, ಆಹಾರವಿಲ್ಲದೆ ನಾಡಿಗೆ ಬರುತ್ತಿದೆ. ಮನುಷ್ಯನ ಅತಿಯಾದ ಆಸೆಯಿಂದ ಅರಣ್ಯ ನಾಶ ಆಗುತ್ತಿದೆ. ನಮ್ಮ ವನಸಂಪತ್ತು ನಾಶವಾಗಲು ಕಾರಣವಾಗುತ್ತಿದೆ. ಹಿಂದಿನ ಕಾಲದಲ್ಲಿ ಅಭಿವೃದ್ಧಿ ಪಥದಲ್ಲಿ ನಾವು ಇದ್ದಾಗ ಎಲ್ಲಾ ಹೊಸ ಕ್ರಮಗಳನ್ನು ಅನುಸರಿಸುತ್ತಿದ್ದೇವು. ಇದರಿಂದ ಮುಂದೆ ಪರಿಸರದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಮರೆತ್ತಿದ್ದೇವೆ. ದೊಡ್ಡ ಕಟ್ಟಡಗಳ ನಿರ್ಮಾಣವು ಅಭಿವೃದ್ಧಿಯ ಉದ್ದೇಶವನ್ನು ಹೊಂದಿದೆ, ಆದರೆ ಅದು ಮಾರಕವಾದ ಸಂದರ್ಭವನ್ನು ನಾವು ಈಗ ಎದುರಿಸುತ್ತಿದ್ದೇವೆ.

ವನ್ಯಜೀವಿಗಳು ಆಹಾರಕ್ಕಾಗಿ ನಾಡಿಗೆ ಲಗ್ಗೆಯಿಡುತ್ತಿವೆ. ಮರಗಳನ್ನು ನಾಶ ಮಾಡಿ. ನಮಗೆ ಬೇಕಾದ ರೀತಿಯಲ್ಲಿ ಆ ಸ್ಥಳವನ್ನು ಸಮತಟ್ಟುಗೊಳಿಸಿ, ಅದರ ಮೇಲೆ ಕಟ್ಟಡ ನಿರ್ಮಾಣ ಮಾಡುತ್ತಾರೆ. ಇದರ ಜತೆಗೆ ಮಣ್ಣಿ ಫಲವತೆಗಳು ನಾಶವಾಗಿ, ಅಡಿಪಾಯವು ಮೃದುವಾಗಿ ಎತ್ತರಕ್ಕೆ ನಿಂತ ಕಟ್ಟಡಗಳನ್ನು ನೆಲ ಉರುಳಿಸುವ ಸಾಧ್ಯಗಳು ಕೂಡ ಇದೆ. ಇನ್ನೂ ದೊಡ್ಡ ದೊಡ್ಡ ಕಟ್ಟಡಗಳು ಸಾಲು ಸಾಲು ಎತ್ತರಕ್ಕೆ ಎದ್ದು ನಿಂತಿರುತ್ತದೆ, ಇದರಿಂದ ಮಳೆಯ ನೀರು ಅಥವಾ ನಾವು ಉಪಯೋಗಿಸಿದ ನೀರುಗಳು ಹೋಗಲು ದಾರಿಯೇ ಅಥವಾ ವ್ಯವಸ್ಥೆಗಳು ಇರುವುದಿಲ್ಲ. ಇದರಿಂದ ಗುಡ್ಡಗಳು ಕುಸಿದು ಅಪಾಯವನ್ನು ಉಂಟು ಮಾಡುತ್ತದೆ.

ಇದನ್ನೂ ಓದಿ:ನೀವು ಪ್ರತಿದಿನ ಸಂತೋಷವಾಗಿರಲು ಈ ಸಲಹೆಗಳನ್ನು ಪಾಲಿಸಿ

ಮರಗಳು ಇಲ್ಲವಾದರೆ ಮನುಷ್ಯ ಉಳಿಯುವುದು ಕಷ್ಟ. ಉಸಿರಾಡುವುದು ಕಷ್ಟ. ನಮಗೆ ಉಸಿರು ನೀಡುವ ಮರಗಳ ನಾಶ ಮಾಡುವುದು ಸರಿಯೇ? ಒಂದು ಬಾರಿ ನಾವು ಯೋಚಿಸಬೇಕಿದೆ. ಮರಗಳನ್ನು ನಾಶ ಮಾಡಿದರೆ ಪ್ರಕೃತಿ ನಮಗೆ ಯಾವ ರೀತಿಯ ಹೊಡೆತ ನೀಡುತ್ತದೆ ಎಂಬದಕ್ಕೆ ಟರ್ಕಿ ಭೂಕಂಪ, ಇದು ಮಾತ್ರವಲ್ಲದೆ, ಭಾರತದ ಅಸ್ಸಾಂ, ಕರ್ನಾಟಕ, ಗುಜರಾತ್ ಇನ್ನೂ ಅನೇಕ ರಾಜ್ಯಗಳಲ್ಲಿ ಭೂಕಂಪ ಆಗಿರುವ ಸಾಕ್ಷಿಗಳು ನಮ್ಮ ಕಣ್ಮುಂದೆ ಇದೆ. ಈ ಮಧ್ಯೆ ನಮ್ಮ ಬದುಕನ್ನು ಕಟ್ಟಿಕೊಳ್ಳುವುದು ಹೇಗೆ? ಎಂಬ ಪ್ರಶ್ನೆ ಮೂಡುವುದು ಸಹಜ, ಅದೊಂದು ಹಿರಿಯರ ಮಾತಿನಂತೆ ಮನಷ್ಯ ಆಸೆ ಎಂದಿಗೂ ಮುಗಿಯದು, ಆದರೆ ಆಸೆ ಇರಬೇಕು ಪ್ರಕೃತಿ ಜೊತೆಗೆ ನಮ್ಮ ಜೀವನವನ್ನು ನಾಶ ಮಾಡುವಷ್ಟಲ್ಲ, ಆಧುನಿಕ ಜಗತ್ತಿಗೆ ತೆರೆದುಕೊಳ್ಳವ ಭರದಲ್ಲಿ ಜಗತ್ತಿನ ನಾಶಕ್ಕೆ ಕಾರಣವಾಗಬಹುದು. ಮುಖ್ಯವಾಗಿ ನನ್ನ ಆಶಯ ಇಷ್ಟೇ .ನಾವು ಪರಿಸರವನ್ನು ಉಳಿಸೋಣ ಅದು ನಮ್ಮನ್ನು ಉಳಿಸುತ್ತದೆ. ಅಭಿವೃದ್ಧಿ ಆಗಬೇಕು ಎಂಬ ಮಾತ್ರಕ್ಕೆ ಮರಗಳ ನಾಶವಾಗುತ್ತಾ ಹೋದ ಹಾಗೆ ಭವಿಷ್ಯತ್ತಿನಲ್ಲಿ ಉಸಿರಾಟ ಮಾಡಲು ಗಾಳಿ ಸಿಗದೇ ಇರಬಹುದು.

ಲೇಖನ: ದೇವಿಶ್ರೀ ಶಂಕರಪುರ

Published On - 9:16 am, Sat, 4 March 23

ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್ ರಾಜನನ್ನು ಬರಮಾಡಿಕೊಂಡ ಮೋದಿ
ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿ ಕತಾರ್ ರಾಜನನ್ನು ಬರಮಾಡಿಕೊಂಡ ಮೋದಿ
ದಿನಕ್ಕೊಂದು ಸಾವಿರ ದುಡಿಯುವವನಿಗೆ ₹12,000 ದಂಡ ಹಾಕಿದರೆ ಹೇಗೆ? ಕುಲಕರ್ಣಿ
ದಿನಕ್ಕೊಂದು ಸಾವಿರ ದುಡಿಯುವವನಿಗೆ ₹12,000 ದಂಡ ಹಾಕಿದರೆ ಹೇಗೆ? ಕುಲಕರ್ಣಿ
ನಾನು ಸುದ್ದಿಯಲ್ಲಿ ಇರೋದ್ರಿಂದ ಟಾರ್ಗೆಟ್ ಮಾಡಲಾಗುತ್ತಿದೆ: ಐಶ್ವರ್ಯ ಗೌಡ
ನಾನು ಸುದ್ದಿಯಲ್ಲಿ ಇರೋದ್ರಿಂದ ಟಾರ್ಗೆಟ್ ಮಾಡಲಾಗುತ್ತಿದೆ: ಐಶ್ವರ್ಯ ಗೌಡ
ಪೊಲೀಸರಿಗೆ ಉದ್ಯೋಗವೇ ಇಲ್ಲ, ಬರೀ ವಸೂಲಿ ಮಾಡೋದು: ಶಾಸಕ ವಿನಯ್​ ಕುಲಕರ್ಣಿ
ಪೊಲೀಸರಿಗೆ ಉದ್ಯೋಗವೇ ಇಲ್ಲ, ಬರೀ ವಸೂಲಿ ಮಾಡೋದು: ಶಾಸಕ ವಿನಯ್​ ಕುಲಕರ್ಣಿ
ಕೇವಲ ಎರಡು ತಿಂಗಳ ಅಕ್ಕಿ ಹಣ ಮಾತ್ರ ಟ್ರಾನ್ಸ್​ಫರ್ ಮಾಡೋದು ಬಾಕಿ: ಸಚಿವ
ಕೇವಲ ಎರಡು ತಿಂಗಳ ಅಕ್ಕಿ ಹಣ ಮಾತ್ರ ಟ್ರಾನ್ಸ್​ಫರ್ ಮಾಡೋದು ಬಾಕಿ: ಸಚಿವ
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯೂ ನಿಷ್ಕ್ರಿಯ, ಮಹಿಳೆಯರು ಅಸಹಾಯಕ
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯೂ ನಿಷ್ಕ್ರಿಯ, ಮಹಿಳೆಯರು ಅಸಹಾಯಕ
ರಾಜಣ್ಣಗೆ ಯಾರ ಮೇಲೂ ಸಿಟ್ಟಿಲ್ಲ, ಅವರು ಮಾತಾಡೋ ಶೈಲಿಯೇ ಹಾಗೆ: ಜಾರಕಿಹೊಳಿ
ರಾಜಣ್ಣಗೆ ಯಾರ ಮೇಲೂ ಸಿಟ್ಟಿಲ್ಲ, ಅವರು ಮಾತಾಡೋ ಶೈಲಿಯೇ ಹಾಗೆ: ಜಾರಕಿಹೊಳಿ
ಚೇತನ್ ದುಡುಕಿನ ನಿರ್ಧಾರ ತೆಗೆದುಕೊಂಡು ಘೋರ ಅಪರಾಧವೆಸಗಿದ್ದಾನೆ: ಸೋಮಶೇಖರ್
ಚೇತನ್ ದುಡುಕಿನ ನಿರ್ಧಾರ ತೆಗೆದುಕೊಂಡು ಘೋರ ಅಪರಾಧವೆಸಗಿದ್ದಾನೆ: ಸೋಮಶೇಖರ್
ಪಿಂಕ್​​ ಲೈನ್​ ಮೆಟ್ರೋ ಟನಲ್​ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್
ಪಿಂಕ್​​ ಲೈನ್​ ಮೆಟ್ರೋ ಟನಲ್​ ಕಾಮಗಾರಿ ಬಗ್ಗೆ ಮಾಹಿತಿ ನೀಡಿದ ಇಂಜಿನಿಯರ್
ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಬಿಟ್ಟು ಕೆಲ ಸಚಿವರು ಬೇರೇನೂ ಮಾತಾಡಲಾರರು!
ಸಿಎಂ ಮತ್ತು ಕೆಪಿಸಿಸಿ ಬದಲಾವಣೆ ಬಿಟ್ಟು ಕೆಲ ಸಚಿವರು ಬೇರೇನೂ ಮಾತಾಡಲಾರರು!