ಕನ್ನಡ ಮನಸುಗಳಿಂದ ಸರ್ಕಾರಿ ಶಾಲೆ ಉಳಿಸಿ ಅಭಿಯಾನ: ಕಾಸರಗೋಡಿನ ಕನ್ನಡ ಶಾಲೆಗೆ ಬಂತು ಹೊಸ ಕಳೆ
ಕರ್ನಾಟಕ ಮತ್ತು ಕೇರಳ ಗಡಿಯಲ್ಲಿರುವ ಕಾಸರಗೋಡಿನ ಬಂಗ್ರ ಮಂಜೇಶ್ವರದ ಸರ್ಕಾರಿ ಕನ್ನಡ ಶಾಲೆಯನ್ನು ಸುಣ್ಣ-ಬಣ್ಣ ಹೊಡೆದು, ಕರುನಾಡಿನ ಮೊದಲ ರಾಷ್ಟ್ರಕವಿ ಗೋವಿಂದ ಪೈ ಹಾಗೂ ಎರಡನೇ ರಾಷ್ಟ್ರಕವಿ ಕುವೆಂಪು ಮತ್ತು ಕಾಸರಗೋಡು ಕರ್ನಾಟಕಕ್ಕೆ ಸೇರಿಸುವುದಕ್ಕೆ ಹೋರಾಟ ಮಾಡಿದ ಕವಿ ಕೈಯರ ಕಿಂಞಣ್ಣ ರೈ ರವರ ಚಿತ್ರಗಳನ್ನು ಬಹಳಷ್ಟು ಸೊಗಸಾಗಿ ಬಿಡಿಸಿದ್ದಾರೆ ಕನ್ನಡ ಮಸನುಸುಗಳ ಸಂಘ
ಕನ್ನಡಿಗರಾದ ನಮ್ಗೆಲ್ಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಚಲನಚಿತ್ರ ಗೊತ್ತೆ ಇದೆ. ಆದ್ರೆ ಇವತ್ತು ನಾವಿಲ್ಲಿ ಹೇಳ್ತಿರೋದು ಸರ್ಕಾರಿ ಶಾಲೆ ಉಳಿಸಿ ಅಭಿಯಾನ ಆ್ಯಟ್ ಕಾಸರಗೋಡು… ಹೌದು, ಇದು ಕನ್ನಡಕ್ಕಾಗಿ ಕನ್ನಡಮ್ಮನ ಸೇವೆಗಾಗಿ ಇರುವ ಕನ್ನಡ ಮನಸುಗಳು ಕರ್ನಾಟಕ ತಂಡದ ಜೀವಾಳವಾಗಿರುವ ಸರ್ಕಾರಿ ಶಾಲೆ ಉಳಿಸಿ ಅಭಿಯಾನ.
ಈಗಾಗಲೇ 15 ಅಭಿಯಾನಗಳನ್ನ ಯಶಸ್ವಿಯಾಗಿ ಮುಗಿಸಿ, 16ನೇ ಅಧ್ಯಾಯವನ್ನು ಬಾರೀ ವಿಭಿನ್ನವಾಗಿ ಸದ್ದಿಲ್ಲದೇ ಯಶಸ್ವಿ ಮಾಡಿದ್ದಾರೆ ತಂಡದ ಸ್ವಯಂಸೇವಕರು. ತಂಡದ ಅಧ್ಯಕ್ಷ ಪವನ್ ದರೇಗುಂಡಿಯವರ ನೇತೃತ್ವದಲ್ಲಿ ಕರ್ನಾಟಕ ಮತ್ತು ಕೇರಳದ ಗಡಿಯಲ್ಲಿರುವ ಕಾಸರಗೋಡಿನ ಬಂಗ್ರ ಮಂಜೇಶ್ವರದ ಸರ್ಕಾರಿ ಕನ್ನಡ ಶಾಲೆಯನ್ನು ಸುಣ್ಣ-ಬಣ್ಣ ಹೊಡೆದು, ಕರುನಾಡಿನ ಮೊದಲ ರಾಷ್ಟ್ರಕವಿ ಗೋವಿಂದ ಪೈ ಹಾಗೂ ಎರಡನೇ ರಾಷ್ಟ್ರಕವಿ ಕುವೆಂಪು ಮತ್ತು ಕಾಸರಗೋಡು ಕರ್ನಾಟಕಕ್ಕೆ ಸೇರಿಸುವುದಕ್ಕೆ ಹೋರಾಟ ಮಾಡಿದ ಕವಿ ಕೈಯರ ಕಿಂಞಣ್ಣ ರೈ ರವರ ಚಿತ್ರಗಳನ್ನು ಬಹಳಷ್ಟು ಸೊಗಸಾಗಿ ಬಿಡಿಸಿದ್ದಾರೆ ತಂಡದ ಚಿತ್ರ ಕಲಾವಿದರಾದ ಯಲ್ಲಪ್ಪ ವೈ ಕುಂಬಾರ ಮತ್ತು ಶುಭೋದ್ … ಅಲ್ಲದೆ ಶಾಲೆ ಬೇಕಾದ ಫ್ಯಾನ್, ಟ್ಯೂಬ್ ಲೆಟ್ ಮನ್ನಿತ್ತರೆ ಸೌಕರ್ಯಗಳನ್ನು ತಂಡದ ವತಿಯಿಂದ ಶಾಲೆಗೆ ಕಲ್ಪಿಸಲಾಯಿತು. 50-60 ತಂಡದ ಯುವ ಕನ್ನಡ ಮನಸುಗಳು 30 ಕೊಠಡಿಗಳಿರುವ ಶಾಲೆಯನ್ನ ಕೇವಲ ಒಂದುವರೆ ದಿನದಲ್ಲಿ ಸಿಂಗರಿಸಿದ್ದು ಅದ್ಭುತವೇ ಸರಿ.
ಕರ್ನಾಟಕದ ಹವ್ಯಾಸಿ ತಂಡವೊಂದು ತಮ್ಮದೇ ಹಣಕಾಸು ವಿನಿಯೋಗಿಸಿ (Self Financing).. ಹೆಚ್ಚಿನವರು ಐಟಿ ಬಿಟಿ ಉದ್ಯೋಗಾರ್ತಿಗಳು ಬಂಗ್ರ ಮಂಜೇಶ್ವರ ಸರಕಾರಿ ಶಾಲೆ ಕಟ್ಟಡಗಳನ್ನು ಪೂರ್ಣವಾಗಿ ಶಾಸ್ತ್ರೀಯವಾಗಿ ಬಣ್ಣ ಬಳಿದು ಕೊಟ್ಟಿದ್ದಾರೆ. ಅವರ ಉದ್ದೇಶವೇ ಅಧಿಕ ಸಂಖ್ಯೆಯಲ್ಲಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿರುವ ಶಾಲೆಯನ್ನು ಪ್ರೋತ್ಸಾಹಿಸುವುದು…. ನಿಜವಾದ ಅರ್ಥದಲ್ಲಿ ಇದೊಂದು ಅರ್ಥಪೂರ್ಣ ಕನ್ನಡ ಸೇವೆ.
ಈ ಅಭಿಯಾನದ ಮೂಲಕ ಮಕ್ಕಳ ಹಾಜರಾತಿ ಹೆಚ್ಚಳವಾಗುವ ಹಾಗೂ ಕನ್ನಡ ಮಾಧ್ಯಮಕ್ಕೆ ಸೇರುವ ಕುರಿತು ಮಕ್ಕಳ ಹಾಗೂ ಪೋಷಕರ ಆಸಕ್ತಿ ಹೆಚ್ಚಾಗುವ ನಿರೀಕ್ಷೆಯಲ್ಲಿದೆ ಕನ್ನಡ ಮನಸುಗಳು ಕರ್ನಾಟಕ ತಂಡ.
– ಕನ್ನಡ ಮನಸುಗಳು ಸಂಘ ಕರ್ನಾಟಕ