AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಅಪ್ಪ ನನ್ನ ಜೀವನದ ಮೊದಲ ಸ್ನೇಹಿತ

ಎಷ್ಟೋ ಮನೆಗಳಲ್ಲಿ ಅಪ್ಪ ಅಮ್ಮನ ಸ್ಥಾನ ತುಂಬುತ್ತಾನೆ. ಬಾಲ್ಯದಲ್ಲಿ ನಿನ್ನ ಕೈ ಬೆರಳು ಹಿಡಿದು ನಡೆದ ಆ ಹೆಜ್ಜೆಯ ಗುರುತುಗಳು ಮನದಲ್ಲಿ ಅಚ್ಛೇ ಹಾಕಿ ಬಚ್ಚಿ ಕುಳಿತಿವೆ. ಗುಮ್ಮ ಬಂದನೆಂದು ಅಮ್ಮ ಭಯ ಪಡಿಸಿದರೆ ಆಕೆಗೆ ಬೈದು ಭಯವೆಂಬ ಭೂತವನ್ನು ಹೊಡೆದೋಡಿಸಿ ಧೈರ್ಯ ತುಂಬಿದೆ, ಸುಳ್ಳು ಹೇಳಿದಾಗ ಕೈ ಛಡಿಯೇಟು ತಿಂದ ಅನುಭವ ಎಂದಿಗೂ ಮರೆಯಲಾಗದು.

ನನ್ನ ಅಪ್ಪ ನನ್ನ ಜೀವನದ ಮೊದಲ ಸ್ನೇಹಿತ
ಸಾಂದರ್ಭಿಕ ಚಿತ್ರ
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 20, 2022 | 11:12 AM

Share

ಅರಿಯದೆ ಮೂಡಿದ ಅಪ್ಪನ ಪ್ರೀತಿಯ ಬಗ್ಗೆ ಹರೆದು ಹೋಗೋ ಹಾಳೆಯ ಮೇಲೆ ಎಷ್ಟೇ ಬಣ್ಣಿಸಿದರು ಸಾಲದು… ಅಪ್ಪ ಅಂದರೆ ಅದ್ಭುತ, ಅಮರ ಪ್ರತಿಪಾದಕ, ಅಮೋಘ, ಆನಂದ, ಆದರ್ಶ, ಅನಂತ, ನನ್ನ ಜಗತ್ತು, ಮೊದಲ ಸ್ನೇಹಿತ ಅಪ್ಪಾ… ಅಕಾಶದಷ್ಟು ಎತ್ತರವಿರುವ ಗೋಪುರ ಕೇಳಿದರು ಕೊಡಿಸುವ ಶಕ್ತಿ ಹೊಂದಿದವರು, ಕಿರು ಬೆರಳು ಹಿಡಿದು ನಿನ್ನೊಂದಿಗೆ ನಾನಿರುವೆ ಎಂದು ನಡೆದ ಹೆಜ್ಜೆ ಗುರುತು ಅಪ್ಪನದು, ತಾನು ನೋಡದ ಪ್ರಪಂಚವನ್ನು ಹೆಗಲ ಮೇಲೆ ಕೂರಿಸಿ ತೋರಿಸಿದ ಹೃದಯವಂತ, ಕಲಿತ ಪಾಠ, ಕಂಡ ಕಷ್ಟಗಳು, ಸದಾ ಕಾಲ ನಗು ಮುಖವ ತೋರು ಎಂದು ತಿಳಿಸಿದವರು, ಬದುಕಿನ ಉದ್ದಕ್ಕೂ ಭರವಸೆಯ ಬೆಳಕಲ್ಲೇ ಸಾಗುತ್ತಿದ್ದ ನನಗೆ ಜೀವನದ ಅರ್ಥ ತಿಳಿಸಿ, ಛಲದಿಂದ ಸಾಧನೆಯನ್ನು ಹುಡುಕಿ ಸಾಗು ಎಂದು ಹೇಳಿ ಹಿಂಬಾಲಿಸಿದವರು ನನ್ನಪ್ಪ…. ಸಾವಿರ ಸಾವಿರ ಕಷ್ಟ ಬಂದರು ಛಲ ಬಿಡದೆ ಹೆಜ್ಜೆ ಮುಂದಿಟ್ಟ ಸಾಹುಕಾರ, ಅಪ್ಪ ಬರೀ ಅಪ್ಪನಾಗಿಯೇ ಉಳಿಯದೇ ಸ್ನೇಹಿತನಾಗಿ, ಹಿತೈಷಿಯಾಗಿದ್ದಾನೆ. ತಪ್ಪು ಹೆಜ್ಜೆ ಇಟ್ಟಾಗ ತಿದ್ದಿ ತಿಳಿ ಹೇಳಿ ಸರಿದಾರಿ ತೋರಿಸಿದವ, ತಾನು ಶಿಕ್ಷಣ ಪಡೆದಿಲ್ಲ ಆದರೂ ಮಕ್ಕಳು ಪಾಠದಿಂದ ವಂಚಿತರಾಗದಿರಲಿ ಎನ್ನುವ ಗುಣ ಅಪ್ಪನದು, ನಾ ಕಂಡ ಪಾಡು ನನ್ನ ಮಕ್ಕಳು ಕಾಣದಿರಲಿ ಎಂದು ಹಗಲಿರುಳ್ಳೆನ್ನದೇ ದುಡಿದು, ಮನೆಗೆ ಮಾತ್ರ ವೀರನಾಗದೆ, ದೇಶಕ್ಕೆ ಅನ್ನ ನೀಡುವ ರೈತನಾಗಿ, ತನ್ನ ಹೊಟ್ಟೆಗೆ ತಣ್ಣೀರ ಬಟ್ಟೆ ಕಟ್ಟಿ ದೇಶದ ಜನತೆಯ ಹಸಿವ ನೀಗಿಸಿದವ.

ನನ್ನ ಮೊದಲ ಗುರು, ತೊದಲು ನುಡಿದ ಪದ ಅಪ್ಪ,

ಅಪ್ಪ ಅನ್ನುವ ಎರಡಕ್ಷರದಿ ಅಡಗಿದೆ ಮಕ್ಕಳ ಜೀವನ…

ಇದನ್ನೂ ಓದಿ
Image
Indian book of Record: ಚಂದ್ರಹಾಸ ಅವರ ಕೃತಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೌರವ
Image
Gallstone: ಶಸ್ತ್ರಚಿಕಿತ್ಸೆಯಿಲ್ಲದೆ ಪಿತ್ತಕೋಶದ ಕಲ್ಲುಗಳನ್ನು ತೆಗೆಯಲು ಸಾಧ್ಯವೆ! ಇಲ್ಲಿದೆ ಮನೆಮದ್ದು

ಮುಖದಲ್ಲಿ ಮೂಡುವ ಮುಗುಳುನಗೆಗೆ ಕಾರಣಕಾರ,

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಅಪ್ಪ ಎಂದರೆ ನೆನಪಾಗುವ ಮೊದಲನೆಯ ಪದ ಧೈರ್ಯ

ಎಷ್ಟೋ ಮನೆಗಳಲ್ಲಿ ಅಪ್ಪ ಅಮ್ಮನ ಸ್ಥಾನ ತುಂಬುತ್ತಾನೆ. ಬಾಲ್ಯದಲ್ಲಿ ನಿನ್ನ ಕೈ ಬೆರಳು ಹಿಡಿದು ನಡೆದ ಆ ಹೆಜ್ಜೆಯ ಗುರುತುಗಳು ಮನದಲ್ಲಿ ಅಚ್ಛೇ ಹಾಕಿ ಬಚ್ಚಿ ಕುಳಿತಿವೆ. ಗುಮ್ಮ ಬಂದನೆಂದು ಅಮ್ಮ ಭಯ ಪಡಿಸಿದರೆ ಆಕೆಗೆ ಬೈದು ಭಯವೆಂಬ ಭೂತವನ್ನು ಹೊಡೆದೋಡಿಸಿ ಧೈರ್ಯ ತುಂಬಿದೆ, ಸುಳ್ಳು ಹೇಳಿದಾಗ ಕೈ ಛಡಿಯೇಟು ತಿಂದ ಅನುಭವ ಎಂದಿಗೂ ಮರೆಯಲಾಗದು. ಈ ಎಲ್ಲಾ ಅನುಭವ ಸಾಮಾಜಿಕ ಜಾಲತಾಣಗಳ ಯುಗದ ಮಕ್ಕಳಿಗೆ ಕಡಿಮೆ, ಅಪ್ಪ ಒಬ್ಬ ಬೆಸ್ಟ್ ಫ್ರೆಂಡ್ ಎಲ್ಲಾ ರೀತಿಯ ವಿಷಯಗಳನ್ನು ಷೇರ್ ಮಾಡಿಕೊಳ್ಳಬಲ್ಲ ಗೆಳೆಯ, ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಅಪ್ಪ ಕೂಡ ಬದಲಾಗುತ್ತಿದ್ದಾನೆ. ಮಕ್ಕಳ ಜೀವನದಲ್ಲಿ ಅಮ್ಮನ ಪಾತ್ರ ಎಷ್ಟಿರುತ್ತೋ ಅದಕ್ಕಿಂತ ಹೆಚ್ಚು ಅಪ್ಪನದು. ಅಮ್ಮ ಹೆತ್ತು, ಹೊತ್ತು, ಸಾಕಿ ಸಲುಹುತ್ತಾಳೆ ಆದರೆ ಅಪ್ಪ ಇವೆಲ್ಲದರ ಹಿಂದೆ ಬೆನ್ನಿಲುಬಾಗಿರುವವನು ಸದಾ ಧೈರ್ಯ ನೀಡುವವನು.

ನನ್ನ ಬಾಲ್ಯದ ಒಂದು ಘಟನೆ ನಿನ್ನ ಬಗ್ಗೆ ಹೇಳಲು ಬಹು ಖುಷಿಯಾಗುವುದು, ನಾ ಕಲಿಯುವ ಶಾಲೆಯ ಧಾರಿಯಲ್ಲಿ ನೀ ಹೊರಡುವಾಗೆಲ್ಲಾ ನಂಗೆ ಎನಾದ್ರು ತಿನ್ನೋದಕ್ಕೆ ತಂದು ಕೊಡುತ್ತಿದ್ದೆ, ನಾ ದಿನಾಲೂ ನಿನ್ನ ಬರುವಿಕೆಗೆ ಕಾಯುತ್ತಿದ್ದೆ ಆ ಖುಷಿ ಮತ್ತೆಂದುಬಾರದು, ನಿಮ್ಮಲ್ಲಿ ನನಗೆ ಇಷ್ಟವಾಗುವ ಗುಣವೆಂದರೆ ಬೆಟ್ಟದಂತ ಕಷ್ಟವಿದ್ದರು, ಕೈ ಬೆರಳಷ್ಟು ಸಹಾ ಚಿಂತಿಸುತ್ತಿರಲಿಲ್ಲಾ, ಯಾವಾಗ್ಲೂ ಕೂಲಾಗಿ ಎಲ್ಲವನ್ನು ಸ್ವೀಕರಿಸುವ ಆ ನಿನ್ನ ಪಾಠ ಇಂದಿಗೂ ನನಗೆ ದಾರಿ ದೀಪವಾಗಿದೆ, ಎಷ್ಟೋ ಜನರು ನಿಮ್ಮ ತಂದೆ ಏನ ಮಾಡುತ್ತಾರೆ ಎಂದರೆ ರೈತ ಎಂದು ಹೇಳೊದಕ್ಕೆ ಮುಜುಗರ ಪಡುತ್ತಾರೆ ಆದರೆ ನನ್ನ ತಂದೆ ರೈತ ಅಂತ ಹೇಳೋದಕ್ಕೆ ನಾನು ಹೆಮ್ಮೆ ಪಡುತ್ತೇನೆ.

ನಾನು ನೋಡಿದ ಮೊದಲ ವೀರ ಬಾಳು ಕಲಿಸಿದ ಸಲಹೆಗಾರ ಬೆರಗು ಮೂಡಿಸೋ ಜಾದೂಗಾರ ಅಪ್ಪ…

ಚೌಕ ಚಲನಚಿತ್ರದ ಈ ಹಾಡಿನ ಸಾಲುಗಳು ಕೇಳುವಾಗೆಲ್ಲ ಒಮ್ಮೆ ಅಪ್ಪನನ್ನು ತಬ್ಬಿಕೊಂಡು ಅತ್ತು ಬಿಡಲೇ, ನಿನ್ನ ತೊಳಲ್ಲೇ ಸದಾ ಪುಟ್ಟ ಮಗುವಾಗಿರುವ ಹಂಬಲವು ಎನಗೆ, ಈ ಒಂದೊಂದು ಸಾಲು ಅಪ್ಪ ನಿನಗಾಗಿಯೇ ಗೀಚಿದಾಗಿವೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಅಪ್ಪ ಅಂದ್ರೆ ಹೆಚ್ಚು ಪ್ರೀತಿ, ಅವರ ಭವ್ಯವಾದ ಭವಿಷ್ಯಕ್ಕೆ ಶುಭಹಾರೈಸಿ ಮನದಲ್ಲೇ ಸಂತೋಷ ಪಡುವ ಜೀವ, ಹೆಣ್ಣು ಮಗಳ ಗಂಡನ ಮನೆಗೆ ಹೊರಟರೆ ತನ್ನೆಲ್ಲ ನೋವನ್ನು ಮನದಲ್ಲೇ ಗೋಪುರ ಕಟ್ಟಿ, ದುಃಖ ತುಂಬಿದ ಮುಖದಲ್ಲಿ ಮಂದಹಾಸ ಮುಗುಳು ನಗೆ ತೋರಿಸುವವ. ತಂದೆಯ ಬಗ್ಗೆ ಎಷ್ಟೇ ವರ್ಣಿಸಿದರು ವಾಕ್ಯಗಳ ಜೋಡಣೆಗೆ ಪದಗಳು ಸಾಲದಾಗಿವಿ, ನನ್ನ ಹೂವಿನಂತ ಬದುಕಿಗೆ ಮುಳ್ಳನ್ನು ದೂರಗೊಳಿಸುವ ನಿಮ್ಮ ಶಕ್ತಿ ಸದಾ ಹೀಗೆ ಇರಲಿ ಲವ್ ಯು ಅಪ್ಪಾಜಿ…

ಲಕ್ಷ್ಮೀ ಬಾಗಲಕೋಟಿ ವಿಜಯಪುರ

ತಾಜಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 11:09 am, Mon, 20 June 22

2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು