Updated on: Feb 11, 2021 | 2:03 PM
ಯಾರು ಮಿಸ್ ಇಂಡಿಯಾ ಆಗಲಿದ್ದಾರೆ ಎಂಬ ಕುತೂಹಲದ ಕೊನೆಗೂ ತಣಿದಿದೆ. 23 ವರ್ಷದ ತೆಲಂಗಾಣದ ಚೆಲುವೆ ಮಾನಸಾ ವಾರಣಾಸಿ ಅವರನ್ನು ಮಿಸ್ ಇಂಡಿಯಾ 2020 ಆಗಿ ಘೋಷಿಸಲಾಯಿತು.
ತೆಲಂಗಾಣದ 23 ವರ್ಷದ ಯುವತಿ ಮಾನಸಾ ವಾರಣಾಸಿ. ಆರ್ಥಿಕ ಮಾಹಿತಿ ವಿನಿಮಯ ತಜ್ಞೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಿಸ್ ಇಂಡಿಯಾ ಆಗಿ ಹೊರಹೊಮ್ಮಿರುವ ಅವರು, ಈವರ್ಷದ ಡಿಸೆಂಬರ್ನಲ್ಲಿ ನಡೆಯಲಿರುವ ಮಿಸ್ ವರ್ಡ್ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
Miss India 2020 ಮಾನಸಾ ವಾರಣಾಸಿಸಾಂಪ್ರದಾಯಕ ಧಿರಿಸಿಗೂ ಸೈ, ಆಧುನಿಕ ಉಡುಪಿಗೂ ಜೈ ಎನ್ನುವ ಸ್ವಭಾವದವರು.
ನೇಹಾ ಧುಪಿಯಾ, ಚಿತ್ರಾಂಗದಾ ಸಿಂಗ್, ಪುಲ್ಕಿತ್ ಸಾಮ್ರಾಟ್, ಪ್ರಸಿದ್ಧ ವಿನ್ಯಾಸಗಾರರಾದ ಫಲ್ಗುಣಿ ಮತ್ತು ಶೇನ್ ಪೀಕಾಕ್ ಅವರಿದ್ದ ಆಯ್ಕೆ ಸಮಿತಿ ಮಾನಸಾ ವಾರಣಾಸಿಯವರನ್ನು ಮಿಸ್ ಇಂಡಿಯಾ 2020 ಆಗಿ ಆಯ್ಕೆ ಮಾಡಿದೆ.
ದಕ್ಷಿಣ ಭಾರತದ ಚೆಂದುಳ್ಳಿ ಚೆಲುವೆಗೆ ಇದೀಗ ಭಾರತ ಸುಂದರಿ ಪಟ್ಟಕ್ಕೇರಿದ ಖುಷಿ, ನಾಚಿಕೆ ಸ್ವಭಾವದ ಇವರಿಗೆ ಭರತನಾಟ್ಯ ಅಂದರೆ ಅಚ್ಚುಮೆಚ್ಚು.
Miss India 2020 Manasa Varanasi ಎಂಥದ್ದೇ ಸಾಹಸಮಯ ಟ್ರೆಕ್ ಮಾಡೋಣ ಬನ್ನಿ ಎಂದರೂ ಹೆದರಲ್ಲ ಅಂತಾರೆ ಮಿಸ್ ಇಂಡಿಯಾ 2020. ಭವಿಷ್ಯದಲ್ಲಿ ಏನೆಲ್ಲಾ ಸಾಧನೆ ಮಾಡಲಿದ್ದಾರೆ ಎಂದು ಚಿತ್ರರಂಗ ಕಾದು ಕೂರುವುದಂತೂ ಖಚಿತ.
ಓದು, ಸಂಗೀತ, ಯೋಗ ಮುಂತಾದವುಗಳಲ್ಲಿ ಅತೀವ ಆಸಕ್ತಿ ಇದೆ ನಮ್ಮ ಮಿಸ್ ಇಂಡಿಯಾ 2020 ಮಾನಸಾ ವಾರಣಾಸಿ ಅವರಿಗೆ.
ಮಾನಸಾ ವಾರಣಾಸಿ ಕಾಲೇಜು ದಿನಗಳಿಂದಲೇ ಸೌಂದರ್ಯ ಸ್ಪರ್ಧೆಗಳಲ್ಲಿ ಪಾರಿತೋಷಕ ಬಾಚಿಕೊಳ್ಳುತ್ತಿದ್ದರಂತೆ!
ತಮ್ಮ ತಾಯಿ, ಅಜ್ಜಿ ಮತ್ತು ತಂಗಿಯೇ ಈ ಸಾಧನೆ ಮಾಡಲು ಸ್ಫೂರ್ತಿ ಎನ್ನುತ್ತಾರೆ ಮಾನಸಾ ವಾರಣಾಸಿ
ತಾಯಿಯೇ ತಮ್ಮ ಸಾಧನೆಯ ಹಿಂದಿನ ಶಕ್ತಿ ಎನ್ನುತ್ತಲೇ ಸ್ತ್ರೀಶಕ್ತಿಯನ್ನು ಪ್ರತಿಪಾದಿಸುತ್ತಾರೆ ಮಿಸ್ ಇಂಡಿಯಾ 2020