Budget PDF Download: ಕೇಂದ್ರ ಬಜೆಟ್ 2025: ಪಿಡಿಎಫ್ ಪ್ರತಿ ಡೌನ್​ಲೋಡ್ ಮಾಡಿ

Union Budget 2025, pdf files downloading: ಕೇಂದ್ರ ಬಜೆಟ್ 2025 ಅನ್ನು ಇಂದು ಫೆಬ್ರುವರಿ 1ರಂದು ಮಂಡನೆ ಮಾಡಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂಗಡಪತ್ರ ಮಂಡಿಸಿದ್ದಾರೆ. ಹಲವು ನಿರೀಕ್ಷೆಗಳ ಭಾರ ಇದ್ದ ಈ ಬಜೆಟ್​ನಲ್ಲಿ ಸಾಕಷ್ಟು ಸಮತೋಲನ ಮಾಡಲು ಅವರು ಯತ್ನಿಸಿದ್ದಾರೆ. ಅವರ ಬಜೆಟ್​ನ ಪೂರ್ಣ ವಿವರಗಳನ್ನು ಓದಲು ನೇರವಾಗಿ ಬಜೆಟ್ ಪ್ರತಿಗಳನ್ನೇ ಡೌನ್​ಲೋಡ್ ಮಾಡಬಹುದು www.indiabudget.gov.in ವೆಬ್​ಸೈಟ್​ನಲ್ಲಿ...

Budget PDF Download: ಕೇಂದ್ರ ಬಜೆಟ್ 2025: ಪಿಡಿಎಫ್ ಪ್ರತಿ ಡೌನ್​ಲೋಡ್ ಮಾಡಿ
ಬಜೆಟ್ ಪಿಡಿಎಫ್ ಪ್ರತಿ

Updated on: Feb 01, 2025 | 12:42 PM

ಬೆಂಗಳೂರು, ಫೆಬ್ರುವರಿ 1: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಕೇಂದ್ರ ಮುಂಗಡಪತ್ರವನ್ನು ಸಂಸತ್ತಿನಲ್ಲಿ ಮಂಡನೆ ಮಾಡಿದ್ದಾರೆ. ಇದು ಅವರಿಗೆ ಸತತ ಎಂಟನೇ ಬಜೆಟ್ ಆಗಿದೆ. ಮೋದಿ 3.0 ಸರ್ಕಾರದ ಮೊದಲ ಪೂರ್ಣಪ್ರಮಾಣದ ಬಜೆಟ್ ಇದಾಗಿದೆ. ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಎಲ್ಲಾ ವಿವರಗಳನ್ನು ಓದಿ ಹೇಳಿದ್ದಾರೆ. ಬಜೆಟ್ ಭಾಷಣದಿಂದ ಹಿಡಿದು ಬಜೆಟ್ ಹೈಲೈಟ್ಸ್​ವರೆಗೆ ಎಲ್ಲಾ ವಿವರಗಳಿರುವ ವಿವಿಧ ಪಿಡಿಎಫ್ ಫೈಲ್​ಗಳು ಲಭ್ಯ ಇವೆ. ಟಿವಿ9 ವೆಬ್​ಸೈಟ್​ನಲ್ಲೂ ನೇರವಾಗಿ ಪಿಡಿಎಫ್ ಫೈಲ್ ಡೌನ್​ಲೋಡ್ ಮಾಡಬಹುದು. ಇಂಡಿಯಾ ಬಜೆಟ್ ವೆಬ್​ಸೈಟ್​ನಲ್ಲಿ ವಿವಿಧ ಪಿಡಿಎಫ್ ಫೈಲ್​ಗಳನ್ನು ಡೌನ್​ಲೋಡ್ ಮಾಡಬಹುದು.

ನೇರವಾಗಿ ಪಿಡಿಎಫ್ ಫೈಲ್ ಡೌನ್​ಲೋಡ್ ಮಾಡಿ:

ಇಂಡಿಯಾ ಬಜೆಟ್ ವೆಬ್​ಸೈಟ್​ನಲ್ಲಿ ಡೌನ್​ಲೋಡ್ ಮಾಡಿ….

ಇಂಡಿಯಾ ಬಜೆಟ್​ನ ಅಧಿಕೃತ ವೆಬ್​ಸೈಟ್ ಲಿಂಕ್ ಇಲ್ಲಿದೆ: www.indiabudget.gov.in/

ಇಲ್ಲಿ ಮುಖ್ಯಪುಟದಲ್ಲೇ ನೀವು 2025-26ನೇ ಸಾಲಿನ ಕೇಂದ್ರ ಬಜೆಟ್​ನ ವಿವಿಧ ಫೈಲ್​ಗಳಿಗೆ ಲಿಂಕ್ ಕಾಣಬಹುದು. ಬಜೆಟ್ ಭಾಷಣ, ಬಜೆಟ್ ಮುಖ್ಯಾಂಶ ಇತ್ಯಾದಿ ಫೈಲ್​ಗಳನ್ನು ನೀವು ಡೌನ್​ಲೋಡ್ ಮಾಡಬಹುದು. ಹಿಂದಿನ ವರ್ಷಗಳ ಬಜೆಟ್​ಗಳನ್ನೂ ನೀವು ಡೌನ್​ಲೋಡ್ ಮಾಡಬಹುದು.

ಯೂನಿಯನ್ ಬಜೆಟ್ ಆ್ಯಪ್

ಯೂನಿಯನ್ ಬಜೆಟ್ ಎನ್ನುವ ಆ್ಯಪ್ ಕೂಡ ಇದ್ದು, ಅದರಲ್ಲೂ ಬಜೆಟ್​ನ ಎಲ್ಲಾ ಫೈಲ್​ಗಳನ್ನು ನೋಡಬಹುದು. ಇದರಲ್ಲೂ ಕೂಡ ಹಿಂದಿನ ವರ್ಷಗಳ ಬಜೆಟ್​ಗಳನ್ನು ಕಾಣಬಹುದು.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:39 pm, Sat, 1 February 25

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us