Economic Survey: ಬಜೆಟ್ ಮುನ್ನಾ ದಿನ ಮಂಡಿಸುವ ಆರ್ಥಿಕ ಸಮೀಕ್ಷೆ ಎಂದರೇನು? ಯಾಕದು ಮುಖ್ಯ?

Union Budget 2024: ಎಕನಾಮಿಕ್ ಸರ್ವೆ ವರದಿಯನ್ನು ಬಜೆಟ್​ಗೆ ಒಂದು ದಿನ ಸಂಸತ್​ನಲ್ಲಿ ಮಂಡಿಸಲಾಗುತ್ತದೆ. ಈ ಬಾರಿ ಜುಲೈ 22ರಂದು ಮಂಡನೆ ಆಗಬಹುದು. ಪ್ರತೀ ವರ್ಷವೂ ಹಣಕಾಸು ಸಚಿವಾಲಯದಿಂದ ಇದನ್ನು ಸಿದ್ಧಪಡಿಸಲಾಗುತ್ತದೆ. ಮುಖ್ಯ ಆರ್ಥಿಕ ಸಲಹೆಗಾರರ ನೇತೃತ್ವದಲ್ಲಿ ಈ ವರದಿ ತಯಾರಾದರೂ ಹಣಕಾಸು ಸಚಿವರೇ ಇದನ್ನು ಸಂಸತ್​ನಲ್ಲಿ ಪ್ರಸ್ತುಪಡಿಸುತ್ತಾರೆ.

Economic Survey: ಬಜೆಟ್ ಮುನ್ನಾ ದಿನ ಮಂಡಿಸುವ ಆರ್ಥಿಕ ಸಮೀಕ್ಷೆ ಎಂದರೇನು? ಯಾಕದು ಮುಖ್ಯ?
ಆರ್ಥಿಕ ಸಮೀಕ್ಷೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jul 17, 2024 | 1:45 PM

ನವದೆಹಲಿ, ಜುಲೈ 17: ಆರ್ಥಿಕ ಸಮೀಕ್ಷೆ ಎಂಬುದು ಸರ್ಕಾರದಿಂದ ವರ್ಷಕ್ಕೊಮ್ಮೆ ಪ್ರಸ್ತುಪಡಿಸುವ ಆರ್ಥಿಕ ದಾಖಲೆ ಪುಸ್ತಕವಾಗಿದೆ. ಹಿಂದಿನ ಹಣಕಾಸು ವರ್ಷದ ಆರ್ಥಿಕ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಇದು ಪರಾರ್ಶಿಸುತ್ತದೆ. ಹಾಗೆಯೇ, ಮುಂದಿನ ದಿನಗಳ ಭವಿಷ್ಯದ ಸ್ಥಿತಿ ಹೇಗಿರಬಹುದು ಎಂಬ ಅಂದಾಜನ್ನೂ ಇದು ಮಾಡುತ್ತದೆ. ಒಂದು ರೀತಿಯಲ್ಲಿ ಇದು ಭಾರತದ ಆರ್ಥಿಕ ಪರಿಸ್ಥಿತಿಯತ್ತ ಬೆಳಕು ಚೆಲ್ಲುತ್ತದೆ. ಸಾಮಾನ್ಯವಾಗಿ ಇದನ್ನು ಕೇಂದ್ರ ಬಜೆಟ್ ಮಂಡನೆಗೆ ಒಂದು ದಿನ ಮುನ್ನ ಸಂಸತ್​ನಲ್ಲಿ ಪ್ರಸ್ತುಪಡಿಸಲಾಗುತ್ತದೆ. ಬಜೆಟ್ ಅಧಿವೇಶನ ಆರಂಭದ ದಿನವೇ ಇದು ಸಂಸತ್ ಅವಗಾಹನೆಗೆ ಲಭ್ಯ ಇರುತ್ತದೆ. ಬಜೆಟ್​ಗೆ ಮುಂಚೆ ಸಂಸತ್ ಸದಸ್ಯರಿಗೆ ಆರ್ಥಿಕತೆ ಪರಿಸ್ಥಿತಿ ಬಗ್ಗೆ ಒಂದು ಚಿತ್ರಣ ಸಿಗಲಿ ಎಂಬುದು ಒಂದು ಉದ್ದೇಶ ಇರಬಹುದು.

ಆರ್ಥಿಕ ಸಮೀಕ್ಷಾ ವರದಿ ಯಾರು ಸಿದ್ಧಪಡಿಸುತ್ತಾರೆ?

ದೇಶದ ಮುಖ್ಯ ಆರ್ಥಿಕ ಸಲಹೆಗಾರರ ಮಾರ್ಗದರ್ಶನದ ಅಡಿಯಲ್ಲಿ ಹಣಕಾಸು ಸಚಿವಾಲಯದಲ್ಲಿರುವ ಅಧಿಕಾರಿಗಳು ಈ ಆರ್ಥಿಕ ಸಮೀಕ್ಷೆಯನ್ನು ಸಿದ್ಧಪಡಿಸುತ್ತಾರೆ. ಸದ್ಯ ಸಿಇಎ ಆಗಿರುವುದು ವಿ. ಅನಂತನಾಗೇಶ್ವರನ್. ಇವರು ಈ ಸರ್ವೆ ಸಿದ್ಧಪಡಿಸಿದರೂ ಅದನ್ನು ಸಂಸತ್​ನಲ್ಲಿ ಮಂಡಿಸುವುದು ಹಣಕಾಸು ಸಚಿವರೇ. ಜುಲೈ 22ರಂದು ನಿರ್ಮಲಾ ಸೀತಾರಾಮನ್ ಅವರು ಎಕನಾಮಿ ಸರ್ವೆಯನ್ನು ಸಂಸತ್​ನಲ್ಲಿ ಪ್ರಸ್ತುಪಡಿಸಲಿದ್ದಾರೆ.

ಇದನ್ನೂ ಓದಿ: Budget 2024 ಹಲ್ವಾ ಸಮಾರಂಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗಿ

ಆರ್ಥಿಕ ಸಮೀಕ್ಷೆಯಲ್ಲಿ ಏನಿರುತ್ತೆ?

ಆರ್ಥಿಕ ಸಮೀಕ್ಷೆ ಮೂರು ಭಾಗಗಳಲ್ಲಿ ಇರುತ್ತದೆ. ಮೊದಲ ಭಾಗದಲ್ಲಿ ದೇಶದ ಪ್ರಧಾನ ಆರ್ಥಿಕ ಸಮಸ್ಯೆಗಳ ಬಗ್ಗೆ ಸಿಇಎ ಅವರು ತಮ್ಮ ದೃಷ್ಟಿಕೋನದಲ್ಲಿ ಬೆಳಕು ಚೆಲ್ಲುತ್ತಾರೆ. ಸರ್ಕಾರದ ನೀತಿ ಹೇಗಿರಬಹುದು ಎಂಬುದಕ್ಕೆ ಇದು ದಿಕ್ಸೂಚಿ ಎನಿಸಬಹುದು. ಬಜೆಟ್​ನಲ್ಲಿ ಈ ದೃಷ್ಟಿಕೋನ ಅಳವಡಿಸಬಹುದು ಎಂದು ನಿಶ್ಚಿತವಾಗಿ ಹೇಳಲು ಆಗುವುದಿಲ್ಲ.

ಇನ್ನು, ಈ ಸಮೀಕ್ಷೆಯ ಎರಡನೇ ಭಾಗದಲ್ಲಿ ಆರ್ಥಿಕತೆಯ ವಿವಿಧ ವಲಯವಾರು ದತ್ತಾಂಶ ಇರುತ್ತದೆ. ಈ ಅಂಕಿ ಅಂಶಗಳನ್ನು ವಿವಿಧ ಇಲಾಖೆ ಮತ್ತು ಸಚಿವಾಲಯಗಳಿಂದ ಪಡೆಯಲಾಗಿರುತ್ತದೆ.

ಇದನ್ನೂ ಓದಿ: ಕೇಂದ್ರ ಬಜೆಟ್ 2024: ಮಹಿಳೆಯರಿಗೆ ವಿಶೇಷ ತೆರಿಗೆ ಲಾಭ ಸಿಗುತ್ತದಾ? ನಿರೀಕ್ಷೆಗಳಿವು…

ಮೂರನೇ ಭಾಗದಲ್ಲಿ ರಾಷ್ಟ್ರೀಯ ಆದಾಯ, ಉತ್ಪಾದನೆ, ಉದ್ಯೋಗ, ಹಣದುಬ್ಬರ, ವ್ಯಾಪಾರ ಸಮತೋಲನ, ರಫ್ತು ಆಮದು ವ್ಯವಹಾರ, ಹಾಗು ಇತರ ಸ್ಥೂಲ ಆರ್ಥಿಕ ಅಂಕಿ ಅಂಶಗಳ ಚಿತ್ರಣವನ್ನು ಒಳಗೊಂಡಿರಲಾಗುತ್ತದೆ.

ಇನ್ನಷ್ಟು ಬಜೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ