ಪಿಎಂ ಕಿಸಾನ್ ಎಐ ಚಾಟ್ಬೋಟ್ ಬಳಸಿದ್ದೀರಾ? ಕಿಸಾನ್ ಇಮಿತ್ರಾ ಬಗ್ಗೆ ಇಲ್ಲಿದೆ ಡೀಟೇಲ್ಸ್
Kisan eMitra chatbot in PM Kisan website: ಪಿಎಂ ಕಿಸಾನ್ ಸ್ಕೀಮ್ನ ವೆಬ್ಸೈಟ್ನಲ್ಲಿ ವರ್ಷದ ಹಿಂದೆ ಚಾಟ್ಬೋಟ್ ಫೀಚರ್ ಅಳವಡಿಸಲಾಗಿದೆ. ಕಿಸಾನ್ ಇಮಿತ್ರಾ ಚಾಟ್ಬೋಟ್ನಲ್ಲಿ ಯೋಜನೆಗೆ ಸಂಬಂಧಿಸಿದ ಯಾವುದೇ ಪ್ರಶ್ನೆ, ಅನುಮಾನಗಳಿದ್ದರೆ ಕೇಳಿ ಉತ್ತರ ಪಡೆಯಬಹುದು. ಈ ಚಾಟ್ಬೋಟ್ ಇಂಗ್ಲೀಷ್ ಹಾಗೂ 10 ಭಾರತೀಯ ಭಾಷೆಗಳಲ್ಲಿ ಲಭ್ಯ ಇದೆ. ಕನ್ನಡದಲ್ಲೂ ನೀವು ಸಂವಾದ ನಡೆಸಬಹುದು.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ದೇಶದ ಕೃಷಿಕರಿಗೆ ಕೇಂದ್ರ ಸರ್ಕಾರ ಧನ ಸಹಾಯ ಒದಗಿಸುವ ಒಂದು ಯೋಜನೆ. ವರ್ಷಕ್ಕೆ ಮೂರು ಬಾರಿ ತಲಾ 2,000 ರೂಗಳಂತೆ ಒಟ್ಟು ಆರು ಸಾವಿರ ರೂ ಹಣವನ್ನು ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಹಣ ಹಾಕಲಾಗುತ್ತದೆ. ಜಮೀನು ಮಾಲಕತ್ವ ಹೊಂದಿರುವ ಕೃಷಿಕರಿಗೆಂದು ರೂಪಿಸಲಾದ ಯೋಜನೆಯಲ್ಲಿ ಈವರೆಗೆ 17 ಕಂತುಗಳ ಹಣ ಬಿಡುಗಡೆ ಆಗಿದೆ. ಒಂಬತ್ತು ಕೋಟಿಗೂ ಅಧಿಕ ರೈತರು ಯೋಜನೆಗೆ ನೊಂದಾಯಿಸಿಕೊಂಡು ಫಲಾನುಭವ ಹೊಂದಿದ್ದಾರೆ. 2018ರ ಕೊನೆಯಲ್ಲಿ ಆರಂಭವಾದ ಈ ಯೋಜನೆ ಮೂಲತಃ ಸಣ್ಣ ರೈತರಿಗೆ ನೆರವಾಗಲೆಂದು ರೂಪಿಸಲಾಗಿದೆ.
ಕಿಸಾನ್ ಇಮಿತ್ರಾ
ಪಿಎಂ ಕಿಸಾನ್ ಯೋಜನೆಯಲ್ಲಿ ನೊಂದಾಯಿಸುವುದರಿಂದ ಹಿಡಿದು ಬಹುತೇಕ ಎಲ್ಲಾ ಕಾರ್ಯಗಳನ್ನು ಮಾಡಲು ಪ್ರತ್ಯೇಕ ವೆಬ್ಸೈಟ್ ಇದೆ. 2023ರಲ್ಲಿ ಈ ವೆಬ್ಸೈಟ್ನಲ್ಲಿ ಕಿಸಾನ್ ಇಮಿತ್ರಾ ಫೀಚರ್ ಜಾರಿಗೆ ತರಲಾಗಿದೆ. ಇದು ಎಐ ಚಾಟ್ಬೋಟ್ ಆಗಿದ್ದು, ಯೋಜನೆ ಬಗ್ಗೆ ಜನರಿಗೆ ಯಾವುದಾದರೂ ಸಂದೇಹ ಇದ್ದರೆ ಅಥವಾ ಮಾಹಿತಿ ಬೇಕಿದ್ದರೆ ಇದನ್ನು ಉಪಯೋಗಿಸಬಹುದು.
ಕಿಸಾನ್ ಇ-ಮಿತ್ರಾ ಎಐ ಚಾಟ್ಬೋಟ್ ಕನ್ನಡವೂ ಸೇರಿದಂತೆ ಪ್ರಮುಖ ಭಾರತೀಯ ಭಾಷೆಗಳಲ್ಲಿ ಲಭ್ಯ ಇದೆ. ಕನ್ನಡದಲ್ಲೇ ನೀವು ಪ್ರಶ್ನೆ ಟೈಪಿಸಿ ಸಲ್ಲಿಸಬಹುದು. ಅಥವಾ ವಾಯ್ಸ್ ಮೆಸೇಜ್ ಅವಕಾಶವೂ ಇದೆ. ನೀವು ಕನ್ನಡದಲ್ಲಿ ಬರೆಯಲು ಆಗೊಲ್ಲ ಎಂದರೆ ಮೈಕ್ರೋಫೋನ್ ಆನ್ ಮಾಡಿ ಕನ್ನಡದಲ್ಲೇ ಮಾತನಾಡಿ ಸಲ್ಲಿಸಿದರೂ ನಿಮ್ಮ ಪ್ರಶ್ನೆಗೆ ಈ ಚಾಟ್ಬೋಟ್ ಉತ್ತರ ನೀಡಬಲ್ಲುದು.
ಇದನ್ನೂ ಓದಿ: ಹಾಜರಾತಿ ಇದ್ದರೆ ಬೋನಸ್; ವರ್ಕೌಟ್ ಆಯ್ತು ಟಿಸಿಎಸ್ ಹೊಸ ನಿಯಮ; ಶೇ. 70 ಉದ್ಯೋಗಿಗಳು ಕಚೇರಿಗೆ ಹಾಜರ್
ಎಲ್ಲಿ ಸಿಗುತ್ತೆ ಈ ಕಿಸಾನ್ ಇಮಿತ್ರಾ ಚಾಟ್ಬೋಟ್?
ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಹೋಗಿ: pmkisan.gov.in/
ಇಲ್ಲಿ ಬಲಬದಿಯಲ್ಲಿ ತೇಲುವಂತಿರುವ ಕಿಸಾನ್ ಇಮಿತ್ರಾ ಚಾಟ್ಬೋಟ್ ಅನ್ನು ಕಾಣಬಹುದು. ಅದನ್ನು ಕ್ಲಿಕ್ ಮಾಡಿದರೆ ಪ್ರತ್ಯೇಕ ಚಾಟ್ಬೋಟ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಬೇಕಾದ ಭಾಷೆಯನ್ನು ಆಯ್ದುಕೊಳ್ಳಬಹುದು. ಡೀಫಾಲ್ಟ್ ಆಗಿ ಹಿಂದಿ ಭಾಷೆಯ ಯುಐ ಇಂಟರ್ಫೇಸ್ ಇರುತ್ತದೆ. ಬಲ ಮೇಲ್ಭಾಗದಲ್ಲಿ ಒಟ್ಟು 11 ಭಾಷಾ ಆಯ್ಕೆಗಳಿವೆ. ಇಂಗ್ಲೀಷ್, ಕನ್ನಡವೂ ಇದೆ.
ಈ ಚಾಟ್ಬೋಟ್ನ ನೇರ ಲಿಂಕ್ ಇಲ್ಲಿದೆ: chatbot.pmkisan.gov.in/Home/Index
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ