Bank Holidays in November 2021: ನವೆಂಬರ್ನಲ್ಲಿ ಬಾಕಿ ಉಳಿದ 15 ದಿನದ ಪೈಕಿ 6 ದಿನ ಬ್ಯಾಂಕ್ ರಜಾ
ದೇಶದ ವಿವಿಧ ಭಾಗಗಳಲ್ಲಿ ಇರುವ ಬ್ಯಾಂಕ್ಗಳಿಗೆ ನವೆಂಬರ್ ತಿಂಗಳಲ್ಲಿ ಬಾಕಿ ಇರುವ 15 ದಿನಗಳಲ್ಲಿ 6 ದಿನಗಳ ಕಾಲ ರಜಾ ಇದೆ. ಆ ಬಗ್ಗೆ ಪಟ್ಟಿ ಇಲ್ಲಿದೆ.
ನವೆಂಬರ್ ತಿಂಗಳಲ್ಲಿ ಈ ಹದಿನೈದು ದಿನದಲ್ಲೇ ದೇಶದಾದ್ಯಂತ ಇರುವ ವಿವಿಧ ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕ್ಗಳು 11 ದಿನ ರಜಾ ಪಡೆದಿವೆ. ದೀಪಾವಳು, ಭಾಯ್ ದೂಜ್ ಸೇರಿದಂತೆ ವಿವಿಧ ಹಬ್ಬಗಳ ಪ್ರಯುಕ್ತ ಸಾಕಷ್ಟು ರಜಾ ದಿನಗಳನ್ನು ಪಡೆದಿದ್ದು, ಇದೀಗ ನವೆಂಬರ್ ತಿಂಗಳ ಉಳಿಕೆ 15 ದಿನದಲ್ಲಿಯೂ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕ್ಗಳಿಗೆ ಆರು ದಿನ ರಜಾ ಇದೆ. ಹಬ್ಬಗಳ ಸಾಲುಗಳೇನೋ ಮುಗಿದಿದೆ. ಮೊದಲ ಪಾಕ್ಷಿಕದಷ್ಟು ದೀರ್ಘವಾದ ಹಾಗೂ ಅಷ್ಟು ಸಂಖ್ಯೆಯಲ್ಲಿ ರಜಾ ದೊರೆಯುವ ಹಬ್ಬಗಳೂ ಇಲ್ಲ. ಈಗಿರುವುದು ವಾರಾಂತ್ಯದ ಹಾಗೂ ಆಯಾ ರಾಜ್ಯವಾರು ನಿರ್ದಿಷ್ಟ ರಜಾ ದಿನಗಳು. ಈ ಲೇಖನದಲ್ಲಿ ಬ್ಯಾಂಕ್ ರಜಾ ದಿನಗಳ ಮಾಹಿತಿಯನ್ನು ನೀಡಲಾಗುತ್ತಿದೆ. ಬ್ಯಾಂಕ್ ಶಾಖೆಗೇ ತೆರಳಿ ಮುಗಿಸಿಕೊಳ್ಳಬೇಕಾದ ವ್ಯವಹಾರಗಳು ಏನಾದರೂ ಇದ್ದಲ್ಲಿ ಈ ರಜಾ ದಿನಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರಿಯುವುದು ಒಳ್ಳೆಯದು.
ನೆನಪಿಟ್ಟುಕೊಳ್ಳಬೇಕಾದ ಅಂಶ ಏನೆಂದರೆ, ಕೆಲವು ರಜಾ ದಿನಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗುತ್ತವೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡುವ ಅಧಿಕೃತ ಪಟ್ಟಿಯ ಪ್ರಕಾರ ಬ್ಯಾಂಕ್ ರಜಾ ದಿನಗಳು ಘೋಷಣೆ ಆಗುತ್ತವೆ. ಹಾಗೆ ಬ್ಯಾಂಕ್ಗಳಿಗೆ ನಿಗದಿ ಆಗಿರುವುದು 11 ರಜಾ ದಿನಗಳು. ಬಾಕಿ ವಾರಾಂತ್ಯದ ರಜಾ ದಿನಗಳು. ಇದರಲ್ಲಿ ತಿಂಗಳ ಎಲ್ಲ ಭಾನುವಾರವೂ ಎರಡು ಮತ್ತು ನಾಲ್ಕು ಶನಿವಾರವೂ ಸೇರಿಕೊಂಡಿದೆ. ಬ್ಯಾಂಕ್ಗಳು ಮೊದಲ ಹಾಗೂ ಮೂರನೇ ಶನಿವಾರ ತೆರೆದಿರುತ್ತದೆ. ಅಂದಹಾಗೆ, ಆರ್ಬಿಐ ರಜಾ ದಿನಗಳು ಮೂರು ವರ್ಗದಲ್ಲಿ ಬೀಳುತ್ತದೆ. ರಾಜ್ಯವಾರು ಆಚರಣೆಗಳು, ಧಾರ್ಮಿಕ ರಜಾ ದಿನಗಳು ಮತ್ತು ಹಬ್ಬಗಳ ಆಚರಣೆಗಳು.
ಮೂರು ಬ್ರಾಕೆಟ್ನಲ್ಲಿ ಆರ್ಬಿಐ ರಜಾ ದಿನಗಳ ಅಧಿಸೂಚನೆ ಹೊರಡಿಸಲಾಗುತ್ತದೆ. “ನೆಗೋಷಿಯಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆ ಅಡಿಯಲ್ಲಿನ ರಜಾ ದಿನಗಳು”, “ನೆಗೋಷಿಯಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆ ಮತ್ತು ರಿಯಲ್ ಟೈಮ್ ಗ್ರಾಸ್ ಸೆಟ್ಲ್ಮೆಂಟ್ ರಜಾ ದಿನಗಳು” ಮತ್ತು “ಬ್ಯಾಂಕ್ಗಳ ಲೆಕ್ಕಾಚಾರ ಚುಕ್ತಾ ಮಾಡುವುದು”. ಈ ಅಧಿಸೂಚಿತ ರಜಾ ದಿನಗಳಲ್ಲಿ ಎಲ್ಲ ಬ್ಯಾಂಕ್ಗಳು, ಸಾರ್ವಜನಿಕ, ಖಾಸಗಿ, ವಿದೇಶೀ, ಕೋ ಆಪರೇಟಿವ್ ಬ್ಯಾಂಕ್ಗಳು ಮತ್ತು ಪ್ರಾದೇಶಿಕ ಬ್ಯಾಂಕ್ಗಳು ಕಾರ್ಯ ನಿರ್ವಹಣೆ ಮಾಡುವುದಿಲ್ಲ.
ನವೆಂಬರ್ 15ರ ನಂತರ ದೇಶದ ವಿವಿಧೆಡೆ ಯಾವ ದಿನದಂದು ರಜಾ ಇದೆ ಎಂಬುದರ ವಿವರ ಹೀಗಿದೆ: ನವೆಂಬರ್ 19: ಗುರುನಾನಕ್ ಜಯಂತಿ/ಕಾರ್ತೀಕ ಪೌರ್ಣಮಿ ಐಜ್ವಾಲ್, ಬೆಲಾಪುರ್, ಭೋಪಾಲ್, ಚಂಢೀಗಢ, ಡೆಹ್ರಾಡೂನ್, ಹೈದರಾಬಾದ್, ಜೈಪುರ್, ಜಮ್ಮು, ಕಾನ್ಪುರ್, ಕೋಲ್ಕತ್ತಾ, ಲಖನೌ, ಮುಂಬೈ, ನಾಗ್ಪುರ, ನವದೆಹಲಿ, ರಾಯ್ಪುರ್, ರಾಂಚಿ, ಶಿಮ್ಲಾ, ಶ್ರೀನಗರ್.
ನವೆಂಬರ್ 22: ಕನಕದಾಸ ಜಯಂತಿ ಬೆಂಗಳೂರು
ನವೆಂಬರ್ 23: ಸೆಂಗ್ ಕುಟ್ಸೆನಮ್ ಶಿಲ್ಲಾಂಗ್
ನವೆಂಬರ್ 21: ಭಾನುವಾರ
ನವೆಂಬರ್ 27: ತಿಂಗಳ ನಾಲ್ಕನೇ ಶನಿವಾರ
ನವೆಂಬರ್ 28: ಭಾನುವಾರ
ಇದನ್ನೂ ಓದಿ: Personal Loan: ಕಡಿಮೆ ಬಡ್ಡಿ ದರಕ್ಕೆ ಪರ್ಸನಲ್ ಲೋನ್ ನೀಡುತ್ತಿರುವ 9 ಬ್ಯಾಂಕ್ಗಳಿವು
Published On - 11:10 am, Mon, 15 November 21