ಎಷ್ಟೇ ಸುಂದರ ವ್ಯಕ್ತಿಯಾಗಿದ್ದರೂ ಆಧಾರ್ ಕಾರ್ಡ್‌ನಲ್ಲಿರುವ ಫೋಟೋವನ್ನು ಮಾತ್ರ ವರ್ಣಿಸಲು ಸಾಧ್ಯವಿಲ್ಲ, ಸಣ್ಣವರಿದ್ದಾಗ ಮಾಡಿದ ಈ ಕಾರ್ಡ್ ದೊಡ್ಡವರಾದ ಮೇಲೆ ನೋಡಿದಾಗ ಅಯ್ಯೋ ಹೇಗಿದ್ದೆ ನಾನು? ಎಂಬ ಪ್ರಶ್ನೆ ಮೂಡುತ್ತದೆ. ಅನೇಕರು ತಮ್ಮ ಆಧಾರ್ ಕಾರ್ಡ್ನಲ್ಲಿ ಫೋಟೋವನ್ನು ನೋಡಿ ಅಸಮಾಧಾನಗೊಂಡಿದ್ದು, ಬದಲಾವಣೆ ಮಾಡಬೇಕು ಎಂದು ಬಯಸುತ್ತಿದ್ದಾರೆ. ಆಧಾರ್ ಕಾರ್ಡ್ ಒಂದು ಪ್ರಮುಖ ಗುರುತಿನ ಚೀಟಿ ಆಗಿರುವುದರಿಂದ ಅದರಲ್ಲಿ ನಿಮ್ಮ ಫೋಟೋ ಚೆನ್ನಾಗಿಲ್ಲದಿದ್ದರೆ ಬೇಸರಗೊಳ್ಳಬೇಡಿ. ಏಕೆಂದರೆ ನೀವು ನಿಮ್ಮ ಫೋಟೋವನ್ನು ಕೆಲವು ಸರಳ ವಿಧಾನಗಳ ಮೂಲಕ ಬದಲಾಯಿಸಬಹುದು. ಇದಕ್ಕಾಗಿ ಸರಳ ಪ್ರಕ್ರಿಯೆಯನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಸೂಚಿಸಿದೆ. ಆಧಾರ್ ಕಾರ್ಡ್‌ನಲ್ಲಿರುವ ಫೋಟೋವನ್ನು ಬದಲಾಯಿಸಲು ಸುಮಾರು 90 ದಿನಗಳನ್ನು ತೆಗೆದುಕೊಳ್ಳಬಹುದು. ಆಧಾರ್ ಕಾರ್ಡ್ ಬದಲಾವಣೆಗೆ ನೀವು ಆಧಾರ್ ಕೇಂದ್ರಕ್ಕೆ ಹೋಗಬೇಕು. ಸಾಮಾನ್ಯ ನಾಗರಿಕರು ತಮ್ಮ ಆಧಾರ್ ಕಾರ್ಡ್ ಅನ್ನು ಸುಲಭವಾಗಿ ಮಾರ್ಪಡಿಸಲು ಅನುವು ಮಾಡಿಕೊಡಲು UIDAI ದೇಶದ 53 ನಗರಗಳಲ್ಲಿ 114 ಆಧಾರ್ ಸೇವಾ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಿದೆ.
ಫೋಟೋವನ್ನು ಬದಲಾಯಿಸುವ ಸುಲಭ ವಿಧಾನಗಳು
ನಿಮ್ಮ ಆಧಾರ್ ಫೋಟೋದಿಂದ ನೀವು ಅತೃಪ್ತರಾಗಿದ್ದರೆ ಅಥವಾ ನೀವು ಆ ಫೋಟೋವನ್ನು ಬದಲಾಯಿಸಲು ಬಯಸುತ್ತಿದ್ದರೆ ನಿಮ್ಮ ಹತ್ತಿರದ ಅಧಿಕೃತ ಆಧಾರ್ ಕೇಂದ್ರಕ್ಕೆ ಭೇಟಿ ಕೊಡಿ. ಇಲ್ಲಿ ನೀವು ಅರ್ಜಿ ನಮೂನೆಯನ್ನು ಸರಿಯಾಗಿ ಭರ್ತಿ ಮಾಡಿದ ನಂತರ ತಮ್ಮ ಫೋಟೋವನ್ನು ಬದಲಾಯಿಸಬಹುದು. ಇನ್ನೂ ಸರಳವಾಗಿ ವಿವರಿಸುತ್ತೇವೆ ನೋಡಿ:
ತಿಳಿದುಕೊಳ್ಳಬೇಕಾದ ವಿಷಯ
ಆಧಾರ್ ಕಾರ್ಡ್‌ನಲ್ಲಿರುವ ಫೋಟೋವನ್ನು ಬದಲಾಯಿಸಲು ಸುಮಾರು 90 ದಿನಗಳನ್ನು ತೆಗೆದುಕೊಳ್ಳಬಹುದು. ಆಧಾರ್ ಸೇವಾ ಕೇಂದ್ರದ ಸಂಬಂಧಪಟ್ಟ ಅಧಿಕಾರಿ ಈ ಫೋಟೋವನ್ನು ಬದಲಾಯಿಸುತ್ತಾರೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ನೀವು ನವೀಕರಿಸಿದ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ