ಅಂಬಾನಿ ಅಡ್ಡೆಗೆ ಇಳಿಯುತ್ತಾರಾ ಅಡಾನಿ?; ಯುಪಿಐ, ಕ್ರೆಡಿಟ್ ಕಾರ್ಡ್, ಇಕಾಮರ್ಸ್ ಬಿಸಿನೆಸ್​ಗೆ ಇಳಿಯಲು ಸಜ್ಜು

|

Updated on: May 28, 2024 | 10:57 AM

Adani Group May Enter Digital Payments field: ಗೌತಮ್ ಅದಾನಿ ಮಾಲಕತ್ವದ ಅದಾನಿ ಗ್ರೂಪ್ ಸಂಸ್ಥೆ ಡಿಜಿಟಲ್ ಪೇಮೆಂಟ್ಸ್ ಮತ್ತು ಇಕಾಮರ್ಸ್ ಕ್ಷೇತ್ರಕ್ಕೆ ಬರಲು ಯೋಜಿಸಿದೆ. ಯುಪಿಐ ಸರ್ವಿಸ್​ಗೆ ಅದಾನಿ ಗ್ರೂಪ್ ಲೈಸನ್ಸ್​ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಕ್ರೆಡಿಟ್ ಕಾರ್ಡ್ ಬಿಸಿನೆಸ್​ಗೂ ಅದು ಬರಲಿದ್ದು, ಈಗಾಗಲೇ ವಿವಿಧ ಬ್ಯಾಂಕುಗಳ ಜೊತೆ ಮಾತುಕತೆ ನಡೆಸುತ್ತಿದೆ. ಅದರ ಅದಾನಿ ಒನ್ ಆ್ಯಪ್​ನಲ್ಲಿ ಒಎನ್​ಡಿಸಿ ಬಳಸಿ ಇಕಾಮರ್ಸ್ ಸೇವೆ ಕೊಡುವ ಚಿಂತನೆಯೂ ಅದಾನಿ ಅವರಿಗಿದೆ ಎಂದು ಫೈನಾನ್ಷಿಯಲ್ ಟೈಮ್ಸ್ ವರದಿಯಿಂದ ತಿಳಿದುಬಂದಿದೆ.

ಅಂಬಾನಿ ಅಡ್ಡೆಗೆ ಇಳಿಯುತ್ತಾರಾ ಅಡಾನಿ?; ಯುಪಿಐ, ಕ್ರೆಡಿಟ್ ಕಾರ್ಡ್, ಇಕಾಮರ್ಸ್ ಬಿಸಿನೆಸ್​ಗೆ ಇಳಿಯಲು ಸಜ್ಜು
ಗೌತಮ್ ಅದಾನಿ
Follow us on

ನವದೆಹಲಿ, ಮೇ 28: ವಿಮಾನ ನಿಲ್ದಾಣ, ಬಂದರು, ಸಿಮೆಂಟ್, ಮೈನಿಂಗ್, ಇನ್​ಫ್ರಾಸ್ಟ್ರಕ್ಚರ್, ವಿದ್ಯುತ್ ಉತ್ಪಾದನೆ ಇತ್ಯಾದಿ ಕ್ಷೇತ್ರಗಳನ್ನು ಆವರಿಸಿ ದೇಶದ ಅತಿದೊಡ್ಡ ಉದ್ಯಮ ಸಮೂಹ ಎನಿಸಿರುವ ಅದಾನಿ ಗ್ರೂಪ್ (Adani group) ಈಗ ಡಿಜಿಟಲ್ ಕ್ಷೇತ್ರವನ್ನು ಆಳುವ ಸನ್ನಾಹದಲ್ಲಿದ್ದಂತಿದೆ. ಫೈನಾನ್ಷಿಯಲ್ ಟೈಮ್ಸ್ ವರದಿ ಪ್ರಕಾರ ಗೌತಮ್ ಅದಾನಿ ಅವರು ಡಿಜಿಟಲ್ ಪೇಮೆಂಟ್ಸ್ ಮತ್ತು ಇಕಾಮರ್ಸ್ ಕ್ಷೇತ್ರಕ್ಕೆ ಆಗಮಿಸುವ ಸಾಧ್ಯತೆ ಇದೆ. ಯುಪಿಐ ಪೇಮೆಂಟ್ ಸರ್ವಿಸ್ ಒದಗಿಸುವ ಲೈಸೆನ್ಸ್​ಗೆ ಅದಾನಿ ಗ್ರೂಪ್ ಅರ್ಜಿ ಸಲ್ಲಿಸಲು ಯೋಜಿಸಿರುವುದು ತಿಳಿದುಬಂದಿದೆ. ಫೋನ್ ಪೆ, ಗೂಗಲ್ ಪೆ, ಪೇಟಿಎಂ, ಅಮೇಜಾನ್ ಮೊದಲಾದ ಸಂಸ್ಥೆಗಳು ಯುಪಿಐ ಬಳಸಿ ಪೇಮೆಂಟ್ ಸರ್ವಿಸ್ ಒದಗಿಸುತ್ತಿವೆ. ಈಗ ಅದಾನಿ ಗ್ರೂಪ್ ಕೂಡ ಕಾಲಿಡುತ್ತಿದೆ.

ಈ ಹಿಂದೆಯೇ ಅದಾನಿ ಗ್ರೂಪ್ ಕ್ರೆಡಿಟ್ ಕಾರ್ಡ್ ಬಿಸಿನೆಸ್​ಗೆ ಬರುವ ಸುಳಿವು ಕೊಟ್ಟಿತ್ತು. ಈಗ ಬಂದಿರವ ಮಾಹಿತಿ ಪ್ರಕಾರ ಕ್ರೆಡಿಟ್ ಕಾರ್ಡ್​ಗಾಗಿ ಅದು ವಿವಿಧ ಬ್ಯಾಂಕುಗಳ ಜೊತೆ ಮಾತುಕತೆ ನಡೆಸುತ್ತಿದ್ದು, ಅದು ಅಂತಿಮ ಹಂತಕ್ಕೆ ಬಂದಿದೆ. ಮಾತುಕತೆ ಸಫಲವಾದರೆ ಬ್ಯಾಂಕ್ ಸಹಭಾಗಿತ್ವದಲ್ಲಿ ಅದಾನಿ ಕ್ರೆಡಿಟ್ ಕಾರ್ಡ್ ಹೊರಬರಲಿದೆ.

ಒಎನ್​ಡಿಸಿ ಪ್ಲಾಟ್​ಫಾರ್ಮ್​ನಲ್ಲಿ ಇಕಾಮರ್ಸ್

ಫೈನಾನ್ಷಿಯಲ್ ಟೈಮ್ಸ್ ವರದಿ ಪ್ರಕಾರ ಅದಾನಿ ಗ್ರೂಪ್ ಒಎನ್​ಡಿಸಿ ಪ್ಲಾಟ್​ಫಾರ್ಮ್​ನಲ್ಲಿ ಇಕಾಮರ್ಸ್ ಸೇವೆ ಕೊಡಲು ಮುಂದಾಗಿದೆ. ಪೇಟಿಎಂ, ಟಾಟಾ ಮೊದಲಾದ ಕಂಪನಿಗಳು ಒಎನ್​ಡಿಸಿ ಪ್ಲಾಟ್​ಫಾರ್ಮ್ ಬಳಸಿ ಇಕಾಮರ್ಸ್ ಆಫರ್ ಮಾಡುತ್ತಿವೆ. ಅದಾನಿ ಗ್ರೂಪ್ ಕೂಡ ಅದೇ ಮಾರ್ಗ ಹಿಡಿಯಬಹುದು.

ಇದನ್ನೂ ಓದಿ: ಭಾರತದಲ್ಲಿ ಜಿಯೋ ಮ್ಯಾಜಿಕ್ ಸೃಷ್ಟಿಸಿದ್ದ ಮುಕೇಶ್ ಅಂಬಾನಿ ಈಗ ಅದೇ ಬಿಸಿನೆಸ್ ಮಾಡಲ್​ನೊಂದಿಗೆ ಆಫ್ರಿಕಾಗೆ ಎಂಟ್ರಿ

ಅದಾನಿ ಒನ್ ಆ್ಯಪ್

ಅದಾನಿ ಒನ್ ಎಂಬ ಆ್ಯಪ್ ಅನ್ನು ಎರಡು ವರ್ಷದ ಹಿಂದೆಯೇ ರೂಪಿಸಲಾಗಿದೆ. ಇದರಲ್ಲಿ ಸದ್ಯ ವಿಮಾನ ಮತ್ತು ಹೋಟೆಲ್ ಬುಕಿಂಗ್ಸ್ ಇತ್ಯಾದಿ ಸರ್ವಿಸ್ ಕೊಡಲಾಗುತ್ತಿದೆ. ಈಗ ಅದಾನಿ ಒನ್ ಆ್ಯಪ್​ನಲ್ಲಿ ಒಎನ್​ಡಿಸಿ ಮೂಲಕ ಕನ್ಸೂಮರ್ ಮಾರುಕಟ್ಟೆ ಸಿಗಲಿದೆ. ಟಾಟಾ ಮತ್ತು ಪೇಟಿಎಂನ ಆ್ಯಪ್​ಗಳಲ್ಲಿ ಒಎನ್​ಡಿಸಿ ಮೂಲಕ ದಿನಸಿ ವಸ್ತುಗಳು ಮತ್ತು ಫ್ಯಾಷನ್ ವಸ್ತುಗಳು ಮಾರಾಟವಾಗುತ್ತಿದೆ. ಅದೇ ರೀತಿಯಲ್ಲಿ ಅದಾನಿ ಒನ್ ಆ್ಯಪ್​ನಲ್ಲೂ ಸಿಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ