ಭಾರತದಲ್ಲಿ ಜಿಯೋ ಮ್ಯಾಜಿಕ್ ಸೃಷ್ಟಿಸಿದ್ದ ಮುಕೇಶ್ ಅಂಬಾನಿ ಈಗ ಅದೇ ಬಿಸಿನೆಸ್ ಮಾಡಲ್​ನೊಂದಿಗೆ ಆಫ್ರಿಕಾಗೆ ಎಂಟ್ರಿ

Reliance Industries to enter telecom business in Ghana: ಮುಕೇಶ್ ಅಂಬಾನಿ ಅವರು ಆಫ್ರಿಕಾದ ಘಾನಾ ದೇಶದ ಟೆಲಿಕಾಂ ಮಾರುಕಟ್ಟೆ ಪ್ರವೇಶ ಮಾಡುತ್ತಿದ್ದಾರೆ. ರಿಲಾಯನ್ಸ್ ಇಂಡಸ್ಟ್ರೀಸ್​ಗೆ ಸೇರಿದ ರಾಡಿಸಿಸ್ ಹಾಗು ಘಾನಾದ ಎನ್​ಜಿಐಸಿ ಕಂಪನಿ ಮಧ್ಯೆ ಒಪ್ಪಂದವಾಗಿದ್ದು, 5ಜಿ ಬ್ರಾಡ್​ಬ್ಯಾಂಡ್ ಸರ್ವಿಸ್ ಆಫರ್ ಮಾಡುತ್ತಿವೆ. ಎನ್​ಜಿಐಸಿ ಸಂಸ್ಥೆ ಘಾನದಲ್ಲಿ 15 ವರ್ಷಕ್ಕೆ ಲೈಸೆನ್ಸ್ ಹೊಂದಿದೆ. ಮೈಕ್ರೋಸಾಫ್ಟ್ ಮೊದಲಾದ ಕಂಪನಿಗಳ ನೆರವು ಇದಕ್ಕೆ ಇದೆ. ಭಾರತದಲ್ಲಿ ಜಿಯೋ ಇನ್ಫೋಕಾಂ ಮೂಲಕ ಮ್ಯಾಜಿಕ್ ಸೃಷ್ಟಿಸಿದ್ದ ಅಂಬಾನಿ ಈಗ ಅದೇ ತೆರನಾದ ಯಶಸ್ಸನ್ನು ಆಫ್ರಿಕನ್ ದೇಶದಲ್ಲಿ ಪಡೆಯಬಲ್ಲುರಾ ಎಂದು ನೋಡಬೇಕು.

ಭಾರತದಲ್ಲಿ ಜಿಯೋ ಮ್ಯಾಜಿಕ್ ಸೃಷ್ಟಿಸಿದ್ದ ಮುಕೇಶ್ ಅಂಬಾನಿ ಈಗ ಅದೇ ಬಿಸಿನೆಸ್ ಮಾಡಲ್​ನೊಂದಿಗೆ ಆಫ್ರಿಕಾಗೆ ಎಂಟ್ರಿ
ಮುಕೇಶ್ ಅಂಬಾನಿ
Follow us
|

Updated on: May 27, 2024 | 11:50 AM

ನವದೆಹಲಿ, ಮೇ 27: ಎಂಟು ಒಂಬತ್ತು ವರ್ಷಗಳ ಹಿಂದೆ ಜಿಯೋ ತರುವ ಮೂಲಕ ಟೆಲಿಕಾಂ ವಲಯದಲ್ಲಿ ಸಂಚಲನವನ್ನೇ ಸೃಷ್ಟಿಸಿದ್ದ ಮುಕೇಶ್ ಅಂಬಾನಿ (Mukesh Ambani) ಈಗ ಆಫ್ರಿಕನ್ ನಾಡಿನಲ್ಲೂ ಕಾಲೂರಿದ್ದಾರೆ. ವರದಿಗಳ ಪ್ರಕಾರ ಆಫ್ರಿಕಾದಲ್ಲಿ ಮೊಬೈಲ್ ಬ್ರಾಡ್​ಬ್ಯಾಂಡ್ ಸರ್ವಿಸ್ ಬಿಸಿನೆಸ್​ಗೆ ಅಂಬಾನಿ ಕೈ ಹಾಕುತ್ತಿದ್ದಾರೆ. ರಿಲಾಯನ್ಸ್ ಇಂಡಸ್ಟ್ರೀಸ್​ಗೆ ಸೇರಿದ ರಾಡಿಸಿಸ್ ಕಾರ್ಪ್ ಸಂಸ್ಥೆ ಘಾನಾ ದೇಶದ ಹೊಸ ಸ್ಟಾರ್ಟಪ್ ಆದ ನೆಕ್ಸ್ಟ್ ಜೆನ್ ಇನ್​ಫ್ರಾಕೋ (NGIC- Next Gen Infra Co) ಎಂಬ ಕಂಪನಿ ಜೊತೆ ಸಹಭಾಗಿತ್ವ ಮಾಡಿಕೊಳ್ಳುತ್ತಿದ್ದು, ಎರಡು ಸಂಸ್ಥೆಗಳು ಜಂಟಿಯಾಗಿ ಘಾನದಲ್ಲಿ 5ಜಿ ಬ್ರಾಡ್​ಬ್ಯಾಂಡ್ ಸೇವೆ ಒದಗಿಸಲಿವೆ ಎಂಬುದು ಗೊತ್ತಾಗಲಿದೆ.

ಎನ್​ಜಿಐಸಿ ಸಂಸ್ಥೆ 15 ವರ್ಷಗಳಿಗೆ 5ಜಿ ಬ್ರಾಡ್​ಬ್ಯಾಂಡ್ ಸರ್ವಿಸ್ ಒದಗಿಸಲು ಲೈಸೆನ್ಸ್ ಹೊಂದಿದೆ. ಈ ವರ್ಷಾಂತ್ಯದೊಳಗೆ ಅದು ಕಾರ್ಯಾಚರಣೆ ಆರಂಭಿಸಬಹುದು ಎನ್ನಲಾಗಿದೆ. ಮೈಕ್ರೋಸಾಫ್ಟ್, ಟೆಕ್ ಮಹೀಂದ್ರ, ನೋಕಿಯಾ ಓಯ್ಜ್ ಸಂಸ್ಥೆಗಳೂ ಕೂಡ ಎನ್​ಜಿಐಸಿಗೆ ನೆರವು ನೀಡಿವೆ. ಮೂರು ವರ್ಷಗಳಿಗೆ 145 ಮಿಲಿಯನ್ ಡಾಲರ್​ನಷ್ಟು ಬಂಡವಾಳ ವೆಚ್ಚ ಮಾಡಲಿದೆ. ಎನ್​ಜಿಐಸಿ ಮೂಲಕ ಅಂಬಾನಿ ಅವರು ಘಾನದಲ್ಲಿ 5ಜಿ ಕ್ರಾಂತಿ ಮಾಡಬಲ್ಲುರಾ ಎಂಬುದು ಕುತೂಹಲದ ವಿಚಾರ.

ಕುತೂಹಲ ಎಂದರೆ ಭಾರತದ ಟೆಲಿಕಾಂ ಆಪರೇಟರ್ ಆಗಿರುವ ಭಾರ್ತಿ ಏರ್ಟೆಲ್ ಸಂಸ್ಥೆ ಘಾನಾ ಸೇರಿದಂತೆ 14 ಆಫ್ರಿಕನ್ ದೇಶಗಳಲ್ಲಿ ಟೆಲಿಕಾಂ ಜಾಲ ಹೊಂದಿದೆ. ಘಾನಾದಲ್ಲಿ ಮೂರು ಪ್ರಮುಖ ಟೆಲಿಕಾಂ ಆಪರೇಟರ್​ಗಳಿವೆ. ಎಂಟಿಎನ್, ವೊಡಾಫೋನ್ ಮತ್ತು ಏರ್​ಟೆಲ್. ಇದರಲ್ಲಿ ಏರ್​ಟೆಲ್ ಟಿಗೋ ಸಂಸ್ಥೆಯಲ್ಲಿ ಅಲ್ಲಿನ ಸರ್ಕಾರದ ಪಾಲು ಹೆಚ್ಚಿದೆ. ಎನ್​ಜಿಐಸಿಯಲ್ಲೂ ಸರ್ಕಾರದ ಪಾಲು ಶೇ. 10ರಷ್ಟಿದೆ. ಆದರೆ, ಅರ್ಧಕ್ಕಿಂತ ಹೆಚ್ಚು ಪಾಲು ಅಸೆಂಡ್ ಡಿಜಿಟಲ್ ಸಲ್ಯೂಶನ್ಸ್ ಮತ್ತು ಕೆ ನೆಟ್ ಎಂಬ ಖಾಸಗಿ ಕಂಪನಿಗಳದ್ದಾಗಿದೆ.

ಇದನ್ನೂ ಓದಿ: ದೇಶದ ಜಿಡಿಪಿಗೆ ಅರ್ಧದಷ್ಟು ಕೊಡುಗೆ ಕೊಡುತ್ತವೆ ಈ 13 ನಗರಗಳು; ಬೆಂಗಳೂರಿಗೆ ಎಷ್ಟನೇ ಸ್ಥಾನ?

ಚೀನಾ ಪ್ರಭಾವ ತಡೆಯಲು ಯತ್ನ

ತಂತ್ರಜ್ಞಾನದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವ ಚೀನಾ ಇಡೀ ಆಫ್ರಿಕಾ ಖಂಡದಲ್ಲಿ ತನ್ನ ಪ್ರಭಾವ ಮತ್ತು ಬಿಸಿನೆಸ್ ಹಿಡಿತ ಸಾಧಿಸಲು ಯತ್ನಿಸುತ್ತಿದೆ. ಇದನ್ನು ನಿಯಂತ್ರಿಸಲು ಭಾರತದಿಂದಲೂ ಪ್ರಯತ್ನಗಳಾಗುತ್ತಿವೆ. ಈ ಪ್ರಯತ್ನಗಳ ಒಂದು ಫಲವೇ ಎನ್​ಜಿಐಸಿ ಮತ್ತು ರಿಲಾಯನ್ಸ್ ಸಹಭಾಗಿತ್ವ ಎನ್ನನಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗೋಡೌನ್‌ನಲ್ಲಿ ಮೂಟೆಗಳ ಅಡಿ ಸಿಲುಕಿದ ಕಾರ್ಮಿಕರು; ಓರ್ವ ಸಾವು
ಗೋಡೌನ್‌ನಲ್ಲಿ ಮೂಟೆಗಳ ಅಡಿ ಸಿಲುಕಿದ ಕಾರ್ಮಿಕರು; ಓರ್ವ ಸಾವು
ಹಬ್ಬ ಮುಗಿಯುತ್ತಿದ್ದಂತೆಯೇ ಗಣೇಶನಿಗೆ ಹೀಗಾ ಅವಮಾನ ಮಾಡುವುದು..!
ಹಬ್ಬ ಮುಗಿಯುತ್ತಿದ್ದಂತೆಯೇ ಗಣೇಶನಿಗೆ ಹೀಗಾ ಅವಮಾನ ಮಾಡುವುದು..!
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್
‘ಚಾರ್ಜ್​ಶೀಟ್ ಸಾರ್ವಜನಿಕ ಡಾಕ್ಯುಮೆಂಟ್; ಜಿ. ಪರಮೇಶ್ವರ್