AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Adani Stocks: ಅದಾನಿ ಸಮೂಹಕ್ಕೀಗ ಮಾರ್ಗನ್‌ ಸ್ಟ್ಯಾನ್ಲಿ ಆಘಾತ; ಮತ್ತೆ ಕುಸಿದ ಷೇರು ಮೌಲ್ಯ

ಗುರುವಾರದ ವಹಿವಾಟಿನ ಅಂತ್ಯದ ವೇಳೆಗೆ ಅದಾನಿ ಎಂಟರ್​​ಪ್ರೈಸಸ್ ಷೇರು ಮೌಲ್ಯ ಶೇ 11ರಷ್ಟು ಕುಸಿದಿದೆ. ಅದಾನಿ ಪೋರ್ಟ್ಸ್ ಷೇರು ಮೌಲ್ಯದಲ್ಲಿ ಶೇ 2.83ರಷ್ಟು ಕುಸಿತವಾಗಿದೆ.

Adani Stocks: ಅದಾನಿ ಸಮೂಹಕ್ಕೀಗ ಮಾರ್ಗನ್‌ ಸ್ಟ್ಯಾನ್ಲಿ ಆಘಾತ; ಮತ್ತೆ ಕುಸಿದ ಷೇರು ಮೌಲ್ಯ
ಸಾಂದರ್ಭಿಕ ಚಿತ್ರ
Ganapathi Sharma
|

Updated on:Feb 09, 2023 | 5:31 PM

Share

ಮುಂಬೈ: ಅಮೆರಿಕದ ಹಿಂಡನ್​ಬರ್ಗ್ ರಿಸರ್ಚ್ ವರದಿಯ ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದ ಅದಾನಿ ಸಮೂಹ(Adani Group) ಕಂಪನಿಗಳ ಷೇರುಗಳಿಗೆ ಮಾರ್ಗನ್‌ ಸ್ಟ್ಯಾನ್ಲಿ (MSCI) ಹೇಳಿಕೆ ಮತ್ತೆ ಆಘಾತ ನೀಡಿದೆ. ಪರಿಣಾಮವಾಗಿ ಕಂಪನಿಗಳ ಷೇರು ಮೌಲ್ಯದಲ್ಲಿ ಗುರುವಾರದ ವಹಿವಾಟಿನಲ್ಲಿ ಮತ್ತೆ ಕುಸಿತವಾಗಿದೆ. ಅದಾನಿ ಸಮೂಹದ ಕಂಪನಿಗಳ ಫ್ರೀ ಫ್ಲೋಟ್ ಸ್ಟೇಟಸ್ ಪರಿಶೀಲನೆ ನಡೆಸುವುದಾಗಿ ಎಂಎಸ್​ಸಿಐ ಹೇಳಿಕೆ ನೀಡಿತ್ತು. ಇದರ ಬೆನ್ನಲ್ಲೇ ಷೇರು ಮಾರುಕಟ್ಟೆಗಳಲ್ಲಿ ಅದಾನಿ ಸಮೂಹ ಕಂಪನಿಗಳ ಷೇರುಗಳ ಮೌಲ್ಯದಲ್ಲಿ ಕುಸಿತವಾಗಿದೆ.

ಗುರುವಾರದ ವಹಿವಾಟಿನ ಅಂತ್ಯದ ವೇಳೆಗೆ ಅದಾನಿ ಎಂಟರ್​​ಪ್ರೈಸಸ್ ಷೇರು ಮೌಲ್ಯ ಶೇ 11ರಷ್ಟು ಕುಸಿದಿದೆ. ಅದಾನಿ ಪೋರ್ಟ್ಸ್ ಷೇರು ಮೌಲ್ಯದಲ್ಲಿ ಶೇ 2.83ರಷ್ಟು ಕುಸಿತವಾಗಿದೆ. ಅಂಬುಜಾ ಸಿಮೆಂಟ್ಸ್‌ ಷೇರು ಶೇ 6.95ರಷ್ಟು ಕುಸಿತ ಕಂಡಿದೆ. ಅದಾನಿ ಗ್ರೀನ್‌, ಅದಾನಿ ಪವರ್‌, ಅದಾನಿ ಟ್ರಾನ್ಸ್‌ಮಿಷನ್‌, ಅದಾನಿ ಟೋಟಲ್‌ ಗ್ಯಾಸ್‌, ಎನ್‌ಡಿಟಿವಿ ಶೇ 5ರ ಲೋವರ್‌ ಸರ್ಕ್ಯೂಟ್‌ನಲ್ಲಿ ಲಾಕ್‌ ಆಗಿದ್ದವು.

ಈ ಮಧ್ಯೆ, ಹಿಮಾಚಲ ಪ್ರದೇಶದಲ್ಲಿ ಅದಾನಿ ವಿಲ್ಮರ್ ಮತ್ತು ಅದಾನಿ ಸಮೂಹದ ಇತರ ಕಂಪನಿಗಳ ಕಚೇರಿ ಹಾಗೂ ಮಳಿಗೆಗಳಿಗೆ ಅಬಕಾರಿ, ತೆರಿಗೆ ಇಲಾಖೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದರು. ತೆರಿಗೆ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಈ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಅದಾನಿ ವಿಲ್ಮರ್ ಗ್ರೂಪ್ ಆರೋಪವನ್ನು ಅಲ್ಲಗಳೆದಿದ್ದು, ನಿಯಮಿತ ತಪಾಸಣೆ ಪ್ರಕ್ರಿಯೆಯ ಭಾಗವಾಗಿ ಅಧಿಕಾರಿಗಳು ಕಚೇರಿಗಳಿಗೆ ಬಂದು ಪರಿಶೀಲನೆ ನಡೆಸಿದ್ದಾರಷ್ಟೇ ಎಂದು ತಿಳಿಸಿತ್ತು. ಈ ಎಲ್ಲ ಬೆಳವಣಿಗೆಯ ಹೊರತಾಗಿಯೂ ಅದಾನಿ ವಿಲ್ಮರ್ ಶೇ 4.99ರಷ್ಟು ಗಳಿಕೆ ದಾಖಲಿಸಿದೆ.

ಇದನ್ನೂ ಓದಿ: Adani Enterprises: ಅಪ್ಪರ್​ ಸರ್ಕ್ಯೂಟ್​​ನಲ್ಲಿ ಅದಾನಿ ಎಂಟರ್​ಪ್ರೈಸಸ್ ಷೇರು; ಮೌಲ್ಯದಲ್ಲಿ ಭಾರೀ ಜಿಗಿತ

ಫ್ರೀ ಫ್ಲೋಟ್ ಸ್ಟೇಟಸ್ ಎಂದರೇನು?

ಪ್ರತಿ ಷೇರಿನೊಂದಿಗೆ ಹೊಂದಾಣಿಕೆ ಮಾಡಲಾದ ಮಾರುಕಟ್ಟೆ ಬಂಡವಾಳದ ಕುರಿತು ಲೆಕ್ಕಾಚಾರ ಹಾಕುವುದೇ ಫ್ರೀ ಫ್ಲೋಟ್ ಸ್ಟೇಟಸ್. ಸರಳವಾಗಿ ಹೇಳುವುದಾದರೆ, ಪ್ರತಿ ಷೇರಿನೊಂದಿಗೆ ಮಾರುಕಟ್ಟೆ ಬಂಡವಾಳ ಹೊಂದಾಣಿಕೆ ಮಾಡುವುದನ್ನು ಫ್ರೀ ಫ್ಲೋಟ್ ಸ್ಟೇಟಸ್ ಎಂದು ಕರೆಯಲಾಗುತ್ತದೆ. ಇದು ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಮಿಡ್​​ಕ್ಯಾಪ್​​ ಷೇರುಗಳ ಲೆಕ್ಕಾಚಾರ ಹಾಕುವ ಒಂದು ತಾಂತ್ರಿಕ ವಿಧಾನವಾಗಿದೆ. ಈ ವಿಧಾನದಲ್ಲಿ, ಮಾರುಕಟ್ಟೆಯಲ್ಲಿ ಲಭ್ಯವಿರುವ ಷೇರುಗಳಿಗೆ ಈಕ್ವಿಟಿ ಷೇರು ಬೆಲೆಯನ್ನು ಮಲ್ಟಿಪ್ಲೈ ಮಾಡುವ ಮೂಲಕ ಲೆಕ್ಕಾಚಾರ ಹಾಕಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಪ್ರವರ್ತಕರ ಬಳಿ ಇರುವ ಷೇರುಗಳು, ಸರ್ಕಾರದ ಷೇರುಗಳು ಅಥವಾ ಕಂಪನಿಯ ಒಳಗಿನವರು ಹೊಂದಿರುವ ನಿಷ್ಕ್ರಿಯ ಷೇರುಗಳನ್ನು ಲೆಕ್ಕಹಾಕದೆ ಬಿಟ್ಟುಬಿಡಲಾಗುತ್ತದೆ. ಅಮೆರಿಕದ ಹೂಡಿಕೆ ನಿರ್ವಹಣಾ ಕಂಪನಿಯಾಗಿರುವ ಎಂಎಸ್​ಸಿಐ ಅಥವಾ ಮಾರ್ಗನ್​ ಸ್ಟ್ಯಾನ್ಲಿ  ಫ್ರೀ ಫ್ಲೋಟ್ ಸ್ಟೇಟಸ್ ಲೆಕ್ಕಾಚಾರವನ್ನೂ ಪರಾಮರ್ಶೆ ಮಾಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:26 pm, Thu, 9 February 23

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ