Meta: ಕಂಪೆನಿಯ ಹೆಸರು ಬದಲಿಸಿದ ಫೇಸ್​ಬುಕ್​: ಸಾಮಾಜಿಕ ಮಾಧ್ಯಮಗಳಲ್ಲಿ ಹಿಗ್ಗಾಮುಗ್ಗಾ ಜಾಲಾಡಿದ ನೆಟ್ಟಿಗರು

| Updated By: Srinivas Mata

Updated on: Oct 29, 2021 | 8:39 PM

ಫೇಸ್​ಬುಕ್​ನಿಂದ ಕಂಪೆನಿಯ ಹೆಸರನ್ನು ಮೆಟಾ ಎಂದು ಬದಲಾವಣೆ ಮಾಡಿದ ಮೇಲೆ ಟ್ವಿಟ್ಟರ್​ನಲ್ಲಿ ವಿವಿಧ ಬಗೆಯಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Meta: ಕಂಪೆನಿಯ ಹೆಸರು ಬದಲಿಸಿದ ಫೇಸ್​ಬುಕ್​: ಸಾಮಾಜಿಕ ಮಾಧ್ಯಮಗಳಲ್ಲಿ ಹಿಗ್ಗಾಮುಗ್ಗಾ ಜಾಲಾಡಿದ ನೆಟ್ಟಿಗರು
ಎಡಭಾಗದಲ್ಲಿ ಫೇಸ್​ಬುಕ್​, ಬಲಭಾಗದಲ್ಲಿ ಮೆಟಾ
Follow us on

ಫೇಸ್​ಬುಕ್​ ಗುರುವಾರ ಘೋಷಣೆ ಮಾಡಿರುವಂತೆ, ಇನ್ನು ಮುಂದೆ ಕಂಪೆನಿಯ ಹೆಸರು Meta (ಮೆಟಾ) ಎಂದು ಕರೆಯುವುದಕ್ಕೆ ನಿರ್ಧರಿಸಲಾಗಿದೆ. ಈ ಬಗ್ಗೆ ಸುದ್ದಿ ಹೊರಬೀಳುತ್ತಿದ್ದಂತೆ ಟ್ವಿಟ್ಟರ್​ನಲ್ಲಿ ತಮಾಷೆಯ ಹಬ್ಬ ಮಾಡಲಾಗಿದೆ, ಜನರು, ಸಾಮಾಜಿಕ ಮಾಧ್ಯಮದ ಕಂಪೆನಿಯಿಂದಲೂ ಈ ಕೆಲಸ ಆಗಿದೆ. ಹೆಸರು ಬದಲಾವಣೆ ಮಾಡುವ ನಿರ್ಧಾರಕ್ಕೆ ವಿಮರ್ಶಕರಿಂದ ಟೀಕೆ ವ್ಯಕ್ತವಾಗಿದೆ. ಕಂಪೆನಿಯ ಹಗರಣಗಳಿಂದ ಗಮನ ಬೇರೆಡೆ ಸೆಳೆಯುವುದಕ್ಕೆ ಹೀಗೆ ಮಾಡಲಾಗಿದೆ ಎನ್ನಲಾಗಿದೆ. ಅಷ್ಟೇ ಅಲ್ಲ, ಇನ್ನೂ ಸಾಕಷ್ಟು ತಮಾಷೆಯ ಮೀಮ್ಸ್​ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಗಿರಕಿ ಹೊಡೆಯುತ್ತಿವೆ. ಅವುಗಳ ಪೈಕಿ ಕೆಲವು ಝಲಕ್​ಗಳು ನಿಮ್ಮೆದುರು ಇಲ್ಲಿವೆ.

ಲಾರನ್ಸ್​ ಟ್ರೈಬ್ ಮಾಡಿರುವ ಟ್ವೀಟ್:
There once was a hacker named Zuck
Who screwed half the world for a buck
People hoped he’d do betta
So the name changed to Meta
But the name and the product still suck
— Roger McNamee

ಒಂದೊಮ್ಮೆ ಝುಕ್ ಎಂಬ ಹ್ಯಾಕರ್ ಇದ್ದ
ಹಣಕ್ಕಾಗಿ ಅರ್ಧ ಜಗತ್ತನ್ನು ಹಾಳು ಮಾಡಿದ
ಜನರು ಆತ ಉತ್ತಮವಾದದ್ದನ್ನು ಏನೋ ಮಾಡ್ತಾನೆ ಅಂದುಕೊಂಡರು
ಆತ ಮೆಟಾ ಎಂದು ಹೆಸರಷ್ಟೇ ಬದಲಿಸಿದ
ಆದರೆ ಹೆಸರು ಹಾಗೂ ಉತ್ಪನ್ನ ಈಗಲೂ ಅಷ್ಟೇ ಕೆಟ್ಟದಿದೆ
– ರೋಜರ್ ಮೆಕ್​ನಮೀ
ಹೀಗೆ ಅನುವಾದ ಮಾಡಬಹುದು.

ದಿನೇಶ್ ಡಿಸೋಜಾ ಟ್ವೀಟ್:
Facebook is now “meta,” which means “beyond.” The name Google is an attempt to transcend ordinary computation: it refers to the number 1 followed by 100 zeroes. These digital moguls are complete megalomaniacs. Limiting their power is as important as limiting the power of China

ಫೇಸ್‌ಬುಕ್ ಈಗ “ಮೆಟಾ” ಆಗಿದೆ. ಅಂದರೆ “ಆಚೆ” ಎಂದರ್ಥ. ಗೂಗಲ್ ಎಂಬ ಹೆಸರು ಸಾಮಾನ್ಯ ಗಣನೆಯನ್ನು ಮೀರುವ ಪ್ರಯತ್ನವಾಗಿದೆ: ಇದು ಸಂಖ್ಯೆ 1 ಮತ್ತು ನಂತರ 100 ಸೊನ್ನೆಗಳನ್ನು ಸೂಚಿಸುತ್ತದೆ. ಈ ಡಿಜಿಟಲ್ ಮೊಗಲ್‌ಗಳು ಸಂಪೂರ್ಣ ಮೆಗಾಲೊಮೇನಿಯಾಕ್ಸ್. ಅವರ ಅಧಿಕಾರವನ್ನು ಸೀಮಿತಗೊಳಿಸುವುದು ಚೀನಾದ ಶಕ್ತಿಯನ್ನು ಸೀಮಿತಗೊಳಿಸುವುದು ಅಷ್ಟೇ ಮುಖ್ಯ.

ವಿಬಿಂತಾ ಅಭಿಷೇಕ್ ಟ್ವೀಟ್:
Facebook just changed its name to Meta.
M = Manipulative
E = Election
T = Tampering
A = Apparatus

ಫೇಸ್‌ಬುಕ್ ತನ್ನ ಹೆಸರನ್ನು ಮೆಟಾ ಎಂದು ಬದಲಾಯಿಸಿಕೊಂಡಿದೆ.
M = ಕುಶಲತೆಯಿಂದ
E = ಚುನಾವಣೆ
T = ತಿರುಚುವ
A = ಉಪಕರಣ

ಮೆಟಾ ಪಿಆರ್
Rest assured, our decision to change the company’s name from #Facebook to #Meta does NOT mean we’ll be changing who we are or how we operate.

We’re the same shadowy, morally dubious tech company we’ve always been.

But hey, new name! #Metaverse

ಉಳಿದವೆಲ್ಲ ಖಚಿತಪಡಿಸುತ್ತೇವೆ, ಕಂಪೆನಿಯ ಹೆಸರನ್ನು #Facebookನಿಂದ #Meta ಗೆ ಬದಲಾಯಿಸುವ ನಮ್ಮ ನಿರ್ಧಾರವು ನಾವು ಯಾರೆಂಬುದನ್ನು ಅಥವಾ ನಾವು ಹೇಗೆ ಕಾರ್ಯ ನಿರ್ವಹಿಸುತ್ತೇವೆ ಎಂಬುದನ್ನು ಬದಲಾಯಿಸುತ್ತೇವೆ ಎಂದರ್ಥವಲ್ಲ.

ನಾವು ಯಾವಾಗಲೂ ಅದೇ ನೆರಳಿನ, ನೈತಿಕವಾಗಿ ಸಂಶಯಾಸ್ಪದ ಟೆಕ್ ಕಂಪನಿಯಾಗಿದ್ದೇವೆ.

ಆದರೆ ಹೇಯ್, ಹೊಸ ಹೆಸರು! #ಮೆಟಾವರ್ಸ್

ಇದನ್ನೂ ಓದಿ: Meta: ಫೇಸ್​ಬುಕ್ ಕಂಪನಿಯ ಹೊಸ ಹೆಸರು ಘೋಷಣೆ ಮಾಡಿದ ಮಾರ್ಕ್ ಜುಕರ್‌ಬರ್ಗ್