Sign In

By signing in or creating an account, you agree with Associated Broadcasting Company's Terms & Conditions and Privacy Policy.

PF Deposit: ಪಿಎಫ್​ ಠೇವಣಿ ಮೇಲೆ ಶೇ 8.5ರ ಬಡ್ಡಿಗೆ ಹಣಕಾಸು ಸಚಿವಾಲಯ ಅನುಮೋದನೆ

2020-21ನೇ ಸಾಲಿಗೆ ಪಿಎಫ್ ಮೇಲೆ ಶೇ 8.5ರಷ್ಟು ಬಡ್ಡಿ ಪಾವತಿಸುವ ಪ್ರಸ್ತಾವಕ್ಕೆ ಕೇಂದ್ರ ಹಣಕಾಸು ಸಚಿವಾಲಯವು ಒಪ್ಪಿಗೆ ಸೂಚಿಸಿದೆ. ಆ ಬಗ್ಗೆ ವಿವರ ಇಲ್ಲಿದೆ.

PF Deposit: ಪಿಎಫ್​ ಠೇವಣಿ ಮೇಲೆ ಶೇ 8.5ರ ಬಡ್ಡಿಗೆ ಹಣಕಾಸು ಸಚಿವಾಲಯ ಅನುಮೋದನೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Oct 29, 2021 | 5:22 PM

ಭವಿಷ್ಯ ನಿಧಿ (Provident Fund) ಠೇವಣಿಗಳ ಮೇಲೆ 2020-21ನೇ ಸಾಲಿಗೆ ಶೇಕಡಾ 8.5ರ ಬಡ್ಡಿಯನ್ನು ಜಮಾ ಮಾಡುವ ಕಾರ್ಮಿಕ ಸಚಿವಾಲಯದ ಪ್ರಸ್ತಾವವನ್ನು ಹಣಕಾಸು ಸಚಿವಾಲಯ ಅನುಮೋದಿಸಿದೆ. ಇದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್‌ಒ) 6 ಕೋಟಿ ಚಂದಾದಾರರಿಗೆ ಅನುಕೂಲ ಒದಗಿಸುತ್ತದೆ. ಹಣಕಾಸು ಸಚಿವಾಲಯದ ಒಪ್ಪಿಗೆಯು ಈ ಕಾರ್ಯವಿಧಾನದ ಔಪಚಾರಿಕತೆ ಆಗಿದೆ. ಆದರೆ ಬಡ್ಡಿದರಗಳನ್ನು EPFO ​​ಚಂದಾದಾರರಿಗೆ ವರ್ಗಾಯಿಸುವ ಮೊದಲು ಈ ಕ್ರಮ ಅವಶ್ಯಕವಾಗಿದೆ. ಕಾರ್ಮಿಕ ಕಾರ್ಯದರ್ಶಿ ಸುನಿಲ್ ಬರ್ತ್​ವಾಲ್ ಮಾತನಾಡಿ, “ಇಂದು ಹಣಕಾಸು ಸಚಿವಾಲಯದಿಂದ ಅನುಮೋದನೆಯನ್ನು ಸ್ವೀಕರಿಸಲಾಗಿದೆ. ಆದಷ್ಟು ಬೇಗ ಸೂಚನೆ ನೀಡಲಾಗುವುದು,” ಎಂದಿದ್ದಾರೆ. ಭವಿಷ್ಯ ನಿಧಿ ಸಂಸ್ಥೆಯು ಕಾರ್ಮಿಕ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದ ಅಡಿಯಲ್ಲಿ ಬರುತ್ತದೆ ಮತ್ತು ಇಪಿಎಫ್‌ಒ ಅದನ್ನು ಫಲಾನುಭವಿ ಖಾತೆಗೆ ಜಮಾ ಮಾಡಲು ಪ್ರಾರಂಭಿಸುವ ಮೊದಲು ವರ್ಷದ ಬಡ್ಡಿ ದರವನ್ನು ಸಚಿವಾಲಯವು ತಿಳಿಸಬೇಕು.

ಈ ಕ್ರಮವು ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 1,000 ಕೋಟಿ ರೂಪಾಯಿ ಮೊತ್ತಕ್ಕಿಂತ ಇಪಿಎಫ್‌ಒಗೆ 300 ಕೋಟಿ ರೂಪಾಯಿ ಹೆಚ್ಚಾಗುತ್ತದೆ. ಇಲ್ಲಿ ಉಲ್ಲೇಖಿಸಬೇಕಾದ ಅಂಶವೆಂದರೆ, ನಿವೃತ್ತಿ ನಿಧಿ ನಿಯಂತ್ರಣ ಸಂಸ್ಥೆಯು 2020-21ನೇ ಹಣಕಾಸು ವರ್ಷದಲ್ಲಿ ಇಪಿಎಫ್ ಬಡ್ಡಿ ದರವನ್ನು ಹಾಗೇ ಉಳಿಸಲಾಗಿದೆ. ಏಕೆಂದರೆ ಕೊವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಪಿಎಫ್​ ಠೇವಣಿ ಮಾಡುವುದಕ್ಕಿಂತ ಹೆಚ್ಚು ಹಿಂಪಡೆಯಲಾಗಿದೆ. ಕಳೆದ ವರ್ಷ ಕೊರೊನಾ ಹರಡಿದ ನಂತರ, ಇಪಿಎಫ್‌ಒ ಮಾರ್ಚ್ 2020ರಲ್ಲಿ ಪಿಎಫ್ ಬಡ್ಡಿದರವನ್ನು 2018-19 ರಲ್ಲಿ ಶೇಕಡಾ 8.65ರಿಂದ 2019-20ಕ್ಕೆ ಏಳು ವರ್ಷಗಳ ಕನಿಷ್ಠ ಶೇಕಡಾ 8.5ಕ್ಕೆ ಇಳಿಸಿತ್ತು. 2019-20ಕ್ಕೆ ಒದಗಿಸಲಾದ ಶೇ 8.5ರ ಬಡ್ಡಿದರವು 2012-13ನೇ ಇಸವಿಯಿಂದ ಈಚೆಗೆ ಅತ್ಯಂತ ಕಡಿಮೆಯಾಗಿದೆ ಎಂಬುದನ್ನು ಇಲ್ಲಿ ಗಮನಿಸಬೇಕು.

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಅಥವಾ ಸಣ್ಣ ಉಳಿತಾಯ ಯೋಜನೆಗಳು ಸೇರಿದಂತೆ ಇತರ ಸರ್ಕಾರಿ ಯೋಜನೆಗಳ ಬಡ್ಡಿದರವು ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿರುವಾಗ ಇಪಿಎಫ್‌ಒದಿಂದ ಹೆಚ್ಚಿನ ಬಡ್ಡಿದರವನ್ನು ಘೋಷಿಸಿರುವ ಬಗ್ಗೆ ಹಣಕಾಸು ಸಚಿವಾಲಯ ಅಸಮಾಧಾನವನ್ನು ತೋರಿಸಿದೆ ಎಂದು ವರದಿಯಾಗಿದೆ. ಅಲ್ಲದೆ, ವಿತ್ತ ಸಚಿವಾಲಯದ ಅಧಿಕಾರಿಗಳು ಶೇ 8.5ರ ಬಡ್ಡಿದರದ ಮೇಲೆ EPFO​​ನೊಂದಿಗೆ ಕಡಿಮೆಯಾದ ಮಿಗತೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. EPFO ಹಿಂದಿನ ಹಣಕಾಸು ವರ್ಷದಲ್ಲಿ ಸುಮಾರು 70,300 ಕೋಟಿ ರೂಪಾಯಿಗಳ ಆದಾಯವನ್ನು ಅಂದಾಜಿಸಿತ್ತು, ಅದರಲ್ಲಿ ತನ್ನ ಈಕ್ವಿಟಿ ಹೂಡಿಕೆಗಳ ಮಾರಾಟದಿಂದ 4,000 ಕೋಟಿ ರೂ. ಮತ್ತು ಸಾಲದಿಂದ 65,000 ಕೋಟಿ ರೂ. ಅಂದಾಜಿಸಿತ್ತು.

ಇದರ ಆಧಾರದ ಮೇಲೆ ಕೇಂದ್ರೀಯ ಮಂಡಳಿಯ ಟ್ರಸ್ಟಿಗಳು-ದರಗಳ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯು FY21ಕ್ಕೆ ಶೇ 8.5 ಬಡ್ಡಿದರವನ್ನು ಸೂಚಿಸಿದ್ದಾರೆ. EPFO 6 ಕೋಟಿಗಿಂತಲೂ ಹೆಚ್ಚು ಸಕ್ರಿಯ ಚಂದಾದಾರರ ಮೂಲವನ್ನು ಹೊಂದಿದೆ ಮತ್ತು ಪ್ರತಿ ವರ್ಷ ಅದು ತನ್ನ ವಾರ್ಷಿಕ ಸಂಚಯಗಳ ಶೇ 15ರಷ್ಟನ್ನು ಈಕ್ವಿಟಿಯಲ್ಲಿ ಮತ್ತು ಉಳಿದವು ಸಾಲದ ಸಾಧನಗಳಲ್ಲಿ (Debt Instrument) ತೊಡಗಿಸಲಾಗುತ್ತದೆ. ಇಪಿಎಫ್‌ಒ 2020-21ರ ಹಣಕಾಸು ವರ್ಷದ ಬಡ್ಡಿಯನ್ನು ಶೀಘ್ರದಲ್ಲೇ ಚಂದಾದಾರರ ಖಾತೆಗಳಿಗೆ ಜಮಾ ಮಾಡುವ ಸಾಧ್ಯತೆಯಿದೆ ಎಂದು ಇಪಿಎಫ್​ಒ ಈ ವರ್ಷದ ಆಗಸ್ಟ್‌ನಲ್ಲಿ ಟ್ವೀಟ್‌ನಲ್ಲಿ ಉಲ್ಲೇಖಿಸಿದೆ. ಚಂದಾದಾರರು ಪೋಸ್ಟ್ ಮಾಡಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಇಪಿಎಫ್‌ಒ ಪ್ರಕ್ರಿಯೆಯು ಪೈಪ್‌ಲೈನ್‌ನಲ್ಲಿದೆ ಮತ್ತು ಶೀಘ್ರದಲ್ಲೇ ಅದನ್ನಿಲ್ಲಿ ತೋರಿಸಬಹುದು ಎಂದು ಉಲ್ಲೇಖಿಸಿದೆ.

ಇದನ್ನೂ ಓದಿ: PF Balance Check: ದೀಪಾವಳಿಗೂ ಮುನ್ನ 6 ಕೋಟಿ ಖಾತೆಗಳಿಗೆ ಬರಲಿದೆ ಶೇ 8.5ರ ಪಿಎಫ್​ ಬಡ್ಡಿ; ಬ್ಯಾಲೆನ್ಸ್ ಚೆಕ್ ಹೇಗೆ?

ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಕೇಕ್ ಕಟ್ ಮಾಡಿ ಮೊದಲ ಪೀಸನ್ನು ಶಿವಕುಮಾರ್​ಗೆ ನೀಡಿದ ಸಿದ್ದರಾಮಯ್ಯ
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ