
ನವದೆಹಲಿ, ಜೂನ್ 13: ಅಹ್ಮದಾಬಾದ್ನಲ್ಲಿ ನಿನ್ನೆ ಏರ್ ಇಂಡಿಯಾದ ಬೋಯಿಂಗ್ ಡ್ರೀಮ್ಲೈನರ್ 787-8 ವಿಮಾನ (Ahmedabad plane crash) ಅಪಘಾತಗೊಂಡಿದೆ. ಇದಕ್ಕೆ ಏನು ಕಾರಣ ಎಂದು ಸ್ಪಷ್ಟವಾಗಿ ಗೊತ್ತಾಗಿಲ್ಲ. ತನಿಖೆ ನಡೆಸಲಾಗುತ್ತದೆ. ತನಿಖೆ ಮುಗಿಯುವವರೆಗೂ ಭಾರತದಲ್ಲಿ ಆಪರೇಟ್ ಆಗುತ್ತಿರುವ ಎಲ್ಲಾ ಬೋಯಿಂಗ್ ಡ್ರೀಮ್ಲೈನರ್ ವಿಮಾನಗಳನ್ನು ನಿಲ್ಲಿಸಲು ಆಲೋಚಿಸಲಾಗುತ್ತಿದೆ. ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ.
ಬೋಯಿಂಗ್ ಕಂಪನಿಯ ಎಂಜಿನಿಯರುಗಳು ಈ ಎಲ್ಲಾ ಡ್ರೀಮ್ಲೈನರ್ ಸರಣಿಯ ವಿಮಾನಗಳನ್ನು ತಪಾಸಿಸಲಿದ್ದಾರೆ. ವಿಮಾನಗಳು ಯಾವ ಸಮಸ್ಯೆ ಹೊಂದಿಲ್ಲ ಎಂದು ಖಚಿತಪಡಿಸಿಕೊಳ್ಳುವ ಉದ್ದೇಶ ಇದು. ಕೇಂದ್ರ ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿ ತನಿಖೆ ನಡೆಸಲು ಬಿಟ್ಟಿದೆ.
ಇದನ್ನೂ ಓದಿ: ಒಂದು ವಾರದ ಹಿಂದೆಯೇ ವಿಮಾನ ಅಪಘಾತದ ಭವಿಷ್ಯ ನುಡಿದಿದ್ದ ಜ್ಯೋತಿಷಿ!
ಇದೇ ವೇಳೆ, ಏರ್ ಇಂಡಿಯಾ ಸಂಸ್ಥೆ ತನ್ನ ವಿಮಾನಗಳ ಮೈಂಟೆನೆನ್ಸ್ಗೆ ಯಾವ ಕ್ರಮ ಅನುಸರಿಸುತ್ತದೆ ಎನ್ನುವುದನ್ನೂ ತನಿಖೆ ಮಾಡಲಾಗುತ್ತದೆ. ಎಷ್ಟು ನಿಯಮಿತವಾಗಿ ವಿಮಾನವನ್ನು ಸರ್ವಿಸ್ ಮಾಡಲಾಗುತ್ತಿದೆ ಎಂಬುದನ್ನು ನೋಡಲಾಗುತ್ತದೆ. ಇದು ತೃಪ್ತಿದಾಯಕ ಅಲ್ಲ ಎಂದಲ್ಲಿ ಏರ್ ಇಂಡಿಯಾ ವಿರುದ್ಧ ಕಠಿಣ ಕ್ರಮ ಜರುವ ಸಾಧ್ಯತೆಯೂ ಇರುತ್ತದೆ.
ಅಹ್ಮದಾಬಾದ್ನಲ್ಲಿ ಅಪಘಾತಕ್ಕೊಳಗಾದ ಬೋಯಿಂಗ್ 787 ಡ್ರೀಮ್ಲೈನರ್ ಸರಣಿಯ ವಿಮಾನಗಳು ಉತ್ಕೃಷ್ಟ ಗುಣಮಟ್ಟದವು ಎಂದು ಪರಿಗಣಿತವಾಗಿವೆ. ಇವು ಹೆಚ್ಚು ಅಗಲ ಇರುತ್ತವೆ. ಅಂತಾರಾಷ್ಟ್ರೀಯ ಫ್ಲೈಟ್ಗಳಲ್ಲಿ ಇವನ್ನು ಹೆಚ್ಚಾಗಿ ಬಳಸಲಾಗುತ್ತದೆ. ಈ ಡ್ರೀಮ್ಲೈನರ್ ಸರಣಿಯಲ್ಲಿ 787-8, 787-9, ಮತ್ತು 787-10 ಮಾಡಲ್ಗಳಿವೆ. 787-8 ವಿಮಾನಗಳಲ್ಲಿ ಕಡಿಮೆ ಜನರ ಸಾಮರ್ಥ್ಯ ಇರುತ್ತದೆ. ಈ ಡ್ರೀಮ್ಲೈನ್ ವಿಮಾನಗಳಲ್ಲಿ ಬಹಳ ಅಗುರವಾದ ವಸ್ತುಗಳನ್ನು ಬಳಸಲಾಗಿರುವುದರಿಂದ ಇಂಧನ ಕ್ಷಮತೆ ಶೇ 20ರಷ್ಟು ಹೆಚ್ಚಿರುತ್ತದೆ. ಅದಕ್ಕೆ ಅನುಗುಣವಾಗಿ ವಿಶೇಷ ಡಿಸೈನ್ ಕೂಡ ಇದೆ.
ಇದನ್ನೂ ಓದಿ: ಅಹ್ಮದಾಬಾದ್ ವಿಮಾನ ದುರಂತ; ಏರ್ ಇಂಡಿಯಾ, ವಿಮಾ ಕಂಪನಿಗಳಿಗೆ ನಷ್ಟವೆಷ್ಟು? ಪ್ರಯಾಣಿಕರಿಗೆ ಪರಿಹಾರವೆಷ್ಟು? ಇಲ್ಲಿದೆ ಡೀಟೇಲ್ಸ್
2011ರಲ್ಲಿ ಹಾಂಕಂಗ್ನಿಂದ ಟೋಕಿಯೋದ ನಾರಿಟಾ ಏರ್ಪೋರ್ಟ್ಗೆ ಇದರ ಮೊದಲ ಕಮರ್ಷಿಯಲ್ ಫ್ಲೈಟ್ ನಡೆದಿತ್ತು. ಕಳೆದ 14 ವರ್ಷದಲ್ಲಿ ಈ ಡ್ರೀಮ್ಲೈನರ್ ವಿಮಾನಗಳು ತಾಂತ್ರಿಕ ದೋಷದಿಂದ ದೊಡ್ಡ ಅಪಘಾತಕ್ಕೆ ಒಳಗಾದ ಘಟನೆಯೇ ಇರಲಿಲ್ಲ. ಅಹ್ಮದಾಬಾದ್ನದ್ದೇ ಮೊದಲ ಅಪಘಾತ ಘಟನೆ ಎಂದು ಹೇಳಲಾಗುತ್ತಿದೆ.
ಈ 14 ವರ್ಷದಲ್ಲಿ ಬೋಯಿಂಗ್ ಕಂಪನಿಯು 2,500ಕ್ಕೂ ಹೆಚ್ಚು ಡ್ರೀಮ್ಲೈನರ್ ವಿಮಾನಗಳನ್ನು ಮಾರಾಟ ಮಾಡಿದೆ. ಏರ್ ಇಂಡಿಯಾ ಕಂಪನಿ ಈ 47 ವಿಮಾನಗಳನ್ನು ಖರೀದಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ