ಮೆಷಿನ್​ಗಳು ಮನುಷ್ಯನ ಮಟ್ಟದ ಬುದ್ಧಿವಂತಿಕೆ ಹೊಂದಲು ಇನ್ನೆಷ್ಟು ವರ್ಷ ಬೇಕು? ಎಜಿಐ ಪಿತಾಮಹ ಬೆನ್ ಗರ್ಟ್ಜೆಲ್ ಹೇಳೋದಿದು

Human level AI: ಮನುಷ್ಯರ ಬುದ್ಧಿವಂತಿಕೆ ಮಟ್ಟವನ್ನು ಸಾಧಿಸಲು ಎಐಗೆ ಹೆಚ್ಚು ವರ್ಷ ಬೇಕಾಗಿಲ್ಲ ಎಂದು ಎಜಿಐನ ಪಿತಾಮನ ಎನ್ನಲಾದ ಬೆನ್ ಗರ್ಟ್ಜೆಲ್ ತಿಳಿಸಿದ್ದಾರೆ. ಹ್ಯೂಮನ್ ಇಂಟೆಲಿಜೆನ್ಸ್​ನ ಎಐ ಬಂದು, ಅದು ಕೂಡಲೇ ಅಳವಡಿಕೆಯಾಗಿ ಎಲ್ಲರ ಕೆಲಸಗಳು ಹೋಗುತ್ತವೆ ಎನ್ನುವ ಭಯವನ್ನು ಗರ್ಟ್ಜೆಲ್ ಅಲ್ಲಗಳೆದಿದ್ದಾರೆ. ಜನರೇಟಿವ್ ಎಐ ಅನ್ನು 2022ರಿಂದ ಕ್ರಮೇಣವಾಗಿ ಅಳವಡಿಕೆ ಮಾಡಿದಂತೆ ಸೂಪರ್ ಇಂಟೆಜೆನ್ಸ್​ನ ಎಐ ಕೂಡ ಹಂತ ಹಂತವಾಗಿ ಅಳವಡಿಕೆಯಾಗುತ್ತಂತೆ.

ಮೆಷಿನ್​ಗಳು ಮನುಷ್ಯನ ಮಟ್ಟದ ಬುದ್ಧಿವಂತಿಕೆ ಹೊಂದಲು ಇನ್ನೆಷ್ಟು ವರ್ಷ ಬೇಕು? ಎಜಿಐ ಪಿತಾಮಹ ಬೆನ್ ಗರ್ಟ್ಜೆಲ್ ಹೇಳೋದಿದು
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್
Image Credit source: Shutterstock

Updated on: Apr 19, 2026 | 3:42 PM

ನವದೆಹಲಿ, ಏಪ್ರಿಲ್ 19: ಎಲ್ಲೆಡೆ ಎಐನದ್ದೇ ಸುದ್ದಿ. ಎಲ್ಲೇ ಕೆಲಸ ಹೋದರೂ ಅದು ಎಐ ಎಫೆಕ್ಟ್ ಎನ್ನಲಾಗುತ್ತಿದೆ. ಯಂತ್ರದ ಬುದ್ಧಿವಂತಿಕೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಸಂಚಲನ ಸೃಷ್ಟಿಸುತ್ತೆ ಎನ್ನಲಾಗುತ್ತಿದೆ. ಅದರಲ್ಲೂ ಎಜಿಐ (AGI- ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್) ಆಗಮನವಾಗಿಬಿಟ್ಟರೆ ಮನುಷ್ಯರ ಕೆಲಸಗಳನ್ನೆಲ್ಲಾ ಯಂತ್ರಗಳು, ರೋಬೋಗಳು, ಇಂಟೆಲಿಜೆಂಟ್ ಸಾಫ್ಟ್​ವೇರ್​ಗಳೇ ಮಾಡಿ ಮುಗಿಸುತ್ತವೆ ಎಂದು ಪರಿಣಿತರುಗಳೇ ಹೇಳುತ್ತಿದ್ದಾರೆ. ಆದರೆ, ಮನುಷ್ಯರ ಬುದ್ಧಿಮತ್ತೆಯ ಮಟ್ಟವನ್ನು ಎಐಗೆ ಮುಟ್ಟಲು ಸಾಧ್ಯವಾಗಿಲ್ಲ. ಜನರೇಟಿವ್ ಎಐ ಅಥವಾ ಎಜಿಐನ ಪಿತಾಮಹ ಎಂದು ಖ್ಯಾತರಾಗಿರುವ ಬೆನ್ ಗರ್ಟ್ಜೆಲ್ (Ben Goertzel) ಪ್ರಕಾರ ಯಂತ್ರಗಳಿಗೆ ಮನುಷ್ಯರ ಮಟ್ಟದ ಬುದ್ಧಿಮತ್ತೆ ತಲುಪಲು ಹೆಚ್ಚು ಕಾಲ ಬೇಕಾಗಿಲ್ಲವಂತೆ.

ಮನುಷ್ಯರ ಬುದ್ಧಮತ್ತೆಯನ್ನು ಎಐ ತಲುಪಲು ಇನ್ನು ಕೇವಲ 2-3 ವರ್ಷ ಸಾಕು ಅಷ್ಟೇ ಎಂದು ಎಐ ರಿಸರ್ಚರ್ ಆಗಿರುವ ಬೆನ್ ಗರ್ಟ್ಜೆಲ್ ಹೇಳಿದ್ದರೆ. ಈ ಹಿಂದೆ ಓಪನ್​ಎಐ ಸಿಇಒ ಸ್ಯಾಮ್ ಆಲ್ಟ್​ಮ್ಯಾನ್ ಕೂಡ ಇದೇ ಟೈಮ್​ಫ್ರೇಮ್ ತಿಳಿಸಿದ್ದರು.

ಇದನ್ನೂ ಓದಿ: ಫಾರೆಕ್ಸ್ ರಿಸರ್ವ್ಸ್: ಮತ್ತೆ 700 ಬಿಲಿಯನ್ ಡಾಲರ್ ಮೈಲಿಗಲ್ಲು ಮುಟ್ಟಿದ ಭಾರತ

‘ಒಮ್ಮೆ ನಿಮಗೆ ಮನುಷ್ಯ ಮಟ್ಟದ ಎಜಿಐ ಸಿದ್ಧವಾಯಿತೆಂದರೆ, ಮಾನವನ ಬಹುತೇಕ ಎಲ್ಲಾ ಉದ್ಯೋಗಗಳು ನಿರರ್ಥಕ ಎನಿಸುತ್ತವೆ’ ಎಂದು ಗರ್ಟ್ಜೆಲ್ ಎಚ್ಚರಿಕೆ ನೀಡಿದ್ದಾರೆ. ಹಾಗೆಯೇ, ಹ್ಯೂಮನ್ ಇಂಟೆಲಿಜೆನ್ಸ್ ಮೀರಿಸುವ ಎಜಿಐ ಬಂದು ಬಿಟ್ಟರೆ ಅದು ಒಮ್ಮೆಗೇ ಅಳವಡಿಕೆ ಆಗದು. 2022ರಿಂದ ಜನರೇಟಿವ್ ಎಐ ಅನ್ನು ಕ್ರಮೇಣವಾಗಿ ಅಳವಡಿಲಾದಂತೆ, ಹಂತ ಹಂತವಾಗಿ ನಡೆಯುತ್ತದೆ ಎಂದು ಎಐ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಉಳಿಯುವ ಮತ್ತು ಅಳಿಯುವ ಉದ್ಯೋಗಗಳು

ಫೋರ್ಬ್ಸ್​ನ ಪೋಡ್​ಕ್ಯಾಸ್ಟ್​ವೊಂದರಲ್ಲಿ ಮಾತನಾಡುತ್ತಿದ್ದ ಬೆನ್ ಗರ್ಟ್ಜೆಲ್ ಅವರು ಎಐನಿಂದ ಬೇಗ ಹಾನಿಯಾಗುವ ಕೆಲಸಗಳು, ಹಾಗೂ ಎಐ ನಡುವೆಯೂ ಉಳಿಯಬಲ್ಲ ಕೆಲಸಗಳು ಯಾವುವೆಂದು ತಿಳಿಸುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ: ಅಕ್ಷಯ ತೃತೀಯ ಸ್ಪೆಷಲ್: ಒಡವೆ, ಡಿಜಿಟಲ್ ಗೋಲ್ಡ್, ಇಟಿಎಫ್- ಬಂಗಾರದ ಲಾಭ ಪಡೆಯಲು ಯಾವುದು ಬೆಸ್ಟ್?

ವಕೀಲರು, ಗ್ರಾಫಿಕ್ ಡಿಸೈನರ್​ಗಳು ಮೊದಲಾದವರು ಎಐನಿಂದ ಬೇಗ ಹೊಡೆತ ತಿನ್ನಬಹುದು. ಆದರೆ, ಪ್ಲಂಬರ್​ಗಳು, ಎಲೆಕ್ಟ್ರಿಶಿಯನ್​ಗಳು ಮತ್ತು ಶಿಕ್ಷಕರು ಮೊದಲಾದವರು ಮುಂದೆಯೂ ಅಗತ್ಯ ಹೊಂದಿರುತ್ತಾರೆ. ಅದರಲ್ಲೂ ಶಿಕ್ಷಣಕ್ಕೆ ಮಾನವೀಯ ಸ್ಪರ್ಶ ಬಹಳ ಅಗತ್ಯ ಇರುವುದರಿಂದ ಶಿಕ್ಷಕ ಉದ್ಯೋಗ ಹೆಚ್ಚು ಕಾಲ ಪ್ರಸ್ತುತದಲ್ಲಿ ಇರಬಹುದು ಎಂಬುದು ಬೆನ್ ಗರ್ಟ್ಜೆಲ್ ಅನಿಸಿಕೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:41 pm, Sun, 19 April 26

Follow Us