AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಫ್​ಲೈನ್ ಫೀಚರ್, ಎಐ ತಂತ್ರಜ್ಞಾನ ಸೇರಿದಂತೆ ಯುಪಿಐ ಪಾವತಿ ವ್ಯವಸ್ಥೆಯಲ್ಲಿ 3 ಗಮನಾರ್ಹ ಫೀಚರ್ ಘೋಷಿಸಿದ ಆರ್​ಬಿಐ

UPI New Features: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರು ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಿಕ ಎನಿಸುವ ಹೊಸ ಫೀಚರ್​ಗಳನ್ನು ಘೋಷಸಿದ್ದಾರೆ. ಇದರಲ್ಲಿ ಯುಪಿಐ ಲೈಟ್ ಅನ್ನು ಆಫ್​ಲೈನ್​ನಲ್ಲೂ ಬಳಸುವುದು ಹಾಗೂ ಯುಪಿಐ ವಹಿವಾಟಿನಲ್ಲಿ ಎಐ ತಂತ್ರಜ್ಞಾನ ಬಳಸುವುದೂ ಸೇರಿವೆ.

ಆಫ್​ಲೈನ್ ಫೀಚರ್, ಎಐ ತಂತ್ರಜ್ಞಾನ ಸೇರಿದಂತೆ ಯುಪಿಐ ಪಾವತಿ ವ್ಯವಸ್ಥೆಯಲ್ಲಿ 3 ಗಮನಾರ್ಹ ಫೀಚರ್ ಘೋಷಿಸಿದ ಆರ್​ಬಿಐ
ಯುಪಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 10, 2023 | 4:01 PM

ನವದೆಹಲಿ, ಆಗಸ್ಟ್ 10: ಯುಪಿಐ ಪಾವತಿ ವ್ಯವಸ್ಥೆಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ (AI Technology) ಅಳವಡಿಕೆ ಸೇರಿದಂತೆ ಮೂರು ಹೊಸ ಅಂಶಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದೆ. ಆಗಸ್ಟ್ 8ರಿಂದ 10ರವರೆಗೆ 3 ದಿನಗಳ ಕಾಲ ನಡೆದ ಆರ್​ಬಿಐನ ಎಂಪಿಸಿ ಸಭೆಯಲ್ಲಿ ಯುಪಿಐ ಬಲಪಡಿಸುವ ನಿಟ್ಟಿನಲ್ಲಿ ಹೊಸ ಫೀಚರ್​ಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಇಂದು (ಆಗಸ್ಟ್ 10) ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈ ವಿಚಾರವನ್ನು ಪ್ರಕಟಿಸಿದ್ದಾರೆ. ಯುಪಿಐ ಪಾವತಿಯಲ್ಲಿ ಎಐ ತಂತ್ರಜ್ಞಾನದ ವ್ಯವಸ್ಥೆ, ಯುಪಿಐ ಲೈಟ್​ನ ಆಫ್​ಲೈನ್ ಬಳಕೆ ಹಾಗೂ ಯುಪಿಐ ಲೈಟ್​ನ ವಹಿವಾಟು ಮಿತಿ ಹೆಚ್ಚಳದ ನಿರ್ಧಾರಗಳನ್ನು ಕೈಗೊಳ್ಳಲಾಗಿರುವುದು ತಿಳಿದುಬಂದಿದೆ. ಈ ಮೂರು ಅಂಶಗಳು ಯುಪಿಐ ಪಾವತಿ ವ್ಯವಸ್ಥೆ ಹಾಗೂ ಯುಪಿಐ ಲೈಟ್​ನ ಸ್ವರೂಪದಲ್ಲಿ ಗಮನಾರ್ಹ ಬದಲಾವಣೆ ತರುವ ನಿರೀಕ್ಷೆ ಇದೆ. ಜನಸಾಮಾನ್ಯರ ಹಣಕಾಸು ವಹಿವಾಟು ಕಾರ್ಯವೂ ಇನ್ನಷ್ಟು ಸುಗಮಗೊಳ್ಳಲಿದೆ.

ಯುಪಿಐ ಲೈಟ್​ನ ಒಂದು ವಹಿವಾಟು ಮಿತಿ 500 ರೂಗೆ ಹೆಚ್ಚಳ

ಯುಪಿಐ ಲೈಟ್ ಫೀಚರ್ ಬಗ್ಗೆ ನಿಮಗೆ ಗೊತ್ತಿರಬಹುದು. ಎನ್​ಪಿಸಿಐ ಅಭಿವೃದ್ಧಿಪಡಿಸಿರುವ ಯುಪಿಐ ಲೈಟ್​ನಲ್ಲಿ ಸಣ್ಣ ಮೊತ್ತದ ವಹಿವಾಟು ನಡೆಸಬಹುದು. 200 ರೂವರೆಗಿನ ಮೊತ್ತದ ವಹಿವಾಟನ್ನು ಯುಪಿಐ ಲೈಟ್ ಮೂಲಕ ಮಾಡಬಹುದು. ಈಗ ಈ ಮಿತಿಯನ್ನು 500 ರೂಗೆ ಏರಿಸಲಾಗಿದೆ. ಅಂದರೆ ನೀವು ವರ್ತಕರಿಗೆ 500 ರೂ ಒಳಗಿನ ಹಣದ ಪಾವತಿಯನ್ನು ಯುಪಿಐ ಲೈಟ್ ಮೂಲಕ ಮಾಡಬಹುದು. ಆದರೆ, ಯುಪಿಐ ಲೈಟ್​ನ ಖಾತೆಯಲ್ಲಿ ಇರಿಸಬಹುದಾದ ಗರಿಷ್ಠ ಹಣದ ಮಿತಿ 2,000 ರೂನಲ್ಲೇ ಮುಂದುವರಿಯುತ್ತದೆ.

ಸದ್ಯ, ಭೀಮ್ (BHIM), ಪೇಟಿಎಂ, ಫೋನ್ ಪೇ, ಗೂಗಲ್ ಪೇ ಆ್ಯಪ್​ಗಳಲ್ಲಿ ಯುಪಿಐ ಲೈಟ್ ಫೀಚರ್ ಇದೆ.

ಇದನ್ನೂ ಓದಿ: ಹೆಚ್ಚುವರಿ ಕ್ಯಾಷ್ ರಿಸರ್ವ್ ರೇಷಿಯೋ ಶೇ 10ಕ್ಕೆ ನಿಗದಿ ಮಾಡಿದ ಆರ್​ಬಿಐ; ಷೇರುಪೇಟೆ ಕಂಗಾಲಾಗಿದ್ಯಾಕೆ? ಸಿಆರ್​ಆರ್ ಏರಿಕೆಯ ಪರಿಣಾಮವೇನು?

ಆಫ್​ಲೈನ್ ಯುಪಿಐ ಪೇಮೆಂಟ್

ಯುಪಿಐ ಲೈಟ್ ಫೀಚರ್ ಅನ್ನು ಆರ್​ಬಿಐ ಗಂಭೀರವಾಗಿ ಪರಿಗಣಿಸಿದಂತಿದೆ. ಇಂಟರ್ನೆಟ್ ಇಲ್ಲದೆಯೂ ಯುಪಿಐ ಲೈಟ್ ಮೂಲಕ ಹಣದ ಪಾವತಿ ಸಾಧ್ಯವಾಗುವಂತೆ ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ನಿಯರ್ ಫೀಲ್ಡ್ ಕಮ್ಯೂನಿಕೇಶನ್ (NFC) ತಂತ್ರಜ್ಞಾನದ ಸಹಾಯದಿಂದ ಆಫ್​ಲೈನ್​ನಲ್ಲೂ ಹಣದ ಪಾವತಿ ಮಾಡಬಹುದು. ಇಂಟರ್ನೆಟ್ ಸಂಪರ್ಕ ದುರ್ಬಲ ಇದ್ದಾಗ, ಅಥವಾ ಇಂಟರ್ನೆಟ್ ಸಂಪರ್ಕವೇ ಇಲ್ಲದಿದ್ದಾಗ ಹೆಚ್ಚು ರಗಳೆ ಇಲ್ಲದೇ ಹಣ ಪಾವತಿ ಮಾಡಬಹುದು. ಯುಪಿಐ ಲೈಟ್​ನಲ್ಲಿ ಈ ಎನ್​ಎಫ್​ಸಿ ತಂತ್ರಜ್ಞಾನದ ಅಳವಡಿಕೆಯಾಗಲಿದೆ.

ಯುಪಿಐನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ಅಳವಡಿಕೆ

ಯುಪಿಐನಲ್ಲಿ ಸಂವಾದನೀಯ ಪಾವತಿ ಅಥವಾ ಕಾನ್ವರ್ಸೇಶನಲ್ ಪೇಮೆಂಟ್ಸ್ ಎಂಬ ಹೊಸ ಫೀಚರ್ ಅಳವಡಿಸಲು ಆರ್​ಬಿಐ ಯೋಜಿಸಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಶಕ್ತಿ ಇರುವ ಸಿಸ್ಟಂ ಸಹಾಯದಿಂದ ಸಂವಾದದ ಮೂಲಕ ಹಣದ ವಹಿವಾಟು ನಡೆಸಲು ಅನುವು ಮಾಡಿಕೊಡುತ್ತದೆ ಈ ಫೀಚರ್.

ಇದನ್ನೂ ಓದಿ: ಗ್ರಾಹಕನೇ ಕಿಂಗ್; ಫ್ಲೋಟಿಂಗ್ ರೇಟ್ ಮತ್ತು ಫಿಕ್ಸೆಡ್ ಬಡ್ಡಿದರ ವಿಚಾರದಲ್ಲಿ ಆರ್​ಬಿಐ ತರಲಿದೆ ಮಹತ್ವದ ನಿಯಮ

ಸ್ಮಾರ್ಟ್ ಫೋನ್ ಮಾತ್ರವಲ್ಲದೇ ಫೀಚರ್ ಫೋನ್​ನಲ್ಲೂ ಇದು ಲಭ್ಯ ಇರಲಿದೆ. ಆರಂಭಿಕ ಪ್ರಯೋಗದಲ್ಲಿ ಇದು ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸಂವಾದಕ್ಕೆ ಅವಕಾಶ ಇರುತ್ತದೆ. ಮುಂಬರುವ ದಿನಗಳಲ್ಲಿ ಕನ್ನಡವೂ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲೂ ಇದರ ಸೇವೆ ಲಭ್ಯ ಇರುತ್ತದೆ ಎಂದು ಆರ್​ಬಿಐ ಹೇಳಿದೆ.

ಹಿರಿಯ ನಾಗರಿಕರು, ವಿಶೇಷ ಚೇತನದ ವ್ಯಕ್ತಿಗಳಿಗೆ ಇದು ಬಹಳ ಉಪಯೋಗಕ್ಕೆ ಬರಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮಂಗಳೂರು: ರಹಿಮಾನ್ ಶವಯಾತ್ರೆಯ ವೇಳೆ ಯುವಕರ ದಾಂಧಲೆ, ವೀಡಿಯೋ ವೈರಲ್
ಮಂಗಳೂರು: ರಹಿಮಾನ್ ಶವಯಾತ್ರೆಯ ವೇಳೆ ಯುವಕರ ದಾಂಧಲೆ, ವೀಡಿಯೋ ವೈರಲ್
VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್