ಹೋಳಿ ಆಡಿ ಕೊಳೆಯಾದ ಬಟ್ಟೆಗಳನ್ನು ಹೀಗೆ ಸ್ವಚ್ಛಗೊಳಿಸಿ
By TV9 Web Team
ಭಾರ್ತಿ ಏರ್ಟೆಲ್ ಸಂಸ್ಥೆ (Bharti Airtel) ಇತ್ತೀಚಿನ ಕೆಲ ತಿಂಗಳುಗಳಿಂದ ರೀಚಾರ್ಜ್ ಪ್ಲಾನ್ಗಳನ್ನು ಪರಿಷ್ಕರಿಸಿದೆ. ಇದೇ ಹಾದಿಯಲ್ಲಿ 99 ರೂ ಅನ್ಲಿಮಿಟೆಡ್ ಡಾಟಾ ಪ್ಲಾನ್ (Unlimited Data Plan) ಬಿಡುಗಡೆ ಮಾಡಿದೆ. ವರ್ಷದ ಹಿಂದಿನವರೆಗೂ 99 ರೂ ಪ್ಲಾನ್ ಅನ್ನು ಏರ್ಟೆಲ್ ಹೊಂದಿತ್ತಾದರೂ ಅದನ್ನು ಹಿಂಪಡೆಯಲಾಗಿತ್ತು. ಇದೀಗ ಮತ್ತೆ 99 ರೂ ಪ್ಲಾನ್ ಬಂದಿದೆ. ಆದರೆ, ಹಿಂದೆ ಇದ್ದ 99 ರೂ ಪ್ಲಾನ್ ಅಲ್ಲ. ಈಗ ಅನ್ಲಿಮಿಟೆಡ್ ಡಾಟಾ ಪ್ಯಾಕ್ ಒದಗಿಸಲಾಗಿದೆ.
99 ರೂ ರೀಚಾರ್ಜ್ ಪ್ಲಾನ್ ಅಲ್ಲ. ಇದರ ವ್ಯಾಲಿಡಿಟಿ ಅವಧಿ ಒಂದು ದಿನ ಮಾತ್ರ. ಆ್ಯಡ್ ಆನ್ ಆಗಿ ಈ ಪ್ಲಾನ್ ಬಳಸಬಹುದು. ಈಗಾಗಲೇ ಬೇರೆ ಆಕ್ಟಿವ್ ಪ್ಲಾನ್ಗಳನ್ನು ಹೊಂದಿದ್ದು ನಿತ್ಯದ ಡಾಟಾ ಮಿತಿ ಮುಗಿದಿದ್ದಾಗ 99 ರೂ ರೀಚಾರ್ಜ್ ಮಾಡಿಸಿದರೆ ಡಾಟಾ ಬಳಕೆ ಮುಂದುವರಿಸಬಹುದು.
ಇಲ್ಲಿ ಅನ್ಲಿಮಿಟೆಡ್ ಡಾಟಾ ಎಂದು ಹೇಳಲಾಗಿದ್ದರೂ 30ಜಿಬಿವರೆಗೂ ಡಾಟಾವನ್ನು ಬಳಸಬಹುದು. ಆ ಹೆಚ್ಚುವರಿ 30 ಜಿಬಿ ಡಾಟಾ ಬಳಕೆ ಮುಗಿದ ಬಳಿಕ ಡಾಟಾ ಸ್ಪೀಡ್ 64ಕೆಬಿಪಿಎಸ್ಗೆ ಇಳಿಯುತ್ತದೆ.
ಇದನ್ನೂ ಓದಿ: ಸ್ಟಾರ್ಟಪ್ಗೆ ಪೂರಕ ವಾತಾವರಣ; ಜಾಗತಿಕ ರ್ಯಾಂಕಿಂಗ್ನಲ್ಲಿ ಬೆಂಗಳೂರಿಗೆ 8ನೇ ಸ್ಥಾನ
ಭಾರತದ ಮೂರನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾ ತನ್ನ ಗ್ರಾಹಕರಿಗೆ ಸ್ವಾತಂತ್ರ್ಯೋತ್ಸವ ನಿಮಿತ್ತ ಭರ್ಜರಿ ಕೊಡುಗೆಗಳನ್ನು ಕೊಟ್ಟಿದೆ. 199 ರೂ ಹಾಗೂ ಅದಕ್ಕಿಂತಲೂ ಹೆಚ್ಚು ಮೌಲ್ಯದ ರೀಚಾರ್ಜ್ಗಳಿಗೆ 50ಜಿಬಿಯಷ್ಟು ಹೆಚ್ಚುವರಿ ಡೇಟಾ ಒದಗಿಸುತ್ತದೆ.
ವೊಡಾಫೋನ್ ಐಡಿಯಾ ಕೆಲ ರೀಚಾರ್ಜ್ ಪ್ಲಾನ್ಗಳಿಗೆ ಕ್ಯಾಷ್ಬ್ಯಾಕ್ ಆಫರ್ ಕೂಡ ಕೊಟ್ಟಿರುವುದು ವಿಶೇಷ. 1,449 ರೂ ಹಾಗೂ 3,099 ರೂ ರೀಚಾರ್ಜ್ ಪ್ಯಾಕ್ ಪಡೆದರೆ ಕ್ರಮವಾಗಿ 50 ರೂ ಹಾಗೂ 75 ರೂ ತತ್ಕ್ಷಣದ ರಿಯಾಯಿತಿ ಪಡೆಯಬಹುದು. ಈ ಆಫರ್ಗಳು ಆಗಸ್ಟ್ 18ರವರೆಗೂ ಇರುತ್ತದೆ.
ಇದನ್ನೂ ಓದಿ: DBT Savings: ನೇರವಾಗಿ ಅಕೌಂಟ್ಗೆ ಹಣ ವರ್ಗಾವಣೆ ಮಾಡುವುದರಿಂದ ಕೇಂದ್ರ ಸರ್ಕಾರಕ್ಕೆ ಉಳಿತಾಯವಾದ ಹಣವೆಷ್ಟು ಗೊತ್ತಾ?
ರಿಲಾಯನ್ಸ್ ಜಿಯೋ ಆಗಸ್ಟ್ 15ರಂದು ತನ್ನ 2,999 ರೂ ವಾರ್ಷಿಕ ರೀಚಾರ್ಜ್ ಪ್ಲಾನ್ನಲ್ಲಿ ಕೆಲ ಆಫರ್ ಒದಗಿಸಿತ್ತು. ದಿನಕ್ಕೆ 2.5 ಜಿಬಿ ಡಾಟಾ, ಅನ್ಲಿಮಿಟೆಡ್ ಕರೆ, ದಿನಕ್ಕೆ 100 ಎಸ್ಸೆಮ್ಮೆಸ್ ಇತ್ಯಾದಿ ಸೌಲಭ್ಯಗಳು ಈ ವಾರ್ಷಿಕ್ ಪ್ಯಾಕ್ನಲ್ಲಿ ಒಳಗೊಳ್ಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ