Air Traffic: ವಿಮಾನ ಹಾರಾಟ ಹೆಚ್ಚಳದಲ್ಲಿ ಭಾರತದಲ್ಲಿ ಬೆಂಗಳೂರು ನಂಬರ್ ಒನ್

|

Updated on: Aug 06, 2023 | 11:46 AM

Bengaluru No.1 In Air Traffic Rise: ಅತಿಹೆಚ್ಚು ಫ್ಲೈಟ್​ಗಳು ಹಾರಾಡುವ ವಿಮಾನ ನಿಲ್ದಾಣಗಳ ಪೈಕಿ ಬೆಂಗಳೂರು 3ನೇ ಸ್ಥಾನದಲ್ಲಿದೆ. ಆದರೆ, 2022-23 ಹಣಕಾಸು ವರ್ಷದಲ್ಲಿ ಅತಿಹೆಚ್ಚು ದೇಶೀಯ ವಿಮಾನ ಟ್ರಾಫಿಕ್ ಕಂಡ ಏರ್​ಪೋರ್ಟ್​ಗಳಲ್ಲಿ ಬೆಂಗಳೂರು ನಂಬರ್ ಒನ್ ಎನಿಸಿದೆ.

Air Traffic: ವಿಮಾನ ಹಾರಾಟ ಹೆಚ್ಚಳದಲ್ಲಿ ಭಾರತದಲ್ಲಿ ಬೆಂಗಳೂರು ನಂಬರ್ ಒನ್
ಬೆಂಗಳೂರು ವಿಮಾನನಿಲ್ದಾಣ
Follow us on

ಬೆಂಗಳೂರು, ಆಗಸ್ಟ್ 6: ಭಾರತದ ವೈಮಾನಿಕ ಕ್ಷೇತ್ರ ಹುಲುಸಾಗಿ ಬೆಳೆಯುತ್ತಿದೆ. ಹೆಚ್ಚೆಚ್ಚು ವಿಮಾನಗಳು ಹಾರಾಟ ನಡೆಸುತ್ತಿವೆ. ಅದರಲ್ಲೂ ಬೆಂಗಳೂರು ವಿಮಾನ ನಿಲ್ದಾಣ ಇತ್ತೀಚೆಗೆ ಬಹಳಷ್ಟು ಏರ್ ಟ್ರಾಫಿಕ್ ಕಾಣುತ್ತಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI- Airport Authority of India) ನೀಡಿರುವ ಮಾಹಿತಿ ಪ್ರಕಾರ, 2022-23ರ ಹಣಕಾಸು ವರ್ಷದಲ್ಲಿ ದೇಶೀಯ ವೈಮಾನಿಕ ಹಾರಾಟದಲ್ಲಿ ಬೇರೆ ನಗರಗಳಿಗಿಂತ ಬೆಂಗಳೂರು ಅತಿಹೆಚ್ಚು ಪ್ರಗತಿ ಕಂಡಿದೆ. ಬೆಂಗಳೂರಿನ ವಿಮಾನ ನಿಲ್ದಾಣದಿಂದ ಕಾರ್ಯಾಚರಿಸಲಾಗುವ ದೇಶೀಯ ಮಾರ್ಗಗಳ ವಿಮಾನ ಹಾರಾಟದ ಸಂಖ್ಯೆ (Domestic Flight) ಹೆಚ್ಚಾಗಿದೆ. ಆ ಹಣಕಾಸು ವರ್ಷದಲ್ಲಿ ಬೆಂಗಳೂರು ಏರ್​ಪೋರ್ಟ್ 2.81 ಕೋಟಿ ಪ್ರಯಾಣಿಕರನ್ನು ದೇಶೀಯ ಸ್ಥಳಗಳಿಗೆ ಸಾಗಣೆ ಮಾಡಿದೆ. 2021-22ರ ಹಣಕಾಸು ವರ್ಷಕ್ಕೆ ಹೋಲಿಸಿದರೆ ಬೆಂಗಳೂರಿನ ಡೊಮೆಸ್ಟಿಕ್ ಏರ್ ಟ್ರಾಫಿಕ್​ನಲ್ಲಿ ಶೇ. 85ರಷ್ಟು ಏರಿಕೆ ಆಗಿದೆ. ಈ ಹೆಚ್ಚಳಕ್ಕೆ ಬಹುತೇಕ ಕಾರಣವಾಗಿರುವುದು ಆಕಾಶ ಏರ್ ಎಂಬ ನೂತನ ವೈಮಾನಿಕ ಸಂಸ್ಥೆ.

ಅಗ್ಗದ ಬೆಲೆಗೆ ವೈಮಾನಿಕ ಸೇವೆ ಕೊಡುವ ಆಕಾಸ ಏರ್ ಸಂಸ್ಥೆ ಶುರುವಾಗಿ ಸರಿಯಾಗಿ ಒಂದು ವರ್ಷ ಆಗಿದೆ. 2022ರ ಆಗಸ್ಟ್ 7ರಂದು ವಿಮಾನ ಹಾರಾಟ ಆರಂಭಿಸಿದ ಆಕಾಸ ಏರ್ ಸಂಸ್ಥೆ ಮೊದಲಿಗೆ ಮುಂಬೈ ಮತ್ತು ಅಹ್ಮದಾಬಾದ್ ಮಾರ್ಗದಲ್ಲಿ ನಿತ್ಯ ಎರಡು ಬಾರಿ ಹಾರಾಟ ನಡೆಸಿತ್ತು. ಇದೀಗ ಆಕಾಶ ಏರ್ ಸಂಸ್ಥೆಗೆ ಬೆಂಗಳೂರು ಮೂಲಸ್ಥಳವಾಗಿ ಬದಲಾಗಿದೆ.

ಇದನ್ನೂ ಓದಿ: Rupee: ಭಾರತದೊಂದಿಗೆ ಡಾಲರ್ ಬದಲು ರುಪಾಯಿಯಲ್ಲಿ ವ್ಯವಹಾರ ನಡೆಸುವ 22 ದೇಶಗಳು; ಇಲ್ಲಿದೆ ಇವುಗಳ ಪಟ್ಟಿ

ಆಕಾಶ ಏರ್ ಬೆಂಗಳೂರು ಏರ್​ಪೋರ್ಟ್ ಅನ್ನು ಆರಿಸಲು ಏನು ಕಾರಣ?

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನೈಟ್ ಪಾರ್ಕಿಂಗ್ ಜಾಗ ಸಾಕಷ್ಟಿದೆ. ಆಕಾಸ ಏರ್ ಸಂಸ್ಥೆಯ 20 ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳ ಪೈಕಿ 16 ವಿಮಾನಗಳು ಬೆಂಗಳೂರಿನಲ್ಲೇ ಪಾರ್ಕ್ ಆಗುತ್ತವೆ. ಇಲ್ಲಿಂದಲೇ ನಿತ್ಯ 30 ಫ್ಲೈಟ್​ಗಳು ಹೋಗುತ್ತವೆ.

ಇದನ್ನೂ ಓದಿ: API: ಚೀನಾ ಅವಲಂಬನೆ ತಗ್ಗಿಸಲು ಭಾರತದಲ್ಲೇ ತಯಾರಾಗುತ್ತಿವೆ 38 APIಗಳು; ಏನಿವುಗಳ ವಿಶೇಷತೆ?

ಒಟ್ಟಾರೆ ವಿಮಾನ ಹಾರಾಟದಲ್ಲಿ ದೆಹಲಿ ಮತ್ತು ಮುಂಬೈ ನಂತರ ಬೆಂಗಳೂರು 3ನೇ ಸ್ಥಾನ ಹೊಂದಿದೆ. ಆದರೆ, ಏರ್ ಟ್ರಾಫಿಕ್​ನ ಹೆಚ್ಚಳದಲ್ಲಿ ಬೆಂಗಳೂರು ಬೇರೆಲ್ಲಾ ನಗರಗಳನ್ನು ಹಿಂದಿಕ್ಕಿದೆ. 2022-23ರ ಹಣಕಾಸು ವರ್ಷದಲ್ಲಿ ಮಾತ್ರವಲ್ಲ, 2023-24ರ ಹಣಕಾಸು ವರ್ಷದ ಮೊದಲ ಕ್ವಾರ್ಟರ್​ನಲ್ಲೂ ಬೆಂಗಳೂರು ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಅತಿ ಹೆಚ್ಚಳ ಕಂಡಿದೆ. ಈ ತ್ರೈಮಾಸಿಕ ಅವಧಿಯಲ್ಲಿ 84 ಲಕ್ಷ ದೇಶೀಯ ವಿಮಾನ ಪ್ರಯಾಣಿಕರು ಬೆಂಗಳೂರು ಏರ್​ಪೋರ್ಟ್​ನಿಂದ ಪ್ರಯಾಣಿಸಿರುವುದು ವರದಿಯಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ