AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ISRO: ಖಾಸಗಿ ವಲಯಕ್ಕೆ ಇನ್ನಷ್ಟು ತೆರೆದುಕೊಂಡ ಭಾರತದ ಬಾಹ್ಯಾಕಾಶ ಉದ್ಯಮ; ಇಸ್ರೋದಿಂದ ಪ್ರಮುಖ ಸೆಟಿಲೈಟ್ ಬಸ್ ತಂತ್ರಜ್ಞಾನ ರವಾನೆ

Private Sector in Indian Space Industry: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ತನ್ನಲ್ಲಿನ ಐಎಂಎಸ್-1 ಸೆಟಿಲೈಟ್ ಬಸ್ ಟೆಕ್ನಾಲಜಿಯನ್ನು ಬೆಂಗಳೂರು ಮೂಲದ ಖಾಸಗಿ ಸಂಸ್ಥೆ ಆಲ್ಫಾ ಡಿಸೈನ್ ಟೆಕ್ನಾಲಜೀಸ್​ಗೆ ರವಾನಿಸಿದೆ. ಇದರಿಂದ ಬಾಹ್ಯಾಕಾಶ ಉದ್ಯಮದಲ್ಲಿ ಖಾಸಗಿ ವಲಯದ ಪಾಲ್ಗಳ್ಳುವಿಕೆಗೆ ಇನ್ನಷ್ಟು ಪುಷ್ಟಿ ಸಿಕ್ಕಂತಾಗಿದೆ.

ISRO: ಖಾಸಗಿ ವಲಯಕ್ಕೆ ಇನ್ನಷ್ಟು ತೆರೆದುಕೊಂಡ ಭಾರತದ ಬಾಹ್ಯಾಕಾಶ ಉದ್ಯಮ; ಇಸ್ರೋದಿಂದ ಪ್ರಮುಖ ಸೆಟಿಲೈಟ್ ಬಸ್ ತಂತ್ರಜ್ಞಾನ ರವಾನೆ
ಉಪಗ್ರಹ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 06, 2023 | 1:07 PM

Share

ಬೆಂಗಳೂರು, ಆಗಸ್ಟ್ 6: ಭಾರತದ ಬಾಹ್ಯಾಕಾಶ ಉದ್ಯಮದಲ್ಲಿ (Indian space industry) ಖಾಸಗಿ ವಲಯದ ಸಹಭಾಗಿತ್ವವನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಬೆಳವಣಿಗೆಗಳಾಗುತ್ತಿವೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ (ISRO) ತನ್ನಲ್ಲಿರುವ ಪ್ರಮುಖ ಸೆಟಿಲೈಟ್ ತಂತ್ರಜ್ಞಾನವೊಂದನ್ನು ಖಾಸಗಿ ಸಂಸ್ಥೆಗೆ ರವಾನಿಸುತ್ತಿದೆ. ಬೆಂಗಳೂರಿನ ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಸಂಸ್ಥೆಗೆ ಐಎಂಎಸ್-1 ಸೆಟಿಲೈಟ್ ಬಸ್ ಟೆಕ್ನಾಲಜಿಯನ್ನು (Satellite Bus Technology) ರವಾನಿಸುವ ಕೆಲಸ ಆರಂಭಿಸಿರುವುದಾಗಿ ಇಸ್ರೋ ಆಗಸ್ಟ್ 4ರಂದು ಪ್ರಕಟಿಸಿದೆ. ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿ (NSIL) ಮತ್ತು ಆಲ್ಫಾ ಡಿಸೈನ್ ಟೆಕ್ನಾಲಜೀಸ್ ಮಧ್ಯೆ ಆಗಸ್ಟ್ 2ರಂದು ಒಪ್ಪಂದ ಆಗಿತ್ತೆನ್ನಲಾಗಿದೆ.

ಏನಿದು ಸೆಟಿಲೈಟ್ ಬಸ್ ಟೆಕ್ನಾಲಜಿ?

ಸೆಟಿಲೈಟ್ ಬಸ್ ಎಂಬುದು ಯಾವುದೇ ಸೆಟಿಲೈಟ್ ಅಥವಾ ಗಗನನೌಕೆಯ ಮುಖ್ಯ ಭಾಗ. ಪೇಲೋಡ್ ಹಾಗೂ ಇತರ ಎಲ್ಲಾ ವೈಜ್ಞಾನಿಕ ಉಪಕರಣಗಳನ್ನು ಈ ಬಸ್ ಒಳಗೊಂಡಿರುತ್ತದೆ. ಭೂಮಿಯ ಕೆಳ ಕಕ್ಷೆಯಲ್ಲಿ ಇರುವ ಸಂವಹನ ಉಪಗ್ರಹಗಳಿಗೆ ಹೆಚ್ಚಾಗಿ ಇದರ ಬಳಕೆ ಆಗುತ್ತದೆ. ಸೆಟಿಲೈಟ್ ಬಸ್ ತಂತ್ರಜ್ಞಾನದ ಪರಿಣತಿ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ಇಸ್ರೋ ಐಎಂಎಸ್ ಮತ್ರವಲ್ಲ ಐಕೆ ಸರಣಿಯ ಸೆಟಿಲೈಟ್ ಬಸ್​ಗಳನ್ನು ತಯಾರಿಸುತ್ತದೆ.

ಇದನ್ನೂ ಓದಿ: Air Traffic: ವಿಮಾನ ಹಾರಾಟ ಹೆಚ್ಚಳದಲ್ಲಿ ಭಾರತದಲ್ಲಿ ಬೆಂಗಳೂರು ನಂಬರ್ ಒನ್

ಐಎಂಎಸ್-1 (ಇಂಡಿಯನ್ ಮಿನಿ ಸೆಟಿಲೈಟ್) ಬಸ್ ಟೆಕ್ನಾಲಜಿಯನ್ನು ಯುಆರ್ ರಾವ್ ಸೆಟಿಲೈಟ್ ಸೆಂಟರ್ ಅಭಿವೃದ್ಧಿಪಡಿಸಿದೆ. ಬಾಹ್ಯಾಕಾಶಕ್ಕೆ ಕಡಿಮೆ ವೆಚ್ಚದಲ್ಲಿ ಸೆಟಿಲೈಟ್ ರವಾನಿಸಲು ಇದು ಬಹಳ ಉಪಯುಕ್ತವಾಗಿದೆ. ಈ ಬಸ್ ಅನ್ನು ಐಎಂಎಸ್-1, ಯೂತ್​ಸ್ಯಾಟ್, ಮೈಕ್ರೋಸ್ಯಾಟ್-2ಡಿ ಇತ್ಯಾದಿ ಇಸ್ರೋದ ಹಿಂದಿನ ಯೋಜನೆಗಳಲ್ಲಿ ಬಳಕೆ ಮಾಡಲಾಗಿದೆ.

ಐಎಂಎಸ್-1 ಬಸ್​ನ ತೂಕ 100 ಕಿಲೋ ಇದ್ದು, ಇದು 30 ಕಿಲೋವರೆಗಿನ ತೂಕ ಪೇಲೋಡ್ ಅನ್ನು ಹೊರಬಲ್ಲುದು. ಸೌರಶಕ್ತಿಯಿಂದ ಇದು 330 ವ್ಯಾಟ್ ವಿದ್ಯುತ್ ತಯಾರಿಸಬಲ್ಲುದು.

ಇದನ್ನೂ ಓದಿ: Rupee: ಭಾರತದೊಂದಿಗೆ ಡಾಲರ್ ಬದಲು ರುಪಾಯಿಯಲ್ಲಿ ವ್ಯವಹಾರ ನಡೆಸುವ 22 ದೇಶಗಳು; ಇಲ್ಲಿದೆ ಇವುಗಳ ಪಟ್ಟಿ

ಸೆಟಿಲೈಟ್ ಬಸ್ ತಂತ್ರಜ್ಞಾನವನ್ನು ಖಾಸಗಿ ವಲಯದೊಂದಿಗೆ ಹಂಚಿಕೊಳ್ಳುವ ಮೂಲಕ ಇಸ್ರೋ ಭಾರತದಲ್ಲಿ ಬಾಹ್ಯಾಕಾಶ ಉದ್ಯಮ ಶಕ್ತಿಯುತವಾಗಿ ಬೆಳೆಯುವಂತೆ ದಾರಿ ಮಾಡಿದೆ. ಈಗಾಗಲೇ ಬಹಳಷ್ಟು ಖಾಸಗಿ ಕಂಪನಿಗಳು ಬಾಹ್ಯಾಕಾಶ ಉದ್ಯಮದಲ್ಲಿವೆ. ಕೆಲ ಕಂಪನಿಗಳು ರಾಕೆಟ್ ಕೂಡ ತಯಾರಿಸುತ್ತಿವೆ. ಅಮೆರಿಕದಲ್ಲೂ ಇಂಥ ಪ್ರಯೋಗ ಹಲವು ದಶಕಗಳ ಹಿಂದೆಯೇ ಆಗಿದೆ. ಅದರ ಫಲವಾಗಿ ಸ್ಪೇಸ್ ಎಕ್ಸ್ ಸೇರಿದಂತೆ ಅಮೆರಿಕದ ಹಲವು ಖಾಸಗಿ ಸಂಸ್ಥೆಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿವೆ. ಇದರಿಂದ ನಾಸಾ ಸಂಸ್ಥೆಯ ಮೇಲಿನ ಹೊರೆ ಬಹಳಷ್ಟು ಕಡಿಮೆ ಆಗಿ, ಗಂಭೀರ ಸ್ವರೂಪದ ಯೋಜನೆ ಮತ್ತು ಸಂಶೋಧನೆಗಳಿಗೆ ಸಹಕಾರ ಸಿಕ್ಕಂತಾಗಿದೆ.

ಇಸ್ರೋ ಕೂಡ ಇದೇ ಹಾದಿಯಲ್ಲಿದೆ. ಭಾರತದ ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಭಾರತದ ಬಾಹ್ಯಾಕಾಶ ಉದ್ಯಮ ಮುಂದಿನ ದಿನಗಳಲ್ಲಿ ಉಜ್ವಲವಾಗಿ ಬೆಳಗುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
ಕಪ್ಪು ಚಿರತೆಯ ಜೊತೆ ನೀರು ಕುಡಿದ ಚಿರತೆ; ಭದ್ರಾ ಅಭಯಾರಣ್ಯದ ವಿಡಿಯೋ ವೈರಲ್
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
‘WTC ಉತ್ಸವ’ ಆಯೋಜಕರ ಮೇಲೆ ಗರಂ ಆದ ‘ಕಾಮಿಡಿ ಕಿಲಾಡಿಗಳು’ ಮಂಥನಾ
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಒಂದೇ ಓವರ್​ನಲ್ಲಿ 28 ರನ್ ಸಿಡಿಸಿದ ಕಿಶನ್
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ಏರ್ಪೋರ್ಟ್​ನಲ್ಲೇ ಭೈರತಿ ಬಸವರಾಜ್​​ರನ್ನ​ ವಶಕ್ಕೆ ಪಡೆದ ಪೊಲೀಸರು
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ವಿಷ್ಣುವರ್ಧನ್ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲು ಮನವಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಇದು ಜಗತ್ತಿನ ದುಬಾರಿ ಅಣಬೆ: ಬೆಲೆ ಕೇಳಿದ್ರೆ ಶಾಕ್​​ ಆಗೋದು ಗ್ಯಾರಂಟಿ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಕಾಫಿ ಬಿಲ್​ ಕೇಳಿದ್ದಕ್ಕೆ ಪಿಸಿಗಳಿಂದ ಹೋಟೆಲ್​ ಸಿಬ್ಬಂದಿ ಮೇಲೆ ಹಲ್ಲೆ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ಜಯಸೂರ್ಯರ 17 ವರ್ಷಗಳ ಹಳೆಯ ದಾಖಲೆ ಮುರಿದ ಓಮನ್ ಆಟಗಾರ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ರಾಜ್ಯ ಸರ್ಕಾರಕ್ಕೆ 1 ಸಾವಿರ ದಿನ: 6ನೇ ಗ್ಯಾರಂಟಿ ಜಾರಿ ಮಾಡ್ತೇವೆ; ಡಿಕೆಶಿ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ
ಮುಸ್ಲಿಂ ಯುವಕನ ಜೊತೆ ಹಿಂದೂ ಹುಡುಗಿ ಪರಾರಿ: ಯುವತಿ ತಂದೆಯ ಸ್ಫೋಟಕ ಹೇಳಿಕೆ