AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ರೋ ಪ್ರಯಾಣಿಕರೇ ಗಮನಿಸಿ: ಶುಕ್ರವಾರ ಸಂಚಾರ ಸಮಯದಲ್ಲಿಲ್ಲ ಬದಲಾವಣೆ

ಐಪಿಎಲ್ ಕ್ರಿಕೆಟ್ ಪಂದ್ಯಗಳಿದ್ದ ದಿನ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು ನಮ್ಮ ಮೆಟ್ರೋ ಸೇವೆಯ ಅವಧಿಯನ್ನು ವಿಸ್ತರಿಸುತ್ತದೆ. ಅದರಂತೆ, ಶುಕ್ರವಾರ ಕೂಡ ರಾತ್ರಿ 1.30 ರ ವರೆಗೆ ವಿಸ್ತರಿಸಿ ಈ ಹಿಂದೆ ಸುತ್ತೋಲೆ ಹೊರಡಿಸಲಾಗಿತ್ತು. ಆದರೆ ಇದೀಗ ಬಿಎಂಆರ್​​ಸಿಎಲ್ ಮಹತ್ವದ ಅಪ್​​ಡೇಟ್ ನೀಡಿದೆ.

ಮೆಟ್ರೋ ಪ್ರಯಾಣಿಕರೇ ಗಮನಿಸಿ: ಶುಕ್ರವಾರ ಸಂಚಾರ ಸಮಯದಲ್ಲಿಲ್ಲ ಬದಲಾವಣೆ
ನಮ್ಮ ಮೆಟ್ರೋ (ಸಾಂದರ್ಭಿಕ ಚಿತ್ರ)
Ganapathi Sharma
|

Updated on: May 22, 2025 | 7:28 AM

Share

ಬೆಂಗಳೂರು, ಮೇ 22: ಮೆಟ್ರೋ ರೈಲು (Namma Metro) ಸೇವೆಯ ಅವಧಿಗೆ ಸಂಬಂಧಿಸಿದಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮಹತ್ವದ ಅಪ್​ಡೇಟ್ ನೀಡಿದೆ. ಅದರಂತೆ, ದಿನಾಂಕ 23 ರಂದು ಶುಕ್ರವಾರ ವಿಸ್ತರಿತ ಸೇವೆ ಲಭ್ಯವಿರುವುದಿಲ್ಲ ಎಂದು ತಿಳಿಸಿದೆ. ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ಸಂದೇಶ ಪ್ರಕಟಿಸಿರುವ ಬಿಎಂಆರ್​ಸಿಎಲ್ (BMRCL), ಮೇ 23, 2025 ರಂದು ರಾತ್ರಿ 1:30 ರವರೆಗೆ ವಿಸ್ತರಿಸಿದ ಮೆಟ್ರೋ ರೈಲು ಸೇವೆಯನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದೆ.

23ರ ಮೇ 2025 ರಂದು ಬೆಂಗಳೂರಿನಲ್ಲಿ ನಡೆಯಬೇಕಾಗಿದ್ದ ಐಪಿಎಲ್ ಪಂದ್ಯವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು (BCCI) ಲಖನೌದಲ್ಲಿ ನಡೆಸಲಿದ್ದು, ಈ ಹಿಂದೆ ಪ್ರಕಟಿಸಿದಂತೆ ಮೇ 23, 2025 ರಂದು ರಾತ್ರಿ 1:30 ರವರೆಗೆ ವಿಸ್ತರಿಸಿದ ಮೆಟ್ರೋ ರೈಲು ಸೇವೆಯನ್ನು ರದ್ದುಪಡಿಸಲಾಗಿದೆ ಎಂದು ಬಿಎಂಆರ್​ಸಿಎಲ್ ಪ್ರಕಟಣೆ ತಿಳಿಸಿದೆ. ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲುಗಳು ಎಂದಿನಂತೆ ಸಾಮಾನ್ಯ ಸೇವೆ ಒದಗಿಸಲಿದೆ ಎಂದು ಬಿಎಂಆರ್​ಸಿಎಲ್ ತಿಳಿಸಿದೆ.

ಇದನ್ನೂ ಓದಿ
Image
ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವಿಗೆ ಸಿದ್ದರಾಮಯ್ಯ ಸೂಚನೆ
Image
ಬೆಂಗಳೂರಿನಲ್ಲಿ ಡೆಂಗಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ಹೊಸ ಪ್ಲಾನ್​
Image
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
Image
ಆರ್​ಸಿಬಿಯ ಮುಂದಿನ ಪಂದ್ಯ ಬೆಂಗಳೂರಿನಿಂದ​ ಬೇರೆಡೆಗೆ ಶಿಫ್ಟ್​!

ಬಿಎಂಆರ್​ಸಿಎಲ್ ಎಕ್ಸ್ ಸಂದೇಶ

ಬೆಂಗಳೂರಿನಲ್ಲಿ ಮಳೆ ಮುನ್ಸೂಚನೆ ಇರುವ ಕಾರಣ ಮೇ 23ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಸನ್​ರೈಸರ್ಸ್ ಹೈದರಾಬಾದ್ ಹಾಗೂ ಆರ್​ಸಿಬಿ ನಡುವಣ ಪಂದ್ಯವನ್ನು ಲಖನೌಗೆ ಸ್ಥಳಾಂತರ ಮಾಡಲಾಗಿದೆ. ಮೊನ್ನೆಯಷ್ಟೇ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಆರ್​ಸಿಬಿ ಹಾಗೂ ಕೆಕೆಆರ್ ಪಂದ್ಯ ಮಳೆಯಿಂದ ರದ್ದಾಗಿತ್ತು. ಇದರ ಬೆನ್ನಲ್ಲೇ ಬಿಸಿಸಿಐ ಮುಂದಿನ ಪಂದ್ಯ ಸ್ಥಳಾಂತರ ಮಾಡುವ ನಿರ್ಧಾರ ಕೈಗೊಂಡಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಡೆಯಬೇಕಿದ್ದ ಆರ್​ಸಿಬಿಯ ಮುಂದಿನ ಪಂದ್ಯ​ ಬೇರೆಡೆಗೆ ಶಿಫ್ಟ್​: ಎಲ್ಲಿಗೆ ಗೊತ್ತಾ?

ಈ ವರ್ಷದ ಐಪಿಎಲ್ ಟೂರ್ನಿ ಆರಂಭವಾಗುವ ಸಂದರ್ಭದಲ್ಲೇ ಬಿಎಂಆರ್​ಸಿಎಲ್ ಪ್ರಕಟಣೆ ಹೊರಡಿಸಿ, ಐಪಿಎಲ್ ಪಂದ್ಯಗಳಿರುವ ದಿನಗಳಂದು ಮೆಟ್ರೋ ಸೇವೆ ವಿಸ್ತರಿಸುವುದಾಗಿ ತಿಳಿಸಿತ್ತು. ಅದರಂತೆ ಪಂದ್ಯಗಳಿರುವ ದಿನ ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿ ಮೆಟ್ರೋ ರೈಲುಗಳು ರಾತ್ರಿ 1.30 ರ ವರೆಗೆ ಸಂಚಾರ ಮಾಡುತ್ತಿದ್ದವು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ