Amazon Great Indian Festival: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ ಸೇಲ್​, ಕೋಟ್ಯಧಿಪತಿಗಳಾದ 650 ಮಾರಾಟಗಾರರು

| Updated By: ಗಣಪತಿ ಶರ್ಮ

Updated on: Oct 20, 2022 | 4:38 PM

ಈ ವರ್ಷದ ಗ್ರೇಟ್ ಇಂಡಿಯನ್ ಫೆಸ್ಟಿವಲ್​ ಸೇಲ್​ನಲ್ಲಿ 650 ಮಾರಾಟಗಾರರು ಕೋಟ್ಯಧಿಪತಿಗಳಾಗಿದ್ದಾರೆ ಎಂದು ಅಮೆಜಾನ್ ಗುರುವಾರ ತಿಳಿಸಿದೆ.

Amazon Great Indian Festival: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ ಸೇಲ್​, ಕೋಟ್ಯಧಿಪತಿಗಳಾದ 650 ಮಾರಾಟಗಾರರು
ಅಮೆಜಾನ್
Follow us on

ನವದೆಹಲಿ: ಗ್ರೇಟ್ ಇಂಡಿಯನ್ ಫೆಸ್ಟಿವಲ್​ ಸೇಲ್​ನಲ್ಲಿ (Amazon Great Indian Festival) ಈವರೆಗೆ ಒಟ್ಟು 4.75 ಲಕ್ಷ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಭಾಗಿಯಾಗಿವೆ. 650 ಮಾರಾಟಗಾರರು ಕೋಟ್ಯಧಿಪತಿಗಳಾಗಿದ್ದಾರೆ ಎಂದು ಅಮೆಜಾನ್ (Amazon) ಗುರುವಾರ ತಿಳಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅಮೆಜಾನ್​ ಬ್ಯುಸಿನೆಸ್​ನಲ್ಲಿ ಖಾತೆ ತೆರೆದವರ ಪ್ರಮಾಣ ಶೇಕಡಾ 44ರಷ್ಟು ಹೆಚ್ಚಾಗಿದೆ. 6,000ದಷ್ಟು ಮಾರಾಟಗಾರರು ಇದೇ ಮೊದಲ ಬಾರಿ ಉತ್ಪನ್ನಗಳ ನೇರ ಮಾರಾಟಕ್ಕೆ (B2B) ಅವಕಾಶ ಪಡೆದಿದ್ದಾರೆ ಎಂದು ಕಂಪನಿ ತಿಳಿಸಿದೆ.

ಸಣ್ಣ ಹಾಗೂ ಮಧ್ಯಮ ಗಾತ್ರದ ಉದ್ದಿಮೆಗಳು, ಸ್ಟಾರ್ಟಪ್​ಗಳು, ಮಹಿಳಾ ಉದ್ಯಮಿಗಳು ಗ್ರಾಹಕರಿಗೆ ದೇಶದಾದ್ಯಂತ ಅನೇಕ ರೀತಿಯ ಖರೀದಿಯ ಆಯ್ಕೆಗಳನ್ನು ಒದಗಿಸಿಕೊಟ್ಟಿದ್ದಾರೆ. ಹಬ್ಬದ ಅವಧಿಯಲ್ಲಿ ಪ್ರೈಂ ಸದಸ್ಯರ ಸಂಖ್ಯೆ ಹೆಚ್ಚಾಗಿದೆ. ಇನ್ನಷ್ಟು ಮಾರಾಟಗಾರರು, ವಿಶೇಷವಾಗಿ 2-3ನೇ ಹಂತದ ನಗರಗಳಿಂದ ನಮ್ಮ ಜತೆ ಸೇರಿಕೊಳ್ಳುತ್ತಿದ್ದಾರೆ ಎಂದು ಅಮೆಜಾನ್ ಇಂಡಿಯಾದ ಗ್ರಾಹಕ ವ್ಯವಹಾರಗಳ ನಿರ್ವಾಹಕ ಮನೀಷ್ ತಿವಾರಿ ತಿಳಿಸಿದ್ದಾರೆ.

ಲಕ್ಷ, ಕೋಟ್ಯಧಿಪತಿಗಳಾದ ಮಾರಾಟಗಾರರು:

ಇದನ್ನೂ ಓದಿ
Wipro: ಕೇವಲ 10 ನಿಮಿಷಗಳಲ್ಲಿ ವಿಪ್ರೋದ 20 ಮಂದಿ ಉನ್ನತ ಸಿಬ್ಬಂದಿ ವಜಾ: ರಿಷದ್ ಪ್ರೇಮ್ ಜಿ
Rupee Value: ಮತ್ತೆ ಪಾತಾಳಕ್ಕೆ ಕುಸಿದ ರೂಪಾಯಿ, ಡಾಲರ್ ವಿರುದ್ಧ 83.06ಕ್ಕೆ ಇಳಿಕೆ
JioFiber: ಜಿಯೋಫೈಬರ್ ಡಬಲ್ ಫೆಸ್ಟಿವಲ್ ಬೋನಾಂಜಾ ಆಫರ್ ಬಂದಿದೆ! ವಿವರ ಇಲ್ಲಿದೆ
Nestle India Q3 Results: ನೆಸ್ಲೆ ಇಂಡಿಯಾ ನಿವ್ವಳ ಲಾಭದಲ್ಲಿ 8% ಏರಿಕೆ, ಮಾರಾಟದಲ್ಲಿ 5 ವರ್ಷಗಳ ಗರಿಷ್ಠ ಸಾಧನೆ

ಈ ಬಾರಿ ಹಬ್ಬದ ಅವಧಿಯ ಮಾರಾಟ ಮೇಳದಲ್ಲಿ 650 ಮಾರಾಟಗಾರರು ಕೋಟಿ ಗಳಿಸಿದ್ದಾರೆ. 23,000 ಮಾರಾಟಗಾರರು ಲಕ್ಷಾಧಿಪತಿಗಳಾಗಿದ್ದಾರೆ. 35,000 ಮಾರಾಟಗಾರರು ದಿನವೊಂದರ ಗರಿಷ್ಠ ಗಳಿಕೆ ದಾಖಲಿಸಿದ್ದಾರೆ. ಈ ಪೈಕಿ ಶೇಕಡಾ 70ರಷ್ಟು ಮಾರಾಟಗಾರರು ಎರಡು ಹಾಗೂ ಮೂರನೇ ಹಂತದ ನಗರಗಳಿಂದ ಉದ್ದಿಮೆಯಲ್ಲಿ ತೊಡಗಿಸಿಕೊಂಡವರು. ಗೃಹ, ಸೌಂದರ್ಯ, ಅಡುಗೆ ಸಲಕರಣೆಗಳು ವಿಭಾಗಗಳಲ್ಲಿ 4,000 ಮಾರಾಟಗಾರರು ಹೆಚ್ಚಿನ ಗಳಿಕೆ ದಾಖಲಿಸಿದ್ದಾರೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ: Amazon Happiness Upgrade Days Sale: ಅಮೆಜಾನ್​ನಲ್ಲಿ ಹ್ಯಾಪಿನೆಸ್ ಅಪ್​ಗ್ರೇಡ್ ಸೇಲ್: 20,000 ರೂ. ಒಳಗೆ ಸಿಗುತ್ತಿದೆ ಈ 5G ಸ್ಮಾರ್ಟ್​ಫೋನ್​ಗಳು

ಪ್ರತಿ ವರ್ಷ ಹಬ್ಬದ ಸೀಸನ್​ನಲ್ಲಿ ಅಮೆಜಾನ್ ಗ್ರೇಟ್ ಇಂಡಿಯನ್‌ ಫೆಸ್ಟಿವಲ್ ಸೇಲ್ ಹಮ್ಮಿಕೊಳ್ಳುತ್ತದೆ. ವಾಲ್ಮಾರ್ಟ್ ಒಡೆತನದ ಪ್ರಸಿದ್ಧ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್​​ ಕೂಡ ಇಂಥದ್ದೇ ಹಬ್ಬದ ವಿಶೇಷ ಮಾರಾಟ ಹಮ್ಮಿಕೊಳ್ಳುತ್ತದೆ. ಅನೇಕ ಆಫರ್​ಗಳು, ರಿಯಾಯಿತಿ ಕೊಡುಗೆ ಮಾರಾಟ, ರಿವಾರ್ಡ್​ಗಳನ್ನು ಗೆಲ್ಲುವ ಅವಕಾಶವನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಪ್ರೈಮ್‌ ಸದಸ್ಯರಿಗೆ ವಿಶೇಷ ರಿಯಾಯಿತಿಗಳನ್ನೂ ನೀಡಲಾಗುತ್ತಿದೆ. ಈ ಬಾರಿ ಫೆಸ್ಟಿವಲ್ ಸೇಲ್​ನ ಆರಂಭಿಕ ದಿನದಂದು ಪ್ರೈಮ್‌ ಸದಸ್ಯರಾಗಿರುವ ಗ್ರಾಹಕರಿಗೆ ಪ್ರತಿ 6 ಗಂಟೆಗಳಿಗೊಮ್ಮೆ ಹೊಸ ಆಫರ್‌ಗಳನ್ನು ನೀಡಲಾಗಿತ್ತು. ಈ ಬಾರಿಯ ಗ್ರೇಟ್ ಇಂಡಿಯನ್ ಫೆಸ್ಟಿವಲ್​ ಸೇಲ್ ಸೆಪ್ಟೆಂಬರ್ 23ರಂದು ಆರಂಭವಾಗಿದ್ದು, ಒಂದು ತಿಂಗಳ ಕಾಲ ನಡೆಯುತ್ತಿದೆ.