Amazon Sales: ಹಬ್ಬದ ವಹಿವಾಟಿಗೂ ಬೆಲೆ ಏರಿಕೆ ಬಿಸಿ: ಮಾರಾಟ ಕುಸಿತದ ಬಗ್ಗೆ ಅಮೆಜಾನ್ ಆತಂಕ

| Updated By: ಗಣಪತಿ ಶರ್ಮ

Updated on: Oct 28, 2022 | 10:37 AM

ಹಣದುಬ್ಬರ, ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಬಳಿ ವ್ಯಯಿಸಲು ಹೆಚ್ಚು ಹಣವಿಲ್ಲದಿರುವುದು ಹಬ್ಬದ ಅವಧಿಯ ಮಾರಾಟದ ಮೇಲೂ ತೀವ್ರ ಪರಿಣಾಮ ಬೀರಿದೆ ಎಂದು ಅಮೆಜಾನ್ ಡಾಟ್​ ಕಾಂ ಇಂಕ್ ಹೇಳಿದೆ.

Amazon Sales: ಹಬ್ಬದ ವಹಿವಾಟಿಗೂ ಬೆಲೆ ಏರಿಕೆ ಬಿಸಿ: ಮಾರಾಟ ಕುಸಿತದ ಬಗ್ಗೆ ಅಮೆಜಾನ್ ಆತಂಕ
ಅಮೆಜಾನ್
Follow us on

ವಾಷಿಂಗ್ಟನ್: ಹಣದುಬ್ಬರ (Inflation), ಬೆಲೆ ಏರಿಕೆಯಿಂದ (Price Rise) ತತ್ತರಿಸಿರುವ ಜನರ ಬಳಿ ವ್ಯಯಿಸಲು ಹೆಚ್ಚು ಹಣವಿಲ್ಲದಿರುವುದು ಹಬ್ಬದ ಅವಧಿಯ (Festive Season) ಮಾರಾಟದ ಮೇಲೂ ತೀವ್ರ ಪರಿಣಾಮ ಬೀರಿದೆ ಎಂದು ಅಮೆಜಾನ್ ಡಾಟ್​ ಕಾಂ ಇಂಕ್ (Amazon.com Inc) ಹೇಳಿದೆ. ರಜಾ ದಿನಗಳ ಮಾರಾಟ ಬೆಳವಣಿಗೆಯಲ್ಲಿ ಇನ್ನಷ್ಟು ಕುಸಿತವಾಗಲಿದೆ ಎಂದು ಅಮೆಜಾನ್ ಮುನ್ಸೂಚನೆ ನೀಡಿದೆ. ಇದರ ಬೆನ್ನಲ್ಲೇ ಅಮೆಜಾನ್ ಷೇರುಗಳಲ್ಲಿ ಶೇಕಡಾ 14ರ ಕುಸಿತ ಕಂಡುಬಂದಿದೆ.

ವಿಶ್ವದ ಅತಿದೊಡ್ಡ ಆನ್​ಲೈನ್ ಚಿಲ್ಲರೆ ಮಾರಾಟ ಮಳಿಗೆಯಾಗಿರುವ ಅಮೆಜಾನ್ ಕಳೆದ ಹಲವು ತಿಂಗಳುಗಳಿಂದ ಹಣದುಬ್ಬರದ ಪರಿಣಾಮವನ್ನು ಎದುರಿಸಿದೆ. ಪ್ರತಿ ವರ್ಷ ಎರಡು ಮಾರಾಟ ಉತ್ಸವ ಆಯೋಜಿಸುತ್ತಿದೆ. ಜುಲೈನಲ್ಲಿ ಪ್ರೈಂ ಡೇ ಸೇಲ್ ಮತ್ತು ಅಕ್ಟೋಬರ್ ಆರಂಭದಲ್ಲಿ ಪ್ರೈಂ ಅರ್ಲಿ ಆಕ್ಸೆಸ್ ಸೇಲ್ ಆಯೋಜಿಸುತ್ತಿದೆ. ಅಲ್ಲದೆ, ಪ್ರೈಂ ಚಂದಾದಾರಿಕೆ ಶುಲ್ಕ ಹಾಗೂ ಸರ್ಚಾರ್ಜ್​ ಆಧಾರದಲ್ಲಿ ಹೆಚ್ಚಿನ ಆದಾಯ ಗಳಿಸುತ್ತಿದೆ.

ಹಬ್ಬದ ಅವಧಿಯಲ್ಲಿ ಅಮೆಜಾನ್ ಮಾರಾಟ ಎಷ್ಟಿತ್ತು?

ಇದನ್ನೂ ಓದಿ
Petrol Price On October 28: ಕಚ್ಚಾ ತೈಲ ಬೆಲೆ ಕುಸಿತ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಬದಲಾವಣೆಯಾಗಿದೆಯೇ? ತಿಳಿಯಿರಿ
Gold Price Today: ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನ, ಬೆಳ್ಳಿ ದರವೆಷ್ಟಿದೆ? ಇಲ್ಲಿದೆ ಮಾಹಿತಿ
RBI Meet: ನಿಯಂತ್ರಣಕ್ಕೆ ಬರುತ್ತಿಲ್ಲ ಹಣದುಬ್ಬರ; ನವೆಂಬರ್​ 3ಕ್ಕೆ ಎಂಪಿಸಿ ವಿಶೇಷ ಸಭೆ ಕರೆದ ಆರ್​ಬಿಐ
Banking Frauds: ಕ್ರೆಡಿಟ್ ಕಾರ್ಡ್ ವಾರ್ಷಿಕ ಶುಲ್ಕ ಮನ್ನಾ ಹೆಸರಲ್ಲಿ ವಂಚನೆ; ಎಚ್ಚರ ವಹಿಸಿ

ಸೆಪ್ಟೆಂಬರ್​ಗೆ ಕೊನೆಗೊಂಡ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಅಮೆಜಾನ್ 127.1 ಶತಕೋಟಿ ಡಾಲರ್​ ಮೊತ್ತದ ನಿವ್ವಳ ಮಾರಾಟ ಮಾಡಿತ್ತು ಎಂಬುದು ಮಾರುಕಟ್ಟೆ ದತ್ತಾಂಶ ಕಂಪನಿ ರಿಫಿನಿಟಿವ್ ನೀಡಿದ ಐಬಿಇಎಸ್ ದತ್ತಾಂಶಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: Amazon Great Indian Festival: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್​ ಸೇಲ್​, ಕೋಟ್ಯಧಿಪತಿಗಳಾದ 650 ಮಾರಾಟಗಾರರು

ಆದರೆ, ಆರ್ಥಿಕ ದೃಷ್ಟಿಕೋನವು ಹೆಚ್ಚು ಉತ್ತಮವಾಗಿಲ್ಲ ಎಂದು ಅಮೆಜಾನ್​ನ ಮುಖ್ಯ ಹಣಕಾಸು ಅಧಿಕಾರಿ ಬ್ರಿಯಾನ್ ಓಲ್ಸಾವ್​ಸ್ಕಿ ಹೇಳಿದ್ದಾರೆ. ಕಂಪನಿಯ ಆರ್ಥಿಕ ಬೆಳವಣಿಗೆ ನಿಧಾನವಾಗುತ್ತಿದೆ ಎಂದೂ ಅವರು ತಿಳಿಸಿದ್ದಾರೆ.

‘ಜನರ ಬಜೆಟ್‌ಗಳು ಬಿಗಿಯಾಗಿವೆ. ಹಣದುಬ್ಬರ ಇನ್ನೂ ಹೆಚ್ಚುತ್ತಿದೆ. ಜನರ ಖರ್ಚು ಮಾಡುವ ಶಕ್ತಿ ಕಡಿಮೆಯಾಗುತ್ತಿದೆ. ಇದರ ಮುನ್ಸೂಚನೆಗಳನ್ನು ನಾವು ಕಾಣುತ್ತಿದ್ದೇವೆ. ಇತರ ಹೆಚ್ಚಿನ ಕಂಪನಿಗಳಂತೆ ನಾವೂ ಸಹ ನಿಧಾನಗತಿಯ ಆರ್ಥಿಕ ಬೆಳವಣಿಗೆಯನ್ನು ಎದುರಿಸಲು ಸಿದ್ಧರಾಗುತ್ತಿದ್ದೇವೆ’ ಎಂದು ಅವರು ಹೇಳಿದ್ದಾರೆ.

ಭಾರತದಲ್ಲಿ ಹಬ್ಬದ ಅವಧಿಯ ಮಾರಾಟ

ಭಾರತದಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್​ ಸೇಲ್​ನಲ್ಲಿ ಅಮೆಜಾನ್ ಉತ್ತಮ ವಹಿವಾಟು ನಡೆಸಿತ್ತು. ಈ ಹಬ್ಬದ ಅವಧಿಯ ಮಾರಾಟದಲ್ಲಿ 4.75 ಲಕ್ಷ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಭಾಗಿಯಾಗಿದ್ದು, 650 ಮಾರಾಟಗಾರರು ಕೋಟ್ಯಧಿಪತಿಗಳಾಗಿದ್ದಾರೆ. 23,000 ಮಾರಾಟಗಾರರು ಲಕ್ಷಾಧಿಪತಿಗಳಾಗಿದ್ದಾರೆ ಎಂದು ಅಮೆಜಾನ್ ಇತ್ತೀಚೆಗೆ ತಿಳಿಸಿತ್ತು. ಆದಾಗ್ಯೂ, ಜಾಗತಿಕವಾಗಿ ತನ್ನ ಮಾರಾಟದ ಬೆಳವಣಿಗೆ ಪ್ರಮಾಣದಲ್ಲಿ ಕುಸಿತ ಕಾಣುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ