Amazon Prime Shopping: ಅಮೇಜಾನ್ ಶಾಪಿಂಗ್ ಹಬ್ಬ; ವರ್ಷಕ್ಕೆ ಕೇವಲ 399 ರೂ; ಏನಿದರ ಪ್ರಯೋಜನಗಳು?
Great Indian Festival sale: ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಹಬ್ಬಕ್ಕೆ ಮುಂಚೆ ಪ್ರೈಮ್ ಶಾಪಿಂಗ್ ಎಡಿಶನ್ ಸ್ಕೀಮ್ ಅನ್ನು ಅಮೇಜಾನ್ ಬಿಡುಗಡೆ ಮಾಡಿದೆ. ಶಾಪಿಂಗ್ ವಿಚಾರದಲ್ಲಿ ಸದಸ್ಯರಿಗೆ ಹೆಚ್ಚು ಆದ್ಯತೆ ಮತ್ತು ತ್ವರಿತ ಹಾಗು ಉಚಿತ ಡೆಲಿವರಿ ಹೀಗೆ ಹಲವು ಪ್ರಯೋಜನಗಳನ್ನು ಈ ಸ್ಕೀಮ್ ಒದಗಿಸುತ್ತದೆ.
ನವದೆಹಲಿ, ಅಕ್ಟೋಬರ್ 6: ಇಕಾಮರ್ಸ್ ದೈತ್ಯ ಕಂಪನಿ ಅಮೇಜಾನ್ ಇದೀಗ ಪ್ರೈಮ್ ಶಾಪಿಂಗ್ ಎಡಿಶನ್ (Amazon Prime Shopping Edition) ಅನ್ನು ಬಿಡುಗಡೆ ಮಾಡಿದೆ. ಇದೇ ಭಾನುವಾರದಿಂದ (ಅಕ್ಟೋಬರ್ 8) ಅಮೇಜಾನ್ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Great Indian Festival sale) ನಡೆಯುತ್ತಿದ್ದು, ಅದಕ್ಕೆ ಮುಂಚಿತವಾಗಿ ಪ್ರೈಮ್ ಮೆಂಬರ್ಶಿಪ್ ಅನ್ನು ಬಿಡುಗಡೆ ಮಾಡಲಾಗಿದೆ. ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರವೇ ಸದ್ಯ ಈ ಮೆಂಬರ್ಶಿಪ್ ಲಭ್ಯವಿದ್ದು, ನಾಳೆಯಿಂದಲೇ (ಅಕ್ಟೋಬರ್ 7) ಇದರ ಸದಸ್ಯರಿಗೆ ಶಾಪಿಂಗ್ ಉತ್ಸವ ಆರಂಭವಾಗುತ್ತದೆ. ಇದರ ಸಬ್ಸ್ಕ್ರಿಪ್ಷನ್ ಬೆಲೆ ವರ್ಷಕ್ಕೆ ಕೇವಲ 399 ರೂ ಇದ್ದು, ತ್ವರಿತ ಡೆಲಿವರಿ ಸೇರಿದಂತೆ ಹಲವಾರು ರೀತಿಯ ಪ್ರಯೋಜನಗಳನ್ನು ಸದಸ್ಯರಿಗೆ ಒದಗಿಸುತ್ತದೆ.
ಅಮೇಜಾನ್ ಪ್ರೈಮ್ ಶಾಪಿಂಗ್ ಆವೃತ್ತಿಯ ಕೆಲ ಹೈಲೈಟ್ಸ್
- ಆಂಡ್ರಾಯ್ಡ್ ಫೋನ್ ಹೊಂದಿರುವವರಿಗೆ ಅಮೇಜಾನ್ ಪ್ರೈಮ್ ಶಾಪಿಂಗ್ ಎಡಿಶನ್ ಲಭ್ಯ ಇರುತ್ತದೆ. ಇದರ ಸಬ್ಸ್ಕ್ರಿಪ್ಷನ್ ವರ್ಷಕ್ಕೆ 399 ರೂ ಇದೆ.
- ಒಂದೇ ದಿನದಲ್ಲಿ ಡೆಲಿವರಿ, ಉಚಿತ ಶಿಪ್ಪಿಂಗ್ ಮತ್ತಿತರ ಹಲವು ಪ್ರಯೋಜನಗಳು ಸದಸ್ಯರಿಗೆ ಸಿಗುತ್ತದೆ.
ಇದನ್ನೂ ಓದಿ: Indigo Fuel Charge: ಅಗ್ಗದ ವಿಮಾನ ಪ್ರಯಾಣ ಸೇವೆ ನೀಡುವ ಇಂಡಿಗೋದಲ್ಲಿ ಟಿಕೆಟ್ ಬೆಲೆ ಇನ್ನು ದುಬಾರಿ; ಇಲ್ಲಿದೆ ನೂತನ ದರಗಳು
ಫ್ಲಿಪ್ಕಾರ್ಟ್ಗೆ ಸೆಡ್ಡು?
ಭಾರತದ ಇಕಾಮರ್ಸ್ ಮಾರುಕಟ್ಟೆಯಲ್ಲಿ ಅಮೇಜಾನ್ಗೆ ಪ್ರಮುಖ ಪ್ರತಿಸ್ಪರ್ಧಿ ಇರುವುದು ಫ್ಲಿಪ್ಕಾರ್ಟ್. ವಾಲ್ಮಾರ್ಟ್ ಬೆಂಬಲಿತ ಫ್ಲಿಪ್ಕಾರ್ಟ್ ಇತ್ತೀಚೆಗಷ್ಟೇ ವಿಐಪಿ ಎಂಬ ಸಬ್ಸ್ಕ್ರಿಪ್ಷನ್ ಸ್ಕೀಮ್ ಬಿಡುಗಡೆ ಮಾಡಿತ್ತು. ವರ್ಷಕ್ಕೆ 499 ರೂ ಬೆಲೆಯ ಈ ಮಾಡಲ್ನಲ್ಲಿ ಹಲವು ಶಾಪಿಂಗ್ ಅನುಕೂಲತೆಗಳು ಮತ್ತು ಆದ್ಯತೆಗಳು ಸದಸ್ಯರಿಗೆ ಸಿಗುತ್ತವೆ. ಇದಕ್ಕೆ ಪ್ರತಿಯಾಗಿ ಅಮೇಜಾನ್ ತನ್ನ ಪ್ರೈಮ್ ಶಾಪಿಂಗ್ ಎಡಿಶನ್ ಅನ್ನು ಬಿಡುಗಡೆ ಮಾಡಿದೆ.
ಇದನ್ನೂ ಓದಿ: ಪಿಐಡಿ ಫಂಡ್ ಸ್ಕೀಮ್ ಅಡಿಯಲ್ಲಿ ಪಿಎಂ ವಿಶ್ವಕರ್ಮ ಯೋಜನೆ ಒಳಗೊಳ್ಳಲು ಆರ್ಬಿಐ ನಿರ್ಧಾರ; ಸ್ಕೀಮ್ ಅವಧಿ 2 ವರ್ಷ ವಿಸ್ತರಣೆ
ಆದರೆ, ಅಮೇಜಾನ್ನ ಈ ಸಬ್ಸ್ಕ್ರಿಪ್ಷನ್ ಪಡೆದರೆ ಅದರ ಪ್ರೈಮ್ ವಿಡಿಯೋ, ಮ್ಯೂಸಿಕ್, ಗೇಮಿಂಗ್ ಮತ್ತಿತರ ಸರ್ವಿಸ್ಗಳಿಗೆ ಅಕ್ಸೆಸ್ ಸಿಕ್ಕುವುದಿಲ್ಲ. ಇದು ಕೇವಲ ಶಾಪಿಂಗ್ಗೆ ಮಾತ್ರವೇ ಸೀಮಿತವಾಗಿರುವ ಸಬ್ಸ್ಕ್ರಿಪ್ಷನ್ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ