ಬೆಂಗಳೂರು ಸೇರಿ ಇನ್ನೂ 4 ಕಡೆ ಹೊಸ ಆ್ಯಪಲ್ ಸ್ಟೋರ್ಸ್; ಐಫೋನ್ 16 ಪ್ರೋ ಫೋನ್​ಗಳೂ ಭಾರತದಲ್ಲೇ ತಯಾರಿಕೆ

Apple and iPhone updates: ಆ್ಯಪಲ್ ಸ್ಟೋರ್​ಗಳ ಸಂಖ್ಯೆ ಭಾರತದಲ್ಲಿ ಮುಂದಿನ ವರ್ಷದೊಳಗೆ ಆರಕ್ಕೆ ಏರಲಿದೆ. 2023ರ ಏಪ್ರಿಲ್​ನಲ್ಲಿ ಮುಂಬೈ ಮತ್ತು ದೆಹಲಿಯಲ್ಲಿ ಎರಡು ಆ್ಯಪಲ್ ಸ್ಟೋರ್ಸ್ ಆರಂಭವಾಗಿತ್ತು. 2025ರಲ್ಲಿ ಬೆಂಗಳೂರು ಸೇರಿದಂತೆ ಇನ್ನೂ ನಾಲ್ಕು ಕಡೆ ಆ್ಯಪಲ್ ಸ್ಟೋರ್ಸ್ ತೆರೆಯಲಾಗುತ್ತದೆ ಎಂದು ಕಂಪನಿ ಹೇಳಿಕೆ ನೀಡಿದೆ. ಹಾಗೆಯೇ, ಈ ತಿಂಗಳಿಂದಲೇ ಐಫೋನ್ ಪ್ರೋ ಮತ್ತು ಪ್ರೋ ಮ್ಯಾಕ್ಸ್ ಫೋನ್​ಗಳ ಉತ್ಪಾದನೆ ಭಾರತದಲ್ಲೇ ಆರಂಭವಾಗಲಿದೆ ಎನ್ನಲಾಗುತ್ತಿದೆ.

ಬೆಂಗಳೂರು ಸೇರಿ ಇನ್ನೂ 4 ಕಡೆ ಹೊಸ ಆ್ಯಪಲ್ ಸ್ಟೋರ್ಸ್; ಐಫೋನ್ 16 ಪ್ರೋ ಫೋನ್​ಗಳೂ ಭಾರತದಲ್ಲೇ ತಯಾರಿಕೆ
ಆ್ಯಪಲ್ ಸಂಸ್ಥೆ

Updated on: Oct 04, 2024 | 12:20 PM

ನವದೆಹಲಿ, ಅಕ್ಟೋಬರ್ 4: ಆ್ಯಪಲ್ ಸಂಸ್ಥೆ ಭಾರತೀಯ ಮಾರುಕಟ್ಟೆ ಮತ್ತು ತಯಾರಕಾ ವ್ಯವಸ್ಥೆಯತ್ತ ಗಮನ ಹರಿಸುತ್ತಿರುವುದು ಹೆಚ್ಚಾಗುತ್ತಿದೆ. ಕಳೆದ ವರ್ಷ ಭಾರತದಲ್ಲಿ ಎರಡು ರೀಟೇಲ್ ಸ್ಟೋರ್​ಗಳನ್ನು ತೆರೆದಿದ್ದ ಆ್ಯಪಲ್ ಇದೀಗ ಇನ್ನೂ ನಾಲ್ಕು ಸ್ಟೋರ್ಸ್ (Apple Stores) ಆರಂಭಿಸಲು ಯೋಜಿಸಿದೆ. ವರದಿಗಳ ಪ್ರಕಾರ, ಬೆಂಗಳೂರು ಸೇರಿದಂತೆ ನಾಲ್ಕು ಕಡೆ ಹೊಸ ಆ್ಯಪಲ್ ಸ್ಟೋರ್​ಗಳು ಆರಂಭವಾಗಲಿವೆ. ಮುಂದಿನ ವರ್ಷ ಬೆಂಗಳೂರು, ಪುಣೆ, ಮುಂಬೈ ಮತ್ತು ದೆಹಲಿಯಲ್ಲಿ ನಾಲ್ಕು ರೀಟೇಲ್ ಮಳಿಗೆಗಳು ಶುರುವಾಗಲಿವೆ. ಕಳೆದ ವರ್ಷದ ಏಪ್ರಿಲ್​ನಲ್ಲಿ ಮುಂಬೈ ಮತ್ತು ದೆಹಲಿಯಲ್ಲಿ ಆ್ಯಪಲ್ ಸ್ಟೋರ್ಸ್ ಆರಂಭವಾಗಿದ್ದವು. ಈಗ ಇವೆರಡು ನಗರಗಳಿಗೆ ಮತ್ತೊಂದು ಆ್ಯಪಲ್ ಸ್ಟೋರ್ ಸಿಗಲಿದೆ.

‘ಭಾರತದಾದ್ಯಂತ ಗ್ರಾಹಕರ ಸ್ಪಂದನೆಯಿಂದ ಉತ್ಸಾಹಿತಗೊಂಡಿರುವ ನಾವು ಇನ್ನಷ್ಟು ಸ್ಟೋರ್​ಗಳನ್ನು ತೆರೆಯಲು ಯೋಜಿಸಿದ್ದೇವೆ. ಅದಕ್ಕಾಗಿ ನಮ್ಮ ತಂಡಗಳನ್ನು ಕಟ್ಟುತ್ತಿದ್ದೇವೆ. ನಮ್ಮ ಅದ್ಭುತ ಉತ್ಪನ್ನಗಳು ಮತ್ತು ಸೇವೆಗಳನ್ನು ಖುದ್ದಾಗಿ ಕಂಡು ಅನುಭವಿಸಲು ಮತ್ತು ನಮ್ಮ ಅಸಾಧಾರಣ ತಂಡದ ಸದಸ್ಯರೊಂದಿಗೆ ಸಂಪರ್ಕ ಹೊಂದಲು ಗ್ರಾಹಕರಿಗೆ ಇನ್ನಷ್ಟು ಅವಕಾಶ ನೀಡಲು ತುದಿಗಾಲಲ್ಲಿ ಇದ್ದೇವೆ’ ಎಂದು ಆ್ಯಪಲ್​ನ ರೀಟೇಲ್ ವಿಭಾಗದ ಹಿರಿಯ ಉಪಾಧ್ಯಕ್ಷ ಡೇರ್​ಡ್ರೇ ಓಬ್ರಿಯಾನ್ ಇಂದು ಶುಕ್ರವಾರ ಹೇಳಿಕೆ ನೀಡಿದ್ದಾರೆ.

ಐಫೋನ್ 16 ಪ್ರೋ, ಪ್ರೋ ಮ್ಯಾಕ್ಸ್ ಉತ್ಪಾದನೆ ಭಾರತದಲ್ಲೇ…

ಆ್ಯಪಲ್ ಸಂಸ್ಥೆಯ ಐಫೋನ್ 16 ಸರಣಿಯ ಎಲ್ಲಾ ಸ್ಮಾರ್ಟ್​ಫೋನ್​ಗಳನ್ನೂ ಭಾರತದಲ್ಲಿ ತಯಾರಿಸಲು ನಿರ್ಧರಿಸಲಾಗಿದೆ. ಐಫೋನ್ ಸರಣಿಯ ಹೈ ಎಂಡ್ ಅವತರಣಿಕೆಗಳಾದ ಪ್ರೋ ಮತ್ತು ಪ್ರೋ ಮ್ಯಾಕ್ಸ್ ಅನ್ನು ಬೇರೆ ಕಡೆ ತಯಾರಿಸಿ ಭಾರತಕ್ಕೆ ತರಲಾಗುತ್ತಿದೆ. ಈಗ ಇವೂ ಕೂಡ ಭಾರತದಲ್ಲೇ ತಯಾರಾಗಲಿದೆ.

ಇದನ್ನೂ ಓದಿ: BSNL 4G Offer: ಬಿಎಸ್ಸೆನ್ನೆಲ್​ನಿಂದ 24 ಜಿಬಿ ಡಾಟಾ ಉಚಿತ; 25ನೇ ಸಂಸ್ಥಾಪನಾ ವರ್ಷದ ನಿಮಿತ್ತ ಗ್ರಾಹಕರು ಈ ಫ್ರೀ ಡಾಟಾ ಆಫರ್ ಪಡೆಯುವುದು ಹೇಗೆ?

ಇದೇ ತಿಂಗಳು ಪ್ರೋ ಮತ್ತು ಪ್ರೋಮ್ಯಾಕ್ಸ್ ಸರಣಿಯ ಐಫೋನ್16 ಸ್ಮಾರ್ಟ್​ಫೋನ್​ಗಳು ಭಾರತದಲ್ಲಿ ತಯಾರಾಗಲಿವೆ. ಮುಂದಿನ ತಿಂಗಳಿಂದಲೇ ಇವು ಮಾರುಕಟ್ಟೆಗೆ ಬಿಡುಗಡೆ ಆಗಲಿದೆ. ಫಾಕ್ಸ್​ಕಾನ್, ಟಾಟಾ ಗ್ರೂಪ್ ಸಂಸ್ಥೆಗಳು ಭಾರತದಲ್ಲಿ ಆ್ಯಪಲ್​ನ ಐಫೋನ್​ಗಳನ್ನು ತಯಾರಿಸುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us