BSNL 4G Offer: ಬಿಎಸ್ಸೆನ್ನೆಲ್ನಿಂದ 24 ಜಿಬಿ ಡಾಟಾ ಉಚಿತ; 25ನೇ ಸಂಸ್ಥಾಪನಾ ವರ್ಷದ ನಿಮಿತ್ತ ಗ್ರಾಹಕರು ಈ ಫ್ರೀ ಡಾಟಾ ಆಫರ್ ಪಡೆಯುವುದು ಹೇಗೆ?
Know how to avail free 24gb data from BSNL: ಭಾರತೀಯ ದೂರಸಂಚಾರ ನಿಗಮ ಸಂಸ್ಥೆ ತನ್ನ ಮೊಬೈಲ್ ಗ್ರಾಹಕರಿಗೆ 24 ಜಿಬಿ ಡಾಟಾವನ್ನು ಉಚಿತವಾಗಿ ಕೊಡುತ್ತಿದೆ. ಈ ಆಫರ್ ಸೀಮಿತ ಅವಧಿಯವರೆಗೆ ಮಾತ್ರ ಇದೆ. 25ನೇ ಸಂಸ್ಥಾಪನಾ ವರ್ಷದ ನಿಮಿತ್ತವಾಗಿ ಬಿಎಸ್ಸೆನ್ನೆಲ್ ಗ್ರಾಹಕರಿಗೆ ಈ ಕೊಡುಗೆ ಸಿಗುತ್ತಿದೆ. ಅಕ್ಟೋಬರ್ 1ರಿಂದ 24ವರವರೆಗೆ ಬಿಎಸ್ಸೆನ್ನೆಲ್ ಗ್ರಾಹಕರು 500 ರೂಗೂ ಹೆಚ್ಚು ಮೊತ್ತದ ವೋಚರ್ಗಳಿಂದ ರೀಚಾರ್ಜ್ ಮಾಡಿದರೆ ಈ 24 ಜಿಬಿ ಡಾಟಾವನ್ನು ಉಚಿತವಾಗಿ ಪಡೆಯಬಹುದು.
ನವದೆಹಲಿ, ಅಕ್ಟೋಬರ್ 4: ಜಿಯೋ, ಏರ್ಟೆಲ್, ವೊಡಾಫೋನ್ನಿಂದ ಬೆಲೆ ಹೆಚ್ಚಳದ ಮಧ್ಯೆ ಅಗ್ಗದ ದರದಲ್ಲಿ ರೀಚಾರ್ಜ್ ಆಫರ್ಗಳನ್ನು ಮಾಡುತ್ತಿರುವ ಬಿಎಸ್ಸೆನ್ನೆಲ್ ಈ ವರ್ಷ ಸಾಕಷ್ಟು ಸಂಖ್ಯೆಯಲ್ಲಿ ಹೊಸ ಗ್ರಾಹಕರನ್ನು ಸೆಳೆದುಕೊಂಡಿದೆ. ಇನ್ನೂ 5ಜಿಗೆ ಅಪ್ಡೇಟ್ ಆಗದೇ ಹೋದರೂ ಬಿಎಸ್ಸೆನ್ನೆಲ್ ಬಳಿ ವ್ಯಾಪಕ 3ಜಿ ಸರ್ವಿಸ್ ಇದೆ. 4ಜಿ ಕೂಡ ಎಲ್ಲೆಡೆ ಅಳವಡಿಕೆ ಆಗುತ್ತಿದೆ. ಕಡಿಮೆ ಬೆಲೆಗೆ 4ಜಿ ಡಾಟಾ ಸೌಲಭ್ಯವನ್ನು ಬಿಎಸ್ಸೆನ್ನೆಲ್ ತನ್ನ ಗ್ರಾಹಕರಿಗೆ ನೀಡುತ್ತಿದೆ. ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಇದೀಗ ಹೆಚ್ಚುವರಿ 24ಜಿಬಿ ಡಾಟಾವನ್ನು ಉಚಿತವಾಗಿ ನೀಡುತ್ತಿದೆ.
500 ರೂಗೂ ಹೆಚ್ಚು ಮೊತ್ತದ ರೀಚಾರ್ಜ್ ಮಾಡಬೇಕು
ಬಿಎಸ್ಎನ್ಎಲ್ ಗ್ರಾಹಕರು ಹೆಚ್ಚುವರಿ 24 ಜಿಬಿ ಡಾಟಾ ಪಡೆಯಲು ಒಂದು ಷರುತ್ತಿದೆ. 500 ರೂಗೂ ಹೆಚ್ಚು ಮೊತ್ತದ ವೋಚರ್ಗಳಿಂದ ರೀಚಾರ್ಜ್ ಮಾಡಿದರೆ ಹೆಚ್ಚುವರಿ 24 ಜಿಬಿ ಉಚಿತವಾಗಿ ಸಿಗುತ್ತದೆ. ಈ ಆಫರ್ ಸೀಮಿತ ಅವಧಿಗೆ ಇದೆ. ಅಕ್ಟೋಬರ್ 1ರಿಂದ 24ರವರೆಗೆ ಯಾರು ರೀಚಾರ್ಜ್ ಮಾಡಿಸುತ್ತಾರೋ ಅವರಿಗೆ ಈ ಫ್ರೀ ಡಾಟಾ ಪ್ರಾಪ್ತವಾಗುತ್ತದೆ.
ಇದನ್ನೂ ಓದಿ: ರೈಲ್ವೆ ಉದ್ಯೋಗಿಗಳಿಗೆ 2,029 ಕೋಟಿ ರೂ ಮೊತ್ತದ ಬೋನಸ್ ಬಿಡುಗಡೆಗೆ ಸಂಪುಟ ಅನುಮೋದನೆ
24 ವರ್ಷ ಪೂರೈಸಿದ್ದಕ್ಕೆ ಬಿಎಸ್ಸೆನ್ನೆಲ್ನಿಂದ ಸಣ್ಣ ಗಿಫ್ಟ್
ಸರ್ಕಾರಿ ಸ್ವಾಮ್ಯದ ಭಾರತೀಯ ದೂರಸಂಚಾರ ನಿಗಮ ಸಂಸ್ಥೆ ಸ್ಥಾಪನೆಯಾಗಿ 24 ವರ್ಷ ಆಗಿದೆ. 2000ರ ಸೆಪ್ಟೆಂಬರ್ 14ರಂದು ಆರಂಭವಾದ ಬಿಎಸ್ಸೆನ್ನೆಲ್ಗೆ ಈ ವರ್ಷ 25ನೇ ಸಂಸ್ಥಾಪನಾ ವರ್ಷವಾಗಿದೆ. ಒಟ್ಟು 24 ವರ್ಷ ಪೂರ್ಣಗೊಳಿಸಿದ ಸಂಭ್ರಮವನ್ನು ಗ್ರಾಹಕರ ಜೊತೆ ಹಂಚಿಕೊಳ್ಳಲು ಅದು 24 ಜಿಬಿ ಉಚಿತ ಡಾಟಾ ಆಫರ್ ಕೊಟ್ಟಿದೆ.
ಬಹಳ ಕಡಿಮೆ ಬೆಲೆಗೆ ಬಿಎಸ್ಸೆನ್ನೆಲ್ ರೀಚಾರ್ಜ್ ಆಫರ್
ಬಿಎಸ್ಸೆನ್ನೆಲ್ ಸಂಸ್ಥೆ ಬೇರೆ ಟೆಲಿಕಾಂ ಅಪರೇಟರ್ಸ್ಗೆ ಹೋಲಿಸಿದರೆ ಬಹಳ ಕಡಿಮೆ ಬೆಲೆಗೆ ರೀಚಾರ್ಜ್ ದರ ನಿಗದಿ ಮಾಡಿದೆ. 107 ರೂನಿಂದ ಹಿಡಿದು 2,999 ರೂವರೆಗೆ ವಿವಿಧ ಪ್ರೀಪೇಯ್ಡ್ ಪ್ಲಾನ್ಗಳಿವೆ. 28 ದಿನಗಳಿಂದ ಹಿಡಿದು ಒಂದು ವರ್ಷದ ವ್ಯಾಲಿಡಿಟಿ ಇರುವ ಈ ಪ್ಲಾನ್ಗಳಲ್ಲಿ ಕಡಿಮೆ ಬೆಲೆಗೆ ಡಾಟಾ ಸಿಗುತ್ತದೆ.
ಜಿಯೋ ಫೋನ್ಗೆ ಪ್ರತಿಯಾಗಿ ಬಿಎಸ್ಸೆನ್ನೆಲ್ 4ಜಿ ಫೋನ್
ರಿಲಾಯನ್ಸ್ ಜಿಯೋ ಸಂಸ್ಥೆ ಬಹಳ ಕಡಿಮೆ ಬೆಲೆಗೆ ಜಿಯೋ ಭಾರತ 4ಜಿ ಫೀಚರ್ ಫೋನ್ ಬಿಡುಗಡೆ ಮಾಡಿದೆ. ಇದೀಗ ಬಿಎಸ್ಸೆನ್ನೆಲ್ ಸಂಸ್ಥೆ ಕೂಡ ಅಗ್ಗದ ಬೆಲೆಗೆ 4ಜಿ ಫೋನ್ ಬಿಡುಗಡೆಗೆ ಯೋಜಿಸಿದೆ. ಅದಕ್ಕಾಗಿ ಕಾರ್ಬನ್ ಮೊಬೈಲ್ಸ್ ಕಂಪನಿ ಜೊತೆ ಎಂಒಯು ಒಪ್ಪಂದ ಮಾಡಿಕೊಂಡಿದೆ. ಆದರೆ, ಈ ಕಾರ್ಬನ್ ಬಿಎಸ್ಸೆನ್ನೆಲ್ ಫೋನ್ ಬೆಲೆ ಎಷ್ಟಿರಬಹುದು, ಸ್ವರೂಪ ಏನು ಇತ್ಯಾದಿ ವಿವರ ಸದ್ಯಕ್ಕೆ ಗೊತ್ತಾಗಿಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ