ಭಾರತದಲ್ಲಿ ಗೂಗಲ್ಗೆ ಕರ್ನಾಟಕ, ರಾಜಸ್ಥಾನ, ಗುಜರಾತ್ನಿಂದ ಸ್ವಚ್ಛ ಶಕ್ತಿ ಪೂರೈಕೆ; ಅದಾನಿ, ಕ್ಲೀನ್ಮ್ಯಾಕ್ಸ್ ಕಂಪನಿಗಳೊಂದಿಗೆ ಗೂಗಲ್ ಒಪ್ಪಂದ
Google deal with Adani Group and CleanMax for clean energy: ಗೂಗಲ್ ಸಂಸ್ಥೆ ಭಾರತದಲ್ಲಿರುವ ತನ್ನ ವಿವಿಧ ಘಟಕಗಳಿಗೆ ಸ್ವಚ್ಛ ಶಕ್ತಿ ಪೂರೈಕೆ ಮಾಡಲು ಅದಾನಿ ಗ್ರೂಪ್ ಮತ್ತು ಕ್ಲೀನ್ಮ್ಯಾಕ್ಸ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಅದಾನಿ ಗ್ರೂಪ್ ತನ್ನ ಗುಜರಾತ್ ಘಟಕದಿಂದ 61 ಮೆಗಾವ್ಯಾಟ್ನಷ್ಟು ರಿನಿವಬಲ್ ಎನರ್ಜಿಯನ್ನು ಗೂಗಲ್ಗೆ ಒದಗಿಸಲಿದೆ. ಕ್ಲೀನ್ಮ್ಯಾಕ್ಸ್ ಸಂಸ್ಥೆ ಕರ್ನಾಟಕ ಹಾಗು ರಾಜಸ್ಥಾನದಲ್ಲಿರುವ ತನ್ನ ಘಟಕಗಳಿಂದ 125 ಮೆಗಾವ್ಯಾಟ್ನಷ್ಟು ವಿದ್ಯುತ್ ಅನ್ನು ಗೂಗಲ್ಗೆ ಸರಬರಾಜು ಮಾಡಲಿದೆ.
ನವದೆಹಲಿ, ಅಕ್ಟೋಬರ್ 4: ಭಾರತದಲ್ಲಿನ ಗೂಗಲ್ನ ಕ್ಲೈಡ್ ಸರ್ವಿಸ್ ಮತ್ತು ಆಪರೇಷನ್ಸ್ಗೆ ಕರ್ನಾಟಕ ಸೇರಿದಂತೆ ವಿವಿಧೆಡೆಯಿಂದ ಸ್ವಚ್ಛ ಶಕ್ತಿ ಪೂರೈಕೆ ಆಗಲಿದೆ. ಗೂಗಲ್ ಸಂಸ್ಥೆ ಅದಾನಿ ಗ್ರೂಪ್ ಮತ್ತು ಕ್ಲೀನ್ಮ್ಯಾಕ್ಸ್ ಎಂಬ ಎರಡು ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಕ್ಲೀನ್ ಮ್ಯಾಕ್ಸ್ ವತಿಯಿಂದ 125.4 ಮೆಗಾವ್ಯಾಟ್ನಷ್ಟು ಕ್ಲೀನ್ ಎನರ್ಜಿ ಗೂಗಲ್ನ ವಿವಿಧ ಕಚೇರಿಗಳಿಗೆ ಪೂರೈಕೆ ಆಗಲಿದೆ. ಹಾಗೆಯೇ, ಅದಾನಿ ಗ್ರೂಪ್ ಜೊತೆ 61.4 ಮೆಗಾವ್ಯಾಟ್ನಷ್ಟು ವಿದ್ಯುತ್ ಪೂರೈಕೆಗೆ ಗೂಗಲ್ ಒಪ್ಪಂದ ಮಾಡಿಕೊಂಡಿದೆ.
ಗೂಗಲ್ ಸಂಸ್ಥೆ ಭಾರತದಲ್ಲಿರುವ ತನ್ನ ಕ್ಲೌಡ್ ಸರ್ವಿಸ್ ಸೇರಿದಂತೆ ಎಲ್ಲಾ ಕಚೇರಿ ಮತ್ತು ಯೂನಿಟ್ಗಳಿಗೆ 2030ರಷ್ಟರಲ್ಲಿ ಸಂಪೂರ್ಣ ಮರುಬಳಕೆ ಶಕ್ತಿ ಆಧಾರಿತ ವಿದ್ಯುತ್ ಅನ್ನು ಬಳಸಲು ಗುರಿ ಇಟ್ಟಿದೆ. ಈ ನಿಟ್ಟಿನಲ್ಲಿ ಇವೆರಡು ಒಪ್ಪಂದಗಳು ಪ್ರಮುಖ ಹೆಜ್ಜೆಗಳಾಗಿವೆ.
ಇದನ್ನೂ ಓದಿ: ರೈಲ್ವೆ ಉದ್ಯೋಗಿಗಳಿಗೆ 2,029 ಕೋಟಿ ರೂ ಮೊತ್ತದ ಬೋನಸ್ ಬಿಡುಗಡೆಗೆ ಸಂಪುಟ ಅನುಮೋದನೆ
ಕ್ಲೀನ್ಮ್ಯಾಕ್ಸ್ ಕಂಪನಿ ಮುಂಬೈ ಮೂಲದ್ದಾಗಿದ್ದು, ದೇಶದ ವಿವಿಧೆಡೆ ಸೋಲಾರ್ ಮತ್ತು ವಿಂಡ್ ಎನರ್ಜಿ ಉತ್ಪಾದನಾ ಘಟಕಗಳನ್ನು ಹೊಂದಿದೆ. ವರ್ಷಕ್ಕೆ ಒಟ್ಟು 100 ಮೆಗಾವ್ಯಾಟ್ಗಳಷ್ಟು ಸ್ವಚ್ಛ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಕರ್ನಾಟಕದ ಜಗಳೂರಿನಲ್ಲೇ 47 ಮೆಗಾವ್ಯಾಟ್ನಷ್ಟು ಸೋಲಾರ್-ವಿಂಡ್ ಫಾರ್ಮ್ ಹೊಂದಿದೆ. ಬೆಂಗಳೂರು ಏರ್ಪೋರ್ಟ್ ಸೇರಿದಂತೆ ಹಲವು ಸಂಸ್ಥೆಗಳಿಗೆ ಇದು ವಿದ್ಯುತ್ ಪೂರೈಕೆ ಮಾಡುತ್ತದೆ. ಈಗ 59.4 ಮೆಗಾವ್ಯಾಟ್ನಷ್ಟು ವಾಯುಶಕ್ತಿಯನ್ನು ಗೂಗಲ್ ಕಚೇರಿಗಳೀಗೆ ಅದು ಪೂರೈಕೆ ಮಾಡಲಿದೆ.
ರಾಜಸ್ಥಾನದಲ್ಲಿರುವ ತನ್ನ ವಿವಿಧ ಯೂನಿಟ್ಗಳಿಂದ 66 ಮೆಗಾವ್ಯಾಟ್ ಸೌರಶಕ್ತಿಯನ್ನು ಕ್ಲೀನ್ ಮ್ಯಾಕ್ಸ್ ಸಂಸ್ಥೆ ಗೂಗಲ್ಗೆ ಸರಬರಾಜು ಮಾಡಲಿದೆ.
ಅದಾನಿ ಗ್ರೂಪ್ನಿಂದ 61.4 ಮೆಗಾವ್ಯಾಟ್ ವಿದ್ಯುತ್ ಪೂರೈಕೆ
ಅದಾನಿ ಗ್ರೂಪ್ ಕೂಡ ಸಾಕಷ್ಟು ರಿನಿವಬಲ್ ಎನರ್ಜಿ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಗುಜರಾತ್ನ ಖಾವಡಾ ಎನರ್ಜಿ ಪಾರ್ಕ್ನಲ್ಲಿ 30 ಗಿಗಾವ್ಯಾಟ್ ಉತ್ಪಾದನಾ ಶಕ್ತಿ ಇದ್ದು, ಅದರಲ್ಲಿ 61.4 ಮೆಗಾವ್ಯಾಟ್ನಷ್ಟು ವಿದ್ಯುತ್ ಅನ್ನು ಗೂಗಲ್ ಯೂನಿಟ್ಗಳಿಗೆ ಪೂರೈಕೆ ಮಾಡಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ