ಫಾಕ್ಸ್​ಕಾನ್​ನಿಂದ ಭಾರತದಲ್ಲಿ ಐಫೋನ್-16 ಪ್ರೋ ಫೋನ್ ತಯಾರಿಕೆ; ಇನ್ನಷ್ಟು ಫ್ಯಾಕ್ಟರಿ ಸ್ಥಾಪಿಸಲಿರುವ ಜೇಬಿಲ್

Foxconn and Jabil manufacturing units in India: ಫಾಕ್ಸ್​ಕಾನ್​ನ ತಮಿಳುನಾಡು ಫ್ಯಾಕ್ಟರಿಯಲ್ಲಿ ಐಫೋನ್-16 ಪ್ರೋ ಸರಣಿಯ ಫೋನ್​ಗಳ ಅಸೆಂಬ್ಲಿಂಗ್ ನಡೆಯುವುದು ಪಕ್ಕಾ ಆಗಿದೆ. ಅದಕ್ಕಾಗಿ ಆ್ಯಪಲ್ ಸಂಸ್ಥೆಯಿಂದ ವಿಶೇಷ ಉಪಕರಣವನ್ನು ಫಾಕ್ಸ್​ಕಾನ್ 267 ಕೋಟಿ ರೂಗೆ ಖರೀದಿಸಿದೆ. ಇನ್ನು, ಪುಣೆಯಲ್ಲಿ ಎರಡು ಫ್ಯಾಕ್ಟರಿ ಹೊಂದಿರುವ ಜೇಬಿಲ್ ಸಂಸ್ಥೆ ಇನ್ನೂ ಎರಡು ಯೂನಿಟ್ ಸ್ಥಾಪಿಸಲು ಹೊರಟಿದೆ.

ಫಾಕ್ಸ್​ಕಾನ್​ನಿಂದ ಭಾರತದಲ್ಲಿ ಐಫೋನ್-16 ಪ್ರೋ ಫೋನ್ ತಯಾರಿಕೆ; ಇನ್ನಷ್ಟು ಫ್ಯಾಕ್ಟರಿ ಸ್ಥಾಪಿಸಲಿರುವ ಜೇಬಿಲ್
ಜೇಬಿಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 25, 2024 | 2:55 PM

ನವದೆಹಲಿ, ಅಕ್ಟೋಬರ್ 25: ಆ್ಯಪಲ್ ಸಂಸ್ಥೆಯ ಲೇಟೆಸ್ಟ್ ಹಾಗು ಅತ್ಯುನ್ನತ ಮಾಡಲ್ ಆದ ಐಫೋನ್ 16 ಪ್ರೋ ಸರಣಿಯ ಫೋನ್​ಗಳು ಭಾರತದಲ್ಲಿ ನಿರ್ಮಾಣವಾಗಲಿವೆ. ಈ ಹೈ ಎಂಡ್ ಫೋನ್​ಗಳು ಚೀನಾ ಬಿಟ್ಟರೆ ಬೇರೆಲ್ಲೂ ಅಸೆಂಬಲ್ ಆಗಿಲ್ಲ. ಭಾರತದಲ್ಲಿ ಆಗುತ್ತಿರುವುದು ಮಹತ್ವದ ಬೆಳವಣಿಗೆ. ಆ್ಯಪಲ್​ನ ಸಪ್ಲೈಯರ್ ಆಗಿರುವ ಫಾಕ್ಸ್​ಕಾನ್ ತನ್ನ ತಮಿಳುನಾಡು ಘಟಕದಲ್ಲಿ ಐಫೋನ್16 ಪ್ರೋ ಸೀರೀಸ್ ಫೋನ್ ಅನ್ನು ತಯಾರಿಸಲಿದೆ. ಅದಕ್ಕಾಗಿ ಆ್ಯಪಲ್ ಕಂಪನಿಯಿಂದ ಅಗತ್ಯವಾದ ಉಪಕರಣವನ್ನು 31.8 ಮಿಲಿಯನ್ ಡಾಲರ್ (267 ಕೋಟಿ ರೂ) ಕೊಟ್ಟು ಖರೀದಿಸಿದೆ.

ಕೆಲ ವರ್ಷಗಳ ಹಿಂದಿನವರೆಗೂ ಆ್ಯಪಲ್ ಸಂಸ್ಥೆಯ ಬಹುತೇಕ ಉತ್ಪನ್ನಗಳ ತಯಾರಿಕೆ ಚೀನಾದಲ್ಲೇ ಹೆಚ್ಚಾಗಿ ಆಗುತ್ತಿತ್ತು. ಕೋವಿಡ್ ಬಳಿಕ ಹಲವು ಅಮೆರಿಕನ್ ಕಂಪನಿಗಳು ಚೀನಾ ಮೇಲಿನ ಅತಿಯಾದ ಅವಲಂಬನೆಯನ್ನು ಕಡಿಮೆ ಮಾಡುತ್ತಿವೆ. ವಿಯೆಟ್ನಾಂ, ಭಾರತ, ಇಂಡೋನೇಷ್ಯಾ, ಫಿಲಿಪ್ಪೈನ್ಸ್ ಮೊದಲಾದ ದೇಶಗಳಿಗೆ ಉತ್ಪಾದನೆಯನ್ನು ವಿಸ್ತರಿಸುತ್ತಿವೆ. ಭಾರತದಲ್ಲಿ ಫಾಕ್ಸ್​ಕಾನ್, ಟಾಟಾ ಎಲೆಕ್ಟ್ರಾನಿಕ್ಸ್, ಪೆಗಾಟ್ರಾನ್ ಮೊದಲಾದ ಕಂಪನಿಗಳು ಆ್ಯಪಲ್ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿವೆ.

ಇದನ್ನೂ ಓದಿ: ವಿಮಾನ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಲು ಭಾರತ ಯೋಜನೆ; ಏರ್​ಬಸ್ ನೆರವಿಗೆ ಯೋಚನೆ

ಜೇಬಿಲ್​ನಿಂದ ಇನ್ನಷ್ಟು ಫ್ಯಾಕ್ಟರಿಗಳ ಸ್ಥಾಪನೆ

ಆ್ಯಪಲ್​ನ ಸರಬರಾಜುದಾರ ಸಂಸ್ಥೆಗಳಲ್ಲಿ ಒಂದಾದ ಅಮೆರಿಕದ ಜೇಬಿಲ್ (Jabil) ಭಾರತದಲ್ಲಿ ಇನ್ನಷ್ಟು ಫ್ಯಾಕ್ಟರಿಗಳನ್ನು ಸ್ಥಾಪಿಸಲು ಯೋಜಿಸಿದೆ. ಪುಣೆಯಲ್ಲಿ ಜೇಬಿಲ್ ಎರಡು ಫ್ಯಾಕ್ಟರಿ ಹೊಂದಿದೆ. ವೈಫೈ, ಎನ್​ಎಫ್​ಸಿ, ಆರ್​ಎಫ್​ಐಡಿ, ಕ್ಯಾಮರಾ ಅಪ್ಟಿಕ್ಸ್, ಪ್ಲಾಸ್ಟಿಕ್ ಕೇಸಿಂಗ್ಸ್ ಮೊದಲಾದ ಬಿಡಿಭಾಗಗಳನ್ನು ಆ್ಯಪಲ್ ಉತ್ಪನ್ನಗಳಿಗಾಗಿ ತಯಾರಿಸಲಾಗುತ್ತಿದೆ.

ಮುಂದಿನ ಮೂರ್ನಾಲ್ಕು ವರ್ಷದಲ್ಲಿ ಎರಡು ಅಥವಾ ಇನ್ನೂ ಹೆಚ್ಚು ಫ್ಯಾಕ್ಟರಿಗಳನ್ನು ಸ್ಥಾಪಿಸಲಿದೆ ಜೇಬಿಲ್. ತಮಿಳುನಾಡಿನ ತಿರುಚ್ಚಿಯಲ್ಲಿ ಒಂದು ಯೂನಿಟ್ ಸ್ಥಾಪನೆಯಾಗಬಹುದು ಎಂದು ಹೇಳಲಾಗುತ್ತಿದೆ. ಈ ಹೊಸ ಫ್ಯಾಕ್ಟರಿಗಳ ಸ್ಥಾಪನೆಗೆ ಎರಡು ಸಾವಿರ ಕೋಟಿ ರೂಗೂ ಅಧಿಕ ಹೂಡಿಕೆ ಮಾಡಲು ಜೆಬಿಲ್ ಯೋಜಿಸಿದೆ.

ಇದನ್ನೂ ಓದಿ: ಕಳೆದ ದೀಪಾವಳಿಯಿಂದ 82 ಐಪಿಒ; ಲಕ್ಷ ಕೋಟಿ ರೂ ಬಂಡವಾಳ; ಸಾಲಿನಲ್ಲಿವೆ ಇನ್ನೂ 63 ಕಂಪನಿಗಳು

ಆ್ಯಪಲ್​ನ ಸಪ್ಲೈಯರ್ ಕಂಪನಿಗಳಲ್ಲಿ ಫಾಕ್ಸ್​ಕಾನ್ ಸೇರಿದಂತೆ 13 ಕಂಪನಿಗಳು ಭಾರತದಲ್ಲಿ ಉಪಸ್ಥಿತಿ ಹೊಂದಿವೆ. ತಮಿಳುನಾಡು, ಕರ್ನಾಟಕ, ಉತ್ತರಪ್ರದೇಶ, ಹರ್ಯಾಣ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ಮ್ಯಾನುಫ್ಯಾಕ್ಚರಿಂಗ್ ಯೂನಿಟ್​​ಗಳಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ