EPF: ಇಪಿಎಫ್ ಪೋರ್ಟಲ್ ಈಗಲೂ ತೆರೆಯುತ್ತಿಲ್ಲವಾ? ನಿಮ್ಮ ಪಿಎಫ್ ಬ್ಯಾಲೆನ್ಸ್ ನೋಡಲು ಬೇರೆ ಸರಳ ಮಾರ್ಗಗಳೂ ಉಂಟು

|

Updated on: Apr 27, 2023 | 3:22 PM

Alternative Ways To Get EPF Service: ಇಪಿಎಫ್​ನ ಪೋರ್ಟಲ್​ನಲ್ಲಿ ಪಾಸ್​ಬುಕ್ ಸೇವೆ ತಾತ್ಕಾಲಿಕವಾಗಿ ಅಲಭ್ಯ ಇರುವುದರಿಂದ ಸದಸ್ಯರು ಎಸ್​ಎಂಎಸ್ ಅಥವಾ ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲನ್ಸ್ ವೀಕ್ಷಿಸಬಹುದು. ಉಮಂಗ್ ಆ್ಯಪ್ ಡೌನ್​ಲೋಡ್ ಮಾಡಿ ಅಲ್ಲಿಂದಲೂ ಇಪಿಎಫ್ ಸರ್ವಿಸ್ ಪಡೆಯಬಹುದು.

EPF: ಇಪಿಎಫ್ ಪೋರ್ಟಲ್ ಈಗಲೂ ತೆರೆಯುತ್ತಿಲ್ಲವಾ? ನಿಮ್ಮ ಪಿಎಫ್ ಬ್ಯಾಲೆನ್ಸ್ ನೋಡಲು ಬೇರೆ ಸರಳ ಮಾರ್ಗಗಳೂ ಉಂಟು
ಇಪಿಎಫ್
Follow us on

ಬೆಂಗಳೂರು: ಇಪಿಎಫ್​ನ ಅಧಿಕೃತ ಪೋರ್ಟಲ್​ನಲ್ಲಿ ಇಪಾಸ್​ಬುಕ್ ಸೇವೆಯಲ್ಲಿ (e-Passbook Service) ದೋಷ ಕಾಣಿಸಿ, ಆ ಪುಟ ತೆರೆಯುತ್ತಿಲ್ಲ ಎಂದು ಈಗಾಗಲೇ ಬಹಳ ಮಂದಿ ಸದ್ಯಸರು ಇಂಟರ್ನೆಟ್​ನಲ್ಲಿ ವಿಚಾರ ಪ್ರಸ್ತಾಪಿಸಿದ್ದಾರೆ. ಈ ಸಮಸ್ಯೆ ತಲೆದೋರಿ ಹಲವು ದಿನಗಳೇ ಆಗಿವೆ. ತಿಂಗಳುಗಳಿಂದಲೂ ಈ ತೊಂದರೆ ಇದೆ. ಆರೇಳು ತಿಂಗಳ ಹಿಂದೆಯೇ ಇಪಿಎಫ್​ನ ಇಸೇವೆಗಳು ನಿಧಾನಗೊಂಡಿದ್ದವು. ಈಗ ಪೋರ್ಟಲ್​ನಲ್ಲಿ ಸರ್ವಿಸ್ ಪುಟವೇ ತೆರೆಯುತ್ತಿಲ್ಲ ಎನ್ನಲಾಗಿದೆ. ಈ ಸಮಸ್ಯೆ ನಿವಾರಣೆಗೆ ಪ್ರಯತ್ನಿಸುತ್ತಿರುವುದಾಗಿ ಇಪಿಎಫ್​ಒ ಸಂಸ್ಥೆ ಸ್ಪಷ್ಟಪಡಿಸಿದ್ದು, ಕೆಲ ದಿನಗಳವರೆಗೆ ಸಂಯಮದಿಂದ ಇರಬೇಕೆಂದು ಕೋರಿದೆ. ಆದಾಗ್ಯೂ ನಿಮ್ಮ ಇಪಿಎಫ್ ಖಾತೆಯ ವಿವರಗಳನ್ನು ನೋಡಲು ಬೇರೆ ಕೆಲ ಸರಳ ಮಾರ್ಗಗಳ ಆಯ್ಕೆ ನಿಮಗೆ ಇದೆ.

ಉಮಂಗ್ ಆ್ಯಪ್ ಮೂಲಕ ಇಪಿಎಫ್ ಪಾಸ್​ಬುಕ್ ವೀಕ್ಷಿಸಬಹುದು

ನಿಮ್ಮಲ್ಲಿ UMANG ಆ್ಯಪ್ ಇದ್ದರೆ ಆನ್​ಲೈನ್​ನಲ್ಲೇ ಹಲವು ಸರ್ವಿಸ್ ಪಡೆಯಬಹುದು. ನಿಮ್ಮಲ್ಲಿ ಇದು ಇಲ್ಲದಿದ್ದರೆ ಪ್ಲೇಸ್ಟಓರ್​ನಿಂದ UMANG ಆ್ಯಪ್ ಅನ್ನು ಡೌನ್​ಲೋಡ್ ಮಾಡಿಕೊಳ್ಳಿ.

  • ಉಮಂಗ್ ಆ್ಯಪ್ ತೆರೆದು ನಿಮ್ಮ ಖಾತೆಗೆ ಲಾಗಿನ್ ಆಗಿ
  • ಅಲ್ಲಿ ಇಪಿಎಫ್​ಒ ಸೆಕ್ಷನ್ ಕಾಣಿಸದಿದ್ದರೆ ಸರ್ಚ್ ಬಾರ್​ನಲ್ಲಿ ಇಪಿಎಫ್​ಒ ಎಂದು ಶೋಧಿಸಿ
  • ಇಪಿಎಫ್​ಒ ಮೇಲೆ ಕ್ಲಿಕ್ ಮಾಡಿ
  • ಅಲ್ಲಿ ಹಲವು ಸೇವೆಗಳ ಪಟ್ಟಿ ನೋಡಬಹುದು. ಅದರಲ್ಲಿ ‘ವೀವ್ ಪಾಸ್​ಬುಕ್’ ಆಯ್ಕೆ ಮಾಡಿ
  • ನಿಮ್ಮ ಯುಎಎನ್ ನಂಬರ್ ನಂಬರ್ ನಮೂದಿಸಿ, ಒಟಿಪಿ ಹಾಕಿ, ನಂತರ ಸಬ್ಮಿಟ್ ಕ್ಲಿಕ್ ಮಾಡಿ.
  • ನಿಮ್ಮ ಯುಎಎನ್ ಅಡಿಯಲ್ಲಿ ಇಪಿಎಫ್ ಖಾತೆಗಳ ಪಟ್ಟಿ ನೋಡಬಹುದು. ಮೆಂಬರ್ ಐಡಿ ಆಯ್ಕೆ ಮಾಡಿ ಇಪಾಸ್​ಬುಕ್ ಡೌನ್​ಲೋಡ್ ಮಾಡಿ.

ಇದನ್ನೂ ಓದಿOTT Rate Hike: ಅಮೇಜಾನ್ ಪ್ರೈಮ್ ದರ ಏರಿಕೆ; ಇದರ ಹಿಂದಿದೆಯಾ ಬ್ಯುಸಿನೆಸ್ ತಂತ್ರ? ಇತರ ಒಟಿಟಿಗಳಿಂದಲೂ ಶೀಘ್ರದಲ್ಲೇ ಬೆಲೆ ಏರಿಕೆ ಸಾಧ್ಯತೆ

ಎಸ್​ಎಂಎಸ್ ಮೂಲಕ ಇಪಿಎಫ್ ಬ್ಯಾಲನ್ಸ್ ನೋಡಬಹುದು

ನೀವು ಇಪಿಎಫ್​ಒನಲ್ಲಿ ನಿಮ್ಮ ಯುಎಎನ್ ನಂಬರ್ ಅನ್ನು ನೊಂದಾಯಿಸಿದ್ದರೆ ಬಹಳ ಸರಳ ಹಾಗೂ ಪರಿಣಾಮಕಾರಿ ಮಾರ್ಗಗಳ ಮೂಲಕ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವ ಅವಕಾಶ ಸಿಗುತ್ತದೆ. ಅದರಲ್ಲಿ ಎಸ್ಸೆಮ್ಮೆಸ್ ಕೂಡ ಒಂದು. ನಿಮ್ಮ ಯುಎಎನ್ ನಂಬರ್​ಗೆ ಜೋಡಿತವಾಗಿರುವ ಮೊಬೈಲ್ ನಂಬರ್​ನಿಂದ EPFOHO UAN ENG ಎಂದು ಟೈಪಿಸಿ 7738299899 ನಂಬರ್​ಗೆ ಮೆಸೇಜ್ ಕಳುಹಿಸಿ. ನಿಮ್ಮ ಪಿಎಫ್ ಖಾತೆಯಲ್ಲಿ ಎಷ್ಟು ಹಣ ಇದೆ ಎಂಬ ಮಾಹಿತಿ ಇರುವ ಮೆಸೇಜ್ ನಿಮಗೆ ವಾಪಸ್ ಬರುತ್ತದೆ.

ಈ ಸೇವೆ ಪಡೆಯಲು ಪಿಎಫ್ ಹಣ ಹೋಗುವ ನಿಮ್ಮ ಬ್ಯಾಂಕ್ ಖಾತೆ, ಆಧಾರ್ ನಂಬರ್, ಪ್ಯಾನ್ ನಂಬರ್​ಗೆ ಯುಎಎನ್ ನಂಬರ್ ಲಿಂಕ್ ಆಗಿದ್ದಿರಬೇಕು.

ಇಲ್ಲಿ ಮೆಸೇಜ್ ಕಂಟೆಂಟ್​ನಲ್ಲಿ EPFOHO UAN ENG ಎಂದಿದೆ. ಇದರಲ್ಲಿ ENG ಬದಲು KAN ಎಂದು ಹಾಕಿದರೆ ಕನ್ನಡದಲ್ಲೂ ಮೆಸೇಜ್ ಬರುತ್ತದೆ.

ಇದನ್ನೂ ಓದಿPost Office Scheme: ಹಣ ಉಳಿತಾಯಕ್ಕೆ ಬೆಸ್ಟ್; ಈ ಪೋಸ್ಟ್ ಆಫೀಸ್ ಸ್ಕೀಮ್​ನಲ್ಲಿ 10 ವರ್ಷಕ್ಕೆ 16 ಲಕ್ಷ ರೂ ರಿಟರ್ನ್ ಸಿಗುತ್ತೆ

ಮಿಸ್ಡ್ ಕಾಲ್ ಮೂಲಕವೂ ಇಪಿಎಫ್ ಬ್ಯಾಲನ್ಸ್ ತಿಳಿಯಬಹುದು

ಆಗಲೇ ಹೇಳಿದಂತೆ ಇಪಿಎಫ್​ಒಗೆ ಯುಎಎನ್ ಅನ್ನು ನೊಂದಾಯಿಸಿದ್ದರೆ ಮಿಸ್ಡ್ ಕಾಲ್ ಮೂಲಕ ಪಿಎಫ್ ಬ್ಯಾಲನ್ಸ್ ತಿಳಿಯಬಹುದು. ನಿಮ್ಮ ನೊಂದಾಯಿತ ಮೊಬೈಲ್ ನಂಬರ್​ನಿಂದ 9966044425 ಗೆ ಮಿಸ್ಡ್ ಕಾಲ್ ಕೊಟ್ಟರೆ ನಿಮಗೆ ಪಿಎಫ್ ಬ್ಯಾಲನ್ಸ್ ವಿವರ ಇರುವ ಮೆಸೇಜ್ ಬರುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:22 pm, Thu, 27 April 23