AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Post Office Scheme: ಹಣ ಉಳಿತಾಯಕ್ಕೆ ಬೆಸ್ಟ್; ಈ ಪೋಸ್ಟ್ ಆಫೀಸ್ ಸ್ಕೀಮ್​ನಲ್ಲಿ 10 ವರ್ಷಕ್ಕೆ 16 ಲಕ್ಷ ರೂ ರಿಟರ್ನ್ ಸಿಗುತ್ತೆ

Recurring Deposit Scheme in PO: ಪೋಸ್ಟ್ ಆಫೀಸ್​ನ ಆರ್​ಡಿ ಸ್ಕೀಮ್​ನಲ್ಲಿ ತಿಂಗಳಿಗೆ 10,000 ರೂ ಕಟ್ಟುತ್ತಾ ಹೋದರೆ 10 ವರ್ಷದಲ್ಲಿ ಒಟ್ಟು 16.6 ಲಕ್ಷ ರೂ ರಿಟರ್ನ್ ಸಿಗುತ್ತದೆ. ಈ ಸ್ಕೀಮ್ 5 ವರ್ಷದ್ದಾದರೂ 10 ವರ್ಷದವರೆಗೆ ವಿಸ್ತರಣೆ ಸಾಧ್ಯ.

Post Office Scheme: ಹಣ ಉಳಿತಾಯಕ್ಕೆ ಬೆಸ್ಟ್; ಈ ಪೋಸ್ಟ್ ಆಫೀಸ್ ಸ್ಕೀಮ್​ನಲ್ಲಿ 10 ವರ್ಷಕ್ಕೆ 16 ಲಕ್ಷ ರೂ ರಿಟರ್ನ್ ಸಿಗುತ್ತೆ
ಪೋಸ್ಟ್ ಆಫೀಸ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 27, 2023 | 1:03 PM

Share

ಮುಖ್ಯಾಂಶಗಳು

  • ಪೋಸ್ಟ್ ಆಫೀಸ್ ಆರ್​ಡಿ ಸ್ಕೀಮ್ 5 ವರ್ಷದ ಅವಧಿಯದ್ದಾಗಿದ್ದು, 10 ವರ್ಷದವರೆಗೆ ಮುಂದುವರಿಸಬಹುದು.
  • ಪೋಸ್ಟ್ ಆಫೀಸ್ ಆರ್​ಡಿ ಸ್ಕೀಮ್​ನಲ್ಲಿ ವರ್ಷಕ್ಕೆ ಶೇ. 6.2 ಬಡ್ಡಿ ದರ ನೀಡಲಾಗುತ್ತದೆ. ತಿಂಗಳಿಗೆ ಕನಿಷ್ಠ 100 ರೂನ ಕಂತು ಕಟ್ಟಬೇಕು.
  • ಬ್ಯಾಂಕುಗಳಲ್ಲಿ ಆರ್​ಡಿಗೆ ನೀಡಲಾಗುವ ಬಡ್ಡಿಗೆ ಹೋಲಿಸಿದರೆ ಅಂಚೆ ಕಚೇರಿಯಲ್ಲಿ ಬಡ್ಡಿ ದರ ತುಸು ಕಡಿಮೆ

ಬಹಳ ಮಂದಿ ಈಗ ಪೋಸ್ಟ್ ಆಫೀಸ್ ಸ್ಕೀಮ್​ಗಳಲ್ಲಿ (Post Office Schemes) ತಮ್ಮ ಉಳಿತಾಯದ ಹಣ ಹೂಡಿಕೆ ಮಾಡಲು ಮುಂದಾಗುತ್ತಿದ್ದಾರೆ. ಇಮೇಲ್ ಬಂದ ಬಳಿಕ ಅಂಚೆಗಳ ಕತೆ ಮುಗಿಯಿತು, ಅಂಚೆ ಕಚೇರಿಗಳು ಬಂದ್ ಆಗುವುದು ಅನಿವಾರ್ಯ ಎಂದು ಎಲ್ಲರೂ ಭಾವಿಸುತ್ತಿರುವಂತೆಯೇ ಕೇಂದ್ರ ಸರ್ಕಾರ ವಿವಿಧ ಉಳಿತಾಯ ಸ್ಕೀಮ್​ಗಳನ್ನು ಪೋಸ್ಟ್ ಆಫೀಸ್ ಹೆಸರಿನಲ್ಲಿ ಅರಂಭಿಸಿತು. ಅದಾದ ಬಳಿಕ ಪೋಸ್ಟ್ ಆಫೀಸ್ ಚರ್ಯೆಯೆ ಬದಲಾಗಿ ಹೋಗಿದೆ. ಅನೇಕ ಅಂಚೆ ಕಚೇರಿಗಳಲ್ಲಿ ಜನರು ಸರದಿಯಲ್ಲಿ ನಿಂತು ಸೇವೆ ಪಡೆಯುವುದನ್ನು ಕಾಣಬಹುದು. ಇದು ಅಂಚೆ ಕಚೇರಿಯ ವಿವಿಧ ಸೇವಿಂಗ್ ಸ್ಕೀಮ್ ಮತ್ತು ಇನ್ವೆಸ್ಟ್​ಮೆಂಟ್ ಸ್ಕೀಮ್​ಗಳು ಜನಪ್ರಿಯತೆ ಪಡೆಯುತ್ತಿರುವುದಕ್ಕೆ ಸಾಕ್ಷಿ. ಅಂಚೆ ಕಚೇರಿಯ ಹಲವು ಜನಪ್ರಿಯ ಯೋಜನೆಗಳಲ್ಲಿ ಅದರ ಆರ್​ಡಿ ಸ್ಕೀಮ್​ಗಳೂ ಇವೆ. ಪೋಸ್ಟ್ ಆಫೀಸ್ ಆರ್​ಡಿ ಸ್ಕೀಮ್​ನಲ್ಲಿ (Post Office RD Scheme) ಇರಿಸುವ ಠೇವಣಿಗಳಿಗೆ ವರ್ಷಕ್ಕೆ ಶೇ. 6.2ರಷ್ಟು ಬಡ್ಡಿ ಕೊಡಲಾಗುತ್ತದೆ. ಈ ಹೊಸ ಬಡ್ಡಿದರ 2023 ಏಪ್ರಿಲ್1ರಿಂದ ಅನ್ವಯಕ್ಕೆ ಬರುತ್ತದೆ.

ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ ಸ್ಕೀಮ್ ವಿವರ

ಅಂಚೆ ಕಚೇರಿ ಆರ್​ಡಿ ಯೋಜನೆ 5 ವರ್ಷದ ಅವಧಿಯದ್ದಾಗಿದೆ. ಆರ್​ಡಿ ಖಾತೆ ತೆರೆದು 60 ತಿಂಗಳವರೆಗೆ ಪ್ರತೀ ತಿಂಗಳು ಠೇವಣಿ ಇಡಬಹುದು. ಗ್ರಾಹಕರು ಬಯಸಿದರೆ ಇನ್ನೂ 5 ವರ್ಷ ಇದರ ಅವಧಿ ವಿಸ್ತರಿಸಬಹುದು. ಒಟ್ಟು 10 ವರ್ಷದವರೆಗೆ ಈ ಸ್ಕೀಮ್​ನ ಲಾಭ ಪಡೆಯಬಹುದು. ಹೆಚ್ಚುವರಿ 5 ವರ್ಷದ ಅವಧಿ ವಿಸ್ತರಣೆ ಬೇಕೆಂದವರು ಅಂಚೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಕೋರಬಹುದು. ತಿಂಗಳ ಕಂತು ಕನಿಷ್ಠ 100 ರೂನಿಂದ ಅರಂಭವಾಗುತ್ತದೆ. ಗರಿಷ್ಠ ಕಂತಿನ ಹಣಕ್ಕೆ ಮಿತಿ ಇಲ್ಲ.

ಇದನ್ನೂ ಓದಿOTT Rate Hike: ಅಮೇಜಾನ್ ಪ್ರೈಮ್ ದರ ಏರಿಕೆ; ಇದರ ಹಿಂದಿದೆಯಾ ಬ್ಯುಸಿನೆಸ್ ತಂತ್ರ? ಇತರ ಒಟಿಟಿಗಳಿಂದಲೂ ಶೀಘ್ರದಲ್ಲೇ ಬೆಲೆ ಏರಿಕೆ ಸಾಧ್ಯತೆ

ಪೋಸ್ಟ್ ಆಫೀಸ್ ಆರ್​ಡಿ ಸ್ಕೀಮ್​ನಲ್ಲಿ ತಿಂಗಳಿಗೆ 1,000 ರೂ ಕಟ್ಟಿದರೆ ಎಷ್ಟು ಸಿಗುತ್ತೆ ರಿಟರ್ನ್ಸ್?

ನೀವು ಅಂಚೆ ಕಚೇರಿಯಲ್ಲಿ ಆರ್​ಡಿ ಅಕೌಂಟ್ ತೆರೆದು ತಿಂಗಳಿಗೆ 1,000 ರೂ ಕಟ್ಟಿದರೆ 5 ವರ್ಷಕ್ಕೆ ನೀವು 60,000 ರೂ ಹಣ ತುಂಬಿಸಿದಂತಾಗುತ್ತದೆ. ಇದಕ್ಕೆ ಬಡ್ಡಿ ಸೇರಿ ನಿಮ್ಮ ಖಾತೆಯಲ್ಲಿ 70,431 ರೂ ಜಮೆಯಾಗುತ್ತದೆ. ನೀವು 10 ವರ್ಷಕ್ಕೆ ಈ ಸ್ಕೀಮ್ ವಿಸ್ತರಿಸಿದರೆ ಬಡ್ಡಿ ಸೇರಿ ಒಟ್ಟು 1.66 ಲಕ್ಷ ರೂ ಮೊತ್ತ ನಿಮ್ಮ ಆರ್​ಡಿ ಖಾತೆಯಲ್ಲಿರುತ್ತದೆ.

ಪೋಸ್ಟ್ ಆಫೀಸ್ ಆರ್​ಡಿ ಸ್ಕೀಮ್​ನಲ್ಲಿ ತಿಂಗಳಿಗೆ 10,000 ರೂ ಕಟ್ಟಿದರೆ 16.6 ಲಕ್ಷ ರೂ ರಿಟರ್ನ್ಸ್

ಪೋಸ್ಟ್ ಆಫೀಸ್​ನ ಆರ್​ಡಿ ಸ್ಕೀಮ್​ನಲ್ಲಿ ನೀವು ತಿಂಗಳಿಗೆ 10,000 ರೂ ಕಟ್ಟುತ್ತಾ ಹೋದರೆ 5 ವರ್ಷದಲ್ಲಿ 7.04 ಲಕ್ಷ ರೂ ಜಮೆ ಆಗುತ್ತದೆ. 10 ವರ್ಷಕ್ಕೆ 16.6 ಲಕ್ಷ ರೂ ಸೇರುತ್ತದೆ. ಇದು ಬಡ್ಡಿ ಸೇರಿ ಸಿಗುವ ಮೊತ್ತ.

ಪೋಸ್ಟ್ ಆಫೀಸ್ ಆರ್​ಡಿ ಸ್ಕೀಮ್​ನಲ್ಲಿ ತಿಂಗಳ ಕಂತು ಕಟ್ಟಲು ತಪ್ಪಿಸಿದರೆ ಎಷ್ಟು ದಂಡ?

ಪೋಸ್ಟ್ ಆಫೀಸ್​ನ ಆರ್​ಡಿ ಸ್ಕೀಮ್​ನಲ್ಲಿ ಪ್ರತೀ ತಿಂಗಳು ತಪ್ಪದೇ ಕಂತು ಕಟ್ಟಬೇಕು. ಒಂದು ವೇಳೆ ನೀವು ಕಂತು ಕಟ್ಟಲು ವಿಳಂಬ ಮಾಡಿದರೆ ಅಥವಾ ಕಂತು ಕಟ್ಟಲು ಮರೆತುಹೋದರೆ ಶೇ. 1ರಷ್ಟು ದಂಡ ಕಟ್ಟಬೇಕಾಗುತ್ತದೆ. ಅಂದರೆ ನೀವು ತಿಂಗಳಿಗೆ 1,000 ರೂ ಕಂತು ಕಟ್ಟುತ್ತಿದ್ದರೆ ದಂಡದ ಮೊತ್ತ 10 ರೂ ಇರುತ್ತದೆ.

ನೀವು ಸತತ ನಾಲ್ಕು ತಿಂಗಳು ಕಂತು ಕಟ್ಟದಿದ್ದರೆ ಆರ್​ಡಿ ಖಾತೆಯೇ ನಿಷ್ಕ್ರಿಯಗೊಳ್ಳುತ್ತದೆ.

ಇದನ್ನೂ ಓದಿBig Rise: ಬೆಂಗಳೂರು, ಹೈದರಾಬಾದ್​ನ ಈ ಪುಟ್ಟ ಮೆಷೀನ್ ಟೂಲ್ ಕಂಪನಿಗೆ ಹಣ ಹಾಕಿದವರೇ ಸಿರಿವಂತರು; 3 ವರ್ಷದಲ್ಲಿ 7 ಪಟ್ಟು ಬೆಳೆದಿದೆ ಷೇರು

ಅಂಚೆ ಕಚೇರಿ ಮತ್ತು ಬ್ಯಾಂಕ್ ಎಫ್​ಡಿ ದರಗಳ ಹೋಲಿಕೆ

ಆರ್​ಡಿ ದರದಲ್ಲಿ ಇಂದು ಪ್ರಮುಖ ಬ್ಯಾಂಕುಗಳು ಉತ್ತಮ ಬಡ್ಡಿ ದರ ನೀಡುತ್ತವೆ. ಎಸ್​ಬಿಐನಲ್ಲಿ ಆರ್​ಡಿಗೆ ಶೇ. 7.1ರಷ್ಟು ಬಡ್ಡಿ ನೀಡಲಾಗುತ್ತದೆ. ಎಚ್​ಡಿಎಫ್​ಸಿ ಬ್ಯಾಂಕ್ ಸೇರಿದಂತೆ ಬಹುತೇಕ ಪ್ರಮುಖ ಬ್ಯಾಂಕುಗಳು ತಮ್ಮ ಆರ್​ಡಿ ಠೇವಣಿಗಳಿಗೆ ಶೇ. 6.5ಕ್ಕಿಂತ ಹೆಚ್ಚು ಬಡ್ಡಿ ಆಫರ್ ಮಾಡುತ್ತವೆ.

ಪೋಸ್ಟ್ ಆಫೀಸ್​ನಲ್ಲಿ ಆರ್​ಡಿಗೆ ಸಿಗುವ ಬಡ್ಡಿ ಶೇ. 6.2 ಮಾತ್ರ. ಕನಿಷ್ಠ 5 ವರ್ಷದವರೆಗೆ ಖಾತೆಗೆ ಹಣ ತುಂಬಿಸಬೇಕು. ಬ್ಯಾಂಕ್​ನಲ್ಲಾದರೆ ಆರ್​ಡಿ ಅವಧಿ 6 ತಿಂಗಳಿಂದ ಆರಂಭವಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!