AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Rates: ದುಬೈ ಹಾಗು ಕೆಲವೆಡೆ ಚಿನ್ನ ತುಸು ಅಗ್ಗ; ಭಾರತದಲ್ಲಿ ಇವತ್ತು ಎಷ್ಟಿದೆ ಚಿನ್ನದ ಬೆಲೆ?

Bullion Market 2023, April 28th: ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 55,950 ರುಪಾಯಿ ಆಗಿದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 61,040 ರುಪಾಯಿ ಬೆಲೆಯಲ್ಲಿ ಮುಂದುವರಿದಿದೆ. ಬೆಳ್ಳಿ ಬೆಲೆಯೂ ಭಾರತದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದೆ. ಯಾವ್ಯಾವ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ, ಡೀಟೇಲ್ಸ್ ನೋಡಿ.

Gold Rates: ದುಬೈ ಹಾಗು ಕೆಲವೆಡೆ ಚಿನ್ನ ತುಸು ಅಗ್ಗ; ಭಾರತದಲ್ಲಿ ಇವತ್ತು ಎಷ್ಟಿದೆ ಚಿನ್ನದ ಬೆಲೆ?
ಚಿನ್ನ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 28, 2023 | 5:00 AM

Share

ಮುಖ್ಯಾಂಶಗಳು

  • ಭಾರತದಲ್ಲಿ ಏಪ್ರಿಲ್ 28ರಂದು 22 ಕ್ಯಾರಟ್​ನ 10 ಗ್ರಾಮ್ ಚಿನ್ನದ ಬೆಲೆ 55,950 ರುಪಾಯಿ ಇದೆ. 100 ಗ್ರಾಮ್ ಬೆಳ್ಳಿ ಬೆಲೆ 7,650 ರೂ ಇದೆ.
  • ವಿದೇಶೀ ಮಾರುಕಟ್ಟೆಗಳಲ್ಲಿ ಕೆಲವೆಡೆ ಚಿನ್ನದ ಬೆಲೆ ಏರಿದೆ, ಕೆಲವೆಡೆ ಇಳಿಕೆಯಾಗಿದೆ. ದುಬೈನಲ್ಲಿ ಚಿನ್ನದ ಬೆಲೆ 50,000 ರೂ ಮಟ್ಟಕ್ಕಿಂತ ಕೆಳಗಿದೆ.
  • ಬೆಂಗಳೂರಿನಲ್ಲಿ 22 ಕ್ಯಾರೆಟ್​ನ 10 ಗ್ರಾಮ್ ಚಿನ್ನದ ಬೆಲೆ 56,000 ರೂ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,020 ರೂ ಇದೆ.

ಬೆಂಗಳೂರು: ಭರ್ಜರಿಯಾಗಿ ಓಡಿಳಿಯುತ್ತಿದ್ದ ಚಿನ್ನದ ಬೆಲೆ ಇದೀಗ ತುಸು ವಿರಮಿಸಿದೆ. ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಯಾವುದೇ ಏರಿಕೆ ಅಥವಾ ಇಳಿಕೆ ಆಗಿಲ್ಲ. ವಿದೇಶದ ಮಾರುಕಟ್ಟೆಯಲ್ಲಿ ಮಿಶ್ರ ಓಟ ಆಗಿದೆ. ದುಬೈ ಹಾಗು ಕೆಲವೆಡೆ ಚಿನ್ನದ ಬೆಲೆ ಇಳಿದಿದೆ. ಇನ್ನೂ ಕೆಲವೆಡೆ ಏರಿಕೆ ಕಂಡಿದೆ. ಕೆಲ ಚಿನಿವಾರ ಮಾರುಕಟ್ಟೆಗಳಲ್ಲಿ (Bullion Market) ಯಥಾಸ್ಥಿತಿ ಇದೆ. ಭಾರತದಲ್ಲಿ 10 ಗ್ರಾಮ್ ಚಿನ್ನದ ಬೆಲೆ (22 ಕ್ಯಾರಟ್) 56,000 ರೂಗೆ ಅಗುದಿಸಮೀಪ ಇದೆ. 1ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 55,950 ರುಪಾಯಿ ಆಗಿದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 61,040 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 7,650 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 56,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,020 ರುಪಾಯಿಯಲ್ಲಿ ಇದೆ.

ಜಾಗತಿಕವಾಗಿ ಅತಂತ್ರ ಆರ್ಥಿಕ ಸ್ಥಿತಿ ಇರುವುದರಿಂದ ಹೂಡಿಕೆದಾರರಲ್ಲಿ ಗೊಂದಲ ಮನೆಮಾಡಿದೆ. ಇದೇ ಕಾರಣಕ್ಕೆ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತ ಮಾರ್ಗ ಎನಿಸಿದೆ. ಮುಂದೆಯೂ ಆರ್ಥಿಕ ಗೊಂದಲಮಯ ಸ್ಥಿತಿ ಮುಂದುವರಿಯುವುದರಿಂದ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗುವ ಸಾಧ್ಯತೆ ಬಹಳ ಕಡಿಮೆ.

ಚಿನ್ನದ ಬೆಲೆ ಏರಿಳಿತಕ್ಕೆ ಏನು ಕಾರಣ?

ಅಮೆರಿಕದಲ್ಲಿ ಅಲ್ಲಿನ ಫೆಡರಲ್ ಬ್ಯಾಂಕು ಈ ಬಾರಿ ಬಡ್ಡಿ ದರ ಏರಿಕೆ ಮಾಡುವ ಸಾಧ್ಯತೆ ಇಲ್ಲದಿರುವುದರಿಂದ ಚಿನ್ನದ ಮೇಲೆ ಹೂಡಿಕೆ ಹೆಚ್ಚುವ ಸಾಧ್ಯತೆ ಇದೆ. ಉದ್ಯೋಗ ಪ್ರಮಾಣ ಹೆಚ್ಚಿರುವ ಬಗ್ಗೆ ವರದಿಗಳು ಬಂದಿವೆ. ಇದರಿಂದ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇನ್ನೂ ತುಟ್ಟಿಯಾಗುತ್ತಾ ಹೋಗಬಹುದು. ಚಿನ್ನದ ಬೆಲೆ ಈಗ ಇಳಿಯುತ್ತಿದೆಯಾದರೂ ಮುಂಬರುವ ದಿನಗಳಲ್ಲಿ ಮತ್ತೆ ಏರಿಕೆಯ ಹಾದಿ ಹಿಡಿಯುವ ನಿರೀಕ್ಷೆ ಇದೆ. ಮುಂದಿನ ವರ್ಷದಲ್ಲಿ ಚಿನ್ನದ ಬೆಲೆ 70,000 ರೂ ಗಡಿ ದಾಟಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿDeepak Parekh: ಷೇರು ಬೇಡ, ಸಂಬಳ ಸಾಕು ಎನ್ನುವ ಮಾಲೀಕ; 5 ಲಕ್ಷ ಕೋಟಿ ಮೌಲ್ಯದ ಕಂಪನಿ ಛೇರ್ಮನ್​ನ ಸರಳತೆ ಎಲ್ಲರಿಗೂ ಮಾದರಿ

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 28ಕ್ಕೆ):

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 55,950 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,040 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 765 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 56,000 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 61,100 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 802 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 56,000 ರೂ
  • ಚೆನ್ನೈ: 56,420 ರೂ
  • ಮುಂಬೈ: 55,950 ರೂ
  • ದೆಹಲಿ: 56,100 ರೂ
  • ಕೋಲ್ಕತಾ: 55,950 ರೂ
  • ಕೇರಳ: 55,950 ರೂ
  • ಅಹ್ಮದಾಬಾದ್: 56,000 ರೂ
  • ಜೈಪುರ್: 56,100 ರೂ
  • ಲಕ್ನೋ: 56,100 ರೂ
  • ಭುವನೇಶ್ವರ್: 55,950 ರೂ

ಇದನ್ನೂ ಓದಿPost Office Scheme: ಹಣ ಉಳಿತಾಯಕ್ಕೆ ಬೆಸ್ಟ್; ಈ ಪೋಸ್ಟ್ ಆಫೀಸ್ ಸ್ಕೀಮ್​ನಲ್ಲಿ 10 ವರ್ಷಕ್ಕೆ 16 ಲಕ್ಷ ರೂ ರಿಟರ್ನ್ ಸಿಗುತ್ತೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ):

  • ಮಲೇಷ್ಯಾ: 2,850 ರಿಂಗಿಟ್ (52,345 ರುಪಾಯಿ)
  • ದುಬೈ: 2240 ಡಿರಾಮ್ (49,891 ರುಪಾಯಿ)
  • ಅಮೆರಿಕ: 615 ಡಾಲರ್ (50,226 ರುಪಾಯಿ)
  • ಸಿಂಗಾಪುರ: 829 ಸಿಂಗಾಪುರ್ ಡಾಲರ್ (50,707 ರುಪಾಯಿ)
  • ಕತಾರ್: 2,305 ಕತಾರಿ ರಿಯಾಲ್ (51,775 ರೂ)
  • ಓಮನ್: 244 ಒಮಾನಿ ರಿಯಾಲ್ (51,830 ರುಪಾಯಿ)
  • ಕುವೇತ್: 190 ಕುವೇತಿ ದಿನಾರ್ (50,733 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ)

  • ಬೆಂಗಳೂರು: 8,020 ರೂ
  • ಚೆನ್ನೈ: 8,020 ರೂ
  • ಮುಂಬೈ: 7,650 ರೂ
  • ದೆಹಲಿ: 7,650 ರೂ
  • ಕೋಲ್ಕತಾ: 7,650 ರೂ
  • ಕೇರಳ: 8,020 ರೂ
  • ಅಹ್ಮದಾಬಾದ್: 7,650 ರೂ
  • ಜೈಪುರ್: 7,650 ರೂ
  • ಲಕ್ನೋ: 7,650 ರೂ
  • ಭುವನೇಶ್ವರ್: 8,020 ರೂ

(ಗಮನಿಸಿ: ಇಲ್ಲಿ ನೀಡಲಾಗಿರುವ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ