Asus ROG Phone 6: ಏಸಸ್ ರಾಗ್ ಫೋನ್ 6, 6 ಪ್ರೊ ಬಿಡುಗಡೆಗೆ ಡೇಟ್ ಫಿಕ್ಸ್: ಕಾದು ಕುಳಿತಿದ್ದಾರೆ ಟೆಕ್ ಪ್ರಿಯರು
Asus ROG Phone 6 Pro: ಏಸಸ್ ಇದೀಗ ಹೊಸದಾಗಿ ರಾಗ್ ಫೋನ್ 6 ಸರಣಿಯನ್ನು ಭಾರತದಲ್ಲಿ ಪರಿಚಯಿಸಲು ಮುಂದಾಗಿದೆ. ಇದರಲ್ಲಿ ಒಟ್ಟು ಎರಡು ಫೋನ್ಗಳಿದ್ದು ಏಸಸ್ ರಾಗ್ ಫೋನ್ 6 ಮತ್ತು ರಾಗ್ ಫೋನ್ 6 ಪ್ರೊ ಅನ್ನು ದೇ ಜುಲೈ 5 ರಂದು ದೇಶದಲ್ಲಿ ಅನಾವರಣ ಮಾಡಲಿದೆ. ಈ ಪ್ರೊಸೆಸರ್ನಲ್ಲಿ ಏಸಸ್ ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ಮೊದಲ ಸ್ಮಾರ್ಟ್‌ಫೋನ್ ಆಗಿದೆ.

ಗೇಮಿಂಗ್ ಪ್ರಿಯರ ನೆಚ್ಚಿನ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಏಸಸ್ (Asus) ಸದ್ಯ ಹೊಸ ಮೊಬೈಲ್ನೊಂದಿಗೆ ಮತ್ತೆ ಬಂದಿದೆ. ಕಂಪ್ಯೂಟರ್ ಗೇಮಿಂಗ್ ವೈಶಿಷ್ಟ್ಯಗಳನ್ನು ಸ್ಮಾರ್ಟ್ಫೋನ್ಗಳಲ್ಲಿ ಪರಿಚಯಿಸಿ ಸೈ ಎನಿಸಿರುವ ಏಸಸ್ ಇದೀಗ ಹೊಸದಾಗಿ ರಾಗ್ ಫೋನ್ 6 ಸರಣಿಯನ್ನು ಭಾರತದಲ್ಲಿ ಪರಿಚಯಿಸಲು ಮುಂದಾಗಿದೆ. ಇದರಲ್ಲಿ ಒಟ್ಟು ಎರಡು ಫೋನ್ಗಳಿದ್ದು ಏಸಸ್ ರಾಗ್ ಫೋನ್ 6 ಮತ್ತು ರಾಗ್ ಫೋನ್ 6 ಪ್ರೊ (Asus ROG Phone 6 and ROG Phone 6 Pro) ಅನ್ನು ದೇ ಜುಲೈ 5 ರಂದು ದೇಶದಲ್ಲಿ ಅನಾವರಣ ಮಾಡಲಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು (Smartphone) 5G ಬೆಂಬಲ ಪಡೆದುಕೊಂಡಿದ್ದು ಏಸಸ್ ರಾಗ್ ಫೋನ್ 5 ಸರಣಿಯ ಮುಂದಿನ ಆವೃತ್ತಿಯಾಗಿದೆ. ಅಚ್ಚರಿಗೊಳ್ಳುವಂತಹ ಫೀಚರ್ಗಳು ಈ ಹೊಸ ಫೋನ್ನಲ್ಲಿದ್ದು, ಟೆಕ್ ಪ್ರಿಯರಂತು ಕಾದುಕುಳಿತಿದ್ದಾರೆ.
ಏನು ಹೈಲೇಟ್?:
ಏಸಸ್ ROG ಫೋನ್ 6 ಮತ್ತು ROG ಫೋನ್ 6 ಪ್ರೊ ಈ ಎರಡು ಸ್ಮಾರ್ಟ್‌ಫೋನ್‌ಗಳ ಬಗ್ಗೆ ಕಂಪನಿ ಅಧಿಕೃತ ಮಾಹಿತಿ ಇನ್ನೂ ಹೊರ ಹಾಕಿಲ್ಲ. ಆದರೆ, ROG ಫೋನ್ 6 ನಲ್ಲಿ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುವ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್ ಅನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಪ್ರೊಸೆಸರ್ನಲ್ಲಿ ಏಸಸ್ ಭಾರತದಲ್ಲಿ ಬಿಡುಗಡೆ ಮಾಡುತ್ತಿರುವ ಮೊದಲ ಸ್ಮಾರ್ಟ್‌ಫೋನ್ ಆಗಿದೆ.
ಏಸಸ್ ROG ಫೋನ್ 6 1,080×2,448 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.78 ಇಂಚಿನ ಫುಲ್ HD+ ಡಿಸ್‌ಪ್ಲೇ ಹೊಂದಿರುವ ಸಾಧ್ಯತೆ ಇದೆ. ಈ ಡಿಸ್‌ಪ್ಲೇ ಸ್ಯಾಮ್‌ಸಂಗ್ ಅಮೋಲೆಡ್ ಡಿಸ್‌ಪ್ಲೇ ಆಗಿದ್ದು, 165Hz ರಿಫ್ರೆಶ್ ರೇಟ್, 360Hz ಟಚ್ ಸ್ಯಾಂಪ್ಲಿಂಗ್ ರೇಟ್ ಅನ್ನು ಒಳಗೊಂಡಿವೆ. ಇದಲ್ಲದೆ 1ms ರೆಸ್ಪಾನ್ಸ್ ಟೈಂ, 24ms ಟಚ್ ಲೇಟೆನ್ಸಿ, HDR10+ ಬೆಂಬಲ ಮತ್ತು 1200 ವರೆಗೆ ಗರಿಷ್ಠ ಬ್ರೈಟ್‌ನೆಸ್ ಅನ್ನು ಹೊಂದಿದೆಯಂತೆ. ಇದಲ್ಲದೆ ಈ ಎರಡೂ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್ ಪಡೆದುಕೊಂಡಿವೆ.
ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್ ಬಲವನ್ನು ಪಡೆದುಕೊಂಡಿರುವುದು ಖಚಿತವಾಗಿದೆ. 64GB RAM ಮತ್ತು 1TB ಸ್ಟೋರೇಜ್ ಅನ್ನು ಹೊಂದಿವೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಇರುವ ಸಾಧ್ಯತೆ ಇದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೋನಿ IMX686 ಸೆನ್ಸಾರ್, ಎರಡನೇ ಕ್ಯಾಮೆರಾ 13-ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಹೊಂದಿದೆ. ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸಾರ್ ಅನ್ನು ಪಡೆದಿದೆ. ಇದಲ್ಲದೆ 24 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಇದರಲಿದೆ ಎಂಬ ಮಾತಿದೆ.
ಏಸಸ್ ROG ಫೋನ್ 6 ಸ್ಮಾರ್ಟ್‌ಫೋನ್ ದೀರ್ಘ ಸಮಯ ಬಾಳಿಕೆ ಬರುವ 6,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 65W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಭಾರತದಲ್ಲಿ ಏಸಸ್ ROG ಫೋನ್ 6 ಮತ್ತು ಏಸಸ್ ROG ಫೋನ್ 6 ಪ್ರೊ ಸ್ಮಾರ್ಟ್‌ಫೋನ್ ಬೆಲೆ ಇನ್ನೂ ಬಹಿರಂಗವಾಗಿಲ್ಲ. ಇದು ಜುಲೈ 5 ರಂದು ಸಂಜೆ 5:30ಕ್ಕೆ ಬಿಡುಗಡೆ ಆಗಲಿದೆ.
Published On - 12:17 pm, Mon, 4 July 22




