Sign In

By signing in or creating an account, you agree with Associated Broadcasting Company's Terms & Conditions and Privacy Policy.

Atmanirbhar Bharat Rozgar Yojana: ಕೇಂದ್ರದಿಂದ ಇಪಿಎಫ್​ ಕೊಡುಗೆ ಮಾರ್ಚ್ 31, 2022ರ ತನಕ ವಿಸ್ತರಣೆ

ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದಂತೆ, ಆತ್ಮನಿರ್ಭರ್ ರೋಜ್​ಗಾರ್ ಯೋಜನೆ ಅಡಿಯಲ್ಲಿ ಕೇಂದ್ರದ ಇಪಿಎಫ್​ ಕೊಡುಗೆಯನ್ನು ಮಾರ್ಚ್​ 31, 2022ರ ತನಕ ವಿಸ್ತರಣೆ ಮಾಡಲಾಗಿದೆ.

Atmanirbhar Bharat Rozgar Yojana: ಕೇಂದ್ರದಿಂದ ಇಪಿಎಫ್​ ಕೊಡುಗೆ ಮಾರ್ಚ್ 31, 2022ರ ತನಕ ವಿಸ್ತರಣೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Jun 28, 2021 | 9:25 PM

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರದಂದು ಘೋಷಣೆ ಮಾಡಿದ ಕೊರೊನಾ ಪ್ಯಾಕೇಜ್​ನಲ್ಲಿ ಆತ್ಮನಿರ್ಭರ್ ಭಾರತ್ ರೋಜ್​ಗಾರ್​ ಯೋಜನೆ ಸಹ ಒಳಗೊಂಡಿತ್ತು. ಅಕ್ಟೋಬರ್ 1, 2020ರಲ್ಲಿ ಈ ಯೋಜನೆಯನ್ನು ಆರಂಭಿಸಲಾಯಿತು. ಹೊಸ ಉದ್ಯೋಗ ಸೃಷ್ಟಿಗೆ, ಉದ್ಯೋಗ ಕಳೆದುಕೊಂಡಿದ್ದಲ್ಲಿ ಇಪಿಎಫ್​ಒ ಮೂಲಕ ಮರುಜೀವ ನೀಡಲು ಉದ್ಯೋಗದಾತರಿಗೆ ಇದರೊಂದಿಗೆ ಪ್ರೋತ್ಸಾಹಿಸುವ ಉದ್ದೇಶ ಇರಿಸಿಕೊಂಡಿದೆ. ಅಂದಾಜು 58.10 ಲಕ್ಷ ಫಲಾನುಭವಿಗಳಿಗೆ 22,810 ಕೋಟಿ ರೂಪಾಯಿಗೆ ಅನುಮತಿ ನೀಡಲಾಗಿದೆ. ನೋಂದಣಿಗೆ ಕೊನೆ ದಿನಾಂಕ ಜೂನ್ 30, 2021 ಆಗಿದೆ. ತಿಂಗಳಿಗೆ 15,000 ರೂಪಾಯಿಗಿಂತ ಕಡಿಮೆ ಸಂಬಳ ತೆಗೆದುಕೊಳ್ಳುವ ಹೊಸ ಉದ್ಯೋಗಿಗಳಿಗೆ ನೋಂದಣಿ ಆದಾಗಿನಿಂದ ಎರಡು ವರ್ಷಗಳ ಕಾಲ ಸಬ್ಸಿಡಿ ನೀಡಲಾಗುವುದು.

1000 ಉದ್ಯೋಗಿಗಳ ಒಳಗೆ ಇರುವ ಸಂಸ್ಥೆಗಳಿಗೆ ಉದ್ಯೋಗಿಗಳು ಮತ್ತು ಉದ್ಯೋಗದಾತರ ಕೊಡುಗೆ (ಒಟ್ಟಾರೆ ವೇತನದಲ್ಲಿ ಶೇ 24ರಷ್ಟು) ಅಥವಾ 1000ಕ್ಕೂ ಹೆಚ್ಚು ಸಾಮರ್ಥ್ಯ ಇರುವ ಸಂಸ್ಥೆಗಳಲ್ಲಿ ಉದ್ಯೋಗಿಗಳ ವೇತನದ ಶೇ 12ರಷ್ಟು ಮೊತ್ತವನ್ನು ಸರ್ಕಾರದಿಂದ ಪಾವತಿಸಲಾಗುತ್ತದೆ. 79,577 ಸಂಸ್ಥೆಗಳ 21.42 ಲಕ್ಷ ಫಲಾನುಭವಿಗಳಿಗೆ 902 ಕೋಟಿ ರೂಪಾಯಿ ಜೂನ್ 18, 2021ರ ತನಕ ನೀಡಲಾಗಿದೆ. ಈ ಯೋಜನೆಯನ್ನು ಜೂನ್ 30, 2021ರಿಂದ ಮಾರ್ಚ್ 31, 2022ರ ತನಕ ಯೋಜನೆ ವಿಸ್ತರಿಸಲಾಗಿದೆ.

ಮಕ್ಕಳು ಮತ್ತು ಪೀಡಿಯಾಟ್ರಿಕ್ ಕೇರ್/ಪೀಡಿಯಾಟ್ರಿಕ್ ಬೆಡ್​ಗಳ ಮೇಲೆ ವಿಶೇಷ ಕಾಳಜಿಯನ್ನು ವಹಿಸಿ ಹೊಸ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ವೈದ್ಯಕೀಯ ಸಿಬ್ಬಂದಿ (ಇಂಟರ್ನ್​ಗಳು, ರೆಸಿಡೆಂಟ್​ಗಳು, ಅಂತಿಮ ವರ್ಷ) ಮೂಲಕ ಹಣಕಾಸು ನೆರವು ನೀಡಲಾಗುವುದು. ಕೇಂದ್ರೀಯ, ಜಿಲ್ಲೆ ಮತ್ತು ಉಪ ಜಿಲ್ಲೆಗಳಲ್ಲಿ ಐಸಿಯು ಬೆಡ್​ಗಳು, ಆಕ್ಸಿಜನ್ ಪೂರೈಕೆ ಹೆಚ್ಚಿಸಲು ಹಣಕಾಸು ಯೋಜನೆಯನ್ನು ತರಲಾಗಿದೆ.

ಇದನ್ನೂ ಓದಿ: How to merge two UAN: ಪಿಎಫ್​ ಖಾತೆದಾರರು ಒಂದಕ್ಕಿಂತ ಹೆಚ್ಚು ಯುಎಎನ್​ ಹೊಂದಿದ್ದರೆ ನಿಯಮಬಾಹಿರ; ಇಂಥ ಸನ್ನಿವೇಶ ಏನು ಮಾಡಬೇಕು?

(Union finance minister Nirmala Sitharaman today announced extension of Atmanirbhar Rozgar Yojana. Here is the details)

Published On - 9:18 pm, Mon, 28 June 21

ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ರಜತ್ ಕಿಶನ್ ರೀಲ್ಸ್ ಕೇಸ್: ಪೊಲೀಸ್ ಠಾಣೆಗೆ ಅಲೆದಾಡಿದ ಪತ್ನಿ ಅಕ್ಷಿತಾ
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ