Attention PAN Card Holders: ಪ್ಯಾನ್ ಕಾರ್ಡ್ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ; 10,000 ರೂ. ದಂಡ ಪಾವತಿಸಬೇಕಾಗಬಹುದು

10 ಡಿಜಿಟ್​ಗಳ ಪ್ಯಾನ್​ ಕಾರ್ಡ್ ಸಂಖ್ಯೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡುವುದಷ್ಟೇ ಅಲ್ಲದೆ, ಒಬ್ಬ ವ್ಯಕ್ತಿಯು ಒಂದು ಪ್ಯಾನ್ ಕಾರ್ಡ್ ಅನ್ನು ಮಾತ್ರ ಹೊಂದಿರಬೇಕು. ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿದ್ದಲ್ಲಿ ಅದಕ್ಕೂ ಆದಾಯ ತೆರಿಗೆ ಇಲಾಖೆ ನಿಯಮಗಳ ಅನ್ವಯ ಭಾರೀ ಮೊತ್ತದ ದಂಡ ವಿಧಿಸುತ್ತದೆ.

Attention PAN Card Holders: ಪ್ಯಾನ್ ಕಾರ್ಡ್ ಬಳಸುವಾಗ ಈ ತಪ್ಪುಗಳನ್ನು ಮಾಡಬೇಡಿ; 10,000 ರೂ. ದಂಡ ಪಾವತಿಸಬೇಕಾಗಬಹುದು
ಪ್ಯಾನ್ ಕಾರ್ಡ್
Follow us
TV9 Web
| Updated By: Ganapathi Sharma

Updated on:Dec 20, 2022 | 7:46 PM

ಬ್ಯಾಂಕಿಂಗ್ ಸೇವೆಗಳಿಂದ ತೊಡಗಿ ಐಟಿಆರ್ ಸಲ್ಲಿಕೆವರೆಗೆ ಅನೇಕ ಕೆಲಸಗಳಿಗೆ ಅತೀ ಅಗತ್ಯವಾಗಿ ಬೇಕಾಗುತ್ತದೆ ಆದಾಯ ತೆರಿಗೆ ಇಲಾಖೆ (Income Tax Department) ನೀಡುವ 10 ಡಿಜಿಟ್​ಗಳ ಪ್ಯಾನ್ ಕಾರ್ಡ್ (PAN Card). ಆದಾಗ್ಯೂ ಪ್ಯಾನ್ ಕಾರ್ಡ್ ಬಳಸುವಾಗ ಬಹಳ ಎಚ್ಚರಿಕೆ ವಹಿಸಬೇಕಾದದ್ದು ಅತೀ ಅಗತ್ಯ. ತಪ್ಪಿದಲ್ಲಿ 10,000 ರೂ. ದಂಡ ಪಾವತಿಸಬೇಕಾಗುತ್ತದೆ. ಕಾನೂನು ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳುವುದನ್ನು ತಪ್ಪಿಸಲು ಮತ್ತು ದಂಡ ಪಾವತಿಯಿಂದ ಬಚಾವಾಗಲು 10 ಡಿಜಿಟ್​ಗಳ ಪ್ಯಾನ್ ಸಂಖ್ಯೆಯನ್ನು ಜಾಗರೂಕತೆಯಿಂದ ಭರ್ತಿ ಮಾಡಬೇಕು. ಪ್ಯಾನ್ ಕಾರ್ಡ್ ವಿವರ ಭರ್ತಿ ಮಾಡುವಾಗ ಕಾಗುಣಿತ ತಪ್ಪಿದಲ್ಲಿ ದಂಡ ಪಾವತಿಸಬೇಕಾಗುತ್ತದೆ.

ಪ್ಯಾನ್ ಕಾರ್ಡ್ ಸದಾ ಬಳಿ ಇರಲಿ

10 ಡಿಜಿಟ್​ಗಳ ಪ್ಯಾನ್​ ಕಾರ್ಡ್ ಸಂಖ್ಯೆಯನ್ನು ಎಚ್ಚರಿಕೆಯಿಂದ ಭರ್ತಿ ಮಾಡುವುದಷ್ಟೇ ಅಲ್ಲದೆ, ಒಬ್ಬ ವ್ಯಕ್ತಿಯು ಒಂದು ಪ್ಯಾನ್ ಕಾರ್ಡ್ ಅನ್ನು ಮಾತ್ರ ಹೊಂದಿರಬೇಕು. ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿದ್ದಲ್ಲಿ ಅದಕ್ಕೂ ಆದಾಯ ತೆರಿಗೆ ಇಲಾಖೆ ನಿಯಮಗಳ ಅನ್ವಯ ಭಾರೀ ಮೊತ್ತದ ದಂಡ ವಿಧಿಸುತ್ತದೆ. ಪ್ಯಾನ್ ಕಾರ್ಡ್​​ನಲ್ಲಿ ಏನೇ ಲೋಪವಾದರೂ ಬ್ಯಾಂಕ್​ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ. ಹೀಗಾಗಿ ಏನೇ ಸಮಸ್ಯೆಯಾದರೂ ತಕ್ಷಣವೇ ಇಲಾಖೆಯ ಗಮನಕ್ಕೆ ತರಬೇಕಾದ್ದು ಅತೀ ಅಗತ್ಯ.

ಇದನ್ನೂ ಓದಿ: Gold Bonds: ಸಾವರಿನ್ ಗೋಲ್ಡ್ ಬಾಂಡ್ ಬಿಡುಗಡೆ ಮಾಡಿದ ಆರ್​ಬಿಐ; ಆನ್​ಲೈನ್​ನಲ್ಲಿ ಹೀಗೆ ಖರೀದಿಸಿ

ಐಟಿ ಕಾಯ್ದೆ ಏನು ಹೇಳುತ್ತೆ?

ಪ್ಯಾನ್ ಕಾರ್ಡ್​ನ ತಪ್ಪು ವಿವರಗಳನ್ನು ನೀಡಿದರೆ ಐಟಿ ಕಾಯ್ದೆಯ ಸೆಕ್ಷನ್ 272ಬಿ ಅನ್ವಯ 10,000 ರೂ. ದಂಡ ವಿಧಿಸಲಾಗುತ್ತದೆ. ಈ ನಿಯಮ ಐಟಿಆರ್ ಸಲ್ಲಿಕೆ ಮಾಡುವಾಗ ಅನ್ವಯವಾಗುತ್ತದೆ.

ಆನ್​ಲೈನ್​ನಲ್ಲಿ ಪ್ಯಾನ್​ ಕಾರ್ಡ್ ತಿದ್ದುಪಡಿ ಹೇಗೆ?

  1. ಪ್ರೋಟಿಯಾನ್ ಇ-ಗವರ್ನ್​ಮೆಂಟ್ ಟೆಕ್ನಾಲಜೀಸ್​ ಲಿಮಿಟೆಡ್ ಕಚೇರಿಗೆ ಭೇಟಿ ನೀಡಿ ಅಥವಾ UTIITSL ಪೋರ್ಟಲ್​ಗೆ ಭೇಟಿ ನೀಡಿ
  2. ಪ್ಯಾನ್ ಚೇಂಜ್ ರಿಕ್ವೆಸ್ಟ್ ಅನ್ನು ಆನ್​ಲೈನ್​ನಲ್ಲಿ ಭರ್ತಿ ಮಾಡಿ
  3. ಪ್ಯಾನ್ ಸಂಖ್ಯೆಯನ್ನು ಸರಿಯಾಗಿ ಭರ್ತಿ ಮಾಡಿ
  4. ನೀವು ಬದಲಾಯಿಸಲು ಉದ್ದೇಶಿಸಿರುವ ಚೆಕ್​ಬಾಕ್ಸ್ ಅನ್ನು ಆಯ್ಕೆ ಮಾಡಿ
  5. ನಿಮ್ಮ ಹೆಸರಿನ ಸ್ಪೆಲ್ಲಿಂಗ್ ಅನ್ನು ಸರಿಯಾಗಿ ನಮೂದಿಸಿ. ಲೆಫ್ಟ್ ಮಾರ್ಜಿನ್​ನಲ್ಲಿರುವ ಚೆಕ್​ಬಾಕ್ಸ್ ಅನ್ನು ಆಯ್ಕೆ ಮಾಡಿ. ನೀವು ಚೆಕ್​ಬಾಕ್ಸ್ ಅನ್ನು ಆಯ್ಕೆ ಮಾಡದಿದ್ದರೆ ಬದಲಾವಣೆ ಮಾಡಿದ್ದು ಅಪ್ಲೈ ಆಗುವುದಿಲ್ಲ ಎಂಬುದನ್ನು ಗಮನಿಸಿ.
  6. ಎಲ್ಲ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಸಬ್​ಮಿಟ್ ಮಾಡಿ
  7. ನೀವು ಮಾಡಿರುವ ಬದಲಾವಣೆ ದೃಢಪಟ್ಟ ಬಳಿಕ 15 ಡಿಜಿಟ್​ನ ಸ್ವೀಕೃತಿ ಸಂಖ್ಯೆ ದೊರೆಯುತ್ತದೆ. ಅದನ್ನು ಸೇವ್ ಮಾಡಿಕೊಳ್ಳಿ. ಅರ್ಜಿಯ ಸ್ಥಿತಿಗತಿ ಪರಿಶೀಲಿಸಲು ಇದು ಬೇಕಾಗುತ್ತದೆ.
  8. ಪಾವತಿ ಮಾಡಿ ಸ್ವೀಕೃತಿ ಪತ್ರವನ್ನು ಪ್ರಿಂಟ್​ ತೆಗೆದು ಇಟ್ಟುಕೊಳ್ಳಿ.
  9. ಇದನ್ನು ಆದಾಯ ತೆರಿಗೆ ಇಲಾಖೆಯ ಪ್ಯಾನ್ ಸರ್ವೀಸ್ ಘಟಕಕ್ಕೆ ಕಳುಹಿಸಿಕೊಡಿ.
  10. UTIITSL ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಿರುವುದಾದರೆ UTIITSLನ ಮುಂಬೈ, ಕೋಲ್ಕತ್ತ, ನವದೆಹಲಿ ಅಥವಾ ಚೆನ್ನೈ ಕಚೇರಿಗೆ ಅಗತ್ಯ ದಾಖಲೆಗಳನ್ನು ಕಳುಹಿಸಿಕೊಡಬೇಕಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:44 pm, Tue, 20 December 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್