ನರೇಂದ್ರ ಮೋದಿ ಫೇವರಿಟ್ ಖಿಚಡಿ ತಯಾರಿಸಿ ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿದ ಆಸ್ಟ್ರೇಲಿಯಾ ಪಿಎಂ ಮಾರಿಸನ್
ಭಾರತ ಹಾಗೂ ಆಸ್ಟ್ರೇಲಿಯಾದ ಹೊಸ ವ್ಯಾಪಾರ ಒಪ್ಪಂದದ ಸಂಭ್ರಮಾಚರಣೆಯ ಸಂಕೇತವಾಗಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಭಾರತೀಯ ಪಾಕಪದ್ಧತಿಯಲ್ಲಿ ‘ಖಿಚಡಿ’ (Khichdi) ತಯಾರಿಸುತ್ತಿರುವ ಚಿತ್ರವನ್ನು ಶನಿವಾರ ಪೋಸ್ಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಈ ಬಗ್ಗೆ ಬರೆದಿದ್ದು, “ಭಾರತದೊಂದಿಗಿನ ನಮ್ಮ ಹೊಸ ವ್ಯಾಪಾರ ಒಪ್ಪಂದದ ಸಂಭ್ರಮವನ್ನು ಆಚರಿಸಲು ಇಂದು ರಾತ್ರಿ ಮೋದಿ ಅವರ ನೆಚ್ಚಿನ ಖಿಚಡಿ ಸೇರಿದಂತೆ ಸಿದ್ಧಪಡಿಸಲು ಆಯ್ಕೆ ಮಾಡಿದ ಮೇಲೋಗರಗಳೆಲ್ಲವೂ ನನ್ನ ಆತ್ಮೀಯ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್ ಪ್ರಾಂತ್ಯದಿಂದ ಬಂದವು. […]
ಭಾರತ ಹಾಗೂ ಆಸ್ಟ್ರೇಲಿಯಾದ ಹೊಸ ವ್ಯಾಪಾರ ಒಪ್ಪಂದದ ಸಂಭ್ರಮಾಚರಣೆಯ ಸಂಕೇತವಾಗಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಭಾರತೀಯ ಪಾಕಪದ್ಧತಿಯಲ್ಲಿ ‘ಖಿಚಡಿ’ (Khichdi) ತಯಾರಿಸುತ್ತಿರುವ ಚಿತ್ರವನ್ನು ಶನಿವಾರ ಪೋಸ್ಟ್ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಈ ಬಗ್ಗೆ ಬರೆದಿದ್ದು, “ಭಾರತದೊಂದಿಗಿನ ನಮ್ಮ ಹೊಸ ವ್ಯಾಪಾರ ಒಪ್ಪಂದದ ಸಂಭ್ರಮವನ್ನು ಆಚರಿಸಲು ಇಂದು ರಾತ್ರಿ ಮೋದಿ ಅವರ ನೆಚ್ಚಿನ ಖಿಚಡಿ ಸೇರಿದಂತೆ ಸಿದ್ಧಪಡಿಸಲು ಆಯ್ಕೆ ಮಾಡಿದ ಮೇಲೋಗರಗಳೆಲ್ಲವೂ ನನ್ನ ಆತ್ಮೀಯ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿ ಅವರ ಗುಜರಾತ್ ಪ್ರಾಂತ್ಯದಿಂದ ಬಂದವು. ಜೆನ್, ಹುಡುಗಿಯರು ಮತ್ತು ಅಮ್ಮ ಎಲ್ಲರೂ ಒಪ್ಪಿದರು,” ಎಂದಿದ್ದಾರೆ.
ಉಭಯ ದೇಶಗಳ ಮಧ್ಯೆ ಆರ್ಥಿಕ ಸಂಬಂಧಗಳನ್ನು ಹೆಚ್ಚಿಸುವ ಉದ್ದೇಶದಿಂದ ಭಾರತ ಮತ್ತು ಆಸ್ಟ್ರೇಲಿಯಾ ಏಪ್ರಿಲ್ 2ರಂದು ಆರ್ಥಿಕ ಸಹಕಾರ ಹಾಗೂ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದವು. ಈ ಮಧ್ಯೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ಗುರುವಾರ ಆಸ್ಟ್ರೇಲಿಯಾದೊಂದಿಗೆ ಆಡಿಯೋ-ದೃಶ್ಯ ಸೇವೆಗಳಲ್ಲಿ ಜಂಟಿ ಉತ್ಪಾದನಾ ಪಾಲುದಾರಿಕೆಗಾಗಿ ಮಾತುಕತೆ ನಡೆಸಿದ್ದಾರೆ. ಅದರ ಪರಿಣಾಮದ ಒಪ್ಪಂದವನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ. ಆಸ್ಟ್ರೇಲಿಯಾವು ತಂತ್ರಜ್ಞಾನಗಳು ಮತ್ತು ಸಲಕರಣೆಗಳನ್ನು ಹೊಂದಿದ್ದು, ಈ ವಲಯದಲ್ಲಿ ಸಹಕಾರವನ್ನು ಹೆಚ್ಚಿಸಲು ಭಾರತವು ನುರಿತ ಮಾನವಶಕ್ತಿಯನ್ನು ಹೊಂದಿದೆ ಎಂದು ಸಚಿವರು ಹೇಳಿದ್ದಾರೆ.
View this post on Instagram
ಗಮನಾರ್ಹವಾಗಿ, 2020ರಲ್ಲಿ ನಡೆದ ಮೊದಲ ಭಾರತ-ಆಸ್ಟ್ರೇಲಿಯಾ ವರ್ಚುವಲ್ ಶೃಂಗಸಭೆಯಲ್ಲೂ ‘ಸಮೋಸಾ-ಖಿಚಡಿ’ ರಾಜತಾಂತ್ರಿಕತೆಯ ಪ್ರಸ್ತಾವವಿತ್ತು. ಉಭಯ ನಾಯಕರು ಹಂಚಿಕೊಳ್ಳುವ ಮಾರ್ಗವನ್ನು ಪ್ರದರ್ಶಿಸಿದ ಮಾರಿಸನ್, “ಪ್ರಸಿದ್ಧ ‘ಮೋದಿ ಅಪ್ಪುಗೆ’ಗೆ ನಾನು ಅಲ್ಲಿರಲು ಮತ್ತು ನನ್ನ ಸಮೋಸಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಮುಂದಿನ ಬಾರಿ ಅದು ಗುಜರಾತಿ ಖಿಚಡಿ ಆಗಿರಬೇಕು. ಮುಂದಿನ ಬಾರಿ ನಾವು ವೈಯಕ್ತಿಕವಾಗಿ ಭೇಟಿಯಾಗುವ ಮೊದಲು ಅಡುಗೆಮನೆಯಲ್ಲಿ ನಾನು ಖಿಚಡಿ ಪ್ರಯತ್ನಿಸುತ್ತೇನೆ,” ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, “ನಿಮ್ಮ ಸಮೋಸಾಗಳು ಭಾರತದಲ್ಲಿ ಪ್ರಸಿದ್ಧವಾಗಿವೆ ಮತ್ತು ದೇಶದಾದ್ಯಂತ ಖಿಚಡಿ ಚರ್ಚೆಯಾಗುತ್ತಿದೆ. ಗುಜರಾತಿಗಳು ಇದನ್ನು ತಿಳಿದುಕೊಳ್ಳಲು ತುಂಬಾ ಸಂತೋಷಪಡುತ್ತಾರೆ. ಆದರೂ ಇದು ದೇಶದಾದ್ಯಂತ ವಿಭಿನ್ನ ಹೆಸರುಗಳಿಂದ ಕರೆಯಲ್ಪಡುವ ಅತ್ಯಂತ ಸಾಮಾನ್ಯವಾದ ತಿನಿಸು. ನಿಮ್ಮೊಂದಿಗೆ ಆನಂದಿಸಲು ತುಂಬಾ ಸಂತೋಷ ಆಗುತ್ತದೆ,” ಎಂದು ಹೇಳಿದ್ದರು.
ಇದನ್ನೂ ಓದಿ: Mann Ki Baat: ಮನ್ ಕಿ ಬಾತ್ ಮಾತಿಗೆ ಸಲಹೆ ಆಹ್ವಾನಿಸಿದ ಪ್ರಧಾನಿ ನರೇಂದ್ರ ಮೋದಿ