ಬೆಂಗಳೂರು, ಜನವರಿ 25: ಅಜೀಮ್ ಪ್ರೇಮ್ಜಿ ತಮ್ಮ ಪಾಲಿನ ಷೇರುಗಳಲ್ಲಿ 1 ಕೋಟಿಯಷ್ಟು ಷೇರುಗಳನ್ನು ತಮ್ಮಿಬ್ಬರು ಮಕ್ಕಳಿಗೆ ಉಡುಗೊರೆಯಾಗಿ ನೀಡಿದ್ದಾರೆ. ರಿಷದ್ ಪ್ರೇಮ್ಗೆ ಮತ್ತು ತಾರಿಖ್ ಪ್ರೇಮ್ಜಿ (Tariq Premji) ಅವರಿಗೆ ತಲಾ 51 ಲಕ್ಷಕ್ಕೂ ಹೆಚ್ಚು ಷೇರುಗಳು ರವಾನೆಯಾಗಿವೆ. ಹಿರಿಯ ಮಗ ರಿಷದ್ ಹಶೀಮ್ ಪ್ರೇಮ್ಜಿ ವಿಪ್ರೋದ ಛೇರ್ಮನ್ ಆಗಿ ಈಗಾಗಲೇ ಹೆಸರುವಾಸಿಯಾಗಿದ್ದಾರೆ. ಆದರೆ, ಕಿರಿಯ ಮಗ ತಾರಿಕ್ ಪ್ರೇಮ್ಜಿ ಸಾರ್ವಜನಿಕವಾಗಿ ಹೆಚ್ಚು ಗುರುತಾದವರಲ್ಲ. ಸಂಕೋಚದ ಸ್ವಭಾವದವರು.
ಅಜೀಮ್ ಪ್ರೇಮ್ಜಿ ಅವರು ಫಿಲಾಂತ್ರೋಫಿಗೆ ಅಥವಾ ದಾನ ದತ್ತಿಗಳಿಗೆ (philanthropist) ಹೆಚ್ಚು ಹಣ ನೀಡುತ್ತಾರೆ. ಉದಾರ ದಾನಗಳಿಗೆ ಹೆಸರುವಾಸಿ. ಭಾರತದಲ್ಲಿ ಅತಿದೊಡ್ಡ ಫಿಲಾಂತ್ರೋಫಿಸ್ಟ್ಗಳಲ್ಲಿ ಅವರೂ ಒಬ್ಬರು. ಇವರ ದಾನ ಧರ್ಮ ಕಾರ್ಯಗಳ ಹಿಂದಿನ ರೂವಾರಿ ಅವರ ಎರಡನೇ ಮಗ ತಾರೀಖ್ ಪ್ರೇಮ್ಜಿ ಅವರೆಯೇ. ಅಜೀಮ್ ಪ್ರೇಮ್ಜಿ ಫೌಂಡೇಶನ್ನಲ್ಲಿದ್ದಾರೆ ಇವರು.
ಇದನ್ನೂ ಓದಿ: Azim Premji: ಮಹಾದಾನಿ ಅಜೀಮ್ ಪ್ರೇಮ್ಜಿ ಇಬ್ಬರು ಮಕ್ಕಳಿಗೆ 483 ಕೋಟಿ ರೂ ಮೌಲ್ಯದ ಷೇರುಗಳ ದಾನ
ತಾರಿಕ್ ಪ್ರೇಮ್ಜಿ ವಿಪ್ರೋ ಎಂಟರ್ಪ್ರೈಸಸ್ನ ನಾನ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಅಗಿದ್ದಾರೆ. ಅಜೀಮ್ ಪ್ರೇಮ್ಜಿ ಫೌಂಡೇಶನ್ ಮತ್ತು ಅಜೀಮ್ ಪ್ರೇಮ್ಜಿ ಫಿಲಾಂತ್ರೋಪಿಕ್ ಇನಿಷಿಯೇಟಿವ್ಸ್ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿದ್ದಾರೆ.
ಅಜೀಮ್ ಪ್ರೇಮ್ಜಿ ತಮ್ಮ ದಾನ ಕಾರ್ಯಗಳಿಗೆಂದು ಸ್ಥಾಪಿಸಿದ್ದ ಎಂಡೋಮೆಂಟ್ ಫಂಡ್ ಸಂಸ್ಥೆಗೆ ತಾರೀಕ್ ಪ್ರೇಮ್ಜಿ ವೈಸ್ ಪ್ರೆಸಿಡೆಂಟ್ ಆಗಿದೆ. ಈ ಎಂಡೋಮೆಂಟ್ ಫಂಡ್ನ (Azim Premji Endowment Fund) ಹೂಡಿಕೆ ಪ್ರಕ್ರಿಯೆಗಳಿಗೆ ತಾರೀಖ್ ಅವರೇ ರೂವಾರಿ.
ಇದನ್ನೂ ಓದಿ: Microsoft: ಆ್ಯಪಲ್ ಬಳಿಕ 3 ಟ್ರಿಲಿಯನ್ ಡಾಲರ್ ಮುಟ್ಟಿದ ಮೈಕ್ರೋಸಾಫ್ಟ್; ಭಾರತೀಯ ಕಂಪನಿಗಳು ಯಾವ ಸ್ಥಾನದಲ್ಲಿವೆ?
ಬಿಪಿಒದಲ್ಲಿ ಕೆಲಸ ಮಾಡಿದ್ದ ತಾರೀಖ್
44 ವರ್ಷದ ತಾರೀಖ್ ಪ್ರೇಮ್ಜಿ ಮುಂಬೈನಲ್ಲಿ ಶಾಲಾ ಶಿಕ್ಷಣ ಪಡೆದರಾದರೂ ಬೆಂಗಳೂರಿನ ಸೇಂಟ್ ಜೋಸೆಫ್ಸ್ ಕಾಲೇಜಿನಲ್ಲೂ ವ್ಯಾಸಂಗ ಮಾಡಿದ್ದಾರೆ. ವಿಪ್ರೋ ಸೇರುವ ಮುನ್ನ ಅವರು ಒಂದು ವರ್ಷ ಬೆಂಗಳೂರಿನ ಬಿಪಿಒವೊಂದರಲ್ಲಿ ಕೆಲಸ ಕೂಡ ಮಾಡಿದ್ದರಂತೆ. ಕೆಲ ವರದಿಗಳ ಪ್ರಕಾರ ಅಣ್ಣ ರಿಷದ್ ಪ್ರೇಮ್ಜಿ ಮತ್ತು ತಮ್ಮ ತಾರೀಖ್ ಪ್ರೇಮ್ಜಿ ಇಬ್ಬರ ಸ್ವಭಾವ ವಿಭಿನ್ನ. ತಾರೀಖ್ ಬಹಳ ಸಂಕೋಚದ ಸ್ವಭಾವದವರು. ಆದರೆ ಸಹೋದರರ ನಡುವಿನ ಬಾಂಧವ್ಯ ಬಹಳ ಗಾಢವಾಗಿದೆಯಂತೆ. ಒಬ್ಬರಿಗೊಬ್ಬರು ಯಾವ ವಿಚಾರದಲ್ಲೂ ಬಿಟ್ಟುಕೊಡುವುದಿಲ್ಲ. ಬಹಳ ಪ್ರೀತಿಯಿಂದ ಕೂಡಿದ ಸಂಬಂಧ ಅವರದ್ದಾಗಿದೆ ಎಂದು ಅವರ ಆತ್ಮೀಯರು ಹೇಳುತ್ತಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ