Bank Holidays: ಜುಲೈ ತಿಂಗಳಲ್ಲಿ 12 ದಿನ ರಜೆಗಳಿವೆ; ನಿಮ್ಮ ಊರಲ್ಲಿ ಯಾವ್ಯಾವತ್ತು ರಜೆ? ಇಲ್ಲಿದೆ ಪಟ್ಟಿ
2024 July, Bank Holidays List: ಆರ್ಬಿಐ ಕ್ಯಾಲಂಡರ್ ಪ್ರಕಾರ 2024ರ ಜುಲೈ ತಿಂಗಳಲ್ಲಿ ಬ್ಯಾಂಕುಗಳಿಗೆ ಒಟ್ಟು 12 ದಿನ ರಜೆ ಇದೆ. ಇದರಲ್ಲಿ ನಾಲ್ಕು ಭಾನುವಾರ ಮತ್ತು ಎರಡು ಶನಿವಾರದ ರಜೆಗಳೂ ಒಳಗೊಂಡಿವೆ. ಜುಲೈ 17ಕ್ಕೆ ಮೊಹರಂ ಇದ್ದು ಕರ್ನಾಟಕ ಸೇರಿ ಹಲವು ಪ್ರದೇಶಗಳಲ್ಲಿ ಬ್ಯಾಂಕ್ ರಜೆ ಇರುತ್ತದೆ. ಕರ್ನಾಟಕದಲ್ಲಿ ಒಟ್ಟು ಏಳು ದಿನ ಬ್ಯಾಂಕ್ ರಜೆ ಇದೆ.
ನವದೆಹಲಿ, ಜೂನ್ 27: ಮುಂಬರುವ ಜುಲೈ ತಿಂಗಳಲ್ಲಿ ದೇಶಾದ್ಯಂತ ಬ್ಯಾಂಕುಗಳಲ್ಲಿ 12 ರಜಾ ದಿನಗಳಿವೆ. ಇದರಲ್ಲಿ ಪ್ರಾದೇಶಿಕವಾರು ರಜಾ ದಿನಗಳ ಸಂಖ್ಯೆಯಯಲ್ಲಿ ವ್ಯತ್ಯಾಸ ಇದೆ. ಈ 12 ರಜಾ ದಿನಗಳ ಪೈಕಿ ನಾಲ್ಕು ಭಾನುವಾರ ಮತ್ತು ಎರಡು ಶನಿವಾರದ ರಜೆಗಳೂ ಒಳಗೊಂಡಿವೆ. ಈ ಜುಲೈ ತಿಂಗಳಲ್ಲಿ ಮೊಹರಂ ಹಬ್ಬ ಇದ್ದು ದೇಶ ಹೆಚ್ಚಿನ ಪ್ರದೇಶಗಳಲ್ಲಿ ಬ್ಯಾಂಕ್ ರಜೆ ಇರುತ್ತದೆ. ಜುಲೈ 17 ಇರುವ ಮೊಹರಂ ಹಬ್ಬದಂದು (Muharram festival) ಕರ್ನಾಟಕದಲ್ಲೂ ರಜೆ ಇದೆ. ಶನಿವಾರ ಮತ್ತು ಭಾನುವಾರದ ರಜೆ ಹೊರತುಪಡಿಸಿದರೆ ಜುಲೈ ತಿಂಗಳಲಿ ಕರ್ನಾಟಕದಲ್ಲಿ ರಜೆ ಇರುವುದು ಮೊಹರಂಗೆ ಮಾತ್ರವೇ. ಕರ್ನಾಟಕದಲ್ಲಿ ಜುಲೈನಲ್ಲಿ ಒಟ್ಟು ಇರುವ ರಜೆಗಳ ಸಂಖ್ಯೆ ಏಳು ಮಾತ್ರ. ಈಶಾನ್ಯದ ನಾಲ್ಕು ರಾಜ್ಯಗಳಲ್ಲಿ ತಲಾ ಒಂದೊಂದು ವಿಶೇಷ ರಜಾ ದಿನಗಳಿವೆ.
2024ರ ಜುಲೈ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ
- ಜುಲೈ 3, ಬುಧವಾರ: ಬೇಹ್ ಡೇನ್ಖ್ಲಾಮ್ (ಮೇಘಾಲಯದಲ್ಲಿ ರಜೆ)
- ಜುಲೈ 6, ಶನಿವಾರ: ಎಂಎಚ್ಐಪಿ ದಿನ (ಮಿಜೋರಾಂನಲ್ಲಿ ರಜೆ)
- ಜುಲೈ 7: ಭಾನುವಾರದ ರಜೆ
- ಜುಲೈ 8, ಸೋಮವಾರ: ಕ್ಯಾಂಗ್ ರಥಯಾತ್ರೆ (ಮಣಿಪುರದಲ್ಲಿ ರಜೆ)
- ಜುಲೈ 9, ಮಂಗಳವಾರ: ದ್ರುಕಪ ಟ್ಸೆಜಿ (ಸಿಕ್ಕಿಂನಲ್ಲಿ ರಜೆ)
- ಜುಲೈ 13: ಎರಡನೇ ಶನಿವಾರದ ರಜೆ
- ಜುಲೈ 14: ಭಾನುವಾರದ ರಜೆ
- ಜುಲೈ 16, ಮಂಗಳವಾರ: ಹರೇಲ (ಉತ್ತರಾಖಂಡ್ನಲ್ಲಿ ರಜೆ)
- ಜುಲೈ 17, ಬುಧವಾರ: ಮೊಹರಂ (ಗುಜರಾತ್, ಒಡಿಶಾ, ಚಂಡೀಗಡ, ಉತ್ತರಾಖಂಡ್, ಸಿಕ್ಕಿಂ, ಅಸ್ಸಾಂ, ಮಣಿಪುರ್, ಇಟಾನಗರ್, ಕೇರಳ, ನಾಗಾಲ್ಯಾಂಡ್, ಗೋವಾ ಹೊರತುಪಡಿಸಿ ಉಳಿದೆಲ್ಲೆಡೆ ರಜೆ)
- ಜುಲೈ 21: ಭಾನುವಾರದ ರಜೆ
- ಜುಲೈ 27: ನಾಲ್ಕನೇ ಶನಿವಾರದ ರಜೆ
- ಜುಲೈ 28: ಭಾನುವಾರದ ರಜೆ
ಇದನ್ನೂ ಓದಿ: 5ಜಿ ಸ್ಪೆಕ್ಟ್ರಂ ಹರಾಜು; ಮಾರಾಟವಾದ್ದರಲ್ಲಿ ಏರ್ಟೆಲ್ ಸಿಂಹಪಾಲು; ವೊಡಾಫೋನ್ಗಿಂತಲೂ ಜಿಯೋ ಖರೀದಿಸಿದ್ದು ಕಡಿಮೆ
2024ರ ಜುಲೈ ತಿಂಗಳಲ್ಲಿ ಕರ್ನಾಟಕದಲ್ಲಿ ರಜಾದಿನಗಳ ಪಟ್ಟಿ
- ಜುಲೈ 7: ಭಾನುವಾರದ ರಜೆ
- ಜುಲೈ 13: ಎರಡನೇ ಶನಿವಾರದ ರಜೆ
- ಜುಲೈ 14: ಭಾನುವಾರದ ರಜೆ
- ಜುಲೈ 17, ಬುಧವಾರ: ಮೊಹರಂ
- ಜುಲೈ 21: ಭಾನುವಾರದ ರಜೆ
- ಜುಲೈ 27: ನಾಲ್ಕನೇ ಶನಿವಾರದ ರಜೆ
- ಜುಲೈ 28: ಭಾನುವಾರದ ರಜೆ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ