ಕಳೆದ ನಾಲ್ಕು ದಿನಗಳಿಂದ ಹಲವಾರು ದೂರುಗಳು ಬಂದ ನಂತರ, ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾ ತನ್ನ ಆನ್ಲೈನ್ ಸೇವೆಗಳು ಮತ್ತೆ ಆರಂಭಗೊಂಡಿದೆ. ಈ ವಾರದ ಆರಂಭದಲ್ಲಿ ಟ್ವಿಟರ್ನಲ್ಲಿ ತಿಳಿಸಿದ ಪ್ರಕಾರ, ಕೋರ್ ಬ್ಯಾಂಕಿಂಗ್ ಸಿಸ್ಟಮ್ ಅನ್ನು ಅಪ್ಗ್ರೇಡ್ ಮಾಡುತ್ತಿರುವುದಾಗಿ ಹೇಳಿದೆ. ಆದರೆ ಈ ಅಪ್ಗ್ರೇಡ್ ನಂತರ ಆನ್ಲೈನ್ ಸೇವೆಗಳು ಡೌನ್ ಆಗಿದೆ ಎಂದು ಟ್ವಿಟರ್ನಲ್ಲಿ ಗ್ರಾಹಕರು ದೂರಿದ್ದರು. ಅಚ್ಚರಿಕರ ಸಂಗತಿ ಏನೆಂದರೆ, ಈ ಸಮಸ್ಯೆಯು ನಾಲ್ಕು ದಿನಗಳ ತನಕ ಮುಂದುವರಿಯಿತು. ಬ್ಯಾಂಕ್ನ ಎಲ್ಲ ವ್ಯವಸ್ಥೆಯು ಸರಾಗವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಬ್ಯಾಂಕ್ ಹೇಳಿಕೊಂಡಿತ್ತು. “ಆರ್ಟಿಜಿಎಸ್, ಎನ್ಇಎಫ್ಟಿ, ಇಂಟರ್ನೆಟ್ ಬ್ಯಾಂಕಿಂಗ್ (Internet Banking) ಮತ್ತು ಬ್ಯಾಂಕ್ ಆಫ್ ಇಂಡಿಯಾದ ಮೊಬೈಲ್ ಸೇವೆಗಳು ಅಪ್ಗ್ರೇಡೇಷನ್ ನಂತರ ಬಳಕೆಯಲ್ಲಿದೆ ಮತ್ತು ಸುಸ್ಥಿರವಾಗುತ್ತಿದೆ,” ಎಂದು ಆ ನಂತರ ಟ್ವಿಟರ್ ಪೋಸ್ಟ್ನಲ್ಲಿ ಹೇಳಲಾಗಿತ್ತು. ಗ್ರಾಹಕರಿಗೆ ನೀಡಿದ ಪ್ರತಿಕ್ರಿಯೆಯಲ್ಲೂ ಇದನ್ನೇ ಪುನರಾವರ್ತನೆ ಮಾಡಲಾಗಿದೆ. “ಸರ್, ನಿಮಗೆ ಆದ ಸಮಸ್ಯೆಗೆ ಕ್ಷಮೆ ಕೇಳುತ್ತೇವೆ. ಎಲ್ಲ ಬ್ಯಾಂಕಿಂಗ್ ಸೇವೆಗಳು ಮತ್ತೆ ಆರಂಭಗೊಂಡಿದೆ ಎಂದು ತಿಳಿಸಲು ನಾವು ಬಯಸುತ್ತೇವೆ. ಆದರೆ ಈಗಲೂ ಸಮಸ್ಯೆ ಎದುರಿಸುತ್ತಿದ್ದಲ್ಲಿ ಮತ್ತೆ ನಮ್ಮ ಗಮನಕ್ಕೆ ತನ್ನಿ,” ಎಂದು ಗ್ರಾಹಕರಿಗೆ ತಿಳಿಸಲಾಗಿದೆ.
ಬ್ಯಾಂಕ್ ಆಫ್ ಇಂಡಿಯಾದಲ್ಲಿ ಆಗಿದ್ದೇನು?
ಜನವರಿ 23ನೇ ತಾರೀಕಿನಂದು ಬ್ಯಾಂಕ್ ಆಫ್ ಇಂಡಿಯಾವು ಟ್ವಿಟರ್ನಲ್ಲಿ ಹೇಳಿಕೆಯೊಂದನ್ನು ನೀಡಿ, ಜನವರಿ 21ರಿಂದ ಗ್ರಾಹಕರ ಮೈಗ್ರೇಷನ್ ಪ್ರಕ್ರಿಯೆಯನ್ನು ಕೋರ್ ಸಿಸ್ಟಮ್ ಅಪ್ಗ್ರೆಡೇಷನ್ ಭಾಗವಾಗಿ ಸಮಯ ನಿಗದಿ ಮಾಡಲಾಗಿದೆ. ಜನವರಿ 24ಕ್ಕೆ ಸಂಪೂರ್ಣ ಆಗುತ್ತದೆ ಎಂದು ತಿಳಿಸಿತ್ತು.
ಆದರೆ, ಆ ದಿನದ ಆಚೆಗೆ ಗ್ರಾಹಕರು ದೂರನ್ನು ನೀಡಲು ಆರಂಭಿಸಿದರು. ಆನ್ಲೈನ್ ವಹಿವಾಟುಗಳು ವಿಫಲ ಆಗುತ್ತಿರುವ ಬಗ್ಗೆ ಮಾಹಿತಿ ನೀಡಿದರು. ಟ್ವಿಟರ್ನಲ್ಲಿ ರಾಶಿರಾಶಿ ದೂರುಗಳ ಸುರಿಮಳೆ ಆಯಿತು. ನೆಟ್ ಬ್ಯಾಂಕಿಂಗ್ ಸಮಸ್ಯೆ, ಚೆಕ್ ಕ್ಲಿಯರೆನ್ಸ್ ಆಗುತ್ತಿಲ್ಲ, ವಹಿವಾಟುಗಳು ವಿಫಲವಾಗುವುದು ಮತ್ತು ಹಲವಾರು ದೂರುಗಳು ಬರತೊಡಗಿದವು. ಸಿಎನ್ಬಿಸಿ-ಟಿವಿ 18 ಪ್ರಕಾರ, “ಸಣ್ಣ ತಾಂತ್ರಿಕ ಸಮಸ್ಯೆಗಳು” ಅಪ್ಗ್ರೇಡ್ ಕಾರಣಕ್ಕೆ ಆಗಿದೆ ಎಂದು ಬ್ಯಾಂಕ್ ತಿಳಿಸಿದೆ. ಎಲ್ಲ ದೂರುಗಳಿಗೂ ಒಂದೇ ಪ್ರತಿಕ್ರಿಯೆಯನ್ನು ನೀಡಲಾಗಿದೆ.
ಇದನ್ನೂ ಓದಿ: ಭಾರತದ ಬ್ಯಾಡ್ ಬ್ಯಾಂಕ್ಗೆ ನಿಯಂತ್ರಕರ ಅನುಮತಿ; ಮಾರ್ಚ್ನೊಳಗೆ ಕನಿಷ್ಠ 50 ಸಾವಿರ ಕೋಟಿ ರೂ. ವರ್ಗಾವಣೆ