ಭಾರತದ ಬ್ಯಾಡ್​ ಬ್ಯಾಂಕ್​ಗೆ ನಿಯಂತ್ರಕರ ಅನುಮತಿ; ಮಾರ್ಚ್​ನೊಳಗೆ ಕನಿಷ್ಠ 50 ಸಾವಿರ ಕೋಟಿ ರೂ. ವರ್ಗಾವಣೆ

ಬ್ಯಾಡ್ ಬ್ಯಾಂಕ್​ಗೆ ನಿಯಂತ್ರಕರ ಅನುಮತಿ ದೊರೆತಿದೆ. 2022ರ ಮಾರ್ಚ್ ಹೊತ್ತಿಗೆ 50 ಸಾವಿರ ಕೋಟಿ ರೂಪಾಯಿ ವರ್ಗಾವಣೆ ಮಾಡುವ ಗುರಿ ಹೊಂದಿದೆ.

ಭಾರತದ ಬ್ಯಾಡ್​ ಬ್ಯಾಂಕ್​ಗೆ ನಿಯಂತ್ರಕರ ಅನುಮತಿ; ಮಾರ್ಚ್​ನೊಳಗೆ ಕನಿಷ್ಠ 50 ಸಾವಿರ ಕೋಟಿ ರೂ. ವರ್ಗಾವಣೆ
ದಿನೇಶ್ ಖರ (ಸಂಗ್ರಹ ಚಿತ್ರ)
Follow us
| Updated By: Srinivas Mata

Updated on: Jan 28, 2022 | 9:47 PM

ಭಾರತದ ಬ್ಯಾಡ್​ ಬ್ಯಾಂಕ್​ (Bad Bank)ಗೆ ನಿಯಂತ್ರಕರಿಂದ ಅಗತ್ಯ ಮಂಜೂರಾತಿಯನ್ನು ಪಡೆದಿದೆ ಮತ್ತು ಕನಿಷ್ಠ 50 ಸಾವಿರ ಕೋಟಿ ರೂಪಾಯಿ ನಂಜಿನ ಸ್ವತ್ತು (ಮಾರುವುದಕ್ಕೆ ಕಷ್ಟವಾದ ಅಥವಾ ಸಾಧ್ಯವೇ ಇಲ್ಲದ ಸ್ವತ್ತು) ಮಾರ್ಚ್ 31, 2022ರೊಳಗೆ ವರ್ಗಾವಣೆ ಮಾಡುವ ಯೋಜನೆಯನ್ನು ಸಾಲ ನೀಡಿರುವವರು ಹೊಂದಿದ್ದಾರೆ ಎಂಬುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷರಾದ ದಿನೇಶ್ ಖರ ಶುಕ್ರವಾರ ಹೇಳಿದ್ದಾರೆ. ಬ್ಯಾಡ್ ಬ್ಯಾಂಕ್ ಸೃಷ್ಟಿಸುವ ಯೋಜನೆ ಮತ್ತು ಬ್ಯಾಂಕ್​ ಬ್ಯಾಲೆನ್ಸ್​ ಶೀಟ್ ಶುದ್ಧೀಕರಣವನ್ನು ಕಳೆದ ವರ್ಷ ಬಜೆಟ್​ನಲ್ಲಿ ಘೋಷಿಸಲಾಗಿತ್ತು. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಪ್ರಸ್ತಾವಿತ ರಚನೆ ಬಗ್ಗೆ ಅಸಮಾಧಾನ ಹೊಂದಿದ್ದರಿಂದ ವಿಳಂಬ ಆಯಿತು. ಆ ನಂತರ ಬ್ಯಾಡ್​ ಬ್ಯಾಂಕ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಬಗ್ಗೆ ಬದಲಾವಣೆ ಮಾಡಿ, ನಿಯಂತ್ರಕ ಸಂಸ್ಥೆಗೆ ಪರಿಷ್ಕೃತ ಪ್ರಸ್ತಾವವನ್ನು ಸಲ್ಲಿಸಿತು.

ನಿಯಂತ್ರಕರಿಂದ ಅನುಮೋದನೆ ಪಡೆದ ರಚನೆಯಲ್ಲಿ, ಈಗಾಗಲೇ ಗುರುತಿಸಲಾದ ಬ್ಯಾಡ್​ ಲೋನ್ ಖಾತೆಗಳನ್ನು ಬ್ಯಾಂಕ್​ಗಳಿಂದ ಸರಾಸರಿ ಮಾಡಿಕೊಂಡು, ಸ್ವಾಧೀನಕ್ಕೆ ಪಡೆಯಲಾಗುತ್ತದೆ. ಇನ್ನು ಇಂಡಿಯಾ ಡೆಟ್ ರೆಸಲ್ಯೂಷನ್ ಕಂಪೆನಿ ಲಿಮಿಟೆಡ್ (IDRCL) ಸಾಲ ತೀರುವಳಿ ಪ್ರಕ್ರಿಯೆಯನ್ನು ಎಕ್ಸ್​ಕ್ಲೂಸಿವ್ ವ್ಯವಸ್ಥೆ ಅಡಿಯಲ್ಲಿ ನಿರ್ವಹಿಸುತ್ತದೆ. ಒಟ್ಟಾರೆ 38 ಖಾತೆಗಳಲ್ಲಿ 82,845 ಕೋಟಿ ರೂಪಾಯಿಯನ್ನು ಎನ್​ಎಆರ್​ಸಿಎಲ್​ಗೆ ವರ್ಗಾವಣೆ ಮಾಡುವುದಕ್ಕೆ ಗುರುತಿಸಲಾಗಿದೆ. “ವರ್ಗಾವಣೆಯು ಹಂತಹಂತವಾಗಿ ಆಗಲಿದೆ. ಮೊದಲನೇ ಹಂತವಾಗಿ 15 ಖಾತೆಗಳ 50 ಸಾವಿರ ಕೋಟಿ ರೂಪಾಯಿ ಎನ್​ಎಆರ್​ಸಿಎಲ್​ಗೆ ವರ್ಗಾವಣೆ ಆಗುವ ನಿರೀಕ್ಷೆ ಇದೆ. ಅಗತ್ಯ ಪ್ರಕ್ರಿಯೆಯೆಲ್ಲ ಮುಗಿದ ಮೇಲೆ ಮೇಲೆ ಈ ಹಣಕಾಸು ವರ್ಷದಲ್ಲಿ ಈ ಖಾತೆಗಳನ್ನು ವರ್ಗಾವಣೆ ಮಾಡುವುದಕ್ಕೆ ನಾವು ಪ್ರಯತ್ನಿಸುತ್ತಿದ್ದೇವೆ,” ಎಂದು ಖರ ಹೇಳಿದ್ದಾರೆ.

ಬ್ಯಾಂಕ್​ಗಳು ಈ ಹಿಂದೆ ಹೇಳಿದಂತೆ 2 ಲಕ್ಷ ಕೋಟಿ ರೂಪಾಯಿ ಮೌಲ್ಯದ ಒತ್ತಡದ ಸಾಲ ಖಾತೆಯನ್ನು ವರ್ಗಾವಣೆ ಮಾಡಬಹುದಾಗಿದೆ. ಆದರೂ ಈ ಪೈಕಿ ಕೆಲವು ಈಗಾಗಲೇ ಕಳೆದ ವರ್ಷ ವಿಲೇವಾರಿ ಆಗಿದೆ ಮತ್ತು 82,845 ಕೋಟಿ ರೂಪಾಯಿ ಮೌಲ್ಯದ ಖಾತೆಗಳು ಜಾಯಿಂಟ್​ ಲೆಂಡರ್ಸ್​ ಫೊರಾ (JLFs) ಅನ್ವಯಿಸುತ್ತದೆ ಹಾಗೂ ಅವುಗಳನ್ನು ವರ್ಗಾಯಿಸುವುದಕ್ಕೆ ನಿರ್ಧರಿಸಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕಾರ್ಯನಿರ್ವಾಹಕರ ನಿರ್ದೇಶಕ ಜೆ.ಸ್ವಾಮಿನಾಥನ್ ಮಾತನಾಡಿ, ಪ್ರಕ್ರಿಯೆಗಳು ಈಗಲೂ ಹಂತಹಂತವಾಗಿ ನಡೆಯುತ್ತಿದೆ ಮತ್ತು ಮುಂದಿನ ವರ್ಷ ಇದು ಆಗಲಿದೆ. ಬ್ಯಾಂಕಿಂಗ್​ ವ್ಯವಸ್ಥೆಯಲ್ಲಿ ಇರುವ ಒತ್ತಡದ ಆಸ್ತಿಯ ಪುಸ್ತಕದಲ್ಲಿ 500 ಕೋಟಿ ಮತ್ತು ಮೇಲ್ಪಟ್ಟ ಮೊತ್ತವನ್ನು ಗುರುತಿಸಲಾಗಿದೆ. ಸಾಲ ನೀಡಿದವರ ಬಳಿ ತೀರುವಳಿ ಆಗುವ ತನಕ ಅಥವಾ ಎನ್​ಎಆರ್​ಸಿಎಲ್​ಗೆ ವರ್ಗಾವಣೆ ಆಗುವ ತನಕ ಕೆಲಸ ಮಾಡುತ್ತದೆ ಎಂದಿದ್ದಾರೆ.

ಭಾರತದ ಬ್ಯಾಡ್​ ಲೋನ್ ಆತಂಕವನ್ನು ಗಮನದಲ್ಲಿ ಇಟ್ಟುಕೊಂಡು, ಜುಲೈ 7ರಂದು ಎನ್​ಎಆರ್​ಸಿಎಲ್​ ಸ್ಥಾಪಿಸಲಾಯಿತು. ಅದಕ್ಕಾಗಿ ಅಧಿಕೃತ ಬಂಡವಾಳ 100 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇದನ್ನು “ಕೇಂದ್ರ ಸರ್ಕಾರದ ಕಂಪೆನಿ” ಎಂದು ಗುರುತಿಸಲಾಗಿದೆ. ಭಾರತೀಯ ಆರ್ಥಿಕ ವ್ಯವಸ್ಥೆಯನ್ನು ಶುದ್ಧೀಕರಿಸುವ ದೃಷ್ಟಿಯಿಂದ ಸರ್ಕಾರ ಈ ಪ್ರಯತ್ನ ಮಾಡುತ್ತಿದೆ. ವಿಶ್ವದಲ್ಲೇ ಅತಿ ದೊಡ್ಡ ಪ್ರಮಾಣದ ಬ್ಯಾಡ್ ಅಸೆಟ್ಸ್ (ಸ್ವತ್ತು) ಹೊಂದಿರುವ ಆರ್ಥಿಕ ವ್ಯವಸ್ಥೆ ಭಾರತದ್ದಾಗಿದೆ. ಸಾಲಗಳನ್ನು ಎನ್​ಎಆರ್​ಸಿಎಲ್​ಗೆ ವರ್ಗಾವಣೆ ಮಾಡುವ ಮೂಲಕ ಬ್ಯಾಂಕ್​ಗಳು ನಷ್ಟವನ್ನು ಕಡಿತಗೊಳಿಸಬಹುದು ಹಾಗೂ ಸಾಲದ ನವೀಕರಣ ಮಾಡಬಹುದು.

ಎನ್​ಎಆರ್​ಸಿಎಲ್​ನಿಂದ ಸ್ವತ್ತುಗಳನ್ನು 15:85ರ ಅನುಪಾತದಲ್ಲಿ ನಗದು ಹಾಗೂ ಸಾಲಪತ್ರಗಳ ರಸೀದಿ (SR) ಗುರುತಿಸಿ ಮತ್ತು ಸ್ವಾಧೀನಪಡಿಸಿಕೊಳ್ಳುವುದಕ್ಕೆ ಪ್ರಯತ್ನಿಸಲಿದೆ. ಈ ಎಸ್​ಆರ್​ಗಳನ್ನು ವರ್ಗಾವಣೆ ಮಾಡುವ ಸಾಲ ನೀಡು ಸಂಸ್ಥೆಗಳ ಪರವಾಗಿ ವಿತರಣೆ ಮಾಡಲಾಗುತ್ತದೆ. ಅವುಗಳನ್ನು ಮುಖಬೆಲೆಯಲ್ಲಿ ಭಾರತ ಸರ್ಕಾರದ ಖಾತ್ರಿಯಲ್ಲಿ ಭದ್ರಪಡಿಸಲಾಗುತ್ತದೆ.

ಸಾರ್ವಜನಿಕ ವಲಯದ ಬ್ಯಾಂಕ್‌ಗಳು NARCLನಲ್ಲಿ ಬಹುಪಾಲು ಪಾಲನ್ನು ತೆಗೆದುಕೊಂಡಿದ್ದರೆ, IDRCL ಪ್ರಮುಖವಾಗಿ ಖಾಸಗಿ ವಲಯದ ಬ್ಯಾಂಕ್‌ಗಳ ಒಡೆತನದಲ್ಲಿದೆ. ಈ ವಿಶಿಷ್ಟವಾದ ಸಾರ್ವಜನಿಕ-ಖಾಸಗಿ ಸಹಭಾಗಿತ್ವವು ದೊಡ್ಡ ಪ್ರಮಾಣದ ಸಾಲಗಳನ್ನು ನಿಭಾಯಿಸುವ ಸಾಮರ್ಥ್ಯದ ದೃಷ್ಟಿಯಿಂದ ಉತ್ತಮ ಪ್ರತಿಭೆಯನ್ನು ಪಡೆಯಲು ಮತ್ತು ಒಟ್ಟುಗೂಡಿಸುವಿಕೆಯ ಪ್ರಯೋಜನವನ್ನು ಹೊಂದಲು ಹಾಗೂ ಒತ್ತಡದ ಸ್ವತ್ತುಗಳನ್ನು ಪರಿಹರಿಸಲು ಡೊಮೇನ್ ಪರಿಣತಿಯು ಸೂಕ್ತವಾಗಿ ಬರುತ್ತದೆ, ಎಂದು ಖರ ಹೇಳಿದ್ದಾರೆ.

ಒಮ್ಮೆ ಬ್ಯಾಡ್​ ಲೋನ್​ಗಳನ್ನು NARCLಗೆ ವರ್ಗಾಯಿಸಿದರೆ, ಪ್ರತಿ ಸಾಲದ ಖಾತೆಗೆ ಟ್ರಸ್ಟ್ ಅನ್ನು ಸ್ಥಾಪಿಸಲಾಗುತ್ತದೆ ಮತ್ತು ಯಾವುದೇ ಬ್ಯಾಲೆನ್ಸ್ ಶೀಟ್ ಅನ್ನು ಹೊಂದಿರದ IDRCL ಮೂಲಕ ಸಾಲ ತೀರುವಳಿಯನ್ನು ನಿರ್ವಹಿಸಲಾಗುತ್ತದೆ. ಬ್ಯಾಲೆನ್ಸ್ ಶೀಟ್ ಪರವಾನಗಿ ಪಡೆದ ಆಸ್ತಿ ಪುನರ್​ರಚನೆ ಕಂಪೆನಿ (ARC) NARCLನಲ್ಲಿ ಇರುತ್ತದೆ. ಟ್ರಸ್ಟ್ ಅಲ್ಲಿ ಇರುತ್ತದೆ, ಆಯಾ ಟ್ರಸ್ಟ್‌ಗಳಿಂದ ಎಸ್‌ಆರ್‌ಗಳನ್ನು ನೀಡಲಾಗುತ್ತದೆ ಮತ್ತು ಪ್ರತಿ ಖಾತೆಗೆ ತೀರುವಳಿ ಆದೇಶವು ಐಡಿಆರ್‌ಸಿಎಲ್‌ನಲ್ಲಿರುತ್ತದೆ, ಎಂದು ಸ್ವಾಮಿನಾಥನ್ ಹೇಳಿದ್ದಾರೆ.

ಇದನ್ನೂ ಓದಿ: ಬ್ಯಾಂಕಿಂಗ್ ಕ್ಷೇತ್ರ ಸುಧಾರಣೆಗೆ ಕೇಂದ್ರ ಮಹತ್ವದ ತೀರ್ಮಾನ, 6 ವರ್ಷಗಳಲ್ಲಿ 5 ಲಕ್ಷ ಕೋಟಿ ಸಾಲ ವಸೂಲು: ನಿರ್ಮಲಾ ಸೀತಾರಾಮನ್

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ